ಸಹಕಾರ ಇಲಾಖೆ
ಪರಿಚಯ:
ಸಹಕಾರ ಇಲಾಖೆಯು ವಿವಿಧ ಸಹಕಾರ ಸಂಸ್ಥೆಗಳ ಆಡಳಿತ ಮತ್ತು ಕಾರ್ಯವ್ಯವಹಾರವನ್ನು ನೋಡಿಕೊಳ್ಳುತ್ತದೆ. ಜವಳಿ, ರೇಷ್ಮೆ, ಕೈಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ಸಕ್ಕರೆ ತೋಟಗಾರಿಕೆ, ಕೃಷಿ ಮತ್ತು ನೀರಾವರಿ ಇಲಾಖೆಗಳು, ಸಂಘಗಳ ಕಾರ್ಯನಿರ್ವಹಣೆಗೆ ಹಣಕಾಸಿನ ನೆರವನ್ನು ನೀಡುವುದರ ಜೊತೆಗೆ ತಾಂತ್ರಿಕ ಮಾರ್ಗದರ್ಶನ ನೀಡುತ್ತವೆ.
ಸಹಕಾರದ ಮೂಲ ತತ್ವಗಳು :
-
- ಸ್ವ ಇಚ್ಚೆ ಮತ್ತು ಮುಕ್ತ ಸದಸ್ಯತ್ವ:
ಸಹಕಾರಿ ಸಂಸ್ಥೆಗಳು ಸ್ವ ಇಚ್ಚೆಯಿಂದ ಸ್ಥಾಪಿಸಿದ ಸಂಸ್ಥೆಗಳಾಗಿದ್ದು ಲಿಂಗ ಭೇದ, ಸಾಮಾಜಿಕ ಸಥಾನಮಾನ, ವರ್ಣೀಯ, ರಾಜಕೀಯ, ಅಥವಾ ಧಾರ್ಮಿಕ ಭಾವನೆಗಳ ಆಧಾರದ ಮೇಲೆ ಅಲ್ಲದೆ, ಜವಾಬ್ಡಾರಿಗಳನ್ನು ನಿರ್ವಹಿಸುವ ಮತ್ತು ತಮ್ಮ ಸಾಮರ್ಥ್ಯ ವನ್ನು ಉಪಯೋಗಿಸಿಕೊಳ್ಳಲು ಇಚ್ಚಿಸುವ ಎಲ್ಲಾ ವ್ಯಕ್ತಿಗಳಿಗೆ ಅದರ ಸದಸ್ಯತ್ವದ ಅವಕಾಶವಿರುತ್ತದೆ.
-
- ಪ್ರಜಾಪ್ರಭುತ್ವ ತಳಹದಿಯ ಸದಸ್ಯರ ನಿಯಂತ್ರಣ:
ಸಹಕಾರಿ ಸಂಸ್ಥೆಗಳು ಪ್ರಜಾ ಪ್ರಭುತ್ವ ತಳಹದಿಯ ಮೇಲೆ ಸ್ಥಾಪಿಸಲಾದ ಸಂಸ್ಥೆಗಳಾಗಿದ್ದು ಅದರ ಸದಸ್ಯರ ನಿಯಂತ್ರಣಕ್ಕೊಳಪಟ್ಟಿರುತ್ತದೆ. ಸದಸ್ಯರು ಸಂಸ್ಥೆಯ ಕಾರ್ಯನೀತಿಯನ್ನು ರೂಪಿಸುವಲ್ಲಿ ಮತ್ತು ತೀರ್ಮಾನಗಳನ್ನು ಕೈಗೊಳ್ಳವಲ್ಲಿ ಭಾಗವಹಿಸುತ್ತಾರೆ. ಈ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಸದಸ್ಯರಿಗೆ ಜವಾಬ್ದಾರರಾಗಿರುತ್ತಾರೆ.
-
- ಸದಸ್ಯರ ಆರ್ಥಿಕ ಪಾಲ್ಗೊಳ್ಳುವಿಕೆ:
ಸಹಕಾರಿ ಸಂಸ್ಥೆಗಳ ಬಂಡವಾಳಕ್ಕೆ ಸದಸ್ಯರು ಸಮಾನವಾಗಿ ಹೂಡಿಕೆ ಮಾಡುವುದಲ್ಲದೆ, ಅದರ ಹೊಣೆಗಾರಿಕೆಯನ್ನು ಪ್ರಜಾಪ್ರಭುತ್ವದ ತಳಹದಿಯ ಮೇಲೆ ಸಮಾನವಾಗಿ ನಿರ್ವಹಿಸುತ್ತಾರೆ. ಆರ್ಥಿಕ ಚಟುವಟಿಕೆಗಳ ಮೇಲೆ ಬರುವ ಹೆಚ್ಚುವರಿ ಲಾಭಾಂಶವು ಸಹಕಾರಿ ಸಂಸ್ಥೆಗಳ ಒಡೆತನಕ್ಕೆ ಸೇರುತ್ತದೆ. ಉಳಿದಂತೆ ಸದಸ್ಯರ ಹೂಡಿಕೆಗಳನ್ನು ಗೌಣವಾಗಿ ಉಪಯೋಗಿಸಿಕೊಳ್ಳಲಾಗುವುದು.
-
- ಸ್ವಾಯತ್ತತೆ ಮತ್ತು ಸ್ವಾತಂತ್ರ್ಯ:
ಸಹಕಾರಿ ಸಂಸ್ಥೆಗಳು ಸ್ವಸಹಾಯಕ್ಕಾಗಿ ಸ್ಥಾಪಿತವಾದ ಸ್ವಾಯತ್ತ ಸಂಸ್ಥೆಗಳಾಗಿದ್ದು, ಅವುಗಳ ಸದಸ್ಯರಿಂದ ನಿಯಂತ್ರಣಕ್ಕೆ ಒಳಪಟ್ಟಿರುತ್ತದೆ. ಸಹಕಾರಿ ಸಂಸ್ಥೆಗಳು ಇತರೆ ಸಂಸ್ಥೆಗಳೊಂದಿಗೆ, ಸರ್ಕಾರದೊಂದಿಗೆ ಒಪ್ಪಂದ ಮಾಡಿ ಕೊಂಡಾಗ ಅಥವಾ ಹೊರಗಿನಿಂದ ಬಂಡವಾಳವನನ್ನು ಕ್ರೋಢೀಕರಿಸುವಾಗ ಅವುಗಳು ಸದಸ್ಯರು ಪ್ರಜಾಪ್ರಭುತ್ವದ ತಳಹದಿಯ ಹತೋಟಿ ಮತ್ತು ಸ್ವಾಯತ್ತತೆಗೆ ಧಕ್ಕೆ ಬರದಂತೆ ನಿರ್ವಹಿಸಲಾಗುತ್ತದೆ
-
- ಶಿಕ್ಷಣ ತರಬೇತಿ ಮತ್ತು &ಮಾಹಿತಿ:
ಸಹಕಾರಿ ಸಂಸ್ಥೆಗಳ ತಮ್ಮ ಸದಸ್ಯರಿಗೆ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಸಿಬ್ಬಂದಿಗೆ ಸಂಸ್ಥೆಯ ಅಭಿವೃದ್ದಿ ಕಾರ್ಯದಲ್ಲಿ ಪಾಲ್ಗೊಳ್ಳಲು ಅನುವಾಗುವಂತೆ ಶಿಕ್ಷಣ ಮತ್ತು ತರಭೇತಿಯನ್ನು ನೀಡುತ್ತವೆ. ಸಹಕಾರ ತತ್ವಗಳ ಆದರೆ ಉಪಯೋಗದ ಬಗ್ಗೆ ಸಾಮಾನ್ಯ ಜನರಲ್ಲಿ ಅದರಲ್ಲೂ ವಿಶೇಷವಾಗಿ ಯುವ ಜನತೆ ಮತ್ತು ನಾಯಕರಲ್ಲಿ ಅರಿವನ್ನು ಮೂಡಿಸಲು ಸಹ ಕ್ರಮ ಕೈಗೊಳ್ಳತ್ತದೆ.
-
- ಸಹಕಾರಿ ಸಂಸ್ಥೆಗಳ ನಡುವೆ ಸಹಕಾರ:
ಸಹಕಾರಿ ಸಂಸ್ಥೆಗಳ ತಮ್ಮ ಸದಸ್ಯರ ಅಭಿವೃದ್ದಿಗಾಗಿ ಸೇವೆ ಮೂಲಕ ಪರಿಣಾಕಾರಿಯಾಗಿ ಶ್ರಮಿಸುತ್ತಿದ್ದು, ಸ್ಥಳೀಯ, ಪ್ರಾದೇಶಿಕ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಜೊತೆಯಾಗಿ ಕಾರ್ಯ ನಿರ್ವಹಿಸುವ ಮೂಲಕ ಸಹಕಾರಿ ಚಳುವಳಿಯನ್ನು ಬಲಪಡಿಸುತ್ತವೆ.
-
- ಸಹಕಾರಿಗಳ ಸಾಮಾಜಿಕ ಕಳಕಳಿ:
ಸಹಕಾರಿಗಳು ತಮ್ಮ ಸಮುದಾಯಗಳ ಸುಸ್ಥಿರ ಅಭಿವೃದ್ದಿಗಾಗಿ ತಮ್ಮ ಸದಸ್ಯರು ಒಪ್ಪಿರುವ ನೀತಿಗಳನ್ವಯ ಕಾರ್ಯನಿರ್ವಹಿಸುತ್ತವೆ.
ಯೋಜನಾ ಕಾರ್ಯಕ್ರಮಗಳು
ಬೆಳೆ ಸಾಲಕ್ಕಾಗಿ ಬಡ್ಡಿ ಸಹಾಯಧನ:
ಅಲ್ಪಾವಧಿ ಕೃಷಿ ಸಾಲವನ್ನು ರೂ 3.00 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಹಾಗೂ ಮಧ್ಯಮಾವಧಿ ಮತ್ತು ಧೀರ್ಘಾವಧಿ ಸಾಲ ರೂ 10.00 ಲಕ್ಷದವರೆಗೆ ಶೇಕಡ 3ರ ದರದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃಧ್ದಿ ಬ್ಯಾಂಕ್ ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗಪಳ ಮೂಲಕ ನೀಡುವುದು.
ಸ್ವಸಹಾಯ ವರ್ಗಗಳಿಗೆ ಸಾಲಗಳ ಮೇಲಣ ಬಡ್ಡಿ ಸಹಾಯಧನ:
ಮಹಿಳಾ ಸ್ವಸಹಾಯ ಗುಂಪುಗಳಿಗೆ (ಬಿ.ಪಿ.ಎಲ್) ಶೇ.0 ದರದಲ್ಲಿ ಹಾಗೂ ಪುರಷ ಗುಂಪುಗಳಿಗೆ (ಬಿ.ಪಿ.ಎಲ್) ಶೇಕಡ 4ರ ಬಡ್ಡಿ ದರದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಪ್ರಾಥಮಿಕ ಕೃಷಿ ಮತ್ತು ಗ್ರಾಮೀಣಾಭಿವೃಧ್ದಿ ಬ್ಯಾಂಕ್ ಹಾಗೂ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ಗಪಳ ಮೂಲಕ ನೀಡುವುದು.
ಗಿರಿಜನ ಉಪಯೋಜನೆ- ಲ್ಯಾಂಪ್ಸ್ ಸಂಯುಕ್ತ ಸಂಘಗಳಿಗೆ ಮಾರುಕಟ್ಟೆ ಮೂಲ ಸೌಕರ್ಯಗಳ ಸ್ಥಾಪನೆ:
ಲ್ಯಾಂಪ್ಸ್ ಸಹಕಾರ ಮಹಾಮಂಡಳ ಹಾಗೂ ಲ್ಯಾಂಪ್ಸ್ ಸಂಘಗಳಿಗೆ ಮೂಲಭೂತ ಸೌಕರ್ಯಗಳಾದ ಕಂಪ್ಯೂಟರ್ ಗಳು, ಫ್ಯಾಕ್ಸ್, ಟೆಲಿಪೋನ್ ಗಳನ್ನು ಒದಗಿಸುವುದು.
ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಹಕಾರ ಸಂಘಗಳಿಗೆ ಹಣಕಾಸು ಸಹಾಯ:
ಈ ಯೋಜನೆಯಡಿ ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ/ಹಿಂದುಳಿದ ವರ್ಗ/ಅಲ್ಪಸಂಖ್ಯಾತರ ಸಹಕಾರ ಸಂಘಗಳಿಗೆ ಮೂಲಭೂತ ಸೌಕರ್ಯ ಹೊಂದಲು / ಆಸ್ತಿ ನಿರ್ಮಾಣ ಮಾಡಿಕೊಳ್ಳಲುಹಣಕಾಸು ಸಹಾಯ ನೀಡಲಾಗುವುದು.
ವಿವಿಧ ಸಹಕಾರ ಸಂಸ್ಥೆಗಳಲ್ಲಿ ಬಿಪಿಎಲ್, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತರು, ಮಹಿಳೆಯರು, ಅಂಗವಿಕಲರನ್ನು ಸದಸ್ಯರನ್ನಾಗಿ ನೋಂದಾಯಿಸುವ ಬಗ್ಗೆ ಸಹಾಯಧನ:
ಯೋಜನೆಯ ಪ್ರಮುಖ ಉದ್ದೇಶ ಬಿಪಿಎಲ್, ಪರಿಶಿಷ್ಠ ಜಾತಿ/ಪರಿಶಿಷ್ಠ ಪಂಗಡ/ಹಿಂದುಳಿದ ವರ್ಗ/ಅಲ್ಪಸಂಖ್ಯಾತ ವರ್ಗದ ಜನರನ್ನು ಎಲ್ಲಾ ವಿಧದ ಸಹಕಾರ ಸಂಘಗಳಿಗೆ ಸದಸ್ಯರನ್ನಾಗಿ ನೋಂದಾಯಿಸಲು ಸಹಾಯಧನ ನೀಡುವುದು ಆ ಮೂಲಕ ಆಯಾ ಸಹಕಾರ ಸಂಘಗಳಿಂದ ದೊರಕುವ ಸೌಲಭ್ಯವನ್ನು ಅವರಿಗೆ ಒದಗಿಸುವುದು. ಆಯಾ ಸಂಘದ ಒಂದು ಷೇರಿನ ಮೊತ್ತ ಅಥವಾ ಗರಿಷ್ಠ ರೂ.500/- ಇವುಗಳ ಪೈಕಿ ಯಾವುದು ಕಡಿಮೆಯೋ ಅಷ್ಟು ಮೊತ್ತವನ್ನು ಮಂಜೂರು ಮಾಡುವುದು.
ಜಿಲ್ಲಾ ವಲಯ ಯೋಜನೆಗಳು:
ಜಿಲ್ಲಾ ವಲಯದಡಿ ಒಟ್ಟು 09 ಯೋಜನಾ ಕಾರ್ಯ ಕ್ರಮಗಳನ್ನು ಅನುಷ್ಠಾನಗೊಳಿಸಲು ಒಟ್ಟು ರೂ 595.00 ಲಕ್ಷಗಳನ್ನು ಒದಗಿಸಲಾಗಿರುತ್ತದೆ.
- ವಿವಿಧ ವರ್ಗದ ಸಹಕಾರ ಸಂಘಗಳಿಗೆ ಷೇರು ಬಂಡವಾಳದ ಸಹಾಯ ( ಸಾಮಾನ್ಯ / ನಬಾರ್ಡ್ /ಎನ್.ಸಿ.ಡಿ.ಸಿ)
- ಇತರೆ ಸಹಕಾರ ಸಂಘಗಳ ಷೇರು ಬಂಡವಾಳ
- ವಿಶೇಷ ಘಟಕ ಯೋಜನೆಯಡಿ – ಆಸ್ತಿಗಳ ಸೃಷ್ಟಿಗಾಗಿ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿಅಭಿವೃದ್ದಿ ಬ್ಯಾಂಕುಗಳು ಮಂಜೂರು ಮಾಡಿದ ಸಾಲಗಳ ಮೇಲೆ ಶೇಕಡ 60 ರಷ್ಟು ಸಹಾಯಧನ
- ಮಹಿಳಾ ಸಹಕಾರ ಸಂಘಗಳಲ್ಲಿ ಹೂಡಿಕೆಗಳು
ಅಂಕಿ ಅಂಶಗಳ ವಿವರ
ಕ್ರ.ಸಂ | ವಿಷಯ | 31.12.2022 ರ ಅಂತ್ಯಕ್ಕೆ (ತಾತ್ಕಾಲಿಕ) |
---|---|---|
1 | ಸಹಕಾರ ಸಂಘಗಳ ಸಂಖ್ಯೆ | 342 |
ಕಾರ್ಯನಿರತ | 318 | |
ಸಮಾಪನೆ | 02 | |
ಸ್ಥಗಿತ | 22 | |
2 | ಷೇರು ಬಂಡವಾಳ (ರೂ. ಕೋಟಿಗಳಲ್ಲಿ ) | 117.98 |
ಸರ್ಕಾರದ ಷೇರು | 5.04 | |
ಸದಸ್ಯರ ಷೇರು | 112.93 | |
3 | ಸದಸ್ಯರ ಸಂಖ್ಯೆ | 3.07 |
4 | ದುಡಿಯುವ ಬಂಡವಾಳ (ರೂ. ಕೋಟಿಗಳಲ್ಲಿ ) | 3161.19 |
5 | ಠೇವಣಿ (ರೂ. ಕೋಟಿಗಳಲ್ಲಿ ) | 1518.13 |
6 | ಸಹಕಾರ ಸಂಘಗಳಿಗೆ ಒಳಪಟ್ಟಿರುವ ಗ್ರಾಮಗಳು % | 296% |
7 | ಲಾಭದಲ್ಲಿರುವ ಸಹಕಾರ ಸಂಘಗಳ ಸಂಖ್ಯೆ | 272 |
ನಷ್ಟದಲ್ಲಿರುವ ಸಹಕಾರ ಸಂಘಗಳ ಸಂಖ್ಯೆ | 57 | |
ಲಾಭ/ನಷ್ಟ ಇಲ್ಲದೆ ಇರುವ ಸಹಕಾರ ಸಂಘಗಳು | 13 |
ಕ್ರ.ಸಂ | ವಿವಿಧ ಸಹಕಾರ ಸಂಘಗಳ ಹೆಸರು | ಕಾರ್ಯನಿರತ | ಸ್ಥಗಿತ | ಸಮಾಪನೆ | ಒಟ್ಟು |
---|---|---|---|---|---|
1 | ಬಹುರಾಜ್ಯ ಮಟ್ಟದ ಸಹಕಾರ ಸಂಘಗಳು | – | – | – | – |
2 | ರಾಜ್ಯ ಮಟ್ಟದ ಸಹಕಾರ ಸಂಘಗಳು | – | – | – | – |
3 | ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ | 1 | – | – | 1 |
4 | ಪ್ರಾ.ಸ.ಕೃ.ಅಭಿವೃಧ್ಧಿ ಮತ್ತು ಗ್ರಾಮೀಣ ಬ್ಯಾಂಕ್ ನಿ., | 3 | – | – | 3 |
5 | ಪ್ರಾ.ಕೃ.ಪತ್ತಿನ ಸಹಕಾರ ಸಂಘಗಳು | 73 | – | – | 73 |
6 | ಲ್ಯಾಂಪ್ಸ್ ಸಹಕಾರ ಸಂಘಗಳು | 3 | – | – | 3 |
7 | ರೇಷ್ಮೆ ಬೆಳೆಗಾರರ ಸಹಕಾರ ಸಂಘಗಳು | – | – | 1 | 1 |
8 | ಸಹಕಾರಿ ಗ್ರೇನ್ ಬ್ಯಾಂಕುಗಳು | 86 | – | 10 | 96 |
9 | ಪಟ್ಟಣ ಸಹಕಾರ ಬ್ಯಾಂಕುಗಳು | 4 | – | – | 4 |
10 | ಇತರೆ ಪತ್ತಿನ ಸಹಕಾರ ಸಂಘಗಳಇತರೆ ಪತ್ತಿನ ಸಹಕಾರ ಸಂಘಗಳು | 19 | – | – | 19 |
11 | ನೌಕರರ ಪತ್ತಿನ ಸಹಕಾರ ಸಂಘಗಳು | 9 | – | 3 | 12 |
12 | ತಾ.ಕೃ.ಹು.ಮಾ.ಸ.ಸಂಘ | 11 | – | – | 11 |
13 | ಇತರೆ ಮಾರಾಟ ಸಹಕಾರ ಸಂಘಗಳು | 2 | – | – | 2 |
14 | ಸಹಕಾರಿ ಸಕ್ಕರೆ ಕಾರ್ಖಾನೆಗಳು | – | – | – | – |
15 | ಸಂಸ್ಕರಣ ಸಹಕಾರ ಸಂಘಗಳು | 4 | – | – | 4 |
16 | ಸಹಕಾರಿ ನೂಲಿನ ಗಿರಣಿಗಳು | 1 | – | – | 1 |
17 | ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘಗಳು | – | – | – | – |
18 | ಲೈವ್ಸ್ಟಾ ಕ್ ಸಹಕಾರ ಸಂಘಗಳು | 3 | – | – | 3 |
19 | ಹಾಲು ಉತ್ಪಾದಕರ ಸಹಕಾರ ಸಂಘಗಳು | 35 | 1 | 1 | 37 |
20 | ಸಹಕಾರಿ ಹಾಲು ಒಕ್ಕೂಟ | – | – | – | – |
21 | ಸಂಯುಕ್ತ ಬೇಸಾಯ ಸಹಕಾರ ಸಂಘಗಳು | 3- | – | – | 3 |
22 | ಎತ ನೀರಾವರಿ ಸಹಕಾರ ಸಂಘಗಳು | – | – | 2 | 2 |
23 | ನೀರು ಬಳಕೆದಾರರ ಸಹಕಾರ ಸಂಘಗಳು | 4 | – | 1 | 5 |
24 | ಮೀನುಗಾರಿಕಾ ಸಹಕಾರ ಸಂಘಗಳು | 1 | – | – | 1 |
25 | ನೇಕಾರರ ಸಹಕಾರ ಸಂಘಗಳು | 2 | – | – | 2 |
26 | ಇತರೆ ಕೈಗಾರಿಕಾ ಸಹಕಾರ ಸಂಘಗಳು | 2 | 2 | 1 | 5 |
27 | ಕೈಗಾರಿಕಾರ ಸಹಕಾರ ಸಂಘಗಳು | – | – | – | – |
28 | ಗ್ರಾಹಕರ ಸಹಕಾರ ಸಂಘಗಳು | 7 | – | – | 7 |
29 | ಕೇಂದ್ರ ಸಗಟು ಮಾರಾಟ ಮಳಿಗೆ | 1 | – | – | 1 |
30 | ಗೃಹ ನಿರ್ಮಾಣ ಸಹಕಾರ ಸಂಘಗಳು | 1 | – | – | 1 |
31 | ಅರಣ್ಯ ಕೂಲಿಕಾರರ ಸಹಕಾರ ಸಂಘಗಳು | – | – | – | – |
32 | ಕೂಲಿಕಾರರ ಸಹಕಾರ ಸಂಘಗಳು | – | – | – | – |
33 | ಜಿಲ್ಲಾ ಸಹಕಾರ ಒಕ್ಕೂಟ | 1 | – | – | 1 |
34 | ಜಿಲ್ಲಾ ಸಹಕಾರ ಮಾರಾಟ ಮಹಾಮಂಡಳ | 1 | – | – | 1 |
35 | ವಿವಿದೋದ್ದೇಶ ಸಹಕಾರ ಸಂಘಗಳು | 7 | – | – | 7 |
36 | ವಿದ್ಯಾರ್ಥಿ ಗ್ರಾಹಕರ ಸಹಕಾರ ಸಂಘಗಳು | 7 | – | – | 7 |
37 | ಕೇಶ ಅಲಂಕಾರಿಗಳ ಸಹಕಾರ ಸಂಘಗಳು | 11 | – | – | 11 |
38 | ಮಹಿಳಾ ವಿವಿದೋದ್ದೇಶ ಸಹಕಾರ ಸಂಘಗಳು | 9 | – | – | 9 |
39 | ಗರೀಬಿ ಹಟವೊ ಸಹಕಾರ ಸಂಘಗಳು | – | – | – | – |
40 | ದರ್ಜಿಗಳ ಸಹಕಾರ ಸಂಘಗಳು | – | – | – | – |
41 | ಚರ್ಮ ಹದ ಮಾಡುವವರ ಸಹಕಾರ ಸಂಘಗಳು | – | – | – | – |
42 | ಮರ ಬೆಳೆಗಾರರ ಸಹಕಾರ ಸಂಘಗಳು | – | – | – | – |
43 | ಹ್ಯಾಂಡ್ ಪೌಂಡಿಂಗ್ ಸಹಕಾರ ಸಂಘಗಳು | – | – | – | – |
44 | ಮಡಿವಾಳ ಸಹಕಾರ ಸಂಘಗಳು | – | – | – | – |
45 | ವಿದ್ಯುತ್ಶಕಕ್ತಿ ಸಹಕಾರ ಸಂಘಗಳು | – | – | – | – |
46 | ಸಾರಿಗೆ ಸಹಕಾರ ಸಂಘಗಳು | – | – | – | – |
47 | ಸಹಕಾರ ಆಸ್ಪತ್ರೆಗಳು | – | – | – | – |
48 | ಸಹಕಾರ ಮುದ್ರಣಾಲಯಗಳು | 1 | – | – | 1 |
49 | ಉಣ್ಣೇ ನೇಕಾರರ ಸಹಕಾರ ಸಂಘಗಳು | – | – | – | – |
50 | ಇತರೆ ಸಹಕಾರ ಸಂಘಗಳು | 7 | – | 1 | 8 |
Total | 316 | 3 | 23 | 342 |
ಇಲಾಖೆಯ ಬದ್ದತೆಗಳು
- ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಬಲಪಡಿಸಲು ವ್ಯಾಪಾರ ಅಭಿವೃದ್ಧಿ ಪಡಿಸಲು ವ್ಯಾಪಾರ ಅಭಿವೃದ್ಧಿ ಯೋಜನೆಯನ್ನು ಅಳವಡಿಸಿ ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ರೈತರಿಗೆ ಸುಲಭವಾಗಿ ಸಾಲ ತಲುಪಿಸುವ ವ್ಯವಸ್ಥೆಯನ್ನು ಬಲಪಡಿಸುವುದು.
- ಎಲ್ಲಾ ಗ್ರಾಮೀಣ ಸಹಕಾರಿ ಸಂಸ್ಥೆಗಳ ಎಲ್ಲಾ ಸದಸ್ಯರುಗಳಿಗೆ ಆರೋಗ್ಯ ರಕ್ಷಣಿ ಯೋಜನೆಯನ್ನು ವಿಸ್ತರಿಸುವುದು.
- ಸಹಕಾರ ಚಳುವ:ಳಿಯಲ್ಲಿ ಮಹಿಳೆಯರು ಹಾಗೂ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗ ದವರು ಸಕ್ರಿಯವಾಗಿ ಪಾಲ್ಗೊಳ್ಳಲು ಉತ್ತೇಜಿಸುವುದು.
- ಜಿಲ್ಲಾ ಮಟ್ಟದಲ್ಲಿ ಸಹಕಾರ ಸಂಘಗಳಿಗೆ ಪೂರಕವಾಗುವಂತೆ ಸಮಗ್ರ ಅಭಿವೃದ್ದಿಯ ಮೂಲಕ ಮೂಲಭೂತ ಸೌಕರ್ಯಗಳು ಮತ್ತು ಆರ್ಥಿಕ ಸ್ಥಿತಿಯನ್ನು ಬಲಪಡಿಸುವುದು.
- ಕಾರ್ಯ ಸಮರ್ಥ ತೆ ಸುಧಾರಿಸಲು ಕಛೇರಿ ನಿರ್ವಹಣಾ ವ್ಯವಸ್ಥೆಯನ್ನು ಆಧುನೀಕರಣಗೊಳಿಸುವುದು.
ಸಹಕಾರ ಇಲಾಖೆಯಿಂದ ನಿರ್ವಹಿಸುವ ಶಾಸನಾತ್ಮಕ ಮತ್ತು ಆರೆ ನ್ಯಾಯಾಂಗದ ಪ್ರಕಾರ್ಯಗಳು.
- ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ಮತ್ತು ಕರ್ನಾಟಕ ಸಹಕಾರ ಸಂಘಗಳ ನಿಯಮಾವಳಿಗಳು 1960.
- ಕರ್ನಾಟಕ ಲೇವಾದೇವಿಗಾರರ ಅಧಿನಿಯಮ 1961 ಮತ್ತು ಕರ್ನಾಟಕ ಲೇವಾದೇವಿಗಾರರ ನಿಯಮಗಳು 1965.
- ಕರ್ನಾಟಕ ಗಿರವಿದಾರರ ಅಧಿನಿಯಮ 1961 ಮತ್ತು ನಿಯಮಗಳು 1966.
- 1982 ರ ಚೀಟಿ ನಿಧಿಗಳ ಅಧಿನಿಯಮ ಮತ್ತು ಚೀಟಿನಿಧಿಗಳ(ಕರ್ನಾಟಕ) ನಿಯಮಾವಳಿ 1983.
- ಕರ್ನಾಟಕ ಋಣ ಪರಿಹಾರ ಅಧಿನಿಯಮ 1980.
- ಕರ್ನಾಟಕ ಪಬ್ಲಿಕ್ ಮನಿ (ರಿಕವರಿ ಆಫ್ ಡ್ಯೂಸ್) ಅಧಿನಿಯಮ 1980.
- ಕರ್ನಾಟಕ ಅಗ್ರಿಕಲ್ಚರಲ್ ಕ್ರೆಡಿಟ್ ಆಪರೇಷನ್ಸ್ ಮತ್ತು ಮಿಸಲೇನಿಯಸ್ ಪ್ರಾವಿಷನ್ಸ್ ಕಾಯಿದೆ 1974.
- ಕರ್ನಾಟಕ ಸೌಹಾರ್ಧ ಸಹಕಾರಿ ಅಧಿನಿಯಮ 1997 ಮತ್ತು ಕರ್ನಾಟಕ ಸೌಹರ್ಧ ಸಹಕಾರಿ ನಿಯಮಗಳ 2004.
- ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇದ ಅಧಿನಿಯಮ 2004.
- 10. ಬಹು ರಾಜ್ಯಗಳ ಸಹಕಾರ ಕಾಯ್ದೆ ( ಭಾಗಶಃ).
ಇಲಾಖೆಯ ಆಡಳಿತಾತ್ಮಕ ರಚನೆ
ಇಲಾಖೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಸಹಕಾರ ಸಂಘಗಳ ಉಪನಿಬಂಧಕರು ಮತ್ತು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಹಾಗೂ ತಾಲ್ಲೂಕು ಮಟ್ಟದ ಸಹಕಾರ ಅಭಿವೃಧ್ದಿ ಅಧಿಕಾರಿಗಳೂ ಕಾರ್ಯನಿರ್ವಹಿಸುತ್ತಿದ್ದಾರೆ.
ಸಹಕಾರ ಇಲಾಖೆಯ ಕೊಡಗು ಜಿಲ್ಲೆಯ ಆಡಳಿತಾತ್ಮಕ ರಚನೆ
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಮಾಹಿತಿ
ಕ್ರ.ಸಂಹೆಸರುನಿಯೋಜನೆದೂರವಾಣಿ ಸಂಖ್ಯೆಇಮೇಲ್
1 | ಬಿ.ಕೆ ಸಲೀಂ ಕೆ.ಸಿ.ಎಸ್ | ಸಹಕಾರ ಸಂಘಗಳ ಉಪನಿಬಂಧಕರು ಕೊಡಗು ಜಿಲ್ಲೆ, ಮಡಿಕೇರಿ | 08272-228519 | drcs[dash]kodagu[dash]ka[at]nic[dot]in |
2 | ರವಿಕುಮಾರ್ ಹೆಚ್.ಡಿ | ಸಹಕಾರ ಸಂಘಗಳ ಸಹಾಯಕ ನಿಬಂಧಕರು ಮಡಿಕೇರಿ ಉಪವಿಭಾಗ, ಮಡಿಕೇರಿ | 08272-225728 | arcs[dash]madikeri[dash]ka[at]nic[dot]in |
3 | ಎಂ.ಈ ಮೋಹನ್ | ಸಹಕಾರ ಅಭಿವೃಧ್ದಿೋ ಅಧಿಕಾರಿ ಸೋಮವಾರಪೇಟೆ ತಾಲ್ಲೂಕು | 9880233270 | cdomohan[at]gmai[dot]com |
4 | ಎಂ.ಈ ಮೋಹನ್ | ಸಹಕಾರ ಅಭಿವೃಧ್ದಿೋ ಅಧಿಕಾರಿ ಕುಶಾಲನಗರ ತಾಲ್ಲೂಕು | 9880233270 | cdomohan[at]gmai[dot]com |
5 | ಎಂ.ಎಸ್ ಮೋಹನ್ | ಸಹಕಾರ ಅಭಿವೃಧ್ದಿ ಅಧಿಕಾರಿ ವಿರಾಜಪೇಟೆ ತಾಲ್ಲೂಕು | 9449183761 | mohanmscdovirajpet[at]gmai[dot]com |
6 | ಎಂ.ಎಸ್ ಮೋಹನ್ | ಸಹಕಾರ ಅಭಿವೃಧ್ದಿ ಅಧಿಕಾರಿ ಪೊನ್ನಂಪೇಟೆ ತಾಲ್ಲೂಕು | 9449183761 | mohanmscdovirajpet[at]gmai[dot]com |
7 | ತ್ರಿವೇಣಿ ರಾವ್ .ಕೆ | ಸಹಕಾರ ಅಭಿವೃಧ್ದಿ ಅಧಿಕಾರಿ, ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ ಮಡಿಕೇರಿ, ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ ಮಡಿಕೇರಿ | 9900234309 | drcs[dash]kodagu[dash]ka[at]nic[dot]in |
ದಿನಾಂಕ 31-01-2022 ಕ್ಕೆ ಇದ್ದಂತೆ ಇಲಾಖೆಯಲ್ಲಿ ಮಂಜೂರಾದ ,ಕಾರ್ಯನಿರ್ವಹಿಸುತ್ತಿರುವ ಮತ್ತು ಖಾಲಿ ಹುದ್ದೆಗಳ ವಿವರ.
ಕ್ರ.ಸಂ | ಹುದ್ದೆ | ಮಂಜೂರಾದ ಹುದ್ದೆಗಳ ಸಂಖ್ಯೆ | ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳ ಸಂಖ್ಯೆ | ಖಾಲಿ ಹುದ್ದೆಗಳ ಸಂಖ್ಯೆ |
---|---|---|---|---|
1 | ಸಹಕಾರ ಸಂಘಗಳ ಉಪ ನಿಬಂಧಕರು | 01 | 01 | 0 |
2 | ಸಹಕಾರ ಸಂಘಗಳ ಸಹಾಯಕ ನಿಬಂಧಕರು | 01 | 01 | 0 |
3 | ಸಹಕಾರ ಅಭಿವೃದ್ದಿ ಅಧಿಕಾರಿ | 04 | 04 | 0 |
4 | ಅಧೀಕ್ಷಕರು | 02 | 0 | 02 |
5 | ಸಹಕಾರ ಸಂಘಗಳ ಹಿರಿಯ ನಿರೀಕ್ಷಕರು | 02 | 0 | 02 |
6 | ಸಹಕಾರ ಸಂಘಗಳ ನಿರೀಕ್ಷಕರು | 07 | 0 | 07 |
7 | ಪ್ರಥಮ ದರ್ಜೆ ಸಹಾಯಕರು | 03 | 02 | 01 |
8 | ಶೀಘ್ರಲಿಪಿಗಾರರು | 01 | 0 | 01 |
9 | ಬೆರಳಚ್ಚುಗಾರರು | 03 | 0 | 03 |
10 | ವಾಹನ ಚಾಲಕರು | 02 | 0 | 02 |
11 | ದ್ವಿತೀಯ ದರ್ಜೆ ಸಹಾಯಕರು | 07 | 01 | 06 |
12 | ಜಾರಿಗಾರರು | 02 | 02 | 0 |
13 | ಜವಾನರು | 06 | 0 | 06 |
ಒಟ್ಟು | 41 | 12 | 29 |