ಮುಚ್ಚಿ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಕೊಡಗು ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯಕ್ರಮಗಳ ವಿವರ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕೊಡಗು ನಿರ್ವಹಿಸುತ್ತಿರುವ ಹಾಸ್ಟೆಲ್‌ನ ವಿವರಗಳು

ಕ್ರಮ ಸಂಖ್ಯೆ. ತಾಲೂಕ ಡೌನ್‌ಲೋಡ್ ಲಿಂಕ್
1 ಮಡಿಕೇರಿ ಡೌನ್‌ಲೋಡ್ ಮಾಡಿ
2 ಸೋಮವಾರಪೇಟೆ ಡೌನ್‌ಲೋಡ್ ಮಾಡಿ
3 ವಿರಾಜಪೇಟೆ ಡೌನ್‌ಲೋಡ್ ಮಾಡಿ
4 ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,ಕೊಡಗು ಜಿಲ್ಲೆರಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿಶಾಲೆ/ಪದವಿ ಪೂರ್ವ ವಿಜ್ಞಾನ ಕಾಲೇಜುಗಳ ವಿವರ ಡೌನ್‌ಲೋಡ್ ಮಾಡಿ

ಕೊಡಗು ಜಿಲ್ಲೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಮತ್ತು ತಾಲ್ಲೂಕು ಕಛೇರಿ ದೂರವಾಣಿ ಸಂಖ್ಯೆ:

ಕ್ರ.ಸಂ. ಫೋಟೋ ಹೆಸರು ವಿಳಾಸ ದೂರವಾಣಿ ಸಂಖ್ಯೆ
1 bcw1 ಶ್ರೀ ಮಂಜುನಾಥ್ ಎನ್. ಕ.ಸಾ.ಸೇ., ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ದೇವರಾಜ ಅರಸು ಭವನ, ಮ್ಯಾನ್ಸ್ಕಾಂಪೌಂಡ್, ಮಡಿಕೇರಿ 08272-295628
2 bcw2 ಶ್ರೀ ರಾಜಶೇಖರ್ ಸಿ ಯಡಾಲ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ದೇವರಾಜ ಅರಸು ಭವನ, ಮ್ಯಾನ್ಸ್ಕಾಂಪೌಂಡ್, ಮಡಿಕೇರಿ 08272-298037
3 ravi ಶ್ರೀ ರವಿ ಸಿ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ ಸಾಮಥ್ರ್ಯಸೌಧ ಕಟ್ಟಡ, ಸೋಮವಾರಪೇಟೆ ತಾಲ್ಲೂಕು 08276-284820
4 shan ಶ್ರೀ ಶಂಕರ ನಾರಾಯಣ ಎನ್ ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಚೇರಿ, ತಾಲ್ಲೂಕು ಪಂಚಾಯಿತಿ ಆವರಣ, ಪೊನ್ನಂಪೇಟೆ, ವಿರಾಜಪೇಟೆ ತಾಲ್ಲೂಕು 08274-249211

1. ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು: –

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ನಿರ್ವಹಿಸುತ್ತಿರುವ ನಿಲಯಗಳಲ್ಲಿ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿಗಳಿಗೆ ರೂ.1500/- ಮತ್ತು ಮೆಟ್ರಿಕ್ ನಂತರ ವಿದ್ಯಾರ್ಥಿಗಳಿಗೆ ರೂ.1600/-ಗಳ ವೆಚ್ಚದಲ್ಲಿ ಮೆನು ಚಾರ್ಟ್ನಂತೆ ಉಚಿತ ಊಟ, ವಸತಿ ಸೌಲಭ್ಯ, ಮಂಚ-ಹಾಸಿಗೆ-ದಿಂಬು, ಬೆಡ್ಶೀಟ್, ಬ್ಲಾಂಕೆಟ್, ತಟ್ಟೆ-ಲೋಟ, ಯು.ಪಿ.ಎಸ್, ಸೋಲಾರ್ ವಾಟರ ಹೀಟರ್, ಗ್ರಂಥಾಲಯ, ದಿನಪತ್ರಿಕೆ, ಮಾಸಿಕ ಪತ್ರಿಕೆ, ಮ್ಯಾಗಜಿನ್ಸ್, ಬರಹ ಪುಸ್ತಕ, ಲೇಖನಾ ಸಾಮಗ್ರಿಗಳು, ಸಮವಸ್ತ್ರ, ಶುಚಿ ಸಂಭ್ರಮ ಕಿಟ್, ವಿಶೇಷ ಬೋಧನಾ ವ್ಯವಸ್ಥೆ ಒದಗಿಸಲಾಗುವುದು.

ಮಡಿಕೇರಿ ತಾಲ್ಲೂಕು

ಕ್ರ.ಸಂ. ವಿದ್ಯಾರ್ಥಿನಿಲಯಗಳ ಹೆಸರು ಹೆಚ್.ಐ.ಸಿ. ಸಂಖ್ಯೆ ಮಂಜೂರಾತಿ ಸಂಖ್ಯೆ
1 ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಭಾಗಮಂಡಲ BCWD2121 100
2 ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಮಡಿಕೇರಿ (ದಾಸವಾಳ ರಸ್ತೆ) BCWD2122 100
3 ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಮಡಿಕೇರಿ (ಗದ್ದುಗೆ) BCWD2123 100
4 ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಮಡಿಕೇರಿ ಟೌನ್-2 BCWD2124 100
5 ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಮಡಿಕೇರಿ ಟೌನ್-1 BCWD2125 100
6 ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಪಾರಾಣೆ BCWD763 40
7 ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಮೂರ್ನಾಡು BCWD764 50
8 ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಸಂಪಾಜೆ BCWD765 30
9 ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಮಡಿಕೇರಿ BCWD766 35
10 ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಮರಗೋಡು BCWD767 70
ಒಟ್ಟು 725

ಸೋಮವಾರಪೇಟೆ ತಾಲ್ಲೂಕು

ಕ್ರ.ಸಂ. ವಿದ್ಯಾರ್ಥಿನಿಲಯಗಳ ಹೆಸರು ಹೆಚ್.ಐ.ಸಿ. ಸಂಖ್ಯೆ ಮಂಜೂರಾತಿ ಸಂಖ್ಯೆ
1 ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಆಲೂರು ಸಿದ್ದಾಪುರ BCWD2126 100
2 ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಕುಶಾಲನಗರ (ಬೈಚ್ಚನಹಳ್ಳಿ) BCWD2127 100
3 ಇಂಜಿನಿಯರಿಂಗ್ ಮೆಟ್ರಿಕ್ ನಂತರದ ಪುರುಷ ವಿದ್ಯಾರ್ಥಿ ನಿಲಯ ಕುಶಾಲನಗರ BCWD2128 100
4 ವೃತ್ತಿಪರ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಕುಶಾಲನಗರ BCWD2129 100
5 ಮಾದರಿ ಮೆಟ್ರಿಕ್ ನಂತರದ ಮಹಿಳಾ ವಿದ್ಯಾರ್ಥಿ ನಿಲಯ ಕುಶಾಲನಗರ (ಹೊಸದು) BCWD2130 100
6 ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಆಲೂರು ಸಿದ್ದಾಪುರ BCWD2131 100
7 ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಸೋಮವಾರಪೇಟೆ BCWD2132 100
8 ಇಂಜಿನಿಯರಿಂಗ್ ಮೆಟ್ರಿಕ್ ನಂತರದ ಮಹಿಳಾ ವಿದ್ಯಾರ್ಥಿ ನಿಲಯ ಕುಶಾಲನಗರ BCWD2133 100
9 ಸಾರ್ವಜನಿಕ ಮಾದರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಕುಶಾಲನಗರ BCWD2134 100
10 ಮೆಟ್ರಿಕ್ ನಂತರದ ಮಹಿಳಾ ವಿದ್ಯಾರ್ಥಿ ನಿಲಯ ಕುಶಾಲನಗರ (ನರ್ಸಿಂಗ್ ಪರಿವರ್ತಿತ) BCWD2135 100
11 ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಆಲೂರು ಸಿದ್ದಾಪುರ BCWD768 60
12 ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಚೆಟ್ಟಳ್ಳಿ BCWD769 20
13 ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಕೊಡ್ಲಿಪೇಟೆ BCWD770 25
14 ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಕುಶಾಲನಗರ BCWD771 50
15 ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಶನಿವಾರಸಂತೆ BCWD772 30
16 ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಶಿರಂಗಾಲ BCWD773 60
17 ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಸುಂಟಿಕೊಪ್ಪ BCWD774 25
18 ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಸೋಮವಾರಪೇಟೆ BCWD775 25
19 ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಆಲೂರು ಸಿದ್ದಾಪುರ BCWD776 75
ಒಟ್ಟು 1370

ವಿರಾಜಪೇಟೆ ತಾಲ್ಲೂಕು

ಕ್ರ.ಸಂ. ವಿದ್ಯಾರ್ಥಿನಿಲಯಗಳ ಹೆಸರು ಹೆಚ್.ಐ.ಸಿ. ಸಂಖ್ಯೆ ಮಂಜೂರಾತಿ ಸಂಖ್ಯೆ
1 ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ ಗೋಣಿಕೊಪ್ಪ BCWD2136 100
2 ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ವಿರಾಜಪೇಟೆ-1 BCWD2137 100
3 ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ವಿರಾಜಪೇಟೆ-2 BCWD2138 100
4 ವೃತ್ತಿಪರ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ ಪೊನ್ನಂಪೇಟೆ BCWD2139 100
5 ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಬಿರುನಾಣಿ BCWD777 50
6 ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಪೊನ್ನಂಪೇಟೆ BCWD779 25
7 ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ ಶ್ರೀಮಂಗಲ BCWD764 50
8 ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಹುದಿಕೇರಿ BCWD781 30
9 ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ ಪೊನ್ನಂಪೇಟೆ BCWD782 35
ಒಟ್ಟು 560

ಘೋಷ್ವಾರೆ

ಕ್ರ.ಸಂ. ವಿದ್ಯಾರ್ಥಿನಿಲಯಗಳ ಹೆಸರು ವಿದ್ಯಾರ್ಥಿ ನಿಲಯಗಳ ಸಂಖ್ಯೆ ಮಂಜೂರಾತಿ ಸಂಖ್ಯೆ
1 ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ 14 510
2 ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ 05 245
3 ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯ 08 800
4 ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ 11 1100
Total 38 2655

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ,ಕೊಡಗು ಜಿಲ್ಲೆರಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿಶಾಲೆ/ಪದವಿ ಪೂರ್ವ ವಿಜ್ಞಾನ ಕಾಲೇಜುಗಳ ವಿವರ

ಕ್ರ.ಸಂ ತಾಲ್ಲೂಕು ವಸತಿ ಶಾಲೆಗಳ ಹೆಸರು ಮಂಜೂರಾತಿ ಸಂಖ್ಯೆ
1 ಮಡಿಕೇರಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಭಾಗಮಂಡಲ 560
2 ಸೋಮವಾರಪೇಟೆ ಮೊರಾರ್ಜಿ ದೇಸಾಯಿ ವಸತಿ ಶಾಲೆ ಕೂಡಿಗೆ 250
3 ಮೊರಾರ್ಜಿ ದೇಸಾಯಿ ವಸತಿ ಶಾಲೆ ಆಲೂರು ಸಿದ್ದಾಪುರ 250
4 ಮೊರಾರ್ಜಿ ದೇಸಾಯಿ ವಸತಿ ಕಾಲೇಜು ಗರಗಂದೂರು 160
ಒಟ್ಟು 1220

2. ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ:-

1ನೇ ತರಗತಿಯಿಂದ 10ನೇ ತರಗತಿಯವರಿಗೆ ಸರ್ಕಾರಿ/ಖಾಸಗಿ/ಅನುದಾನರಹಿತ/ಸಹಿತವ್ಯಾಸಂಗ ಮಾಡುತ್ತಿರುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಾರ್ಷಿಕ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಲಾಗುವುದು.

ತರಗತಿ ಬಾಲಕ/ಬಾಲಕಿ ಅಡ್ಹಾಕ್ ಅನುದಾನ ಒಟ್ಟು
1 ರಿಂದ 5 250/- 500/- 750/-
6 ರಿಂದ 8 400/- 500/- 900/-
9 ರಿಂದ 10 500/- 500/- 1000/-

3. ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನ: –

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಶೈಕ್ಷಣಕ ಉತ್ತೇಜನಕ್ಕಾಗಿ ಸರ್ಕಾರಿ/ಖಾಸಗಿ/ಅನುದಾನರಹಿತ/ಸಹಿತ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪಿ.ಯು.ಸಿ, ಪದವಿ, ವೃತ್ತಿಪರ ಪದವಿ, ಸ್ನಾತಕೋತ್ತರ ಪದವಿ, ಸ್ನಾತಕೋತ್ತರ ವೃತ್ತಿಪರ ಪದವಿ, ಇತ್ಯಾದಿ ಮೆಟ್ರಿಕ್ ನಂತರದ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನವನ್ನು ಮಂಜೂರು ಮಾಡಲಾಗುವುದು.

ಕ್ರ.ಸಂ. ಗುಂಪು ಮಂಜೂರು ಮಾಡಲಾಗುತ್ತಿರುವ ವಿದ್ಯಾರ್ಥಿ ವೇತನದದರ (ವಾರ್ಷಿಕ)
1 ಗುಂಪು-ಎ 3500/-
2 ಗುಂಪು-ಬಿ 3350/-
3 ಗುಂಪು-ಸಿ 2100/-
4 ಗುಂಪು-ಡಿ 1600/-

4. ನಿಲಯಾರ್ಥಿಗಳಿಗೆ ಪ್ರೋತ್ಸಾಹಧನ:-

ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಪಬ್ಲಿಕ್ ಪರೀಕ್ಷೆಗಳಲ್ಲಿ ಪ್ರಥಮ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವರಿಗೆ ಈ ಕೆಳಕಂಡಂತೆ ಪ್ರೋತ್ಸಾಹಧನವನ್ನು ನೀಡಲಾಗುವುದು.

1 ಎಸ್.ಎಸ್.ಎಲ್.ಸಿ 1000/-
2 ಪಿ.ಯು.ಸಿ., ಡಿಪ್ಲಮಾ 1500/-
3 ಪದವಿ 2000/-
4 ಸ್ನಾತಕೋತ್ತರ ಪದವಿ 3000/-

5. ಶುಲ್ಕ ವಿನಾಯಿತಿ:-

ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ನೆರವಾಗುವ ದೃಷ್ಟಿಯಿಂದ ಸರ್ಕಾರವು, ಸರ್ಕಾರದ ಕಾಲೇಜುಗಳಿಗೆ ನಿಗಧಿಪಡಿಸಿರುವ ಬೋಧನಾ ಶುಲ್ಕ, ಪ್ರಯೋಗಾಲಯ ಶುಲ್ಕ, ಪರೀಕ್ಷಾ ಶುಲ್ಕ, ಕ್ರೀಡಾ ಶುಲ್ಕ, ಗ್ರಂಥಾಲಯ ಶುಲ್ಕದ ದರಗಳನ್ನು ಸಂಬಂಧಪಟ್ಟ ಕಾಲೇಜಿನ ಪ್ರಾಂಶುಪಾಲರ ಖಾತೆಗೆ ಜಮಾ ಮಾಡಲಾಗುವುದು

 

6. ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ:-

ಯಾವುದೇ ಇಲಾಖೆಯ ಸರ್ಕಾರಿ/ಸರ್ಕಾರಿ ಅನುದಾನಿತ ವಿದ್ಯಾರ್ಥಿ ನಿಲಯ/ ವಸತಿ ಕಾಲೇಜುಗಳಲ್ಲಿ ಪ್ರವೇಶ ದೊರೆಯದ ಹಾಗೂ ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುವ ಅರ್ಹ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಕಾರ್ಯಕ್ರಮದಲ್ಲಿ ಮಾಸಿಕ ರೂ.1500/- ರಂತೆ ಒಟ್ಟು ರೂ.15,000/- ಗಳನ್ನು ಮಂಜೂರಾತಿ ನೀಡಲಾಗುವುದು

7. ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರ :-

ಎಸ್.ಎಸ್.ಎಲ್.ಸಿ, ಪಿ.ಯು.ಸಿಯಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕಗಳಿಸಿದ ಮತ್ತು ಪದವಿ, ಸ್ನಾತಕೋತ್ತರ ಪದವಿಗಳಲ್ಲಿ ಶೇ.70 ಕ್ಕಿಂತ ಹೆಚ್ಚು ಅಂಕಗಳಿಸಿದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹವನ್ನು ನೀಡುವದೃಷ್ಟಿಯಿಂದ “ಡಿ. ದೇವರಾಜಅರಸು ಪ್ರತಿಭಾ ಪುರಸ್ಕಾರ” ಯೋಜನೆಯನ್ನುಆರಂಭಿಸಲಾಗಿದೆ.

ಕ್ರ.ಸಂ. ತರಗತಿ/ಕೊರ್ಸ್ ಪ್ರತಿಭಾ ಪುರಸ್ಕಾರ (ಮೊತ್ತ ರೂ.ಗಳಲ್ಲಿ) ರಾಜ್ಯ ಮಟ್ಟದಲ್ಲಿ ನೀಡುವ ವಿದ್ಯಾರ್ಥಿಗಳ ಸಂಖ್ಯೆ
1 ಎಸ್.ಎಸ್.ಎಲ್.ಸಿ 10000/- 1000
2 ಪಿ.ಯು.ಸಿ. 15000/- 500
3 ಪದವಿ/ಸ್ನಾತಕೋತ್ತರ ಪದವಿ (ಸಾಮಾನ್ಯ) 20000/- 500
4 ವೃತ್ತಿಪರ ಪದವಿ/ವೃತ್ತಿಪರ ಸ್ನಾತಕೋತ್ತರ ಪದವಿ (ತಾಂತ್ರಕ, ವೈದ್ಯಕೀಯ ಹಾಗೂ ಸಂಬಂಧಿತ ವಿಜ್ಞಾನ ) 25000/- 500

8. ಪಿಎಚ್.ಡಿ ಪೂರ್ಣಾವಧಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಫೆಲೋಶಿಫ್:-

ಪೂರ್ಣಾವಧಿ ಪಿಎಚ್.ಡಿ. ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಮಾಸಿಕ ರೂ.10,000/- ದಂತೆ 3 ವರ್ಷಗಳಿಗೆ ವ್ಯಾಸಂಗ ವೇತನ/ಫೆಲೋಶಿಫ್ ಅನ್ನು ನೀಡಿ, ಉನ್ನತ ಶಿಕ್ಷಣ/ಸಂಶೋಧನೆಯಲ್ಲಿ ತೊಡಗಿಕೊಳ್ಳಲು ನೆರವು ನೀಡಲಾಗುತ್ತಿದೆ.

9. ಡಿ. ದೇವರಾಜ ಅರಸು ವಿದೇಶಿ ವ್ಯಾಸಂಗ ವೇತನ:-

ವಿದೇಶಿ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿ.ಹೆಚ್.ಡಿ/ಸಂಶೋಧನೆ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಾರ್ಷಿಕ ಗರಿಷ್ಠ ರೂ.10.00 ಲಕ್ಷದಂತೆ 3 ವರ್ಷಗಳಿಗೆ ಗರಿಷ್ಟ ರೂ.30.00 ಲಕ್ಷಗಳ ಅನುದಾನವನ್ನು ಮಂಜೂರು ಮಾಡಲಾಗುವುದು.

10. ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷಾ ಪೂರ್ವ ತರಬೇತಿ:-

ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಐ.ಎ.ಎಸ್, ಕೆ.ಎ.ಎಸ್ ಹಾಗೂ ಬ್ಯಾಂಕ್ ಪ್ರೊಬೇಷನರಿ ಆಫೀಸರ್ಸ್ ಪರೀಕ್ಷೆಗಳ ಪರೀಕ್ಷಾ ಪೂರ್ವ ತರಬೇತಿಯನ್ನು ದೆಹಲಿ, ಹೈದರಾಬಾದ್, ಬೆಂಗಳೂರು, ಪ್ರತಿಷ್ಠಿತ ಖಾಸಗಿ ತರಬೇತಿ ಸಂಸ್ಥೆಗಳ ಮೂಲಕ ನೀಡಲಾಗುತ್ತಿದೆ ಹಾಗೂ ತರಬೇತಿ ಭತ್ಯೆ ಮತ್ತು ತರಬೇತಿ ಶುಲ್ಕವನ್ನು ಇಲಾಖೆಯಿಂದ ನೀಡಲಾಗುವುದು.

11 ಕಾನೂನು ಪದವೀಧರರಿಗೆ ಶಿಷ್ಯವೇತನ:-

ಕಾನೂನು ಪದವಿಯನ್ನು ಪಡೆದಿರುವ ಹಿಂದುಳಿದ ವರ್ಗಗಳ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಗೆ ವಕೀಲಿ ವೃತ್ತಿಯಲ್ಲಿ ತರಬೇತಿ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರತಿ ವರ್ಷ 10 ಅಭ್ಯರ್ಥಿಗಳಿಗೆ ಮಾಸಿಕ ರೂ.4000/- ದಂತೆ 4 ವರ್ಷಗಳಿಗೆ ಶಿಷ್ಯವೇತನವನ್ನು ಮಂಜೂರು ಮಾಡಲಾಗುವುದು.