ಮುಚ್ಚಿ

ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ

ಕಚೇರಿಯ ವ್ಯವಸ್ಥೆ ಮತ್ತು ಕರ್ತವ್ಯಗಳ ವಿವರಗಳು:

  • ನಗರ/ಪಟ್ಟಣ ಮತ್ತು ಅಭಿವೃದ್ಧಿ ಪಥದಲ್ಲಿ ಇರುವ ಗ್ರಾಮಗಳ ಭೌತಿಕ, ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷಣೆ ಮಾಡಿ ಮಹಾಯೋಜನೆ (ಮಾಸ್ಟರ್ ಪ್ಲಾನ್)ಗಳನ್ನು ಸಿದ್ಧಪಡಿಸುವುದು. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಅಧಿನಿಯಮದಡಿ ಈ ಯೋಜನೆಗಳನ್ನು ನಗರ ಮತ್ತು ಗ್ರಾಮಾಂತರ ನಿರ್ದೇಶಕರು, ಬೆಂಗಳೂರು ಕಚೇರಿಗೆ ಸಲ್ಲಿಸಿ, ಸರ್ಕಾರದಿಂದ ಅಂಗೀಕಾರ ಪಡೆಯುವುದು
  • ಪಟ್ಟಣ ಮತ್ತು ಗ್ರಾಮ ವಿಸ್ತರಣಾ (ಬಡಾವಣೆ) ಯೋಜನೆ/ಅಭಿವೃದ್ಧಿ ಸುಧರಣಾ ಯೋಜನೆಗಳು; ಪುನರ್ವಸತಿ ಯೋಜನೆಗಳು; ಆಶ್ರಯ ಯೋಜನೆಗಳು ಮತ್ತಿತರ ಯೋಜನೆಗಳನ್ನು ತಯಾರಿಸುವುದು
  • ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ ಮತ್ತು ನಿಯಮಗಳನ್ನು ಅನುಷ್ಠಾನಕ್ಕೆ ತರುವ ವಿಷಯದಲ್ಲಿ ಕರ್ನಾಟಕ ನಗರ ಯೋಜನಾ ಮಂಡಳಿಗೆ ಹಾಗೂ ಯೋಜನೆಗಳನ್ನು ರೂಪಿಸಲು ಮತ್ತು ಕಾರ್ಯಗತಗೊಳಿಸಲು ನಗರ ಯೋಜನಾ ಪ್ರಾಧಿಕಾರಗಳಿಗೆ ಯೋಜನಾ ವಿಷಯಗಳಿಗೆ ಸಂಬಂಧಿಸಿದಂತೆ ತಾಂತ್ರಿಕ ನೆರವು ನೀಡುವುದು
  • ರಾಜ್ಯ ಸರ್ಕಾರ ರಚಿಸಿರುವ ಕರ್ನಾಟಕ ಗೃಹ ಮಂಡಳಿ, ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ, ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ, ಮತ್ತಿತರ ಸಂಸ್ಥೆಗಳಿಗೆ ಯೋಜನಾ ವಿಷಯಗಳಿಗೆ ಸಂಬಂಧಿಸಿದಂತೆ ನೆರವು ನೀಡುವುದು
  • ಸರ್ಕಾರಿ ಇಲಾಖೆಗಳು; ಅರೆ ಸರ್ಕಾರಿ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಹಾಗೂ ಖಾಸಗಿ ಸಂಸ್ಥೆಗಳಿಗೆ ಕೋರಿಕೆ ಮೇರೆಗೆ ವಿನ್ಯಾಸ ರೂಪಿಸಿ ತಾಂತ್ರಿಕ ಅನುಮೋದನೆ ನೀಡುವುದು
  • ವ್ಯವಸಾಯ ಭೂಮಿಯನ್ನು ವ್ಯವಸಾಯೇತರ ಉದ್ದೇಶಗಳಿಗಾಗಿ ಪರಿವರ್ತಿಸಲು ಕಂದಾಯ ಇಲಾಖೆಗೆ ತಾಂತ್ರಿಕ ಅಭಿಪ್ರಾಯ ನೆರವು ನೀಡುವುದು
  • ಸುವ್ಯವಸ್ಥಿತ ಸುರಕ್ಷಿತ ಹಾಗೂ ಸಮರ್ಥ ಸಂಚಾರ ನಿರ್ವಹಣಾ ಯೋಜನೆಗಳನ್ನು ರೂಪಿಸುವುದು ಮತ್ತು ಅವುಗಳನ್ನು ಕಾರ್ಯಗತಗೊಳಿಸಲು ಸಲಹೆ ನೀಡುವುದು

ಕಚೇರಿಯ ಅಧಿಕಾರಿಗಳ ಮತ್ತು ನೌಕರರ ಅಧಿಕಾರ ಮತ್ತು ಕರ್ತವ್ಯಗಳು:

ಕ್ರಮ ಸಂಖ್ಯೆ ಪದನಾಮ ಅಧಿಕಾರ ಮತ್ತು ಕರ್ತವ್ಯಗಳು
1 ಸಹಾಯಕ ನಿರ್ದೇಶಕರು ಈ ಕಚೇರಿಯ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಾರೆ. ಅವರ ಅಧಿಕಾರ ವ್ಯಾಪ್ತಿಯಲ್ಲಿ ಬರುವ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಅಭಿವೃದ್ಧಿ ಯೋಜನೆಗಳನ್ನು ತಯಾರಿಸುವುದು. ಸರ್ಕಾರದ ವಿವಿಧ ಇಲಾಖೆಗಳಿಗೆ ಯೋಜನೆ ಕುರಿತು ತಾಂತ್ರಿಕ ಸಹಾಯ ನೀಡುವುದು, ವ್ಯವಸಾಯ ಜಮೀನುಗಳನ್ನು ವ್ಯವಸಾಯೇತರ ಉದ್ದೇಶಕ್ಕೆ ಭೂಪರಿವರ್ತಿಸುವಾಗ ಕಂದಾಯ ಇಲಾಖೆಗೆ ಅಭಿಪ್ರಾಯ ನೀಡುವುದು. ಸ್ಥಳೀಯ ಸಂಸ್ಥೆಗಳು, ಸ್ಥಳೀಯ ಪ್ರಾಧಿಕಾರಗಳಿಗೆ ಸಂಬಂಧಿಸಿದಂತೆ ಆಯಾ ನಗರ ಹಾಗೂ ಗ್ರಾವiಗಳಿಗೆ ವಿಸ್ತರಿಸಿ ಯೋಜನೆ ತಯಾರಿಸಿ ಕೊಡುವುದು, ಪುನರ್ವಸತಿ, ಪುನರ್ ನಿರ್ಮಾಣ, ಸಂಚಾರ ನಿರ್ವಹಣೆ ಪ್ರಸ್ತಾವನೆಗಳಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ತಯಾರಿಸುವುದು. ಅಭಿವೃದ್ಧಿ ಯೋಜನೆಗಳ ತಯಾರಿಕೆ ಹಾಗೂ ಅನುಷ್ಠಾನಗೊಳಿಸುವಿಕೆ ಕುರಿತು ವಿವಿಧ ನಗರಾಭಿವೃದ್ಧಿ ಪ್ರಾಧಿಕಾರಗಳು, ಯೋಜನಾ ಪ್ರಾಧಿಕಾರಗಳು, ನಗರ ಸ್ಥಳೀಯ ಪ್ರಾಧಿಕಾರಗಳಿಗೆ ತಾಂತ್ರಿಕ ನೆರವು ನೀಡುವುದು, ನಗರದ ಸೌಂದರ್ಯ ಕಾಪಾಡಲು ಮತ್ತು ವೃದ್ಧಿಗೊಳಿಸಲು ಯೋಜನೆಗಳನ್ನು ರೂಪಿಸುವುದು ಮುಂತಾದ ಮುಖ್ಯ ಕಾರ್ಯಚಟುವಟಿಕೆಗಳಾಗಿರುತ್ತದೆ
2 ನಗರ ಯೋಜಕರು ಪ್ರತಿಯೊಂದು ಶಾಖೆಯಲ್ಲಿ ನಿರ್ವಹಿಸುವ ಆಯಾ ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದಂತೆ ಕಾಗದ ಪತ್ರಗಳನ್ನು ನಿಯಮಗಳ ಅನುಸಾರ ಕೂಲಂಕುಷವಾಗಿ ಪರಿಶೀಲಿಸಿ ಸಹಾಯಕ ನಿರ್ದೇಶಕರಿಗೆ ಸಲ್ಲಿಸುತ್ತಾರೆ
3 ಸಹಾಯಕ ನಗರ ಯೋಜಕರು ಇವರು ಕಚೇರಿಯ ದೈನಂದಿನ ತಾಂತ್ರಿಕ ಕಾರ್ಯಗಳಲ್ಲಿ ನಿಯಮಾನುಸಾರ ಕಡತಗಳ ಪರಿಶೀಲನೆ ಮತ್ತು ಕಡತವನ್ನು ಮೇಲಧಿಕಾರಿಗಳಿಗೆ ಅನುಮೋದನೆಗಾಗಿ ಮಂಡಿಸುತ್ತಾರೆ
4 ಪ್ರಥಮ ದರ್ಜೆ ಸಹಾಯಕರು ಕಚೇರಿ ಆಡಳಿತಕ್ಕೆ ಸಂಬಂಧಿಸಿದ ಎಲ್ಲಾ ಕೆಲಸಗಳ ನಿರ್ವಹಣೆ
5 ಬೆರಳಚ್ಚುಗಾರರು ಕೈಬರಹದ ಪತ್ರಗಳನ್ನು ಬೆರಳಚ್ಚು ಮಾಡುವುದು
6 ಡಿ ದರ್ಜೆ ನೌಕರರು ಕಚೇರಿ ಸ್ವಚ್ಛತೆ, ಲೋಕಲ್ ಕಾಗದ ಪತ್ರಗಳ ರವಾನೆ ಹಾಗೂ ಅಧಿಕಾರಿಗಳ ಸೂಚನೆ ಮೇರೆಗೆ ಕೆಲಸ ನಿರ್ವಹಿಸುವುದು

ಕ್ರಮ ಸಂಖ್ಯೆ ಪದನಾಮ ಮಂಜೂರಾದ ಹುದ್ದೆಗಳ ವಿವರ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಹುದ್ದೆಗಳ ವಿವರ ಷರಾ
1 ಸಹಾಯಕ ನಿರ್ದೇಶಕರು 01 01
2 ನಗರ ಯೋಜಕರು 01 01
3 ಸಹಾಯಕ ನಗರ ಯೋಜಕರು 03 02 ಹುದ್ದೆ ಖಾಲಿ ಇದ್ದು ಸರ್ಕಾರದಿಂದ ಇದುವರೆಗೂ ಸ್ಥಳ ನಿಯುಕ್ತಿಗೊಳಿಸಿರುವುದಿಲ್ಲ
4 ಪ್ರಥಮ ದರ್ಜೆ ಸಹಾಯಕರು 01 00 ಹುದ್ದೆ ಖಾಲಿ ಇದ್ದು ಸರ್ಕಾರದಿಂದ ಇದುವರೆಗೂ ಸ್ಥಳ ನಿಯುಕ್ತಿಗೊಳಿಸಿರುವುದಿಲ್ಲ
5 ಬೆರಳಚ್ಚುಗಾರರು 01 00 ಹುದ್ದೆ ಖಾಲಿ ಇದ್ದು ಸರ್ಕಾರದಿಂದ ಇದುವರೆಗೂ ಸ್ಥಳ ನಿಯುಕ್ತಿಗೊಳಿಸಿರುವುದಿಲ್ಲ
6 ವಾಹನ ಚಾಲಕರು 01 00 ಹುದ್ದೆ ಖಾಲಿ ಇದ್ದು ಸರ್ಕಾರದಿಂದ ಇದುವರೆಗೂ ಸ್ಥಳ ನಿಯುಕ್ತಿಗೊಳಿಸಿರುವುದಿಲ್ಲ
7 ‘ಡಿ’ ದರ್ಜೆ ನೌಕರರು 02 00 ಹುದ್ದೆ ಖಾಲಿ ಇದ್ದು ಸರ್ಕಾರದಿಂದ ಇದುವರೆಗೂ ಸ್ಥಳ ನಿಯುಕ್ತಿಗೊಳಿಸಿರುವುದಿಲ್ಲ

ಕರ್ತವ್ಯ ನಿರ್ವಹಣೆಗಾಗಿ ನಿಗದಿಪಡಿಸಲಾಗಿರುವ ಸೂತ್ರಗಳು:

ಕಚೇರಿಯ ಕಾರ್ಯನಿರ್ವಹಣೆಯು ವಿವಿಧ ಕಾಯ್ದೆಗಳಲ್ಲಿ ನೀಡಿರುವ ಸೂಚನೆಗಳಂತೆ, ಸರ್ಕಾರದಿಂದ ಜಾರಿಗೊಳಿಸಲಾದ ಆದೇಶಗಳು, ಸುತ್ತೋಲೆಗಳು ಮತ್ತು ವಿವಿಧ ಹಂತಗಳಲ್ಲಿ ನೀಡಲಾಗಿರುವ ಸೂಚನೆಗಳನ್ವಯ ಕರ್ತವ್ಯಗಳನ್ನು ನಿರ್ವಹಿಸಲಾಗುತ್ತಿದೆ

ಇಲಾಖೆಯಲ್ಲಿನ ನೌಕರರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಅನುಸರಿಸುತ್ತಿರುವ ನಿಯಮಗಳು, ನಿಯಮಾವಳಿಗಳು, ಸೂಚನೆಗಳು, ಕೈಪಿಡಿಗಳು ಮತ್ತು ದಾಖಲಾತಿಗಳ ವಿವರ:

1 ಕರ್ನಾಟಕ ನಗರ ಗ್ರಾಮಾಂತರ ಯೋಜನಾ ಕಾಯ್ದೆ, 1961
2 ಕರ್ನಾಟಕ ರಾಜ್ಯ ನಗರ ಯೋಜನಾ ಮಂಡಳಿ ನಿಯಮಾವಳಿ, 1964
3 ಕರ್ನಾಟಕ ಯೋಜನಾ ಪ್ರಾಧಿಕಾರ ನಿಯಮಾವಳಿ 1965
4 ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರ ಕಾಯ್ದೆ, 1987
5 ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಕಾಯ್ದೆ, 1976
6 ಕರ್ನಾಟಕ ಮುನ್ಸಿಪಾಲಿಟೀಸ್ ಕಾಯ್ದೆ, 1964
7 ಭೂ ಸ್ವಾದೀನತೆ ಕಾಯ್ದೆ 1897
8 ಕರ್ನಾಟಕ ಲ್ಯಾಂಡ್ ರೀಫಾಮ್ಸ್ ಕಾಯ್ದೆ, 1964
9 ಕರ್ನಾಟಕ ಗೃಹ ಮಂಡಳಿ ಕಾಯ್ದೆ
10 ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಕಾಯ್ದೆ
11 ಕರ್ನಾಟಕ ಇಂಡಸ್ಟ್ರಿಯಲ್ ಏರಿಯಾ ಡೆವೆಲಪ್ಮೆಂಟ್ ಬೋರ್ಡ್ ಕಾಯ್ದೆ
12 ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ 1957
13 ನ್ಯಾಷನಲ್ ಹೈವೇಸ್ ಕಾಯ್ದೆ 1956
14 ಕರ್ನಾಟಕ ಹೈವೇಸ್ ನಿಯಮಾವಳಿ 1965
15 ಕಚೇರಿ ಕಾರ್ಯವಿಧಾನ ಕೈಪಿಡಿ
16 ಕರ್ನಾಟಕ ಆರ್ಥಿಕ ಸಂಹಿತೆ
17 ಸಾದಿಲ್ವಾರು ವೆಚ್ಚದ ಕೈಪಿಡಿ
18 ಮಾಹಿತಿ ಪಡೆಯಲು ಹಕ್ಕು ಅಧಿನಿಯಮ 2005

ಅಧಿಕಾರಿಗಳ ಮತ್ತು ನೌಕರರ ನಿರ್ದೇಶಿಕೆ (Directory)

ಕ್ರಮ ಸಂಖ್ಯೆ ಹೆಸರು ಮತ್ತು ಪದನಾಮ ಕಚೇರಿ ದೂರವಾಣಿ ಸಂಖ್ಯೆ ಮೊಬೈಲ್ ಸಂಖ್ಯೆ
1 ಶ್ರೀಮತಿ ಎಸ್ ಲಾವಣ್ಯ
ಸಹಾಯಕ ನಿರ್ದೇಶಕರು
08272-225683 8792834027
2 ಶ್ರೀ ಸಜಿತ್ ಸಿ ಬಿ
ನಗರ ಯೋಜಕರು
9481808008
3 ಶ್ರೀ ಶೇಖ್ ಅಪ್ಸರ್ ಅಹಮ್ಮದ್
ಸಹಾಯಕ ನಗರ ಯೋಜಕರು
8971030166
4 ಶ್ರೀಮತಿ ಸೌಮ್ಯ
ಸಹಾಯಕ ನಗರ ಯೋಜಕರು
9686177562
5 ಬೆರಳಚ್ಚುಗಾರರು ರಿಕ್ತ ಸ್ಥಾನ
6 ವಾಹನ ಚಾಲಕರು ರಿಕ್ತ ಸ್ಥಾನ
7 ಡಿ ದರ್ಜೆ ನೌಕರರು ರಿಕ್ತ ಸ್ಥಾನ