ಮುಚ್ಚಿ

ಸಮಾಜ ಕಲ್ಯಾಣ ಇಲಾಖೆ

ಸಮಾಜ ಕಲ್ಯಾಣ ಇಲಾಖೆ ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ ಉಪನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ

E-Mail- ddswdkodagu@gmail.com
Phone:ದೂರವಾಣಿ:08272-225531


SCSP/TSP Meeting’s Review Points

Click to view


ಜಿಲ್ಲಾ ಮತ್ತು ತಾಲ್ಲೂಕು ಸಮಾಜ ಕಲ್ಯಾಣ ಇಲಾಖಾ ಕಛೇರಿಗಳ ಹಾಗೂ ಅಧಿಕಾರಿಗಳ ವಿವರ

ಕ್ರ..ಸಂ ವಿಳಾಸ ದೂರವಾಣಿ ಸಂಖ್ಯೆ ಅಧಿಕಾರಿಗಳ ಭಾವಚಿತ್ರ
1 ಉಪನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆ, ಎಸ್ ಜೆ ಎಸ್ ವೈ ಕಟ್ಟಡ, ತಾಲ್ಲೂಕು ಪಂಚಾಯತಿ ಹಿಂಭಾಗ, ಸುದರ್ಶನ ವೃತ್ತದ ಬಳಿ, ಮಡಿಕೇರಿ, ಕೊಡಗು ಜಿಲ್ಲೆ.-571 201 08272-225531 Shri Shekar
ಶ್ರೀ ಶೇಖರ್ ಕೆ.ಜಿ.ಎಸ್ ಉಪನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಕೊಡಗು ಜಿಲ್ಲೆ, ಮಡಿಕೇರಿ
2 ಸಹಾಯಕ ನಿರ್ದೇಶಕರು (ಗ್ರೇಡ್-1), ತಾಲ್ಲೂಕು ಸಮಾಜ ಕಲ್ಯಾಣ ಇಲಾಖಾ ಕಛೇರಿ, ದೇಚೂರು ಗಣಪತಿ ದೇವಸ್ಥಾನದ ಎದುರು, ದೇಚೂರು, ಮಡಿಕೇರಿ ತಾಲ್ಲೂಕು-571 201 08272-223552 Balakrishna
ಶ್ರೀ ಬಾಲಕೃಷ್ನ ರೈ ಕೆ. ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಮಡಿಕೇರಿ
3 ಸಹಾಯಕ ನಿರ್ದೇಶಕರು (ಗ್ರೇಡ್-2), ತಾಲ್ಲೂಕು ಸಮಾಜ ಕಲ್ಯಾಣ ಇಲಾಖಾ ಕಛೇರಿ, ಡಾ|| ಬಿ.ಆರ್ ಅಂಬೇಡ್ಕರ್ ಭವನ, ತಾಲ್ಲೂಕು ಪಂಚಾಯತ್ ಹತ್ತಿರ, ಸೋಮವಾರಪೇಟೆ ತಾಲ್ಲೂಕು- 571 236/td> 08276-281115 Chandrappa
ಶ್ರೀ ಚಂದ್ರಪ್ಪ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಸೋಮವಾರಪೇಟೆ
4 ಸಹಾಯಕ ನಿರ್ದೇಶಕರು (ಗ್ರೇಡ್-2), ತಾಲ್ಲೂಕು ಸಮಾಜ ಕಲ್ಯಾಣ ಇಲಾಖಾ ಕಛೇರಿ, ತಾಲ್ಲೂಕು ಪಂಚಾಯತ್ ಹತ್ತಿರ, ಪೊನ್ನಂಪೇಟೆ, ವಿರಾಜಪೇಟೆ ತಾಲ್ಲೂಕು- 571 236 08274-249476 Preethi
ಶ್ರೀಮತಿ ಪ್ರೀತಿ ಚಿಕ್ಕಮಾದಯ್ಯ ಕೆ.ಜಿ.ಎಸ್ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ವಿರಾಜಪೇಟೆ

ಇಲಾಖಾ ಕಾರ್ಯಕ್ರಮಗಳು

ಶೈಕ್ಷಣಿಕ ಕಾರ್ಯಕ್ರಮಗಳು

    • ಮೆಟ್ರಿಕ್ ಪೂರ್ವ-ಮೆಟ್ರಿಕ್ ನಂತರದ ಹಾಸ್ಟೆಲ್‌ಗಳು ಮತ್ತು ವಸತಿ ಶಾಲೆಗಳ ನಿರ್ವಹಣೆ:-

• ಕೊಡಗು ಜಿಲ್ಲೆಯಲ್ಲಿ ಒಟ್ಟು 17 ಮೆಟ್ರಿಕ್ ಪೂರ್ವ ಬಾಲಕ/ಬಾಲಕಿಯರ ವಸತಿ ನಿಲಯಗಳು ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. 5 ರಿಂದ 10 ನೇ ತರಗತಿಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಸೇರಿದ ಮೆಟ್ರಿಕ್ ಪೂರ್ವ ಬಾಲಕ ಮತ್ತು ಬಾಲಕಿಯರು ಮೆಟ್ರಿಕ್ ಪೂರ್ವ ಹಾಸ್ಟೆಲ್‌ಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ.. ಈ ವಿದ್ಯಾರ್ಥಿಗಳಿಗೆ ಉಚಿತ ಆಹಾರ, ವಸತಿ, ಪಠ್ಯ ಪುಸ್ತಕ, ಟಿಪ್ಪಣಿ ಪುಸ್ತಕ, ವೈದ್ಯಕೀಯ ಸೌಲಭ್ಯಗಳು, ಬೆಡ್ ಮತ್ತು ಬೆಡ್ ಶೀಟ್‌ಗಳು, ಕ್ರೀಡಾ ವಸ್ತುಗಳು ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ..

• ಕೊಡಗು ಜಿಲ್ಲೆಯಲ್ಲಿ ಒಟ್ಟು 04 ಮೆಟ್ರಿಕ್ ನಂತರದ ಬಾಲಕ/ಬಾಲಕಿಯರ ವಸತಿ ನಿಲಯಗಳು ಈ ಇಲಾಖೆಯ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಪಿಯುಸಿ, ಐಟಿಐ, ಪದವಿ, ಪಿಜಿ ಮತ್ತು ಉನ್ನತ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಬಯಸುವ ಪೋಸ್ಟ್ ಮೆಟ್ರಿಕ್ ವಿದ್ಯಾರ್ಥಿಗಳು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಉಚಿತ ಆಹಾರ, ವಸತಿ ಮತ್ತು ಗ್ರಂಥಾಲಯ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

• ಕೊಡಗು ಜಿಲ್ಲೆಯಲ್ಲಿ ಒಟ್ಟು 1 ವಸತಿ ಶಾಲೆ ಇಲಾಖೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.. ವಸತಿ ಶಾಲೆಯ ವಿದ್ಯಾರ್ಥಿಗಳು 1ನೇ ತರಗತಿಯಿಂದ 5ನೇ ತರಗತಿಯವರೆಗೆ ಪ್ರವೇಶ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಉಚಿತ ಆಹಾರ, ವಸತಿ, ಪಠ್ಯ ಪುಸ್ತಕ, ಟಿಪ್ಪಣಿ ಪುಸ್ತಕ, ವೈದ್ಯಕೀಯ ಸೌಲಭ್ಯಗಳು, ಬೆಡ್ ಮತ್ತು ಬೆಡ್ ಶೀಟ್‌ಗಳು, ಕ್ರೀಡಾ ವಸ್ತುಗಳು ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಮಡಿಕೇರಿ ತಾಲ್ಲೂಕು

ಕ್ರ. ಸಂ ನಿಲಯದ ಹೆಸರು HIC ಸಂಖ್ಯೆ ಮಂಜೂರಾತಿ ಸಂಖ್ಯೆ ನಿಲಯದ ಚಿತ್ರ
1 ಪೋಸ್ಟ್ ಮೆಟ್ರಿಕ್ ಬಾಲಕರ ಹಾಸ್ಟೆಲ್, ಚೈನ್ ಗೇಟ್ ಹತ್ತಿರ, ಮಡಿಕೇರಿ 250104 100 MDK01
2 ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ, ಗ್ರಾಮಾಂತರ F.M.C ಕಾಲೇಜು ಹತ್ತಿರ, ಮಡಿಕೇರಿ 250105 100 MDK02
3 ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್, ಚೈನ್ ಗೇಟ್ ಹತ್ತಿರ, ಮಡಿಕೇರಿ 250101 50 MDK 03
4 ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್, ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ, ಚೇರಂಬಾಣೆ 250102 50 MDK04
5 ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್, ಕೂರ್ಗ್ ಇಂಟರ್ನ್ಯಾಷನಲ್ ಹೋಟೆಲ್ ಹತ್ತಿರ, ಮಡಿಕೇರಿ 250103 50 MDK 05
6 ವಸತಿ ಶಾಲೆ, ಕಕ್ಕಬ್ಬೆ ಗ್ರಾಮ ಪಂಚಾಯತ್ ಹತ್ತಿರ, ಕಕ್ಕಬ್ಬೆ 29250103508 125 MDK 06
ಒಟ್ಟು 475  

ಸೋಮವಾರಪೇಟೆ ತಾಲ್ಲೂಕು

ಕ್ರ.ಸಂ ನಿಲಯದ ಹೆಸರು HIC ಸಂಖ್ಯೆ ಮಂಜೂರಾತಿ ಸಂಖ್ಯೆ ನಿಲಯದ ಚಿತ್ರ
1 ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ, ಮುಳ್ಳುಸೋಗೆ ಗ್ರಾಮ, ಬಸವೇಶ್ವರ ಬಡಾವಣೆ, 2ನೇ ಹಂತ, ಕುಶಾಲನಗರ 250213 50 01
2 ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್, ಎಚ್‌ಆರ್‌ಪಿ ಕಾಲೋನಿ, ಐಬಿ ರಸ್ತೆ, ಕುಶಾಲನಗರ 250211 50 02
3 ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್, ಮಹಿಳಾ ಸಮಾಜದ ಹಿಂಭಾಗ, ಕುಶಾಲನಗರ 250202 75 03
4 ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್, ಪ್ರಾಥಮಿಕ ಆರೋಗ್ಯ ಕೇಂದ್ರದ ಹತ್ತಿರ, ಶಿರಂಗಾಲ ರಸ್ತೆ, ಹೆಬ್ಬಾಲೆ 250203 50 04
5 ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್, ಜೂನಿಯರ್ ಕಾಲೇಜು ಹತ್ತಿರ, ಮುಖ್ಯ ರಸ್ತೆ, ಕೊಡ್ಲಿಪೇಟೆ 250204 50 05
6 ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್, ಪ್ರವಾಸಿ ಬಂಗ್ಲೋ ಚೌಡ್ಲು ಹತ್ತಿರ, ಸೋಮವಾರಪೇಟೆ 250201 50 06
7 ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್, ತ್ಯಾಗರಾಜ ಕಾಲೋನಿ, ಚಂಗಡಹಳ್ಳಿ ರಸ್ತೆ, ಶನಿವಾರಸಂತೆ. 250207 50 07
8 ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್, ಪ್ರವಾಸಿ ಬಂಗ್ಲೆ ಹತ್ತಿರ, ಸೋಮವಾರಪೇಟೆ 250210 50 08
9 ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್, H.R.P ಕಾಲೋನಿ, I.B ರಸ್ತೆ, ಕುಶಾಲನಗರ 250206 60 09
ಒಟ್ಟು 485  

ವಿರಾಜಪೇಟೆ ತಾಲ್ಲೂಕು

ಕ್ರ.ಸಂ ನಿಲಯದ ಹೆಸರು HIC ಸಂಖ್ಯೆ ಮಂಜೂರಾತಿ ಸಂಖ್ಯೆ ನಿಲಯದ ಚಿತ್ರ
1 ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್, ತಾಲೂಕು ಪಂಚಾಯತ್ ಹತ್ತಿರ, ಪೊನ್ನಂಪೇಟೆ 250301 40 01
2 ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್, ಸರ್ಕಾರಿ ಪಿಯು ಕಾಲೇಜು ಹತ್ತಿರ, ವಿರಾಜಪೇಟೆ 250302 50 02
3 ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್, ಬಾಳೆಲೆ ಸರ್ಕಾರಿ ಆಸ್ಪತ್ರೆ ಹತ್ತಿರ, ಬಾಳೆಲೆ 250304 50 03
4 ಮೆಟ್ರಿಕ್ ಪೂರ್ವ ಬಾಲಕರ ಹಾಸ್ಟೆಲ್, ಕಾಕೋಟುಪರಂಬು ಗ್ರಾಮ ಪಂಚಾಯತ್ ಪ್ರೌಢಶಾಲೆ ಹತ್ತಿರ, ಕಾಕೋಟುಪರಂಬು 250303 50 04
5 ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್, ಸರ್ಕಾರಿ ಪಿಯು ಕಾಲೇಜು ಹತ್ತಿರ, ಪೊನ್ನಂಪೇಟೆ 250305 60 05
6 ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್, ಸರ್ಕಾರಿ ಪಿಯು ಕಾಲೇಜು ಹತ್ತಿರ, ವಿರಾಜಪೇಟೆ 250306 50 06
7 ಮೆಟ್ರಿಕ್ ಪೂರ್ವ ಬಾಲಕಿಯರ ಹಾಸ್ಟೆಲ್, ಪಾಲಿಬೆಟ್ಟ ಗಣಪತಿ ದೇವಸ್ಥಾನದ ಹತ್ತಿರ, ಪಾಲಿಬೆಟ್ಟ 25030 25 07
ಒಟ್ಟು 325  
    • ಡಾ|| ಬಿ.ಆರ್ ಅಂಬೇಡ್ಕರ್/ಮೊರಾರ್ಜಿ ದೇಸಾಯಿ ವಸತಿ ಶಾಲೆ:

ಕೊಡಗು ಜಿಲ್ಲೆಯಲ್ಲಿ ಒಟ್ಟು 04 ಡಾ.ಬಿ.ಆರ್.ಅಂಬೇಡ್ಕರ್/ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು ಇಲಾಖೆಯ ಅಡಿಯಲ್ಲಿ ನಡೆಯುತ್ತಿವೆ. ವಸತಿ ಶಾಲೆಗಳ ವಿದ್ಯಾರ್ಥಿಗಳು 6ನೇ ತರಗತಿಯಿಂದ 12ನೇ ತರಗತಿಯವರೆಗೆ ಪ್ರವೇಶ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳಿಗೆ ಉಚಿತ ಆಹಾರ, ವಸತಿ, ಪಠ್ಯ ಪುಸ್ತಕ, ಟಿಪ್ಪಣಿ ಪುಸ್ತಕ, ವೈದ್ಯಕೀಯ ಸೌಲಭ್ಯಗಳು, ಬೆಡ್ ಮತ್ತು ಬೆಡ್ ಶೀಟ್‌ಗಳು, ಕ್ರೀಡಾ ವಸ್ತುಗಳು ಮತ್ತು ಇತರ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.

ಕ್ರ,.ಸಂ ಶಾಲೆ/ಕಾಲೇಜುಗಳ ವಿವರ HIC ಸಂಖ್ಯೆ ಮಂಜೂರಾತಿ ಸಂಖ್ಯೆ ನಿಲಯದ ಚಿತ್ರ
1 ಮೊರಾರ್ಜಿ ದೇಸಾಯಿ ವಸತಿ ಶಾಲೆ, ಬಸವನಹಳ್ಳಿ, ಕುಶಾಲನಗರ 29250209102 250 d1
2 ಮೊರಾರ್ಜಿ ದೇಸಾಯಿ ವಸತಿ ಕಾಲೇಜು, ಬಸವನಹಳ್ಳಿ, ಕುಶಾಲನಗರ VV0074 160 d2
3 ಡಾ|| ಬಿ.ಆರ್ ಅಂಬೇಡ್ಕರ್ ವಸತಿ ಶಾಲೆ (ಸಹ ಶಿಕ್ಷಣ), ಕೆ.ವಿ.ಜಿ ಬಾಡಿಗೆ ಕಟ್ಟಡ, ಭಾಗಮಂಡಲ 29250103509 250 d3
4 ಡಾ|| ಬಿ.ಆರ್ ಅಂಬೇಡ್ಕರ್ ಬಾಲಕಿಯರ ಆಂಗ್ಲ ಮಾಧ್ಯಮ ವಸತಿ ಶಾಲೆ, ಸರಕಾರಿ ಪದವಿ ಪೂರ್ವ ಕಾಲೇಜು ಬಳಿ, ಬಿಇಓ ಕಛೇರಿ ಆವರಣ, ಸೋಮವಾರಪೇಟೆ ತಾ|| 29250202011 250  
ಒಟ್ಟು 910  

Total Abstract

ಕ್ರ.ಸಂ ನಿಲಯಗಳ ವಿವರ ನಿಲಯಗಳ ಸಂಖ್ಯೆ ಮಂಜೂರಾತಿ ಸಂಖ್ಯೆ
1 ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯಗಳು 10 515
2 ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯಗಳು 7 345
3 ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಗಳು 2 150
4 ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಗಳು 2 150
5 ವಸತಿ ಶಾಲೆ 1 125
6 ಡಾ|| ಬಿ.ಆರ್ ಅಂಬೇಡ್ಕರ್/ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು 4 910
ಒಟ್ಟು 26 2195
    • ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ

1ನೇ ತರಗತಿಯಿಂದ 10ನೇ ತರಗತಿಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಪ.ಜಾತಿ/ಪ.ಪಂಗಡ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಈ ಕೆಳಕಂಡಂತೆ ನೀಡಲಾಗುತ್ತಿದೆ.

ತರಗತಿ ಬಾಲಕರು ಬಾಲಕಿಯರು
1 ರಿಂದ 5 1000/- 1100/-
6 ರಿಂದ 7 1150/- 1250/-
8 ನೇ ತರಗತಿ 1250/- 1350/-
9 ಮತ್ತು 10ನೇ 3000/- 3000/-
    • ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ

ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ರೂ. 2.50 ಲಕ್ಷಗಳ ಮಿತಿಯೊಳಗಿರುವ ವಿದ್ಯಾರ್ಥಿಗಳಿಗೆ ಸರ್ಕಾರ ನಿಗಧಿ ಪಡಿಸಿರುವ ಈ ಕೆಳಕಂಡ ದರಗಳನ್ವಯ ನಿರ್ವಹಣಾ ಭತ್ಯೆಯೊಂದಿಗೆ ಹಾಗೂ ಆಯಾ ಕೋರ್ಸುಗಳಿಗೆ ಸಕ್ಷಮ ಪ್ರಾಧಿಕಾರವು ನಿಗಧಿ ಪಡಿಸಿದ ಶುಲ್ಕಗಳನ್ನೊಳಗೊಂಡಂತೆ ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ ಮಂಜೂರು ಮಾಡಲಾಗುತ್ತಿದೆ. :

ವರ್ಗ ಕೋರ್ಸುಗಳು ನಿರ್ವಹಣಾ ಭತ್ಯೆ (ಮಾಸಿಕ ದರ ರೂ.ಗಳಲ್ಲಿ)
    ಹಾಸ್ಟೆಲರ್ ಡೇ ಸ್ಕಾಲರ್ಸ್
1 ವೈದ್ಯಕೀಯ, ತಾಂತ್ರಿಕ, ಕೃಷಿ ಮತ್ತು ಪಶು ವೈದ್ಯಕೀಯ ಇತ್ಯಾದಿ ಪದವಿ ಮತ್ತು ಸ್ನಾತಕೋತ್ತರ ಪದವಿ 1200 550
2 ಗ್ರೂಪ್-1ನ್ನು ಹೊರತು ಪಡಿಸಿದ ಇತರೆ ವೃತ್ತಿಪರ ಪದವಿ ಕೋರ್ಸುಗಳು ಉದಾ:- ಎಂ.ಎ, ಎಂ.ಎಸ್.ಸಿ, ಎಂ.ಕಾಂ, ಎಂ.ಎಡ್, ಎಂ.ಫಾರ್ಮಾ 820 530
3 ಪದವಿ ಸ್ನಾತಕೋತ್ತರ ಪದವಿ ಇತರೆ ಎಲ್ಲಾ ಕೋರ್ಸುಗಳು. (ಗ್ರೂಪ್-1 ಮತ್ತು 11)ನ್ನು ಹೊರತು ಪಡಿಸಿದ ಕೋರ್ಸುಗಳು 570 300
4 ಉಳಿದ ಎಲ್ಲಾ ಪದವಿ ಪೂರ್ವ ಕೋರ್ಸುಗಳು (ಉದಾ: ಪಿಯುಸಿ, ಐಟಿಐ, ಡಿಪ್ಲೋಮಾ ಕೋರ್ಸುಗಳು) 380 230
    • ಪ್ರೋತ್ಸಾಹ ಧನ

ಪ್ರಥಮ ಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಕೆಳಕಂಡಂತೆ ಪ್ರೋತ್ಸಾಹ ಧನ ನೀಡಲಾಗುವುದು

    1. ಎಸ್.ಎಸ್.ಎಲ್.ಸಿ- ಶೇ. 75 ಒಳಗೆ ರೂ. 7,000/- ಮತ್ತು ಶೇ. 75 ಕ್ಕಿಂತ ಮೇಲೆ ರೂ. 15,000/-
    2. ಪಿ.ಯು.ಸಿ- ರೂ. 20,000/-
    3. ಪದವಿ- ರೂ. 25,000/-
    4. ಸ್ನಾತಕೋತ್ತರ- ರೂ. 30,000/-
    5. ಇಂಜಿನಿಯರಿಂಗ್/ಮೆಡಿಕಲ್- ರೂ. 35,000/-
    • ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶ

ಕುಟುಂಬದ ಆದಾಯ ರೂ. 2.00 ಲಕ್ಷದ ಒಳಗಿರುವ 5ನೇ ತರಗತಿಯಲ್ಲಿ ಕನಿಷ್ಠ ಶೇ. 50% ರಷ್ಟು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳನ್ನು ಪ್ರತಿಷ್ಠಿತ ಶಾಲೆಗಳಿಗೆ 6ನೇ ತರಗತಿಗೆ ದಾಖಲಿಸಿ ವಾರ್ಷಿಕ ಗರಿಷ್ಠ ರೂ. 50,000/- ಗಳ ಶಾಲಾ ಶುಲ್ಕ ಮತ್ತು ಇತರೆ ಶುಲ್ಕಗಳನ್ನು ನೀಡಲಾಗುವುದು.

    • ಸಾಗರೋತ್ತರ ವಿದ್ಯಾರ್ಥಿ ವೇತನ

ರಾಜ್ಯದ ಪ.ಜಾತಿ ಮತ್ತು ಪ.ಪಂಗಡದ ಅಭ್ಯರ್ಥಿಗಳನ್ನು ವಿದೇಶಿ ವ್ಯಸಂಗಕ್ಕೆ ಆಯ್ಕೆ ಮಾಡುವ ಸಂಬಂಧ “ಪ್ರಬುದ್ಧ ಯೋಜನೆಯಡಿ” ಪರಿಷ್ಕೃತ ಮಾರ್ಗಸೂಚಿಯನ್ನು ಹೊರಡಿಸಲಾಗಿರುತ್ತದೆ.

    • ಕಾನೂನು ಪಧವೀಧರರಿಗೆ ಶಿಷ್ಯವೇತನ

ಕಾನೂನು ಪದವೀಧರರಿಗೆ ಕಾನೂನು ತರಭೇತಿಯನ್ನು ಪಡೆಯಲು ಇಲಾಖಾ ವತಿಯಿಂದ ಮಾಸಿಕ ರೂ. 10,000/- ಗಳಂತೆ ಎರಡು ವರ್ಷಗಳ ಶಿಷ್ಯವೇತನ ನೀಡಲಾಗುವುದು

    • ತರಬೇತಿ ಕಾರ್ಯಕ್ರಮ

ಕೆ.ಎ.ಎಸ್ ಮತ್ತು ಐ.ಎ.ಎಸ್ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪ್ರತಿಭಾವಂತರಿಗೆ ದೆಹಲಿ ಹಾಗೂ ಮತ್ತಿತ್ತರೆ ಕಡೆ ಪರೀಕ್ಷಾ ಪೂರ್ವ ತರಭೇತಿ ನೀಡಲಾಗುವುದು


ಸಾಮಾಜಿಕ ಅಭಿವೃದ್ಧಿಯ ಕಾರ್ಯಕ್ರಮಗಳು

    • ಅಂತರ್ಜಾತಿ ವಿವಾಹ ಪ್ರೋತ್ಸಾಹ ಧನ

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಗಂಡು ಇತರೆ ಜಾತಿ ಹೆಣ್ಣನ್ನು ವಿವಾಹವಾದಲ್ಲಿ ರೂ. 2.50 ಲಕ್ಷ ಪ್ರೋತ್ಸಾಹ ಧನ

ಪರಿಶಿಷ್ಟ ಜಾತಿ/ಪಂಗಡದ ಹೆಣ್ಣು ಇತರೆ ಜಾತಿ ಗಂಡು ಅಂತರ್ಜಾತಿ ವಿವಾಹವಾದಲ್ಲಿ ರೂ. 3.00 ಲಕ್ಷ ಪ್ರೋತ್ಸಾಹ ಧನ.

    • ಒಳಪಂಗಡಗಳ ಅಂತರ್ಜಾತಿ ವಿವಾಹ

ಪರಿಶಿಷ್ಟ ಜಾತಿ ಯುವಕ/ಯುವತಿಯರು ಪರಿಶಿಷ್ಟ ಜಾತಿಯ ಉಪಜಾತಿಗಳ ಯುವತಿ/ಯುವಕರನ್ನು ವಿವಾಹವಾದಲ್ಲಿರೂ. 2.00 ಲಕ್ಷ ಪ್ರೋತ್ಸಾಹಧನ.

    • ಸಾಮೂಹಿಕ ಸರಳ ವಿವಾಹ

ನೋಂದಾಯಿತ ಸಂಘ ಸಂಸ್ಥೆಗಳು, ಧಾರ್ಮಿಕ ಸಂಸ್ಥೆಗಳು ವ್ಯವಸ್ಥೆ ಮಾಡುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವಿವಾಹವಾಗುವ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗದ ದಂಪತಿಗಳಿಗೆ ರೂ. 50,000/- ಪ್ರೋತ್ಸಾಹಧನ ನೀಡಲಾಗುತ್ತಿದೆ.

    • ವಿಧವಾ ಮರು ವಿವಾಹ

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿಧವೆಯರು ಮರು ವಿವಾಹವಾದಲ್ಲಿ ಅವರಿಗೆ ರೂ. 3.00 ಲಕ್ಷಗಳ ಪ್ರೋತ್ಸಾಹ ಧನ

    • ದೇವದಾಸಿಯರ ಮಕ್ಕಳ ಮದುವೆ

ದೇವದಾಸಿಯರ ಗಂಡು ಮಕ್ಕಳು ಇತರೆ ಜಾತಿ ಹುಡುಗಿಯನ್ನು ವಿವಾಹವಾದಲ್ಲಿ ರೂ. 3.00 ಲಕ್ಷ ಪ್ರೋತ್ಸಾಹ ಧನ ಹಾಗೂ ದೇವದಾಸಿಯರ ಹೆಣ್ಣು ಮಕ್ಕಳು ಇತರೆ ಜಾತಿ ಹುಡುಗರನ್ನು ವಿವಾಹವಾದಲ್ಲಿ ರೂ. 5.00 ಲಕ್ಷ ಪ್ರೋತ್ಸಾಹ ಧನ ನೀಡಲಾಗುವುದು.

    • ದೌರ್ಜನ್ಯಕ್ಕೊಳಗಾದ ಸಂತ್ರಸ್ತರಿಗೆ ಪರಿಹಾರ

ದೌರ್ಜನ್ಯಕ್ಕೊಳಗಾದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಸಂತ್ರಸ್ತರಿಗೆ ಕನಿಷ್ಠ ದರ ರೂ. 1.00 ಲಕ್ಷ ಗರಿಷ್ಠ ದರ ರೂ. 8.25 ಲಕ್ಷ ಪರಿಹಾರ ನೀಡಲಾಗುತ್ತಿದೆ.


ಮೂಲಭೂತ ಸೌಕರ್ಯಗಳ ಕಾರ್ಯಕ್ರಮಗಳು

    • ಪ್ರಗತಿ ಕಾಲೋನಿ ಯೋಜನೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯಗಳಾದ:

    1. ಸಿ.ಸಿ ರಸ್ತೆ ಮತ್ತು ಚರಂಡಿ .
    2. ಹೈಮಾಸ್ಕ್ ಲೈಟ್.
    3. ಕುಡಿಯುವ ನೀರಿನ ಸೌಲಭ್ಯ
    4. ಆರ್.ಓ ಪ್ಲಾಂಟ್ಗಳನ್ನು ಇಲಾಖೆಯ ವತಿಯಿಂದ ಕಲ್ಪಿಸಲಾಗುವುದು.
    • ಪರಿಶಿಷ್ಟ ಜಾತಿ ಜನಾಂಗದವರ ಸ್ಮಶಾನ ಭೂಮಿ ಅಭಿವೃದ್ಧಿ ಯೋಜನೆ

ಜನಾಂಗದವರಿಗೆ ಪ್ರತ್ಯೇಕವಾಗಿ ಸ್ಮಶಾನ ಭೂಮಿ ಇದ್ದಲ್ಲಿ ಸ್ಮಶಾನ ಭೂಮಿಗೆ ಅಗತ್ಯವಾಗಿ ಬೇಕಾಗುವ ಗರಿಷ್ಠ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುವುದು..

    • ಭವನಗಳು

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಗ್ರಾ,ಮಗಳಲ್ಲಿ ಡಾ|| ಬಿ.ಆರ್ ಅಂಬೇಡ್ಕರ್ ಭವನ, ಜಗಜೀವನ್ ರಾಮ್ ಭವನಗಳನ್ನು 1. ಗ್ರಾಮ ಮಟ್ಟದಲ್ಲಿ ರೂ. 20.00 ಲಕ್ಷ 2. ಹೋಬಳಿ ಮಟ್ಟದಲ್ಲಿ ರೂ. 75.00 ಲಕ್ಷ, 3. ತಾಲ್ಲೂಕು ಮಟ್ಟದಲ್ಲಿ ರೂ. 200.00 ಲಕ್ಷ 4. ಜಿಲ್ಲಾ ಮಟ್ಟದಲ್ಲಿ ರೂ. 400.00 ಲಕ್ಷಗಳಲ್ಲಿ ನಿರ್ಮಿಸಲಾಗುವುದು. .

  • ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಗ್ರಾಮಗಳನ್ನು ಆಯ್ಕೆ ಮಾಡಿ ಶೌಚಾಲಯ, ಅಂಗನವಾಡಿ ಕಟ್ಟಡ, ಸಿ.ಸಿ ರಸ್ತೆ ಮತ್ತು ಚರಂಡಿ, ಹೈಮಾಸ್ಕ್ ಲೈಟ್, ಕುಡಿಯುವನೀರಿನ ಸೌಲಭ್ಯ ಆರ್.ಓ ಪ್ಲಾಂಟ್ಗಳನ್ನು ಒದಗಿಸಲಾಗುವುದು.


ಜನಜಾಗೃತಿ ಕಾರ್ಯಕ್ರಮಗಳು

  • ಅಸ್ಪ್ರಶ್ಯತೆ ನಿವಾರಿಸಲು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಂಬಂಧ ವಿಚಾರಗೋಷ್ಠಿ ಕಾರ್ಯಕ್ರಮ ಗಳನ್ನು ಪ್ರತಿ ತಾಲ್ಲೂಕು ವ್ಯಾಪ್ತಿಗೆ ರೂ. 2.00 ಲಕ್ಷಗಳಂತೆ ಹಮ್ಮಿಕೊಳ್ಳಲಾಗುವುದು.
  • ಮ್ಯಾನುವಲ್ ಸ್ಕ್ಯಾವೆಂಜರ್ಸ್ ವೃತ್ತಿಯಲ್ಲಿ ತೊಡಗಿರುವವರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುವುದು.
  • ಜಾಗೃತಿ ಸಮಿತಿಗಳು:- ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ ಮತ್ತು ಉಪ ವಿಭಾಗ ಮಟ್ಟದಲ್ಲಿ ಜಿಲ್ಲಾ ಜಾಗೃತಿ ಸಮಿತಿ ಸಭೆಗಳ ರಚನೆ ಮಾಡಲಾಗಿದೆ.