ಮುಚ್ಚಿ

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ,ಚ್ಯೆನ್ ಗೇಟ್ ಹತ್ತಿರ,ಮೈಸೂರು ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆದೂರವಾಣಿ:08272-295829

Name of the Officer Designation Contact Number Email OFFICE ADRESS Photo
ವಿಮಲಾ ಕೆ.ಜಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ 8147916606 ddwokodagu@gmail.com ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ,
ಚ್ಯೆನ್ ಗೇಟ್ ಹತ್ತಿರ,ಮೈಸೂರು ರಸ್ತೆ,
ಮಡಿಕೇರಿ, ಕೊಡಗು
ಜಿಲ್ಲೆದೂರವಾಣಿ:08272-295829
DDDSS

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವಿವಿಧ ಯೋಜನೆಗಳನ್ನು ಅನುಷ್ಟಾನಗೊಳಿಸಿರುವ ಮಾಹಿತಿ

1.ವಿಕಲಚೇತನರ ಗುರುತಿನ ಚೀಟಿ:(ಯು.ಡಿ.ಐ.ಡಿ) ಇಲಾಖೆಯಲ್ಲಿ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಯೋಜನೆಯಿದ್ದು ವಿಕಲಚೇತನರೆಂದು ಗುರುತಿಸಿಕೊಳ್ಳಲು ಕನಿಷ್ಠ 40% ವಿಕಲಚೇತನತೆಯನ್ನು ಹೊಂದಿರಬೇಕು. ವಿಕಲಚೇತನರ ಗುರುತಿನ ಚೀಟಿಯನ್ನು ಹೊಂದಿಕೊಳ್ಳಲು ಯುಡಿಐಡಿ ವೆಬ್ಸೈಟ್ನಲ್ಲಿ ನೋಂದಾಯಿಸಿಕೊಳ್ಳಬೇಕಾಗಿದೆ.(www.swavlambancard.gov.in) ನೋಂದಾಯಿತ ಅರ್ಜಿಗಳನ್ನು ವೈದ್ಯಕೀಯ ವಿಜ್ಞಾನ ಸಂಸ್ಥೆ, ಭೋಧಕ ಆಸ್ಪತ್ರೆ, ಮಡಿಕೇರಿ ಇವರ ಮುಖಾಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಇಲಾಖೆಯಿಂದ ತಪಾಸಣೆಗೊಳಪಟ್ಟು ಜಿಲ್ಲಾಸ್ಪತ್ರೆ ಮೂಲಕ ವಿಶಿಷ್ಟ ಗುರುತಿನ ಚೀಟಿಗಳು ನೇರವಾಗಿ ವಿಕಲಚೇತನರ ಮನೆಗೆ ಅಂಚೆ ಮೂಲಕ ತಲುಪುತ್ತಿದೆ.


2.ವಿಶೇಷ ಶಾಲೆಗಳು:-ವಿಕಲಚೇತನ ಮಕ್ಕಳನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸಲು ಹಾಗೂ ಕೌಶಲ್ಯಯುತರನ್ನಾಗಿಸಲು ಅಂಗವಿಕಲ ಮಕ್ಕಳ ಶಿಶು ಕೇಂದ್ರಿಕೃತ ಶೈಕ್ಷಣಿಕ ಯೋಜನೆಯಾಗಿರುತ್ತದೆ. ಜಿಲ್ಲೆಯಲ್ಲಿ ೪ ವಿಶೇಷ ಶಾಲೆಗಳಿದ್ದು ಅದರಲ್ಲಿ 2 ಅನುದಾನಯುತ (ಅಪರ್ಚುನಿಟಿ ಶಾಲೆ, ಕೊಡಗು ವಿದ್ಯಾಲಯ, ಮಡಿಕೇರಿ ಹಾಗೂ ಚೈಶೈರ್ ಹೋಂ ಇಂಡಿಯಾ ಕೂರ್ಗ್ ಪಾಲಿಬೆಟ್ಟ, ವಿರಾಜಪೇಟೆ ತಾಲ್ಲೂಕು) ಹಾಗೂ 2 ಅನುದಾನ ರಹಿತ (ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರ ಸುಂಟಿಕೊಪ್ಪ, ಅಮೃತವಾಣಿ ಶ್ರವಣದೋಷವುಳ್ಳ ಮಕ್ಕಳ ವಸತಿಯುತ ಶಾಲೆ) ಶಾಲೆಗಳು ಕಾರ್ಯ ನಿರ್ವಹಿಸುತ್ತಿವೆ. ಇವುಗಳಲ್ಲಿ 2 ಬುದ್ದಿಮಾಂದ್ಯ ಮಕ್ಕಳ ಮತ್ತು ಒಂದು ಶ್ರವಣದೋಷವಿರುವ ಮಕ್ಕಳ ಶಾಲೆಯು ಕೊಡಗು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದೆ.


3.ಉನ್ನತ ಶಿಕ್ಷಣ ಪಡೆಯುವ ವಿಕಲಚೇತನರಿಗೆ ಶುಲ್ಕ ಮರುಪಾವತಿ:- ಎಸ್.ಎಸ್.ಎಲ್.ಸಿ ನಂತರ ಉನ್ನತ ಶಿಕ್ಷಣ, ವೃತ್ತಿ ಶಿಕ್ಷಣ, ತ್ರಾಂತ್ರಿಕ ಶಿಕ್ಷಣ ಸ್ನಾತಕೋತ್ತರ, ಔದ್ಯೋಗಿಕ ಶಿಕ್ಷಣಗಳಿಗೆ ನಿಯಮಾನುಸಾರ ಆಯ್ಕೆಯಾಗುವ ವಿಕಲಚೇತನ ವಿದ್ಯಾರ್ಥಿಗಳಿಗೆ ಸರ್ಕಾರವು ನಿಗದಿಪಡಿಸಿರುವ ಪರೀಕ್ಷಾ ಶುಲ್ಕ, ಬೋಧನಾ ಶುಲ್ಕ, ಪ್ರಯೋಗಾಲಯ ಶುಲ್ಕ ಹಾಗೂ ಗ್ರಂಥಾಲಯ ಶುಲ್ಕಗಳನ್ನು ನಿಯಮಾನುಸಾರ ಮರುಪಾವತಿಸುವ ಯೋಜನೆ..


4.ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪ್ ಟಾಪ್ ವಿತರಣೆ:-ಎಸ್.ಎಸ್.ಎಲ್.ಸಿ ಹಾಗೂ ನಂತರದ ವ್ಯಾಸಂಗ ಮಾಡುತ್ತಿರುವ ಎಲ್ಲಾ ಅಂಧ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ಒದಗಿಸುವುದು ಯಾವುದೇ ಆದಾಯದ ಮಿತಿ ಇರುವುದಿಲ್ಲ, ವ್ಯಾಸಂಗ ಮಾಡುತ್ತಿರುವ ಬಗ್ಗೆ ಸಂಬಂಧಿತ ಕಾಲೇಜಿನ ಪ್ರಾಂಶುಪಾಲರಿಂದ ಧೃಡೀಕರಣ ಪತ್ರ ಒದಗಿಸಬೇಕು


5.ವಿಕಲಚೇತನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ: ಈ ಯೋಜನೆಯಡಿ ಒಂದನೇ ತರಗತಿಯಿಂದ ಸ್ನಾತ ಕೋತ್ತರ ತರಗತಿಗಳಲ್ಲಿ ಓದುತ್ತಿರುವ ಅರ್ಹ ವಿಕಲಚೇತನರಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ..
Conditions:

  • ವಿಕಲಚೇತನ ವಿದ್ಯಾರ್ಥಿಗಳ ವೇತನವನ್ನು ಮಂಜೂರು ಮಾಡಲು ಶಾಲಾ/ಕಾಲೇಜು ಮುಖ್ಯಸ್ಥರ ದೃಢೀಕರಣದೊಂದಿಗೆ ಅರ್ಜಿಗಳನ್ನು ಆಯಾ ಜಿಲ್ಲೆಯ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳಿಗೆ ಸಲ್ಲಿಸುವುದು
  • ಯಾವುದೇ ಆದಾಯ ಮಿತಿ ಇರುವುದಿಲ್ಲ
  • ಬ್ಯಾಂಕ್ ಖಾತೆ ಪುಸ್ತಕ

ವಿದ್ಯಾರ್ಥಿ ವೇತನದ ಮೊತ್ತ

ಕ.ಸಂ ತರಗತಿ ವಿದ್ಯಾರ್ಥಿ ವೇತನ (ಮಾಹೆಯಾನ) ವಿದ್ಯಾರ್ಥಿ ವೇತನ (ಹತ್ತುತಿಂಗಳಿಗೆ ಮಾಹೆಯಾನ)
1 1 ರಿಂದ 5ನೇ ತರಗತಿ 200/- 200*10=2000
2 6 ರಿಂದ 10ನೇ ತರಗತಿ 400/ 400*10=4000
3 ಪಿ.ಯು.ಸಿ 600/ 600*10=6000
4 ತಾಂತ್ರಿಕ ಹಾಗೂ ವೃತ್ತಿ 400/ 500*10=2000
5 ಸ್ನಾತಕೋತ್ತರ ಶಿಕ್ಷಣ 600/ 600*10=6000

6.ಪ್ರತಿಭಾವಂತ ಅಂಗವಿಕಲ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಬಹುಮಾನ ಯೋಜನೆ:-ಶೇ 60% ಕ್ಕಿಂತಲೂ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳು ಮಾತ್ರ ಯೋಜನೆಗೆ ಅರ್ಹ ರಾಗಿರುತ್ತಾರೆ.

ಕ.ಸಂ ತರಗತಿ ವಿದ್ಯಾರ್ಥಿ ವೇತನ (ಮಾಹೆಯಾನ) ವಿದ್ಯಾರ್ಥಿ ವೇತನ (ಹತ್ತು ತಿಂಗಳಿಗೆ ಮಾಹೆಯಾನ)
1 ಎಸ್.ಎಸ್.ಎಲ್.ಸಿ 3000/- 200*10=2000
2 ಪದವಿ ಪೂರ್ವ ಶಿಕ್ಷಣ 5000/ 400*10=4000
3 ಪದವಿ/ಟಿ.ಸಿ.ಹೆಚ್ 8000/ 600*10=6000
4 ಬಿ.ಇಡಿ/ಸ್ನಾತಕೋತ್ತರ ಪದವಿ/ಎಂ.ಎ,,ಎಂ.ಕಾಂ/ಎಂ.ಎಸ್ಸಿ 10000/ 500*10=2000
5 ಕಷಿ ಪದವಿ/ಇಂಜಿನಿಯರಿಂಗ್, ಪಶು ವ್ಯೆದ್ಯಕೀಯ/ಎಂ.ಇಡಿ, ವ್ಯೆದ್ಯಕೀಯ ಪದವಿ 12000/ 600*10=6000

7.ಸಾಧನ ಸಲಕರಣೆಗಳು:-ತ್ರಿ-ಚಕ್ರ ವಾಹನಗಳು, ಶ್ರವಣ ಸಾಧನಗಳು ಕೃತಕ ಅಂಗಾಂಗಳು, ಬ್ರೈಲ್ ಗಡಿಯಾರಗಳು , ಬಿಳಿಕೋಲುಗಳು, ವಿವಿಧ ರೀತಿಯ ವಿಕಲಚೇತನರಿಗೆ ಅವರ ವಿಕಲಚೇತನತೆಗೆ ತಕ್ಕಂತ ಸಾಧನ ಸಲಕರಣೆಗಳನ್ನು ವಿತರಿಸುವ ಯೋಜನೆಯಾಗಿರುತ್ತದೆ.


8.ಸ್ವಯಂ ಉದ್ಯೋಗಕ್ಕಾಗಿ ಆಧಾರ ಯೋಜನೆ:-ವಿಕಲಚೇತನರು ಸ್ವಯಂ ಉದ್ಯೋಗ ಕೈಗೊಳ್ಳಲು ಬ್ಯಾಂಕುಗಳು ಮಂಜೂರು ಮಾಡಿ ಬಿಡುಗಡೆ ಮಾಡುವ ಸಾಲದ ಮೊತ್ತಕ್ಕೆ ಅನುಗುಣವಾಗಿ ವಿಕಲಚೇತನರಿಗೆ ಸಹಾಯ ಧನವನ್ನು ಯೋಜನಾ ವೆಚ್ಚದ ಶೇ.50 ರಷ್ಟು ಬ್ಯಾಂಕ್ ಸಾಲ ಮತ್ತು ಶೇ.5ರಷ್ಟು ಸಬ್ಸಿಡಿ ಮೊತ್ತವನ್ನು ನೀಡಲಾಗುವುದು


9.ವಿಕಲಚೇತನರಿಗೆ ಬಸ್ ಪಾಸ್ / ರೈಲ್ವೆಪಾಸ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸಲು ಅಂಧರಿಗೆ ಉಚಿತವಾಗಿ ಹಾಗೂ ಇತರೆ ವಿಕಲಚೇತನರಗೆ ಬಸ್ಸುಗಳಲ್ಲಿ ರಿಯಾಯಿತಿ ದರದಲ್ಲಿ ಪಾಸ್ಗಳನ್ನು ವಿತರಿಸಲಾಗುವುದು.ಹಾಗೆಯೇ ರೈಲ್ವೆ ಇಲಾಖೆಯ ರೈಲುಗಳಲ್ಲಿಪ್ರಯಾಣಿಸುವ ವಿಕಲಚೇತನರಿಗೆ ಉಚಿತ ಪಾಸ್ ಹಾಗೂ ಅವರ ಬೆಂಗಾವಲಿನವರಿಗೆ ರಿಯಾಯಿತಿ ದರದ ಟಿಕೆಟ್ ಸೌಲಭ್ಯ ಪಡೆಯಬಹುದಾಗಿದೆ.


10.ಗ್ರಾಮೀಣ ಪುನರ್ವಸತಿ ಯೋಜನೆ: ಈ ಯೋಜನೆಯಡಿ ತಾಲ್ಲೂಕು ಮಟ್ಟದಲ್ಲಿ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರನ್ನು ತಾಲ್ಲೂಕು ಮಟ್ಟದಲ್ಲಿ ವಿಕಲಚೇತನರಿಗೆ ಅವರು ಇರುವ ಸ್ಥಳದಲ್ಲಿಯೇ ಇಲಾಖೆಗಳ ಸೌಲಭ್ಯಗಳನ್ನು ಸಕಾಲಕ್ಕೆ ಒದಗಿಸಿಕೊಡಲು ನೇಮಿಸಿಕೊಳ್ಳಲಾಗುತ್ತದೆ ಹಾಗೂ ಗ್ರಾಮೀಣ ಮಟ್ಟದಲ್ಲಿ ವಿಕಲಚೇತನರಿಗೆ ಸರಕಾರದ ಸೌಲಭ್ಯಗಳನ್ನು ಇರುವ ಸ್ಥಳದಲ್ಲಿಯೇ ಒದಗಿಸಿಕೊಡಲು ಗ್ರಾಮ ಪಂಚಾಯಿತಿಗಳಲ್ಲಿ ಪುನರ್ವಸತಿ ಕಾರ್ಯಕರ್ತರನ್ನು ನೇಮಿಸಿಕೊಳ್ಳಲಾಗುತ್ತದೆ. ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಯುಆರ್ಡಬ್ಲ್ಯುಗಳನ್ನು ನೇಮಿಸಿಕೊಳ್ಳಲಾಗುವುದು. ಕೊಡಗು ಜಿಲ್ಲೆಯ 3 ತಾಲ್ಲೂಕುಗಳ ತಾಲ್ಲೂಕು ಪಂಚಾಯಿತಿ ತಲಾ ಒಬ್ಬರಂತೆ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರಿದ್ದು ಮಾಸಿಕ ರೂ.12000/- ಗೌರವಧನ ಹಾಗೂ 70 ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಪುನರ್ವಸತಿ ಕಾಯಕರ್ತರು, 2 ಯುಆರ್ಡಬ್ಲ್ಯುಗಳು ಕರ್ತವ್ಯ ನಿರ್ವಹಿಸುತ್ತಿದ್ದು ಮಾಸಿಕ ರೂ. 6,000/- ಗೌರವಧನವನ್ನು ನೀಡಲಾಗುತ್ತಿದೆ.


11.ವೈದ್ಯಕೀಯ ಪರಿಹಾರ ನಿಧಿ: ಅಂಗವಿಕಲತೆ ನಿವಾರಣಾ ವೈದ್ಯಕೀಯ ಪರಿಹಾರ ನಿಧಿಯಲ್ಲಿ ವಿಕಲಚೇತನತೆಯನ್ನು ಸರಿಪಡಿಸಿಕೊಳ್ಳಲು ಗರಿಷ್ಠ ರೂ.1.00 ಲಕ್ಷದವರೆಗೆ ವೈದ್ಯಕೀಯ ಶಸ್ತ್ರ ಚಿಕಿತ್ಸೆಯ ಖರ್ಚು ವೆಚ್ಚಗಳನ್ನು ವೈದ್ಯಾಧಿಕಾರಿಗಳಿಂದ ದೃಢೀಕರಿಸಿ ನಿಯಮಾನುಸಾರ ನೀಡಲಾಗುತ್ತದೆ


12.ವಿಕಲಚೇತನ ವ್ಯಕ್ತಿಯೊಡನೆ ಸಾಮಾನ್ಯ ವ್ಯಕ್ತಿಯ ವಿವಾಹ ಯೋಜನೆ: ಸಾಮಾನ್ಯ ವ್ಯಕ್ತಿ ವಿಕಲಚೇತನ ಯುವಕ/ಯುವತಿ ವಿವಾಹವಾಗುವುದನ್ನು ಪ್ರೋತ್ಸಾಹಿಸಲು ಪ್ರೋತ್ಸಾಹ ಧನವಾಗಿ ಸಾಮಾನ್ಯ ವ್ಯಕ್ತಿಯ ಹೆಸರಿನಲ್ಲಿ ರೂ.50,000/- ಹಣ ಠೇವಣಿ ಇಡುವ ಯೋಜನೆಯಾಗಿರುತ್ತದೆ.


13.ಸಾಧನೆ ಪ್ರತಿಭೆ: ವಿಕಲಚೇತನರು ಇತರೆ ಸಾಮಾನ್ಯ ಜನರಂತೆ ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಸ್ಪರ್ಧೆಯಲ್ಲಿ ಭಾಗವಹಿಸಲು ಧನ ಸಹಾಯವನ್ನು ನಿಯಮಾನುಸಾರ ನೀಡುವ ಯೋಜನೆ..


14.ಯಂತ್ರಚಾಲಿತ ತ್ರಿಚಕ್ರ ವಾಹನ ಯೋಜನೆ: ಕುಟುಂಬದ ವಾರ್ಷಿಕ ವರಮಾನ 2.00 ಲಕ್ಷಕ್ಕಿಂತ ಕಡಿಮೆ ಇರುವ 20 ರಿಂದ 60 ವರ್ಷದೊಳಗಿನ ಶೇ.75% ಕ್ಕಿಂತ ಹೆಚ್ಚಿನ ಸೊಂಟದಿಂದ ಕೆಳಗೆ ಸ್ವಾಧೀನ ಇಲ್ಲದಿರುವ ಹಾಗೂ ವಾಹನ ಚಾಲನೆಗೆ ಸದೃಢವಾಗಿರುವ ವಿಕಲಚೇತನರಿಗೆ ಜೀವಿತಾವಧಿಯಲ್ಲಿ ಒಮ್ಮೆ ತ್ರಿಚಕ್ರ ವಾಹನ ನೀಡುವ ಯೋಜನೆ.


ಶಿಶು ಪಾಲನಾ ಭತ್ಯೆ: ವಾರ್ಷಿಕ ಆದಾಯ ರೂ.2.50 ಲಕ್ಷಗಳ ಮಿತಿಯೊಳಗೆ ಬಡ ಕುಟುಂಬಗಳ ಸಂಪೂರ್ಣ ದೃಷ್ಟೀಹೀನ ಮಹಿಳೆಯರಿಗೆ ಜನಿಸುವ ಮಗುವಿನ ಪೋಷಣಾ ಸಲುವಾಗಿ 5 ವರ್ಷಗಳ ಅವಧಿಗೆ 2 ಹೆರಿಗೆಗೆ 5 ವರ್ಷಗಳ ಅವಧಿಗೆ ಆರೋಗ್ಯ ಹಾಗೂ ಪೌಷ್ಠಿಕ ಆಹಾರ ದೃಷ್ಟಿಯಿಂದ ತಿಂಗಳಿಗೆ ರೂ.2000/- ನೀಡುವ ಯೋಜನೆ.


16.ಬುಧ್ದಿಮಾಂದ್ಯ ವ್ಯಕ್ತಿಗಳ ತಂದೆ-ತಾಯಿ/ಪೋಷಕರಿಗೆ ವಿಮಾ ಯೋಜನೆ:ಬುಧ್ದಿಮಾಂದ್ಯ ವ್ಯಕ್ತಿಗಳ ತಂದೆ/ತಾಯಿ/ಪೋಷಕರು ಮರಣ ಹೊಂದಿದ ಪಕ್ಷದಲ್ಲಿ ಬುಧ್ದಿಮಾಂದ್ಯ ವ್ಯಕ್ತಿಗಳ ಪೋಷಣೆಗಾಗಿ ಜೀವ ವಿಮಾ ನಿಗಮದಿಂದ ನಾಮ ನಿರ್ದೇಶಿತರಿಗೆ ತಲಾ 20,000/- ರಂತೆ ವಿಮಾ ಹಣ ದೊರೆಯುತ್ತದೆ,


17.ನಿರಾಮಯ ಯೋಜನೆ- ಬುದ್ದಿಮಾಂದ್ಯ/ಸೆರೆಬ್ರಲ್ ಪಾಲ್ಸಿ/ಆಟಿಸಂ/ಬಹುವಿಧ ವಿಕಲಚೇತನತೆ ಇರುವ ಬಿಪಿಲ್ ಕುಟಂಬದ ವ್ಯಕ್ತಿಗಳಿಗೆ ಪ್ರಥಮ ಬಾರಿಗೆ ರೂ.250/-ಗಳನ್ನು ಸರ್ಕಾರದ ವತಿಯಿಂದ ವಿಮಾ ಕಂತಾಗಿ ಪಾವತಿಸಿ ಪ್ರತಿ ವರ್ಷ 1.00 ಲಕ್ಷದವರಗೆ ವ್ಯೆದ್ಯಕೀಯ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ


18.ನಿರುದ್ಯೋಗಿ ವಿಕಲಚೇತನರಿಗೆ ನಿರುದ್ಯೋಗ ಭತ್ಯೆ:-ಈ ಯೋಜನೆಯು ಮಾಸಿಕ ಪೋಷಣಾ ಭತ್ಯೆ, ಶುಲ್ಕ ಮರುಪಾವತಿ, ವಿದ್ಯಾರ್ಥಿವೇತನ ಯೋಜನೆಗಳಡಿ ಸೌಲಭ್ಯ ಪಡೆಯುತ್ತಿರುವ ಫಲಾನುಭವಿಗಳು ಈ ಭತ್ಯೆಗೆ ಅರ್ಹರಿರುವುದಿಲ್ಲ. ಶೇ.40ರಷ್ಟು ಹಾಗೂ ಅದಕ್ಕಿಂತ ಹೆಚ್ಚಿನ ಅಂಗವೈಕಲ್ಯತೆ ಹಾಗೂ ಎಸ್.ಎಸ್.ಎಲ್.ಸಿ ಮತ್ತು ನಂತರದ ವಿದ್ಯಾರ್ಹತೆ ಹೊಂದಿರಬೇಕು


19.ಸ್ಪರ್ಧಾ ಚೇತನ ಯೋಜನೆ:ವಿಶೇಷ ಸಾಮರ್ಥದ ವಿದ್ಯಾವಂತ ನಿರುದ್ಯೋಗಿ ವ್ಯಕ್ತಿಗಳಿಗೆ ಐ.ಎ.ಎಸ್/ಕೆ.ಎ.ಎಸ್/ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ನೀಡುವ ಯೋಜನೆಯಾಗಿದೆ.(ವಿದ್ಯಾವಂತ ನಿರುದ್ಯೋಗಿ ಅಂಗವಿಕಲರಿಗೆ ಸ್ಫರ್ಧಾತ್ಮಕ ಪರೀಕ್ಷೆಗಳಿಗೆ ತರಭೇತಿ ಸಂಸ್ಥೆಗಳಿಗೆ ಹಣ ನೀಡಲಾಗುವುದು)


20. ಅಂಧ ವಿದ್ಯಾರ್ಥಿಗಳಿಗೆ ಬ್ರ್ಯೆಲ್ ಕಿಟ್ಗಳ ವಿತರಣೆ:-2020-21ನೇ ಸಾಲಿಗೆ ಈ ಯೋಜನೆಯು ಅನುಷ್ಟಾನಗೊಂಡಿದ್ದು, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಮೊಬೆಲ್ , ಬ್ರೈಲ್ ವಾಚ್, ವಾಕಿಂಗ್ ಸ್ಟಿಕ್ ಮತ್ತು ಇನ್ನಿತರ ಸಾಧನಗಳನ್ನು ಒಳಗೊಂಡ ತಲಾ ರೂ.25,000/-ಗಳ ಕಿಟ್ ಗಳನ್ನು ವಿತರಿಸುವ ಯೋಜನೆಯಾಗಿದೆ.


21. ಶ್ರವಣ ದೋಷವುಳ್ಳ ವ್ಯಕ್ತಿಗಳ ಸ್ವಯಂ ಉದ್ಯೋಗಕ್ಕಾಗಿ ಹೊಲಿಗೆ ಯಂತ್ರವನ್ನು ವಿತರಿಸುವುದು:-2020-21ನೇ ಸಾಲಿಗೆ ಈ ಯೋಜನೆಯು ಅನುಷ್ಟಾನಗೊಂಡಿದ್ದು, ಎಸ್.ಎಸ್.ಎಲ್.ಸಿ ವರೆಗೆ ವ್ಯಾಸಂಗ ಮಾಡಿರಬೇಕು ಹಾಗೂ ವೃತ್ತಿಗೆ ಸಂಬಂಧಿಸಿದಂತೆ ಪ್ರಮಾಣ ಪತ್ರ ಸಲ್ಲಿಸಬೇಕು


22.ವಿಕಲಚೇತನ ಸಹಾಯವಾಣಿ:ಕೊಡಗು ಜಿಲ್ಲೆಯ ಎಲ್ಲಾ ವಿಕಲಚೇತನರು ವಿಕಲಚೇತನ ಯೋಜನೆಗಳ ಬಗ್ಗೆ ದೂರವಾಣಿ ಕರೆಗಳ 08272-295829 ವಿಕಲಚೇತನರ ಸಹಾಯವಾಣಿಯನ್ನು ಸಂಪರ್ಕಿಸಿ ಇಲಾಖಾ ಯೋಜನೆಗಳ ಬಗ್ಗೆ ಮಾಹಿತಿಯನ್ನು ಪಡೆಬಹುದಾಗಿರುತ್ತದೆ.


23. ಬ್ರೈಲ್ ಮುದ್ರಣಾಲಯ:ಅಂಧ ವಿದ್ಯಾರ್ಥಿಗಳಿಗೆ ಅವಶ್ಯವಿರುವ ಬ್ರೈಲ್ ಪುಸ್ತಕಗಳನ್ನು ಮೈಸೂರಿನಲ್ಲಿರುವ ಬ್ರೈ ಲ್ ಮುದ್ರಣಾಲಯದ ಮೂಲಕ ಮುದ್ರಿಸಿ ರಾಜ್ಯದ ಎಲ್ಲಾ ಶಾಲೆಗಳಿಗೆ ಉಚಿತವಾಗಿ ಸರಬರಾಜು ಮಾಡುತ್ತಿದೆ


24. ವಿಕಲಚೇತನ ಉದ್ಯೋಗಸ್ಥ ಮತ್ತು ತರಭೇತಿದಾರರ(ಪುರುಷ /ಮಹಿಳೆಯರ) ಸರ್ಕಾರ ವಸತಿ ನಿಲಯ:-ಉದ್ಯೋಗಸ್ಥ ಮತ್ತು ತರಭೇತಿದಾರರ ಪುರುಷ ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕವಾಗಿವಸತಿ ನಿಲಯಗಳನ್ನು ನಡೆಸುತ್ತಿದ್ದು, ವಸತಿ ನಿಲಯದಲ್ಲಿ ಇರಲಿಚ್ಛಿಸುವವರು ತಮ್ಮ ಆದಾಯದಲ್ಲಿನ ಶೇ.5ರಷ್ಟು ಸರ್ಕಾರಕ್ಕೆ ಬಾಡಿಗೆ ರೂಪದಲ್ಲಿ ಪಾವತಿಸಬೇಕಾಗಿರುತ್ತದೆ ಹಾಗೂ ಊಟದ ವ್ಯವಸ್ಥೆಗೆ ಫಲಾನುಭವಿಗಳು ಸ್ವತ: ಭರಿಸಬೇಕಾಗಿರುತ್ತದೆ.


25. ಉದ್ಯೋಗಸ್ಥ ವಿಕಲಚೇತನರ ಮಹಿಳೆಯರ ಮತ್ತು ವಿದ್ಯಾರ್ಥಿನಿಯರ ವಸತಿ ನಿಲಯ:ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಅಂಗವಿಕಲ ಉದ್ಯೋಗಸ್ಥ ಮಹಿಳೆಯರು/ವೃತ್ತಿಪರ ತರಭೇತಿ ಪಡೆಯುತ್ತಿರುವ ಮಹಿಳೆಯರಿಗೆ ಮಾತ್ರ ಊಟ ಮತ್ತು ವಸತಿ ಸೌಲಭ್ಯವನ್ನು ಕಲ್ಪಿಸಬೇಕಾಗಿರುತ್ತದೆ.


ಹಿರಿಯ ನಾಗರಿಕರ ಯೋಜನೆಗಳು

1.ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣೆ ಕಾಯ್ದೆ 2007:ಈ ಯೋಜನೆಯು ದಿ:01-04-2008ರಿಂದ ಕರ್ನಾಟಕ ರಾಜ್ಯದಲ್ಲಿ ಅನುಷ್ಠಾನಗೊಂಡಿದ್ದು, ಸದರಿ ಕಾಯ್ದೆಯಡಿ ದೌರ್ಜನ್ಯ, ಶೋಷಣೆ, ಮೋಸ, ವಂಚನೆಗೆ ಒಳಪಟ್ಟ ಹಿರಿಯ ನಾಗರಿಕರು ಕಾಯ್ದೆಯ ಪರಿಚ್ಚೇರದ 7ರ ಉಪನಿಯಮ (1)ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಪ್ರತಿ ಕಂದಾಯ ಉಪವಿಭಾಗದ ಉಪಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ನಿರ್ವಹಣೆ ನ್ಯಾಯಮಂಡಳಿಯಲ್ಲಿ ಪ್ರಕರಣಗಳನ್ನು ದಾಖಲಿಸಿ ಗರಿಷ್ಠ 90 ದಿನಗಳ ಒಳಗಾಗಿ ನ್ಯಾಯ ಪಡೆಯಬಹುದಾಗಿರುತ್ತದೆ.


2.ಹಿರಿಯ ನಾಗರಿಕರ ಗುರುತಿನ ಚೀಟಿ: ಹಿರಿಯ ನಾಗರಿಕರು ಅರ್ಜಿಯನ್ನು “ಸೇವಾ ಸಿಂಧು” ವೆಬ್ ಪೋರ್ಟಲ್ sevasindhu.karnataka.gov.in ಅಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸೇವೆಗಳ ವಿಭಾಗದಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಆನ್ ಲೈನ್ ನಲ್ಲಿಯೇ ಸಲ್ಲಿಸತಕ್ಕದ್ದು. ಅರ್ಜಿಯು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಿಂದ ಪರಿಶೀಲನೆಗೊಳಪಟ್ಟು 21 ದಿನಗಳೊಳಗೆ ಹಿರಿಯ ನಾಗರಿಕರ ಗುರುತಿನ ಚೀಟಿ ಅಂಗೀಕರಿಸಲಾಗುವುದು.


3.ಇಂದಿರಾಗಾಂಧಿ ರಾಷ್ಟ್ರೀಯ ವೃದ್ದಾಪ್ಯ ವೇತನ ಹಾಗೂ ಸಂಧ್ಯಾ ಸುರಕ್ಷಾ ಯೋಜನೆ:ಈ ಯೋಜನೆಯಡಿ 60ರಿಂದ 64 ವರ್ಷದೊಳಗಿನ ಫಲಾನುಭವಿಗಳಿಗೆ ಮಾಹೆಯಾನ ರೂ.600/ಗಳ ಪಿಂಚಣಿ ಹಾಗೂ 65 ವರ್ಷ ಮೇಲ್ಪಟ್ಟ ಫಲಾನುಭವಿಗಳಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಯೋಗದೊಂದಿಗೆ ರೂ.1000/-ಗಳ ಆರ್ಥಿಕ ಪಿಂಚಣೆಯನ್ನು ನೀಡಲಾಗುತ್ತಿದೆ,

ಸಂಧ್ಯಾ ಸುರಕ್ಷಾ ಯೋಜನೆ:ಕಂದಾಯ ಇಲಾಖೆಯಿಂದ ಸರ್ಕಾರ ಆದೇಶ ಸಂಖ್ಯೆ:ಆರ್.ಡಿ.97 ಎಂ.ಎಸ್.ಟಿ:2007 ದಿನಾಂಕ:02-07-2007ರನ್ವಯ ಜಾರಿಯಲ್ಲಿದ್ದು, ಸಾಮಾಜಿಕ ಭದ್ರತಾ ರೂಪದಲ್ಲಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ರೂ.1000/-ಗಳ ಆರ್ಥಿಕ ಸಹಾಯಧನವನ್ನು ಮಾಸಿಕವಾಗಿ ನೀಡಲಾಗುತ್ತಿದೆ.


4.ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ:-ಹಿರಿಯ ನಾಗರಿಕರ ತುರ್ತು ಸಹಾಯಕ್ಕಾಗಿ ಹಾಗೂ ಅವರ ಸಮಸ್ಯೆಗಳನ್ನು ಬಗೆಹಿಸಲು ಕಾನೂನು ಸಲಹೆಗಳನ್ನು ನೀಡಲು ರಾಜ್ಯದ 30 ಜಿಲ್ಲೆಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಗಳನ್ನು ಆಯಾ ಜಿಲ್ಲೆಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಕಚೇರಿ ಆವರಣದಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ನಡೆಸಲಾಗುತ್ತಿದೆ. ಮಡಿಕೇರಿಯ ಜಿಲ್ಲಾ ಕೇಂದ್ರದಲ್ಲಿ ಪೋಲಿಸ್ ಕಮೀಷನರ್ ರವರ ಸಹಯೋಗದೊಂದಿಗೆ ಗ್ರೀನ್ ಗ್ರಾಮೀಣಾಭಿವೃದ್ದಿ ತರಭೇತಿ ಸಂಸ್ಥೆ (ರಿ)ಯು ಪೆನ್ ಶನ್ ಲ್ಐನ್, ಮಡಿಕೇರಿ ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.ಉಚಿತ ದೂರವಾಣಿ ಸಂಖ್ಯೆ 1090 ರ ಮೂಲಕ ಈ ಕೇಂದ್ರದಲ್ಲಿ ಹೆಸರು ನೋಂದಾಯಿಸಿ ಸೇವೆಯನ್ನು ಪಡೆಯಬಹುದಾಗಿರುತ್ತದೆ.


5.ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರ:-ಹಗಲು ವೇಳೆಯಲ್ಲಿ ಕುಟುಂಬದಲ್ಲಿ ನೋಡಿಕೊಳ್ಳಲು ಸಾಧ್ಯವಾಗದಂತಹ ಹಿರಿಯ ನಾಹರಿಕರು ತಮ್ಮ ವೇಳೆಯನ್ನು ಸದುಪಯೋಗಪಡಿಸಿಕೊಳ್ಳಲು ಹಾಗೂ ಸಾಮಾಜಿಕವಾಗಿ ತಮ್ಮ ವಯೋಮಾನ ದವರೊಂದಿಗೆ ಓದು, ಆಟ ಮುಣತಾದ ಚಟುವಟಿಕೆಗಳಲ್ಲಿ ನಿರಂತರವಾಗಿ ಸಂತೋಷವಾಗಿ ಕಾಲಕಳೆಯಲು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಪಡೆಯಲು ಈ ಕೇಂದ್ರದ ಸೌಲಭ್ಯವನ್ನು ಪಡೆಯಬಹುದಾಗಿದೆ.


6. ವೃದ್ಧಾಶ್ರಮಗಳು:ಅರವತ್ತು ಮತ್ತು ಅದಕ್ಕೂ ಹೆಚ್ಚಿನ ವಯಸ್ಸಿನ ನಿರ್ಗತಿಕ ವೃದ್ದರಿಗೆ ಉಚಿತ ಊಟ, ವಸತಿ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸಿ ವೃದ್ದರು ಸಮಾಜದಲ್ಲಿ ನೆಮ್ಮದಿಯಿಂದ ಬಾಳಲು ಮಡಿಕೇರಿಯ ತ್ಯಾಗರಾಜ ಕಾಲೋನಿಯಲ್ಲಿ ಕೇಂದ್ರ ಸರ್ಕಾರದ ಅನುದಾನದಡಿ ಶ್ರೀ ಶಕ್ತಿ ವೃದ್ದಾಶ್ರಮ ಮತ್ತು ರಾಜ್ಯ ಸರ್ಕಾರದ ಅನುದಾನದಡಿ ಸೋಮವಾರಪೇಟೆ ತಾಲ್ಲೂಕಿನ ಕೂಡಿಗೆಯಲ್ಲಿ ಶ್ರೀ ಶಕ್ತಿ ವೃದ್ದಾಶ್ರಮಗಳು ಕಾರ್ಯ ನಿರ್ವಹಿಸುತ್ತಿದೆ

ಇಲಾಖೆಯ ವೆಬ್‌ಸೈಟ್

ಹೆಚ್ಚು ಓದಿ ...