ಮುಚ್ಚಿ

ಹಬ್ಬಗಳು ಮತ್ತು ಉತ್ಸವಗಳು

ಹುತ್ತರಿ

ಹುತ್ತರಿ ಹಬ್ಬದಂದು ಗದ್ದೆಯಲ್ಲಿ ಕದಿರು ಕೊಯ್ಯುವುದು, ಕುಲದೈವವನ್ನು ‘ಪೊಲಿ ಪೊಲಿಯೇ ಬಾ..’ ಎಂದು ಆಹ್ವಾನಿಸಿ ಗದ್ದೆಯಲ್ಲಿ ಫಸಲು ತುಂಬಿರಲೆಂದು ಪ್ರಾಥಿಸುವುದು ಹುತ್ತರಿಯ ಸಂಪ್ರದಾಯ. ಮನೆಮಂದಿಯೆಲ್ಲಾ ಒಟ್ಟುಗೂಡುವ ಹುತ್ತರಿಗೆ ತಂಬಿಟ್ಟು ಎಂಬುದು ವಿಶೇಷ ತಿನಿಸು. ಹುತ್ತರಿಯ ಕೋಲಾಟ ಮತ್ತು ಇನ್ನಿತರ ಪಂದ್ಯಾಟಗಳು ಸಾಂಸ್ಕೃತಿಕ ನೃತ್ಯಗಳು ಆ ಹಬ್ಬದ ಆಕರ್ಷಣೆ.

ದಸರಾ ಉತ್ಸವ

ದಸರಾ ನಾಡಹಬ್ಬವನ್ನು ದಸರಾ ಹಬ್ಬವನ್ನು ಸಪ್ತಂಬರ್ ಅಕ್ಟೋಬರ್ ನಲ್ಲಿ ಮಡಿಕೇರಿ ಮತ್ತು ಗೋಣಿಕೊಪ್ಪದಲ್ಲಿ ವಿಜಯದಶಮಿ ದಿನದಂದು ರಾತ್ರಿ ಉತ್ಸವಮೂರ್ತಿಗಳನ್ನು ವಿದ್ಯುದೀಪಲಂಕೃತವಾಗಿಸಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗುತ್ತದೆ. ಸಂಗೀತ ರಸಮಂಜರಿ ಸೇರಿದಂತೆ ವಿವಿಧ ರೀತಿಯ ಮನರಂಜನಾ ಕಾರ್ಯಕ್ರಮಗಳು ನಡೆಯುತ್ತದೆ.

ಕೈಲ್ ಪೋದ್

ಕೈಲ್ ಪೋದ್ ಬಿತ್ತನೆ ಕೊಯ್ಲು ಮತ್ತು ಅಕ್ಕಿಯನ್ನು ಸ್ಥಳಾಂತರಿಸುವ ಪರಿಶ್ರಮದ ಕೆಲಸದ ನಂತರ ಈ ಸುಗ್ಗಿಯ ಹಬ್ಬವೂ ಕೊಡವರಿಗೆ ಸಂಭ್ರಮಿಸುವ ಸಮಯ ಕೊಡವರು ಮಾತ್ರ ಆಚರಣೆಯೆಂದು ಉತ್ಸವಗಳಲ್ಲಿ ಇದು ಒಂದು . ಕೈಲುಮುಹೂರ್ತವನ್ನು ಸಾಮಾನ್ಯವಾಗಿ ಸೆಪ್ಟಂಬರ್ ಮೂರರಂದು ಆಚರಿಸುತ್ತಾರೆ. ಇದು ಆಯುಧಗಳನ್ನು ಪೂಜಿಸುವ ದಿನ. ತೆಂಗಿನಕಾಯಿಗೆ ಗುಂಡುಹೊಡೆಯುವುದು, ಓಟಗಳ ಸ್ಪರ್ಧೆ ಸೇರಿದಂತೆ ಹಲವಾರು ರೀತಿಯ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ.