ಮುಚ್ಚಿ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಕರ್ನಾಟಕ ಸರ್ಕಾರ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿಕೇರಿ,ಕೊಡಗು ಜಿಲ್ಲೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ರಾಜ್ಯ ಸರ್ಕಾರದ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಜಿಲ್ಲಾ ವ್ಯಾಪ್ತಿಯಲ್ಲಿ ಕಲೆ ಹಾಗೂ ಸಂಸ್ಕೃತಿಗೆ ಹೆಚ್ಚು ಒತ್ತು ನೀಡಿ ಸಾಹಿತ್ಯಾಸಕ್ತರು ಹಾಗೂ ಕಲಾವಿದರುಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. ಜಿಲ್ಲೆಯ ಕಲಾವಿದರನ್ನು ಗುರುತಿಸಿ ಅವರ ಮೂಲಕ ಮೂಲ ಸಂಸ್ಕೃತಿಯ ಪ್ರತೀಕವಾದ ಜಾನಪದ ಕಲೆ, ಪೌರಾಣಿಕ, ಸಾಮಾಜಿಕ ಕಲೆ, ರಂಗ ಕಲೆಯನ್ನು ಯುವ ಪೀಳಿಗೆ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸಿ ಅವುಗಳನ್ನು ಸಮುದಾಯಕ್ಕೆ ಉಳಿಸಿ ಬೆಳೆಸಲು ಸಹಕಾರ ನೀಡುತ್ತಾ ಬಂದಿದೆ. ಅಂತಹ ಕಲೆಗಳಲ್ಲಿ ಇಲಾಖೆ ಮೂಲಕ ಮಕ್ಕಳಿಗೆ, ಯುವಕರಿಗೆ, ಮಹಿಳೆಯರಿಗೆ, ಸಾಮಾನ್ಯ ವರ್ಗದವರಿಗೆ ಹಮ್ಮಿಕೊಳ್ಳಲಾಗುತ್ತಿರುವ ಕಾರ್ಯಾಕ್ರಮಗಳೆಂದರೆ, ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ, ಪ್ರಾಯೋಜಿತ ಕಾರ್ಯಕ್ರಮ, ಮಹಿಳಾ ಉತ್ಸವ, ಪರಿಶಿಷ್ಟ ಪಂಗಂಡ, ಪರಿಶಿಷ್ಟ ವರ್ಗದವರಿಗೆ ಜನಪರ ಉತ್ಸವ, ಗಿರಿಜನೋತ್ಸವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ

ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟ ಬಡತನ ರೇಖೆಗಿಂತ ಕೆಳಗಿರುವ ಕಲಾವಿದರಿಗೆ ಮಾಸಾಶನ ನೀಡಲಾಗುತ್ತಿದೆ. ರಾಜ್ಯ ಕಂಡ ವಿವಿಧ ಮಹಾತ್ಮರ ಜಯಂತಿ ಮಹೋತ್ಸವಗಳನ್ನು ಸರ್ಕಾರದ ನಿರ್ದೇಶನದಂತೆ ಆಚರಿಸಲಾಗುತ್ತದೆ

ದೇಶದ ಮಹಾದಂಡನಾಯಕ ಪದ್ಮಭೂಷಣ ಜನರಲ್ ಕೆ.ಎಸ್.ತಿಮ್ಮಯ್ಯನವರ ಹುಟ್ಟಿ ಬೆಳದ ಮನೆ “ಸನ್ನಿಸೈಡ್“ ಕಟ್ಟಡವನ್ನು ಸ್ಮಾರಕ ಭವನವನ್ನಾಗಿ ಪರಿರ್ವತಿಸಿ ದಿನಾಂಕ: 06-02-2021 ರಂದು ಗೌರವಾನ್ವಿತ ರಾಷ್ಟ್ರಪತಿಗಳಿಂದ ಉದ್ಘಾಟನೆಗೊಳಿಸಿ ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಿಕೊಡಲಾಗಿರುತ್ತದೆ. ಯುವ ಪೀಳಿಗೆಗೆ ಸೇನೆಯಲ್ಲಿ ಸೇರ್ಪಡೆಗೊಳ್ಳುವ ಹಾಗೂ ಜನರಲ್ಲಿ ದೇಶಭಕ್ತಿ ಮೂಡಿಸುವ ನಿಟ್ಟಿನಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಸದರಿ ಕಟ್ಟಡವನ್ನು ಇಲಾಖೆ ವತಿಯಿಂದ ನಿರ್ವಹಣೆ ಮಾಡಲಾಗುತ್ತಿದೆ