ಕೊಡಗು ಜಿಲ್ಲೆಯ ಒಟ್ಟು 2500 ಹೆಕ್ಟರ್ ಪ್ರದೇಶದಲ್ಲಿ ಮೀನುಗಾರಿಕೆ ಕೈಗೊಳ್ಳಲಾಗುತ್ತಿದೆ. ರಾಜ್ಯದ ಇತರೆ ಜಿಲ್ಲೆಗಳಿಗಿಂತ ವಿಭಿನ್ನ ಹಾಗೂ ಇತರೆ ಜಿಲ್ಲೆಗಳಲ್ಲಿ ಸಾರ್ವಜನಿಕ ಸಂಪನ್ಮೂಲಗಳಲ್ಲಿ ಹೆಚ್ಚಾಗಿ ಮೀನು ಕೃಷಿ ಕೈಗೊಂಡರೆ ಕೊಡಗಿನಲ್ಲಿ ರೈತರ ಸ್ವಂತ ಕೆರೆಗಳಲ್ಲಿ ಮೀನು ಕೃಷಿ ಕೈಗೊಳ್ಳಲಾಗುತ್ತಿದೆ. ಅಂದಾಜು 480ಹೆಕ್ಟೇರ್ ಗಿಂತಲೂ ಹೆಚ್ಚಿನ ಪ್ರದೇಶದಲ್ಲಿ 3000 ಕ್ಕೂ ಹೆಚ್ಚು ರೈತರು ಮೀನು ಕೃಷಿ ಕೈಗೊಳ್ಳುತ್ತಿದ್ದಾರೆ. ಜಿಲ್ಲೆಯ ಎರಡು ಜಲಾಶಯಗಳಾದ ಹಾರಂಗಿ (1886 ಹೆ) ಹಾಗೂ ಚಿ್ಕ್ಲಿಹೊಳೆ (105 ಹೆ) ಮೀನು ಪಾಶುವಾರು ಹಕ್ಕನ್ನು ವಿಲೇವಾರಿ ಮಾಡಲಾಗಿದೆ.
ಮೀನುಗಾರಿಕೆ ಚಟುವಟಿಕೆಯನ್ನು ಬೆಂಬಲಿಸಲು ಮೀನುಗಾರಿಕೆ ಇಲಾಖೆಯು ಜಿಲ್ಲೆಯ ಮೀನುಗಾರರಿಗೆ ಉತ್ತಮ ಗುಣಮಟ್ಟದ ಮೀನು ಮರಿಗಳನ್ನು ವಿತರಿಸುತ್ತದೆ. ಅಳಿವಿನ ಅಂಚಿನಲ್ಲಿದ್ದ ಮಹಶೀರ್ ಮೀನುಮರಿಗಳ ರಾಜ್ಯದ ಏಕೈಕ ಉತ್ಪಾದನಾ ಕೇಂದ್ರ ಹಾರಂಗಿ ಯಲ್ಲಿದ್ದು, ಅನೇಕ ವರ್ಷಗಳಿಂದ ಕೇಂದ್ರದಲ್ಲಿ ಉತ್ಪಾದನೆ ಮಾಡಲಾದ ಮಹಶೀರ್ ಮರಿಗಳನ್ನು ನದಿ ಭಾಗಗಳಲ್ಲಿ ಬಿತ್ತನೆ ಮಾಡಲಾಗುತ್ತಿದೆ. ಮೀನುಗಾರಿಕೆ ಇಲಾಖೆಯ ಸತತ ಪ್ರಯತ್ನದಿಂದಾಗಿ ಇಂಟರ್ನ್ಯಾಷನಲ್ ಯೂನಿಯನ್ ಕನ್ಸವೇಷನ್ ನೆಚರ್ (IUCN) ಸಂಸ್ಥೆಯು ಈಗ ಟಾರ್ ಕುದ್ರಿ ಮಹಶೀರ್ ತಳಿಯನ್ನು ಅಳಿವಿನ ಅಂಚಿನಲ್ಲಿ ಇದ್ದ ಸ್ಥಾನದಿಂದ “SPECIES OF LEAST CONCERN” ಸ್ಥಾನಕ್ಕೆ ವರ್ಗಾಯಿಸಿರುವುದು ಹೆಮ್ಮೆಯ ವಿಚಾರ.





