ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ
ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ
ಪರಿಶಿಷ್ಟ ವರ್ಗದವರ ಅಭಿವೃದ್ಧಿಗೆ ಕೆಳಕಂಡ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
-
- ವಾಲ್ಮೀಕಿ ಆಶ್ರಮಶಾಲೆಗಳಲ್ಲಿ ಪ್ರತಿ ವಿದ್ಯಾರ್ಥಿಗೆ ರೂ.1,300/- ಗಳನ್ನು ಮಾಹೆಯಾನ ಭೋಜನಾ ವೆಚ್ಚಕ್ಕಾಗಿ ಭರಿಸಲಾಗುತ್ತಿದೆ.
ಕ್ರಸಂ | ತಾಲ್ಲೂಕು | ವಾಲ್ಮೀಕಿ ಆಶ್ರಮಶಾಲೆ ಹೆಸರು | ಮಂಜೂರಾತಿ ಸಂಖ್ಯೆ |
---|---|---|---|
1 | ಮಡಿಕೇರಿ | ಕರಿಕೆ | 75 |
2 | ಮಡಿಕೇರಿ | ಕಟ್ಟಪಳ್ಳಿ | 25 |
3 | ಸೋಮವಾರಪೇಟೆ | ಯಡವನಾಡು | 125 |
4 | ಸೋಮವಾರಪೇಟೆ | ಬಸವನಹಳ್ಳಿ | 175 |
5 | ಸೋಮವಾರಪೇಟೆ | ಮಾಲಂಬಿ | 125 |
6 | ವಿರಾಜಪೇಟೆ | ಕೋತೂರು | 175 |
7 | ವಿರಾಜಪೇಟೆ | ನಾಗರಹೊಳೆ | 175 |
8 | ವಿರಾಜಪೇಟೆ | ನಿಟ್ಟೂರು | 125 |
9 | ವಿರಾಜಪೇಟೆ | ಸಿ.ಬಿ.ಹಳ್ಳಿ | 225 |
10 | ವಿರಾಜಪೇಟೆ | ಗೋಣಿಗದ್ದೆ | 125 |
11 | ವಿರಾಜಪೇಟೆ | ಮರೂರು ತಿತಿಮತಿ | 225 |
ಒಟ್ಟು | 1575 |
-
- ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯಗಳಲ್ಲಿ ಪ್ರತಿ ವಿದ್ಯಾರ್ಥಿಗೆ ಮಾಸಿಕ ರೂ.1,500/-ಗಳನ್ನು ಭೋಜನಾ ವೆಚ್ಚಕ್ಕಾಗಿ ಭರಿಸಲಾಗುತ್ತಿದೆ.
ಕ್ರಸಂ | ತಾಲ್ಲೂಕು | ವಿದ್ಯಾರ್ಥಿನಿಲಯದ ಹೆಸರು | ಮಂಜೂರಾತಿ ಸಂಖ್ಯೆ |
---|---|---|---|
1 | ಮಡಿಕೇರಿ | ಬಾಲಕರ ವಿದ್ಯಾರ್ಥಿನಿಲಯ, ಪೆರಾಜೆ | 40 |
2 | ಸೋಮವಾರಪೇಟೆ | ಬಾಲಕಿಯರ ವಿದ್ಯಾರ್ಥಿನಿಲಯ, ಕುಶಾಲನಗರ | 50 |
3 | ವಿರಾಜಪೇಟೆ | ಬಾಲಕರ ವಿದ್ಯಾರ್ಥಿನಿಲಯ, ಕುಟ್ಟ | 85 |
4 | ವಿರಾಜಪೇಟೆ | ಬಾಲಕಿಯರ ವಿದ್ಯಾರ್ಥಿನಿಲಯ, ಕುಟ್ಟ | 65 |
5 | ವಿರಾಜಪೇಟೆ | ಬಾಲಕರ ವಿದ್ಯಾರ್ಥಿನಿಲಯ, ತಿತಿಮತಿ | 73 |
6 | ವಿರಾಜಪೇಟೆ | ಬಾಲಕಿಯರ ವಿದ್ಯಾರ್ಥಿನಿಲಯ, ತಿತಿಮತಿ | 50 |
7 | ವಿರಾಜಪೇಟೆ | ಬಾಲಕರ ವಿದ್ಯಾರ್ಥಿನಿಲಯ, ಪಾಲಿಬೆಟ್ಟ | 25 |
8 | ವಿರಾಜಪೇಟೆ | ಬಾಲಕಿಯರ ವಿದ್ಯಾರ್ಥಿನಿಲಯ, ಕಾರ್ಮಾಡು | 25 |
ಒಟ್ಟು | 413 |
-
- ವಸತಿ ಶಾಲೆಗಳಲ್ಲಿ ಪ್ರತಿ ವಿದ್ಯಾರ್ಥಿಗೆ ಮಾಸಿಕ ರೂ.1,600/-ಗಳ ವೆಚ್ಚದಲ್ಲಿ ಭೋಜನಾ ಮುಂತಾದ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.
ಕ್ರಸಂ | ತಾಲ್ಲೂಕು | ವಸತಿ ನಿಲಯದ ಹೆಸರು | ಮಂಜೂರಾತಿ ಸಂಖ್ಯೆ |
---|---|---|---|
1 | ವಿರಾಜಪೇಟೆ | ಮೊರಾರ್ಜಿದೇಸಾಯಿ ವಸತಿ ಶಾಲೆ, ತಿತಿಮತಿ | 250 |
2 | ವಿರಾಜಪೇಟೆ | ಏಕಲವ್ಯ ಮಾದರಿ ವಸತಿ ಶಾಲೆ, ಬಾಳುಗೋಡು | 420 |
ಒಟ್ಟು | 670 |
-
- 1 ರಿಂದ 8ನೇ ತರಗತಿಯಲ್ಲಿ ಹಾಗೂ 9ನೇ ಮತ್ತು 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಮಂಜೂರು ಮಾಡಲಾಗುತ್ತಿದೆ.
ತರಗತಿ | ಬಾಲಕರು (ವಾರ್ಷಿಕವಾಗಿ ರೂ.ಗಳಲ್ಲಿ) | ಬಾಲಕಿಯರು (ವಾರ್ಷಿಕವಾಗಿ ರೂ.ಗಳಲ್ಲಿ) | ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ಮಿತಿ |
---|---|---|---|
I to V | 1,000/- | 1,100/- | ರೂ.6.00 ಲಕ್ಷ |
VI & VII | 1,150/- | 1,200/- | |
VIII | 1,250/- | 1,350/- | |
IX & X | 3,000/- | 3,000/- | ರೂ.2.50 ಲಕ್ಷ |
-
- ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ಆದಾಯ ರೂ.2.50ಲಕ್ಷ ಮಿತಿ ಒಳಗಿರುವವರಿಗೆ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ ಮಂಜೂರು ಮಾಡಲಾಗುತ್ತಿದೆ.
ವರ್ಗ | ಕೋರ್ಸುಗಳು | ನಿರ್ವಹಣಾ ಭತ್ಯೆ (ಮಾಸಿಕ ದರ ರೂ.ಗಳಲ್ಲಿ) | |
---|---|---|---|
ಹಾಸ್ಟೆಲರ್ಸ್ | ಡೇ ಸ್ಕಾಲರ್ಸ್ | ||
I | ವೈದ್ಯಕೀಯ, ತಾಂತ್ರಿಕ, ಕೃಷಿ ಮತ್ತು ಪಶು ವೈದ್ಯಕೀಯ ಇತ್ಯಾದಿ ಪದವಿ ಮತ್ತು ಸ್ನಾತಕೋತ್ತರ ಪದವಿ | 1200 | 550 |
II | ಗ್ರೂಪ್-1ನ್ನು ಹೊರತುಪಡಿಸಿದ ಇತರೆ ವೃತ್ತಿಪರ ಪದವಿ ಕೋರ್ಸುಗಳು ಉದಾ: ಎಂ.ಎ., ಎಂ.ಎಸ್ ಸಿ, ಎಂ.ಕಾಂ., ಎಂ.ಎಡ್, ಎಂ.ಫಾರ್ ಮಾ | 820 | 530 |
III | ಪದವಿ ಸ್ನಾತಕೋತ್ತರ ಪದವಿ ಇತರೆ ಎಲ್ಲಾ ಕೋರ್ಸುಗಳು. (ಗ್ರೂಪ್-| ಮತ್ತು || ನ್ನು ಹೊರತುಪಡಿಸಿದ ಕೋರ್ಸುಗಳು) | 570 | 300 |
IV | ಉಳಿದ ಎಲ್ಲಾ ಪದವಿ ಪೂರ್ವ ಕೋರ್ಸುಗಳು | 380 | 230 |
-
- ಪರಿಶಿಷ್ಟ ವರ್ಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 6ನೇ ತರಗತಿಗೆ ಪ್ರವೇಶ ಕಲ್ಪಿಸಿ 10ನೇ ತರಗತಿವರೆಗೆ ವಾರ್ಷಿಕ ವೆಚ್ಚ ಭರಿಸಲಾಗುತ್ತಿದೆ.
- ಮೊದಲನೇ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ.
ಕ್ರ.ಸಂ. | ಕೋರ್ಸು ವಿವರ | ಹಾಸ್ಟೆಲರ್ಸ್ (ರೂ.ಗಳಲ್ಲಿ) |
---|---|---|
1 | ಎಸ್.ಎಸ್.ಎಲ್.ಸಿ. ಶೇ.60 ಕ್ಕಿಂತ ಮೇಲ್ಪಟ್ಟು 74.99 ಒಳಗೆ | 7,000/- |
2 | ಎಸ್.ಎಸ್.ಎಲ್.ಸಿ. ಶೇ.75 ಕ್ಕಿಂತ ಮೇಲ್ಪಟ್ಟು | 15,000/- |
3 | ದ್ವಿತೀಯ ಪಿ.ಯು.ಸಿ. ವಿದ್ಯಾರ್ಥಿಗಳಿಗೆ ವಾರ್ಷಿಕ | 20,000/- |
4 | ಅಂತಿಮ ಪದವಿಯ ವಿದ್ಯಾರ್ಥಿಗಳಿಗೆ ವಾರ್ಷಿಕ | 25,000/- |
5 | ಅಂತಿಮ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಾರ್ಷಿಕ | 30,000/- |
6 | ಅಂತಿಮ ಇಂಜಿನಿಯರಿಂಗ್ ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ವಾರ್ಷಿಕ | 35,000/- |
-
- ಕಾನೂನು ಪದವೀಧರರಿಗೆ 2 ವರ್ಷದ ತರಬೇತಿ ಅವಧಿಯಲ್ಲಿ ಮಾಸಿಕ ರೂ.10,000/- ರಂತೆ ಶಿಷ್ಯವೇತನ ನೀಡಲಾಗುತ್ತಿದೆ. ಗ್ರಂಥಗಳ ಖರೀದಿಗೆ ತಾಲ್ಲೂಕು/ಟಿ.ಎಂ.ಸಿ. ಕೇಂದ್ರ ಸ್ಥಾನದಲ್ಲಿ ರೂ.50,000/- ನಗರಸಭೆ/ಮಹಾನಗರ ಪಾಲಿಕೆಗಳಲ್ಲಿ ರೂ.1,00,000/- ನೀಡಲಾಗುತ್ತಿದೆ.
- 7ನೇ ತರಗತಿ ಮತ್ತು 10ನೇ ತರಗತಿಯಲ್ಲಿ ತೇರ್ಗಡೆಯಾದ ಜೇನುಕುರುಬ ಜನಾಂಗದ ವಿದ್ಯಾರ್ಥಿಗಳಿಗೆ ರೂ.2500/- ಮತ್ತು ರೂ.5000/- ಪ್ರೋತ್ಸಾಹಧನ ನೀಡಲಾಗುತ್ತಿದೆ.
- ಜೇನುಕುರುಬ ಜನಾಂಗದ ವಿದ್ಯಾರ್ಥಿಗಳಿಗೆ ಈ ಕೆಳಕಂಡಂತೆ ಶೈಕ್ಷಣಿಕ ಭತ್ಯೆಯನ್ನು ಹಾಗೂ ವಿದ್ಯಾವಂತ 40 ವರ್ಷದ ಒಳಗಿನ ನಿರುದ್ಯೋಗಿಗಳಿಗೆ 3 ವರ್ಷಗಳ ಕಾಲ ಮಾಸಿಕ ನಿರುದ್ಯೋಗ ಜೀವನ ಭತ್ಯೆಯನ್ನು ನೀಡಲಾಗುತ್ತಿದೆ.
ಕ್ರ.ಸಂ. | ವಿವರ | ಶೈಕ್ಷಣಿಕ ಭತ್ಯೆ (ವಾರ್ಷಿಕ) (ರೂ.ಗಳಲ್ಲಿ) | ನಿರುದ್ಯೋಗ ಜೀವನ ಭತ್ಯೆ (ಮಾಸಿಕ) (ರೂ.ಗಳಲ್ಲಿ) |
---|---|---|---|
1 | ಎಸ್.ಎಸ್.ಎಲ್.ಸಿ. | 10,000/- | 2,000/- |
2 | ಪಿ.ಯು.ಸಿ. | 12,000/- | 2,500/- |
3 | ಪದವಿ | 15,000/- | 3,500/- |
4 | ಸ್ನಾತಕೋತ್ತರ | 18,000/- | 4,500/- |
-
- ಸಾಮೂಹಿಕ ವಿವಾಹ ಕಾರ್ಯಕ್ರಮಗಳಲ್ಲಿ ಸರಳವಾಗಿ ಮದುವೆ ಮಾಡಿಕೊಳ್ಳುವ ದಂಪತಿಗಳಿಗೆ ರೂ.50,000/- ಆರ್ಥಿಕ ನೆರವನ್ನು ನೀಡಲಾಗುತ್ತಿದೆ.
- ಪರಿಶಿಷ್ಟ ಪಂಗಡದ ವಿಧವೆಯರು ಸ್ವಜಾತಿಯ ಪುರುಷರನ್ನು ಮರು ಮದುವೆಯಾದಲ್ಲಿ ರೂ.3.00ಲಕ್ಷ ಸಹಾಯಧನಕ್ಕೆ ಅರ್ಹರಾಗಿರುತ್ತಾರೆ.
- ಪರಿಶಿಷ್ಟ ಪಂಗಡದ ಯುವಕ ಯುವತಿಯರು ಪರಿಶಿಷ್ಟ ಪಂಗಡದ ಸಮುದಾಯದ ಒಳಗೆ ವಿವಾಹವಾದಲ್ಲಿ ರೂ.2.00ಲಕ್ಷ ಪ್ರೋತ್ಸಾಹಧನ ನೀಡಲಾಗುತ್ತಿದೆ.
- ಪರಿಶಿಷ್ಟ ಪಂಗಡದ ಯುವಕ ಇತರೆ ಜಾತಿಯ ಯುವತಿಯನ್ನು ಮದುವೆಯಾದಲ್ಲಿ ರೂ.2.50ಲಕ್ಷ ಸಹಾಯಧನ ಹಾಗೂ ಪರಿಶಿಷ್ಟ ಪಂಗಡದ ಯುವತಿಯು ಇತರೆ ಜಾತಿಯ ಯುವಕನನ್ನು ಮದುವೆಯಾದಲ್ಲಿ ರೂ.3.00 ಲಕ್ಷ ಸಹಾಯಧನ ನೀಡಲಾಗುತ್ತಿದೆ.
- ಪರಿಶಿಷ್ಟ ಪಂಗಡದ ಕಾಲೋನಿಗಳಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ, ಕುಡಿಯುವ ನೀರು, ಸಮುದಾಯ ಭವನ ಮುಂತಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ.
- ವಾಲ್ಮೀಕಿ ಭವನಗಳನ್ನು ನಿರ್ಮಿಸಲಾಗುತ್ತಿದೆ.
ಕ್ರ.ಸಂ. | ಹಂತದ ವಿವರ | ಮೊತ್ತ (ರೂ.ಲಕ್ಷಗಳಲ್ಲಿ) |
---|---|---|
1 | ಹೋಬಳಿ | 75.00 |
2 | ತಾಲ್ಲೂಕು | 200.00 |
3 | ಜಿಲ್ಲೆ | 400.00 |
-
- ಭಾರತ ಸಂವಿಧಾನ ಅನುಚ್ಛೇದ 275(1)ರಡಿ ಹಾಗೂ ವಿಶೇಷ ಕೇಂದ್ರೀಯ ನೆರವಿನಡಿ ಪರಿಶಿಷ್ಟ ಪಂಗಡದ ಕಾಲೋನಿಗಳಲ್ಲಿ ಮೂಲಭೂತ ಸೌಕರ್ಯ, ಹೈನುಗಾರಿಕೆ, ಆಡುಸಾಕಾಣೆ, ಹಂದಿಸಾಕಾಣೆ, ಸರಕು ವಾಹನ ಇತ್ಯಾದಿ ಆರ್ಥಿಕ ಅಭಿವೃದ್ಧಿ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
- ಕೊಡಗು ಜಿಲ್ಲೆಯ ಜೇನುಕುರುಬ ಜನಾಂಗದವರಿಗೆ ಮನೆಗಳ ನಿರ್ಮಾಣ, ರಸ್ತೆ, ಚರಂಡಿ, ಕುಡಿಯುವ ನೀರು, ಸಮುದಾಯ ಭವನ ಮುಂತಾದ ಮೂಲಭೂತ ಸೌಲಭ್ಯಗಳನ್ನು, ಸ್ವಯಂ ಉದ್ಯೋಗ, ಆರೋಗ್ಯ, ಪಶು ಸಂಗೋಪನೆ, ಕೃಷಿ, ತೋಟಗಾರಿಕೆ ಮುಂತಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.
- ಅನುಸೂಚಿತ ಬುಡಕಟ್ಟುಗಳು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ (ಅರಣ್ಯಹಕ್ಕು ಮಾನ್ಯ ಮಾಡುವ) ಅಧಿನಿಯಮ 2006 ಮತ್ತು ನಿಯಮಗಳು 2008 ಹಾಗೂ ತಿದ್ದುಪಡಿ ನಿಯಮ 2012ರನ್ವಯ ಅರಣ್ಯದಲ್ಲಿ ವಾಸಿಸುವ ಅನುಸೂಚಿತ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳಿಗೆ ವೈಯಕ್ತಿಕ ಹಾಗೂ ಸಮುದಾಯ ಸಂಪನ್ಮೂಲ ಹಕ್ಕು ಪತ್ರ ವಿತರಿಸಲಾಗುತ್ತಿದೆ.
- ಜೇನುಕುರುಬ, ಕಾಡುಕುರುಬ, ಸೋಲಿಗ, ಯರವ ಮತ್ತು ಕುಡಿಯ ಜನಾಂಗದವರಿಗೆ ಮಳೆಗಾಲದ ಅವಧಿಯಲ್ಲಿ 45 ದಿವಸಗಳಿಗೊಮ್ಮೆ ಒಟ್ಟು 6 ಬಾರಿ ಪೌಷ್ಠಿಕ ಆಹಾರ ಪದಾರ್ಥಗಳನ್ನು ವಿತರಣೆ ಮಾಡಲಾಗುತ್ತಿದೆ.
ಕ್ರಸಂ | ಪದಾರ್ಥಗಳ ವಿವರ | ಪ್ರಮಾಣ |
---|---|---|
1 | ಅಕ್ಕಿ | 8 ಕೆ.ಜಿ |
2 | ತೊಗರಿಬೇಳೆ | 3 ಕೆ.ಜಿ |
3 | ಕಡಲೆ ಬೀಜ (ಶೇಂಗಾ ಬೀಜ) | 1 ಕೆ.ಜಿ |
4 | ಅಲಸಂದೆ ಕಾಳು | 1 ಕೆ.ಜಿ |
5 | ಕಡಲೆಕಾಳು | 1 ಕೆ.ಜಿ |
6 | ಹುರುಳಿಕಾಳು | 1 ಕೆ.ಜಿ |
7 | ಹೆಸರುಕಾಳು | 1 ಕೆ.ಜಿ |
8 | ಸಕ್ಕರೆ | 1 ಕೆ.ಜಿ |
9 | ಬೆಲ್ಲ | 1 ಕೆ.ಜಿ |
10 | Eggs | 30 ಸಂಖ್ಯೆ |
11 | ಅಡುಗೆ ಎಣ್ಣೆ | 2 ಲೀ |
12 | ನಂದಿನಿ ತುಪ್ಪ | ½ ಕೆ.ಜಿ |