ಮುಚ್ಚಿ

ಕಾಫಿ ಮಂಡಳಿ

cofee

ಕಾಫಿ ಮಂಡಳಿಯು ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆಯಾಗಿದೆ. ಕಾಫಿ ಬೆಳೆಗಾರರು ಹಾಗೂ ಕಾಫಿ ಉದ್ಯಮದಲ್ಲಿ ತೊಡಗಿರುವ ಇತರ ಭಾಗಿದಾರರ ಯೋಗಕ್ಷೇಮಕ್ಕಾಗಿ ಭಾರತದ ವಿವಿಧ ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಕಚೇರಿಗಳನ್ನು ಹೊಂದಿದೆ. ಬೆಂಗಳೂರಿನಲ್ಲಿ ಕೇಂದ್ರ ಕಛೇರಿ ಇದೆ ಹಾಗು ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರಗಳು ಕೊಡಗು ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ಮತ್ತು ಪೊನ್ನಂಪೇಟೆ ತಾಲೂಕುಗಳಲ್ಲಿವೆ..

ಪದನಾಮವಾರು ವಿಳಾಸ ಮತ್ತು ಸಂಪರ್ಕ ವಿವರಗಳು ಈ ಕೆಳಗಿನಂತಿವೆ

 

ಕ್ರಮ ಸಂಖ್ಯೆ ಅಧಿಕಾರಿಯ ಹೆಸರು ಹುದ್ದೆ ವಿಳಾಸ ಸಂಪರ್ಕ ಸಂಖ್ಯೆ ಇಮೇಲ್ ವಿಳಾಸ
1 ಡಾ ನಾಗರಾಜ್ ಜೆ ಎಸ್ ಜಂಟಿ ನಿರ್ದೇಶಕ (ಸಂಶೋಧನೆ) ಕಾಫಿ ಸಂಶೋಧನಾ ಉಪ ಕೇಂದ್ರ ಚೆಟ್ಟಳ್ಳಿ – 571248 08272-298088
6361335035
jdrcoffeeboard@gmail.com
2 ಡಾ ಜಾರ್ಜ್ ಡೇನಿಯಲ್ ಉಪ ನಿರ್ದೇಶಕರು (ಸಂಶೋಧನೆ) 08272-298088 6362451525 9481288726 dydircrss@gmail.com
3 ಶ್ರೀ. ಶಿವಕುಮಾರಸ್ವಾಮಿ, ಬಿ. ಉಪ ನಿರ್ದೇಶಕರು (ವಿಸ್ತರಣೆ) ದಾಸ್ವಾಳ್ ರಸ್ತೆ
ಮಡಿಕೇರಿ – 571 201.
08272-225518 9449835518 ddemdk@gmail.com
4 ಶ್ರೀ ಅಜಿತ್ ಕುಮಾರ್ ರೌತ ಹಿರಿಯ ಸಂಪರ್ಕ ಅಧಿಕಾರಿ 08272-298514 9483504414 slomdk@gmail.com
5 ಡಾ.ಶ್ರೀದೇವಿ, ಕೆ. ಉಪ ನಿರ್ದೇಶಕರು (ವಿಸ್ತರಣೆ)I/c ತಂತ್ರಜ್ಞಾನ ಮೌಲ್ಯಮಾಪನ ಕೇಂದ್ರ
ಗೋಣಿಕೊಪ್ಪಲು – 571213
08274-298386 9449851606 ddevrj@gmail.com
6 ಹಿರಿಯ ಸಂಪರ್ಕ ಅಧಿಕಾರಿ 08274-298011 9480241428 slogkpl@gmail.com
6 ಶ್ರೀ ಗೋಪಾಲ ನಾಯ್ಕ, ಎಸ್. ಹಿರಿಯ ಸಂಪರ್ಕ ಅಧಿಕಾರಿ P.B.No.22,
ಸೋಮವಾರಪೇಟೆ – 571 236
08276-282008 sloswp@gmail.com

ಕೊಡಗು ಜಿಲ್ಲೆಯಲ್ಲಿನ ಕಾಫಿ ಪ್ರದೇಶದ ವಿವರಗಳು

ಕೊಡಗು ಜಿಲ್ಲೆ ಐದು ತಾಲೂಕುಗಳನ್ನು ಒಳಗೊಂಡಿದೆ – ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ, ಸೋಮವಾರಪೇಟೆ ಮತ್ತು ಕುಶಾಲನಗರ. ಈ ಜಿಲ್ಲೆಯು ಒಟ್ಟು 4106 ಚ. ಕಿ.ಮೀ. ಭೌಗೋಳಿಕ ಪ್ರದೇಶದಿಂದ ಕೂಡಿದ್ದು, 1197 ಚ ಕಿ.ಮೀ. ಪ್ರದೇಶದಲ್ಲಿ ಕಾಫಿ ಕೃಷಿ ಮಾಡಲಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ 1,06,921 ಹೆ. ಪ್ರದೇಶದಲ್ಲಿ ಅಂದರೆ ಕರ್ನಾಟಕ ರಾಜ್ಯದ ಒಟ್ಟು ಕಾಫಿ ಪ್ರದೇಶದ 44% ರಷ್ಟು ಪ್ರದೇಶದಲ್ಲಿ ಕಾಫಿಯನ್ನು ಬೆಳೆಸಲಾಗುತ್ತಿದೆ. ಜಿಲ್ಲೆಯ ಕಾಫಿ ಪ್ರದೇಶದ ಬಹುಪಾಲು ಭಾಗವನ್ನು ಸಣ್ಣ ಬೆಳೆಗಾರರು, ಅಂದರೆ 10 ಹೆಕ್ಟೇರ್ ಗಿಂತ ಕಡಿಮೆ ಹಿಡುವಳಿ ಹೊಂದಿರುವ ರೈತರು ಹೊಂದಿರುತ್ತಾರೆ. ಕೊಡಗು ವರ್ಷಕ್ಕೆ ಸುಮಾರು 1,10,730 MT ಕಾಫಿಯನ್ನು ಉತ್ಪಾದಿಸುತ್ತಿದ್ದು, ಇದು ರಾಜ್ಯದ 50% ಮತ್ತು ದೇಶದ ಉತ್ಪಾದನೆಯ 35% ರಷ್ಟಿದೆ. ಕಾಫಿ ಕೃಷಿಯು ಕಾರ್ಮಿಕ ಪ್ರಧಾನವಾಗಿದ್ದು ಕೊಡಗಿನ ಕಾಫಿ ತೋಟಗಳಲ್ಲಿ ಶೇ.51ರಷ್ಟು ಉದ್ಯೋಗ ಸೃಷ್ಟಿಯಾಗುತ್ತಿದೆ.

ಸ್ಥಳೀಯ ಪ್ರದೇಶದ ನಿರ್ದಿಷ್ಟ ಪರಿಸರ ಸ್ಥಿತಿಯನ್ನು ಅವಲಂಬಿಸಿ ಕಾಫಿ ಕೃಷಿಯನ್ನು ಮಾಡಲಾಗುತ್ತಿದೆ. ಮಡಿಕೇರಿ, ವಿರಾಜಪೇಟೆ, ಪೊನ್ನಂಪೇಟೆ ಮತ್ತು ಕುಶಾಲನಗರ ತಾಲ್ಲೂಕಿನಲ್ಲಿ ರೋಬಸ್ಟಾ ಕಾಫಿಯನ್ನು ಮುಖ್ಯವಾಗಿ ಬೆಳೆಯಲಾಗುತ್ತಿದ್ದು, ಸೋಮವಾರಪೇಟೆ ತಾಲ್ಲೂಕಿನಲ್ಲಿ ಅರೇಬಿಕಾ ಕಾಫಿ ಮುಖ್ಯ ಬೆಳೆಯಾಗಿದೆ.

ತಾಲೂಕು ಕಾಫಿ ವಿಧ ಕಾಫಿ ಬೆಳೆಯ ಒಟ್ಟು ವಿಸ್ತೀರ್ಣ (ಹೆ.)) ಕಾಫಿ ಬೆಳೆಯುವ ಉತ್ಪಾದನಾ ವಿಸ್ತೀರ್ಣ (ಹೆ.) ಹಿಡುವಳಿಗಳ ಸಂಖ್ಯೆ ಹಳ್ಳಿಗಳ ಸಂಖ್ಯೆ
ಮಡಿಕೇರಿ ಅರೇಬಿಕಾ 1250 1190 12408 77
ರೋಬಸ್ಟಾ 22956 21348
ಒಟ್ಟು 24206 22538
ಸೋಮವಾರಪೇಟೆ & ಕುಶಾಲನಗರ ಅರೇಬಿಕಾ 24050 22400 10108 158
ರೋಬಸ್ಟಾ 6870 5890
ಒಟ್ಟು 30920 28290
ವಿರಾಜಪೇಟೆ & ಪೊನ್ನಂಪೇಟೆ ಅರೇಬಿಕಾ 1740 1672 21445 124
ರೋಬಸ್ಟಾ 50055 48781
ಒಟ್ಟು 51795 50453

ತಾಲೂಕು ಕಾಫಿ ವಿಧ 5 ವರ್ಷಗಳ ಸರಾಸರಿ ಉತ್ಪಾದನೆ
(ಮೆಟ್ರಿಕ್ ಟನ್ನುಗಳಲ್ಲಿ)
5 ವರ್ಷಗಳಲ್ಲಿ ಸರಾಸರಿ ಉತ್ಪಾದಕತೆ
(ಕಿಲೋಗ್ರಾಂ/ ಹೆಕ್ಟೇರ್)
ಮಡಿಕೇರಿ ಅರೇಬಿಕಾ 691 473
ರೋಬಸ್ಟಾ 23259 1118
ಒಟ್ಟು 23950 1076
ಸೋಮವಾರಪೇಟೆ & ಕುಶಾಲನಗರ ಅರೇಬಿಕಾ 16141 710
ರೋಬಸ್ಟಾ 6749 1246
ಒಟ್ಟು 22890 813
ವಿರಾಜಪೇಟೆ & ಪೊನ್ನಂಪೇಟೆ ಅರೇಬಿಕಾ 1015 603
ರೋಬಸ್ಟಾ 67746 1388
ಒಟ್ಟು 68761 1362

ಕೊಡಗು ಜಿಲ್ಲೆಯಲ್ಲಿ ಕಾಫಿ – ಸಂಕ್ಷಿಪ್ತ ನೋಟ

ಕೊಡಗು ಕಾಫಿ ಕೃಷಿಗೆ ಅನುಕೂಲಕರ ವಾತಾವರಣವನ್ನು ಹೊಂದಿದೆ. ಜಿಲ್ಲೆಯ ಹೆಚ್ಚಿನ ಭಾಗವು ಪಶ್ಚಿಮ ಘಟ್ಟಗಳಿಗೆ ಹೊಂದಿಕೊಂಡಿದ್ದು, ಪೂರ್ವ ಭಾಗದಲ್ಲಿ ಬಯಲು ಪ್ರದೇಶಗಳಲ್ಲಿದ್ದು ಹೇರಳವಾದ ಮಳೆಯನ್ನು ಮುಂಗಾರಿನಲ್ಲಿ ಪಡೆಯುತ್ತದೆ. ಇದು ಕಾಫಿ ಕೃಷಿಗೆ ಅನುಕೂಲಕರವಾದ ವಾತಾವರಣ. ಹಿಂಗಾರಿನಲ್ಲೂ ಸ್ವಲ್ಪ ಪ್ರಮಾಣದಲ್ಲಿ ಮಳೆ ಲಭಿಸುತ್ತಿದೆ. ಸರಾಸರಿ ವರ್ಷಕ್ಕೆ 1,000 ಮಿ.ಮೀ ನಿಂದ 5,000 ಮಿ.ಮೀ ಮಳೆ ದೊರೆಯುತ್ತದೆ. ಈ ಪ್ರದೇಶದ ಸರಾಸರಿ ತಾಪಮಾನವು 180 C ನಿಂದ 360 C ವರೆಗೆ ಇರುತ್ತದೆ.

ಕಾಫಿ ಬೋರ್ಡ್‌ನ ಸಂಶೋಧನೆ ಮತ್ತು ವಿಸ್ತರಣಾ ವಿಭಾಗದಿಂದ ಒದಗಿಸಲಾದ ಸೇವೆಗಳು

1990ರ ದಶಕದಲ್ಲಿ ಪ್ರಾರಂಭವಾದ ಮುಕ್ತ ಮಾರುಕಟ್ಟೆ ವ್ಯವಸ್ಥೆಯ ನಂತರ ಕಾಫಿ ಮಂಡಳಿಯು ಕಾಫಿ ಉದ್ಯಮದ ಭಾಗಿದಾರರ (Stakeholders) ಅನುಕೂಲಕ್ಕಾಗಿ ಮತ್ತು ಕಾಫಿ ಉದ್ಯಮವನ್ನು ಉತ್ತೇಜಿಸಲು ಉದ್ಯಮದ ಸ್ನೇಹಿತ ಹಾಗು ಮಾರ್ಗದರ್ಶಕನಂತೆ ಕೆಲಸ ನಿರ್ವಹಿಸುತ್ತಿದೆ. ಕಾಫಿ ಮಂಡಲಿಯು ಪ್ರಮುಖವಾಗಿ ಸಂಶೋದನೆ, ವಿಸ್ತರಣೆ, ಮಾರುಕಟ್ಟೆಅಭಿವೃದ್ಧಿ ವಿಚಾರಗಳಲ್ಲಿ ತೊಡಗಿಸಿಕೊಂಡು ಬೆಳೆಗಾರರ ಅನುಕೂಲಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ.

ಸಂಶೋಧನಾ ವಿಭಾಗ

ಕಾಫಿ ಮಂಡಳಿಯು ಕಾಫಿ ಕೃಷಿಗೆ ಸಂಬಂದಿಸಿದಂತೆ ವಿವಿಧ ವಿಷಯಗಳಲ್ಲಿ ಸಂಶೋಧನೆ ನಡೆಸಲು ಬಾಳೆಹೋನ್ನೂರಿನಲ್ಲಿ (ಚಿಕ್ಕಮಗಳೂರು ಜಿಲ್ಲೆ) ಕೇಂದ್ರೀಯ ಕಾಫಿ ಸಂಶೋಧನ ಕೇಂದ್ರವನ್ನು ಹೊಂದಿದೆ. ಇಲ್ಲಿ ವಿಜ್ಞಾನಿಗಳು ತಳಿ ಅಬಿವೃದ್ದಿ ಹಾಗು ಸಂವರ್ದನೆ, ಬೆಸಾಯ ಶಾಸ್ತ್ರ, ರೋಗ ಮತ್ತು ಕೀಟ ಶಾಸ್ತ್ರ, ಮಣ್ಣು ರಸಾಯನ ಶಾಸ್ತ್ರ, ಕೊಯಿಲಿನ ನಂತರ ತಂತ್ರಜ್ಞಾನ ಅಬಿವೃದ್ದಿ ಮುಂತಾದ ವಿಷಯಗಳ ಬಗ್ಗೆ ಸಂಶೋಧನೆ ನಡೆಸಿರುತ್ತಾರೆ.

ಕಾಫಿ ಸಂಶೋಧನಾ ಉಪ ಕೇಂದ್ರ, ಚೆಟ್ಟಳ್ಳಿ:

ಕಾಫಿ ಸಂಶೋಧನಾ ಉಪಕೇಂದ್ರವನ್ನು ಕರ್ನಾಟಕದ ಕೊಡಗು ಜಿಲ್ಲೆಯ ಚೆಟ್ಟಳ್ಳಿ ಗ್ರಾಮದಲ್ಲಿ 1946 ರಲ್ಲಿ ಸ್ಥಾಪಿಸಲಾಯಿತು. ಈ ಕೇಂದ್ರವು ಒಟ್ಟು 131 ಹೆಕ್ಟೇರ್ ಪ್ರದೇಶವನ್ನು ಹೊಂದಿದೆ, ಅದರಲ್ಲಿ 80 ಹೆಕ್ಟೇರ್ ಪ್ರದೇಶದಲ್ಲಿ ಸಂಶೋಧನಾ ಪ್ರಯೋಗಗಳನ್ನು ನಡೆಸಲು ಕಾಫಿ ಬೆಳೆಯನ್ನು ಬೆಳೆಯಲಾಗಿದೆ. ಎಲ್ಲಾ ಪ್ರಮುಖ ವಿಭಾಗಗಳಲ್ಲಿ ಸಂಶೋಧನೆ ನಡೆಸಲು ಸುಸಜ್ಜಿತ ಪ್ರಯೋಗಾಲಯದ ಸೌಲಭ್ಯ ಹಾಗು ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಗಳನ್ನು ಹೊಂದಿದೆ.

ಈ ಕೇಂದ್ರದಲ್ಲಿ ವಿವಿಧ ಸಂಶೋಧನಾ ಚಟುವಟಿಕೆಗಳು ನಡೆಯುತ್ತಿದ್ದು, ಬೆಳೆಗಾರರ ಅನುಕೂಲಕ್ಕಾಗಿ ಮಣ್ಣು ಪರೀಕ್ಷಾ ಕೇಂದ್ರವನ್ನು ಸ್ಥಾಪಿಸಲಾಗಿದೆ. ಇದಲ್ಲದೆ ಬೀಜೋತ್ಪಾದನಾ ತಾಕುಗಳಿದ್ದು ಬೆಳೆಗಾರರ ಕಾಫಿ ಬಿತ್ತನೆ ಬೀಜದ ಅವಶ್ಯಕತೆಗಳನ್ನು ಪೊರೈಸಲಾಗಿತ್ತಿದೆ. ಈ ಕೇಂದ್ರದಲ್ಲಿ ರೋಬಸ್ಟ ಕಾಫಿಯ ತದ್ರೂಪಿ (Clone) ಗಿಡಗಳನ್ನು ಬೆಳೆಸಿ ರೈತರಿಗೆ ಪೂರೈಸಲಾಗುತ್ತಿದೆ.

ತಂತ್ರಜ್ಞಾನ ಮೌಲ್ಯಮಾಪನ ಕೇಂದ್ರ, ಗೋಣಿಕೊಪ್ಪಲು:

ಕಾಫಿ ತಂತ್ರಜ್ಞಾನವನ್ನು ಸಮಗ್ರವಾಗಿ ಮತ್ತು ನೇರವಾಗಿ ಕಾಫಿ ಬೆಳೆಗಾರರಿಗೆ ತಲುಪಿಸಲು ಕಾಫಿ ಮಂಡಳಿಯು ವಲಯ ಮಟ್ಟದಲ್ಲಿ ಪ್ರಾತ್ಯಷಿಕಾ ಕೇಂದ್ರಗಳನ್ನು ಕಾಫಿ ಬೆಳೆಯುವ ಜಿಲ್ಲೆಗಳ ಪ್ರಮುಖ ಸ್ಥಳಗಳಲ್ಲಿ ಪ್ರಾರಂಬಿಸಲಾಗಿದೆ. ಈ ಪರಿಕಲ್ಪನೆಯ ಒಂದು ಭಾಗವಾಗಿ, 1958 ರಲ್ಲಿ ದಕ್ಷಿಣ ಕೊಡಗಿನ ಗೋಣಿಕೋಪ್ಪಲಿನ ಸಮೀಪದ ಅರ್ವತೊಕ್ಲುವಿನಲ್ಲಿ ಪ್ರಾತ್ಯಷಿಕ ಕೇಂದ್ರವನ್ನು ಸ್ಥಾಪಿಸಲಾಯಿತು. ಈ ಕೇಂದ್ರದ ಮುಖ್ಯವಾದ ಕಾರ್ಯಕ್ರಮಗಳು ಕೆಳಗಿನಂತಿವೆ.

  • ವೈಜ್ಞಾನಿಕ ವಿಧಾನಗಳನ್ನು ಪ್ರದರ್ಶಿಸುವುದು.
  • ಉತ್ಪಾದನೆಯನ್ನು ಸುಧಾರಿಸಲು ಕಾಫಿ ಕೃಷಿ ಪದ್ಧತಿಗಳನ್ನು ಪರಿಚಯಿಸುವುದು.
  • ಕಾಫಿ ಕೃಷಿಯ ಬಗ್ಗೆ ತರಬೇತಿ ನೀಡುವುದು.
  • ಸುಧಾರಿತ ಬಿತ್ತನೆ ಬೀಜದ ಉತ್ಪಾದನೆ ಮತ್ತು ಪೂರೈಕೆ.
  • ವಿವಿಧ ಕಾಫಿ ತಳಿಗಳ ಕಾರ್ಯಕ್ಷಮತೆಯ ಮೌಲ್ಯಮಾಪನ.
  • ತದ್ರೂಪಿ ಗಿಡಗಳ ಉತ್ಪಾದನೆ (Clonal Propogation) ಹಾಗು ಪೂರೈಕೆ.
  • ಮಣ್ಣಿನ ಪರೀಕ್ಷೆ ಮತ್ತು ಪೋಷಕಾಂಶಗಳ ಶಿಫಾರಸು.

ವಿಸ್ತರಣಾ ಚಟುವಟಿಕೆಗಳು:

ಕಾಫಿ ವಿಸ್ತರಣಾ ವಿಭಾಗವು ಕಾಫಿ ಬೆಳೆಯುವ ಪ್ರದೇಶಗಳಲ್ಲಿ ಸ್ಥಳಿಯ ಕಛೇರಿಗಳನ್ನು ಹೊಂದಿದ್ದು ಇಲ್ಲಿನ ತಾಂತ್ರಿಕ ಸಿಬ್ಬಂದಿಯು ಬೆಳೆಗಾರರೊಂದಿಗೆ ನಿಕಟ ಸಂರ್ಪಕ ಹೊಂದಿರುತ್ತಾರೆ. ಇದರ ಮುಖ್ಯ ಉದ್ದೇಶವು ಬೆಳೆಗಾರರಿಗೆ ಹೊಸ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವುದು ಮತ್ತು ತೋಟಗಳಲ್ಲಿನ ಭೆಳೆಗಾರರ ಸಮಸ್ಯೆಗಳನ್ನು ವಿಜ್ಞಾನಿಗಳಿಗೆ ತಿಳಿಸಿ ಅವಶ್ಯವಿರುವ ಸಂಶೋಧನೆಗಳನ್ನು ನಡೆಸಲು ಮಾಹಿತಿ ಒದಗಿಸುವುದಾಗಿರುತ್ತದೆ. ಹಾಗಾಗಿ ವಿಸ್ತರಣಾ ವಿಭಾಗವು, ವಿಜ್ಞಾನಿಗಳು, ಹಾಗು ಕಾಫಿ ಬೆಳೆಗಾರರ ನಡುವೆ ಸೇತುವೆಯಂತೆ ಕಾರ್ಯನಿರ್ವಹಿಸುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ ಮಡಿಕೇರಿ, ಸೋಮವಾರಪೇಟೆ ಹಾಗು ಗೋಣಿಕೊಪ್ಪದಲ್ಲಿ ಕಛೇರಿಗಳು ಕಾರ್ಯನಿರ್ವಹಿಸುತ್ತಿದೆ. ಇದಲ್ಲದೆ ವಿಸ್ತರಣಾ ವಿಭಾಗವು ಸರ್ಕಾರದಿಂದ ಅನುಮೋದನೆಗೊಂಡ ಅಭಿವೃದ್ಧಿ ಕಾರ್ಯಕ್ರಮಗಳನ್ನು ಬೆಳೆಗಾರರು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಸಹಕಾರವನ್ನು ಒದಗಿಸುತ್ತಿದೆ.

ಕಾಫಿ ಮಂಡಳಿಯು ವಿವಿಧ ಹಂತಗಳಲ್ಲಿ ಬೆಳೆಗಾರರಿಗೆ ಈ ಕೆಳಗಿನ ಸೇವೆಗಳನ್ನು ಒದಗಿಸುತ್ತದೆ

  • ಬೆಳೆ ಸುಧಾರಣೆ ಮತ್ತು ಕೀಟ ಮತ್ತು ರೋಗ ನಿರ್ವಹಣೆಗೆ ತಾಂತ್ರಿಕ ನೆರವು, ಸಲಹೆ, ತರಬೇತಿ, ಪ್ರಾತ್ಯಕ್ಷಿಕೆಗಳು, ಗ್ರಾಮ ಮಟ್ಟದ ಕಾರ್ಯಾಗಾರಗಳು, ಸಾಮರ್ಥ್ಯ ವೃದ್ಧಿ ಕಾರ್ಯಕ್ರಮ, ರೈತರ ಪ್ರವಾಸಗಳು, ವಿಚಾರ ಸಂಕಿರಣ ಮತ್ತು ವೃತ್ತಿಪರ ತರಬೇತಿ ಕಾರ್ಯಕ್ರಮಗಳು (ವಿಶೇಷವಾಗಿ ಮಹಿಳಾ ಕಾಫಿ ಬೆಳೆಗಾರರಿಗೆ) ಒದಗಿಸಲಾಗುತ್ತಿದೆ. ಅಲ್ಲದೆ, “ಕಾಫಿ ಕೃಷಿ ತರಂಗ” ವೆಂಬ ದ್ವಿಮುಖ IVR ಸಹಾಯವಾಣಿಯು ಬೆಳೆಗಾರರಿಗೆ ಕಾಲಕಾಲಕ್ಕೆ ಅವಶ್ಯವಿರುವ ಮಾಹಿತಿಯನ್ನು ಒದಗಿಸುವನಿಟ್ಟಿನಲ್ಲಿ ದಿನವಿಡಿ (24/7) ಕಾರ್ಯನಿರ್ವಹಿಸುತ್ತಿದೆ.
  • ವೈಯಕ್ತಿಕ ಭೇಟಿಯ ಮೂಲಕ ಅಥವಾ ಸಾಮಾಜಿಕ ಮಾಧ್ಯಮಗಳ ವೇದಿಕೆಗಳ ಮೂಲಕ ಕಾಫಿ ಬೆಳೆಗಾರರಿಗೆ ಸಮಯೋಚಿತ ಸಲಹೆಯನ್ನು ಒದಗಿಸುವುದು.
  • ವಿವಿಧ ಕಾಫಿ ಬೆಳೆಯುವ ತೋಟಗಳಿಂದ ಮಣ್ಣಿನ ಮಾದರಿಗಳನ್ನು ಸಂಗ್ರಹಿಸಿ ಸಂಶೋಧನಾ ಕೇಂದ್ರಗಳಿಗೆ ಪರೀಕ್ಷೆಗಾಗಿ ಕಳುಹಿಸಿ ಆಯಾ ತೋಟದಲ್ಲಿನ ರಸಸಾರ ಹಾಗು ಪೋಷಕಾಂಶಗಳ ಲಭ್ಯತೆಯ ಆಧಾರದಲ್ಲಿ ಸಮತೋಲಿತ ರಸಗೊಬ್ಬರಗಳ ಬಳಕೆಗೆ ಉತ್ತೇಜಿಸುವುದು.
  • ಪರಿಸರ ಸ್ನೇಹಿ ಕೀಟ ನಿಯಂತ್ರಣ ಕ್ರಮಗಳನ್ನು ಅಳವಡಿಸಿಕೊಳ್ಳುವುದನ್ನು ಉತ್ತೇಜಿಸಲು ಬ್ರೋಕಾ ಬಲೆಗಳು, ಲಿಂಗಾಕಾರ್ಷಕ ಬಲೆಗಳು, ಕಾಫಿ ಬಿತ್ತನೆ ಬೀಜಗಳ ಪೂರೈಕೆ ಮಾಡಲಾಗುತ್ತಿದೆ.

ಅಭಿವೃದ್ಧಿ ವಿಭಾಗ:

ಈ ಹಿಂದಿನ ವಿವಿಧ ಯೋಜನಾ ಅವಧಿಗಳಲ್ಲಿ, ಕಾಫಿ ಬೆಳೆಗಾರರಿಗೆ ವಿವಿಧ ಮೂಲಸೌಕರ್ಯಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣಕಾಸಿನ ನೆರವು ನೀಡಲಾಯಿತು, ಅವುಗಳಲ್ಲಿ ಮುಖ್ಯವಾದುದೆಂದರೆ ಮರುನಾಟಿ (Replantation Programme) ಮತ್ತು ವಿಸ್ತರಣೆ ಕಾರ್ಯಕ್ರಮ, ಜಲ ಸಂವರ್ದನ ಯೋಜನೆ (Water Augmentation), ಕಾಫಿಯ ಗುಣಮಟ್ಟವನ್ನು ಸುಧಾರಿಸಲು (Quality Upgradation), ಯಾಂತ್ರೀಕರಣ (Mechanization), ಕಾಫಿಯ ಪರಿಸರ ಪ್ರಮಾಣೀಕರಣ, ಇತ್ಯಾದಿ.

ದೇಶದಲ್ಲಿ ಆಂತರಿಕ ಮಾರುಕಟ್ಟೆಯನ್ನು ವಿಸ್ತರಿಸಲು ಮಂಡಳಿಯು ಕಾಫಿ ಪುಡಿ ಘಟಕಗಳನ್ನು (Roasting and Grinding Unit) ಸ್ಥಾಪಿಸಲು ಬಯಸುವ ಉತ್ಸಾಹಿ ಉದ್ಯಮಿಗಳನ್ನು ಪ್ರೋತ್ಸಾಹಿಸುತ್ತಿದೆ. SC/ST ಫಲಾನುಭವಿಗಳನ್ನು ಬೆಂಬಲಿಸಲು ವಿಶೇಷ ಯೋಜನೆಗಳನ್ನು ಸಹ ಜಾರಿಗೊಳಿಸಲಾಗಿದೆ.

ಜಿಲ್ಲೆಯ ಆರ್ಥಿಕತೆಯಲ್ಲಿ ಕಾಫಿ ಬೆಳೆಯ ಪ್ರಾಮುಖ್ಯತೆಯನ್ನು ಮನಗಂಡು ಭಾರತ ಸರ್ಕಾರದ “ಒಂದು ಜಿಲ್ಲೆ ಒಂದು ಬೆಳೆ” ಯೋಜನೆಯಲ್ಲಿ ಕೊಡಗು ಜಿಲ್ಲೆಗೆ ಕಾಫಿ ಬೆಳೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಯೋಜನೆಯಡಿಯಲ್ಲಿ ಉತ್ಸಾಹಿ ಯುವಕರು/ ಉದ್ಯಮಿಗಳು ಕಿರು ಆಹಾರ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಶೇ 50 ರಷ್ಟು ಸಹಾಯವನ್ನು ನೀಡಲಾಗುವುದು. ಈ ಯೋಜನೆಯನ್ನು ಕರ್ನಾಟಕ ರಾಜ್ಯದಲ್ಲಿ ಕೃಷಿ ಇಲಾಖೆಯ ಮುಖಾಂತರ ಅನುಷ್ಠಾನಗೊಳಿಸಲಾಗುತ್ತಿದೆ.

ಮಂಡಳಿಯ ಕಾಫಿ ಗುಣಮಟ್ಟ ವಿಭಾಗವು (Coffee Quality Division) ದೇಶದ ವಿವಿಧ ಸ್ಥಳಗಳಲ್ಲಿ ಉತ್ತಮವಾದ ಕಾಫಿ ಪೇಯ ತಯಾರಿಕಾ ವಿಧಾನವನ್ನು ಪ್ರಚಾರ ಪಡಿಸುವ ಸಲುವಾಗಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಉತ್ಸಾಹಿ ಯುವಕರು ಈಗಾಗಲೇ ಉತ್ತರ ಭಾರತದ ನಗರಗಳಲ್ಲಿ ಕಾಫಿ ಕೆಫೆಗಳನ್ನು ತೆರೆದು ಅಲ್ಲಿಯ ಗ್ರಾಹಕರ ಕಾಫಿ ಸೇವನೆಯನ್ನು ಉತ್ತೇಜಿಸುತ್ತಿದ್ದಾರೆ. ಈ ರೀತಿಯ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಉತ್ತರ ಭಾರತದಲ್ಲಿ ಕಾಫಿ ಬೇಡಿಕೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ.

ಅಂತರ್ಜಾಲ ಸೇವೆಗಳು:

  • ಅಂತರ್ಜಾಲ ಸೇವೆಗಳಿಗಾಗಿ, ದಯವಿಟ್ಟು ಕಾಫಿ ಮಂಡಳಿಯ ವೆಬ್‌ಸೈಟ್ www.indiacoffee.org ಅಡಿಯಲ್ಲಿ “ಸೇವೆಗಳು” ಟ್ಯಾಬ್‌ಗೆ ಭೇಟಿ ನೀಡಿ.
  • ರಫ್ತು ಪರವಾನಗಿಗಳು
  • ಸಬ್ಸಿಡಿ
  • ಕ್ಯೂರಿಂಗ್ ಪರವಾನಗಿಗಳು
  • ಬೆಳೆಗಾರರ ನೋಂದಣಿ
  • ರಫ್ತು ನೋಂದಣಿ

ಕಾಫಿ ಬೋರ್ಡ್ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಕಾಫಿ ಅಂಕಿಅಂಶಗಳು, ಮಾರುಕಟ್ಟೆ ಬೆಲೆಗಳು, ರಫ್ತು ಮಾಹಿತಿ, ಕಾಫಿಯ ಡೇಟಾಬೇಸ್ ಮುಂತಾದ ವಿವಿಧ ಅಂಶಗಳ ಕುರಿತು ಅಗತ್ಯವಿರುವ ಮಾಹಿತಿಯನ್ನು ಸಹ ಪಡೆಯಬಹುದು.

ಔಟ್ಟರ್ನ್ /ತೇವಾಂಶ ಪರೀಕ್ಷೆ:

ಕಾಫಿ ಬೆಳೆಗಾರರು ಒದಗಿಸುವ ಮಾದರಿಗಳಲ್ಲಿನ ತೇವಾಂಶ ಮತ್ತು ಔಟ್ಟರ್ನ್ ಅನ್ನು ಪರೀಕ್ಷಿಸಲು ಕೊಡಗು ಜಿಲ್ಲೆಯಲ್ಲಿರುವ ಕಾಫಿ ಮಂಡಳಿ ಕಚೇರಿಗಳಲ್ಲಿ ಸೌಲಭ್ಯ ಲಭ್ಯವಿದೆ.