ಮುಚ್ಚಿ

ಕರ್ನಾಟಕ ಸಫಾಯಿ ಕರ್ಮಚಾರಿ ಅಭಿವೃದ್ದಿ ನಿಗಮ

ಕ್ರ.ಸಂ ಹೆಸರು ಪದನಾಮ ಮೊಬೈಲ್ ಸಂಖ್ಯೆ ಫೋಟೋ
1 ಚಂದ್ರಶೇಖರ್ ಎನ್.ಬಿ ಜಿಲ್ಲಾ ವ್ಯವಸ್ಥಾಪಕರು 9448217369 .
2 ಏಜಾಸ್ ಬಾನು ಪ್ರಭಾರ ತಾಲ್ಲೂಕು ಅಭಿವೃದ್ಧಿ ಅಧಿಕಾರಿ 9731798083 .

ಕಚೇರಿ ವಿಳಾಸ:

ಕರ್ನಾಟಕ ತಾಂಡ ಅಭಿವೃದ್ಧಿ ನಿಗಮ,

ರೇಸ್ ಕೋರ್ಸ್ ರಸ್ತೆ, ಹೊಸ ಬಡಾವಣೆ, ಮಡಿಕೇರಿ,

ಕೊಡಗು ಜಿಲ್ಲೆ-571201

ದೂರವಾಣಿ ಸಂಖ್ಯೆ: 08272-228857

ಈ-ಮೇಲ್ ವಿಳಾಸ: dmkodagu@gmail.com


2021-22 ನೇ ಸಾಲಿನಲ್ಲಿ ಅನುಷ್ಟಾನಗೊಳಿಸುವ ಯೋಜನೆಗಳು

ಸ್ವಯಂ ಉದ್ಯೋಗ ನೇರಸಾಲ ಯೋಜನೆ

ತರಕಾರಿ, ಹಣ್ಣು-ಹಂಪಲು, ಮೀನು ಮಾರಾಟ, ಕುರಿ/ಹಂದಿ/ಮೊಲ ಸಾಕಾಣಿಕೆ ಘಟಕಗಳನ್ನು ಸ್ಥಾಪಿಸಲು ಘಟಕ ವೆಚ್ಚ ರೂ. 50,000/- ಇದ್ದು, ರೂ. 25,000/- ಸಹಾಯಧನ ಹಾಗೂ ರೂ. 25,000/- ಅಂಚಿನಹಣ ಸಾಲವನ್ನು ಶೇ.೪ ರ ಬಡ್ಡಿ ದರದಲ್ಲಿ ನಿಗಮದಿಂದ ನೀಡಲಾಗುವುದು.

ಸ್ವಯಂ ಉದ್ಯೋಗ ಉದ್ಯಮಶೀಲತಾ (ಐ.ಎಸ್.ಬಿ) ಯೋಜನೆ :

ವಿವಿದ ಸ್ವಂತ ಉದ್ಯೋಗ ಪ್ರಾರಂಭಿಸಲು ರೂ. 1.00 ಲಕ್ಷ ಅಥವಾ ಮೇಲ್ಪಟ್ಟ ಘಟಕಗಳಿಗೆ ಶೇಕಡಾ 70 ರಷ್ಟು ಅಥವಾ ಗರಿಷ್ಟ ರೂ. 1.00 ಲಕ್ಷದವರೆಗೆ ಸಹಾಯಧನ ಮತ್ತು ಉಳಿದ ಮೊತ್ತವನ್ನು ಬ್ಯಾಂಕ್ ಸಾಲವಾಗಿ ಮಂಜೂರು ಮಾಡಲಾಗುತ್ತದೆ.

ಪ್ರವಾಸಿ ಟ್ಯಾಕ್ಸಿ ಹಾಗೂ ಸರಕು ಸಾಗಾಣಿಕೆ ವಾಹನ ಖರೀದಿ ಯೋಜನೆ :

ಪ್ರವಾಸಿ ಟ್ಯಾಕ್ಸಿ ಹಾಗೂ ಸರಕು ಸಾಗಾಣಿಕೆ ವಾಹನ ಒದಗಿಸಲಾಗುವುದು. ಇದಕ್ಕಾಗಿ 50% ರಿಂದ 60% ಅಥವಾ ಗರಿಷ್ಟ ರೂ.5.00 ಲಕ್ಷ ಸಹಾಯಧನ ನೀಡಲಾಗುವುದು. ಉಳಿದ ಮೊತ್ತವನ್ನು ಬ್ಯಾಂಕ್ ಅಥವಾ ಇತರೆ ಹಣಕಾಸು ಸಂಸ್ಥೆಗಳಿಂದ ಸಾಲವಾಗಿ ಮಂಜೂರು ಮಾಡಲಾಗುವುದು.

ಪ್ರೇರಣಾ (ಮೈಕ್ರೋ ಕ್ರೆಡಿಟ್) ಯೋಜನೆ :

ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸಮೂಹಿಕ ಉತ್ಪಾದನಾ/ಸೇವಾ ಘಟಕಗಳಿಗೆ ಆರ್ಥಿಕ ನೆರವು ನೀಡಲಾಗುವುದು. 10 ಸದಸ್ಯರ ಒಂದು ಗುಂಪಿಗೆ ರೂ. 2,50,000/- ಮಂಜೂರು ಮಾಡಲು ಅವಕಾಶವಿರುತ್ತದೆ. ಪ್ರತಿಯೊಬ್ಬ ಸದಸ್ಯರಿಗೆ ರೂ. 15,000/- ಸಹಾಯಧನ ರೂ.10,000/- ಬೀಜಧನಸಾಲ ಒಟ್ಟು ರೂ.25,000/- ಹಣವನ್ನು ಸಂಘದ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು.

ಸಫಾಯಿ ಕರ್ಮಚಾರಿ/ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ /ಪೌರಕಾರ್ಮಿಕರ ಮಕ್ಕಳಿಗೆ ಆನ್‌ಲೈನ್ ಪಾಠ ಕೇಳಲು ಹಾಗೂ ವಿಧ್ಯಾಭ್ಯಾಸದ ಅನುಕೂಲಕ್ಕಾಗಿ ಟ್ಯಾಬ್ ವಿತರಣಾ ಯೋಜನೆ:

ಸಫಾಯಿ ಕರ್ಮಚಾರಿ/ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಹಾಗೂ ಪೌರಕಾರ್ಮಿಕರ ಮಕ್ಕಳಿಗೆ ಆನ್‌ಲೈನ್ ಪಾಠ ಕೇಳಲು ಹಾಗೂ ಅವರ ವಿಧ್ಯಾಭ್ಯಾಸದ ಅನುಕೂಲಕ್ಕಾಗಿ ಟ್ಯಾಬ್‌ಗಳ ವಿತರಣೆ.

ಸಫಾಯಿ ಕರ್ಮಚಾರಿ/ ಪೌರಕಾರ್ಮಿಕರು ಹಾಗೂ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ಗಳ ನೊಂದಾಯಿತ ಸಂಘ ಸಂಸ್ಥೆಗಳಿಗೆ ಸಕ್ಕಿಂಗ್ & ಜಟ್ಟಿಂಗ್ ಯಂತ್ರಗಳನ್ನು ಖರೀದಿಸಲು ಶೇ.೭೫ ರಷ್ಟು ಸಹಾಯಧನ ನೀಡುವ ಯೋಜನೆ:

ಸಫಾಯಿ ಕರ್ಮಚಾರಿ/ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ /ಪೌರಕಾರ್ಮಿಕರ ನೊಂದಾಯಿತ ಸಂಘ ಸಂಸ್ಥೆಗಳಲ್ಲಿ ಸ್ವಚ್ಚತಾ ಕಾರ್ಯದಲ್ಲಿ ತೊಡಗಲು ಬಯಸುವ ಸಂಘ ಸಂಸ್ಥೆಗಳಿಗೆ ಸಕ್ಕಿಂಗ್ ಮತ್ತು ಜಟ್ಟಿಂಗ್ ಯಂತ್ರಗಳನ್ನು ಖರೀದಿಸಲು ನಿಗಮದಿಂದ ಶೇ.25 ರಷ್ಟು ಸಹಾಯಧನ ನೀಡಲಾಗುವುದು. ಹಾಗೂ ಬಾಕಿ ಶೇ.25 ರಷ್ಟು ಮೊತ್ತವನ್ನು ಸಂಘ-ಸಂಸ್ಥೆಗಳು ಸ್ವಂತ ನಿಧಿ ಅಥವಾ ಬ್ಯಾಂಕ್ ಸಾಲದ ಮೂಲಕ ಭರಿಸಬೇಕಾಗುವುದು.

ನಿಗಮದ ಯೋಜನೆಗಳ ಸೌಲಭ್ಯ ಪಡೆಯಲು ಇರಬೇಕಾದ ಸಾಮಾನ್ಯ ಅರ್ಹತೆಗಳು

  • ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು ಹಾಗೂ ಕಳೆದ 15 ವರ್ಷದಿಂದ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
  • ಅರ್ಜಿದಾರರು 18 ವರ್ಷದಿಂದ 60 ವರ್ಷದ ವಯೋಮಾನದವರಾಗಿರಬೇಕು.
  • ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ/ಇತರೆ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು.
  • ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು.
  • ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ರೂ.1,50,000/- ಗ್ರಾಮೀಣ ಹಾಗೂ ರೂ.2,00,000/- ನಗರ ಪ್ರದೇಶದವರಿಗೆ ಮಿತಿಯೊಳಗಿರಬೇಕು.
  • ವಿಕಲಚೇತನರು ಸೌಲಭ್ಯ ಪಡೆಯಲು ಸಂಬಂಧಪಟ್ಟವರಿಂದ ವಿಕಲಚೇತನರ ದೃಢೀಕರಣ ಪತ್ರವನ್ನು ನೀಡಬೇಕು.
  • ಜಿಲ್ಲೆಯಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಈಗಾಗಲೇ ನೊಂದಣೆ ಮಾಡಿಕೊಂಡ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಂಗವಿಕಲ ಫಲಾಪೇಕ್ಷಿಗಳಿಗೆ ನೇರವಾಗಿ ಜಿಲ್ಲಾ ವ್ಯವಸ್ಥಾಪಕರುಗಳ ಶಿಪಾರಸ್ಸಿನನ್ವಯ ಸೌಲಭ್ಯ ಕಲ್ಪಿಸಲಾಗುವುದು.
  • ವಾಹನಗಳಿಗೆ ಸೌಲಭ್ಯ ಪಡೆಯಲು ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.

ಅರ್ಜಿದಾರರು ಸೌಲಭ್ಯ ಪಡೆಯಲು ಸಲ್ಲಿಸಬೇಕಾದ ದಾಖಲಾತಿಗಳು:

  • ಅರ್ಜಿಯೊಂದಿಗೆ ಭಾವಚಿತ್ರ
  • ಪರಿಶಿಷ್ಟ ಜಾತಿಗೆ ಸೇರದ ಪ್ರಮಾಣ ಪತ್ರ
  • ಕುಟುಂಬದ ವಾರ್ಷಿಕ ಆದಾಯ ಪತ್ರ
  • ಕುಟುಂಬದ ಪಡಿತರ ಚೀಟಿ
  • ಮತದಾರರ ಗುರುತಿನ ಚೀಟಿ
  • ಆಧಾರ ಕಾರ್ಡ್
  • ವಾಹನವಾಗಿದ್ದಲ್ಲಿ, ವಾಹನ ಚಾಲನಾ ಪರವಾನಗಿ
  • ಸಫಾಯಿ ಕರ್ಮಚಾರಿ ದೃಢೀಕರಣ ಪತ್ರ