ಮುಚ್ಚಿ

ಅರಣ್ಯ ಆಧಾರಿತ ಆದಿವಾಸಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ, ಅರೆಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯ ಅಭಿವೃದ್ಧಿ ಕೋಶ

ಕ್ರ.ಸಂ ಹೆಸರು ಪದನಾಮ ಮೊಬೈಲ್ ಸಂಖ್ಯೆ ಕಚೇರಿ ವಿಳಾಸ ದೂರವಾಣಿ ಸಂಖ್ಯೆ ಈ-ಮೇಲ್ ವಿಳಾಸ ಭಾವ ಚಿತ್ರ
1 ಚಂದ್ರಶೇಖರ್ ಎನ್.ಬಿ ಜಿಲ್ಲಾ ವ್ಯವಸ್ಥಾಪಕರು 9448217369 ಅರಣ್ಯ ಆಧಾರಿತ ಆದಿವಾಸಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ, ಅರೆಅಲೆಮಾರಿ, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಸಮುದಾಯ ಅಭಿವೃದ್ಧಿ ಕೋಶ, ರೇಸ್ ಕೋರ್ಸ್ ರಸ್ತೆ, ಹೊಸ ಬಡಾವಣೆ, ಮಡಿಕೇರಿ, ಕೊಡಗು ಜಿಲ್ಲೆ-571201 08272-228857 dmkmvstdc.kodagu@gmail.com V1

2021-22 ನೇ ಸಾಲಿನಲ್ಲಿ ಅನುಷ್ಟಾನಗೊಳಿಸುವ ಯೋಜನೆಗಳು

ಪರಿಶಿಷ್ಟ ಪಂಗಡದ ಅಲೆಮಾರಿ/ ಅರೆ ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯದವರು ಒಂದೇ ಕಡೆ ನೆಲೆನಿಲ್ಲದೆ ಜೀವನೋಪಾಯಗಳಿಗೆ ಅಲೆದಾಡುತ್ತಿರುವ ಸಮುದಾಯಗಳಾಗಿರುತ್ತವೆ. ಸದರಿ ಜನಾಂಗದವರನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡುವ ಉದ್ದೇಶದಿಂದ ಆರ್ಥಿಕ ಅಭಿವೃದ್ದಿ ಚಟುವಟಿಕೆಗಳನ್ನು ಕೈಗೊಳ್ಳಲು ವಿವಿಧ ಯೋಜನೆಗಳಡು ಸಾಲ ಸೌಲಭ್ಯ ಒದಗಿಸುವುದೆ ಕೋಶದ ಧ್ಯೇಯೋದ್ದೇಶ.

ಈ ಕೆಳಕಂಡ ಉಪಜಾತಿಗಳ ಜನಾಂಗದವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ಚೆಂಚು, ಚೆಂಚುವಾರ್, ಗೌಡಲು, ಹಕ್ಕಿಪಿಕ್ಕಿ, ಪರ್ದಿ, ಆದಿಚಿಂಚರ್, ಪನ್ಸೆ ಪರ್ದಿ, ಹರನ್ಶಿಕಾರಿ, ಹಸಲರು, ಇರುಳಿಗೆ, ಕತೋಡಿ, ಕಟ್ಕಾರಿ, ದೋರ್ ಕತೋಡಿ, ದೋರ್ ಕಟ್ಕಾಡಿ, ಸನ್ಕತೋಡ್, ಸನ್ ಕಟ್ಕಾರಿ, ಕುಡಿಯಮ ಮಲೆಕುಡಿಯ, ಪನಿಯನ್, ರಾಜ್ಗೊಂಡ, ದುಬ್ಲ, ತಲವಿಯ, ಹಲ್ಪಟಿ, ಗಮಿತ್, ಗಮ್ತ, ಗವಿತ್, ಮವಚಿ, ಪದ್ವಿ, ಕಮ್ಮಾರ, ಕೊಂಡ ಕೋಪಸ್, ಕೊಯಾ, ಬಿನೆಕೋಯಾ, ರಾಜ್ಕೊಯಾ, ಕುರುಬ(ಕೊಡಗು ಜಿಲ್ಲೆ), ಮೇದಾರ್, ಮೇದಾರಿ, ಮೇದ, ಗೌರಿಗ, ಬುರುಡ, ಯರವ, ಬವಾಚ, ಬಮ್ಚ, ಬಿಲ್, ಬಿಲ್ ಗರಾಸಿಯಾ, ದೋಳಿ ಬಿಲ್, ದುಂಗ್ರಿ ಬಿಲ್, ದುಂಗ್ರಿ ಗರಾಸಿಯಾ, ಮೆವಾಸಿ ಬಿಲ್, ರಾವಲ್ ಬಿಲ್, ತದ್ವಿ ಬಿಲ್ಲ, ಬಾಗಾಲಿಯಾ, ಬಿಲಾಲ, ಪ್ವಾರ, ವಸವ, ವಸವೆ, ಆದಿಯಾನ್, ಬರ್ಡ.

ಸ್ವಯಂ ಉದ್ಯೋಗ ನೇರಸಾಲ ಯೋಜನೆ:

ತರಕಾರಿ, ಹಣ್ಣು-ಹಂಪಲು, ಮೀನು ಮಾರಾಟ, ಕುರಿ/ಹಂದಿ/ಮೊಲ ಸಾಕಾಣಿಕೆ ಘಟಕಗಳನ್ನು ಸ್ಥಾಪಿಸಲು ಘಟಕ ವೆಚ್ಚ ರೂ. 50,000/- ಇದ್ದು, ರೂ. 25000/- ಸಹಾಯಧನ ಹಾಗೂ ರೂ. 25000/- ಅಂಚಿನಹಣ ಸಾಲವನ್ನು ಶೇ.4 ರ ಬಡ್ಡಿ ದರದಲ್ಲಿ ನಿಗಮದಿಂದ ನೀಡಲಾಗುವುದು.


ಉದ್ಯಮ ಶೀಲತಾ ಯೋಜನೆ -ಐ.ಎಸ್.ಬಿ (ಬ್ಯಾಂಕುಗಳ ಸಹಯೋಗದಿಂದ) :

ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆಯಡಿ ಪರಿಶಿಷ್ಟ ಪಂಗಡದ ನಿರುದ್ಯೋಗ ಯುವಕ/ ಯುವತಿಯರಿಗೆ ಸಣ್ಣ ಕೈಗಾರಿಕೆ, ಸೇವಾ ಕ್ಷೇತ್ರ ಮತ್ತು ವ್ಯಾಪಾರಿ ಕ್ಷೇತ್ರಗಳಲ್ಲಿ ಸ್ವಯಂ ಉದ್ಯೋಗ ಘಟಕಗಳನ್ನು ಆರಂಭಿಸಲು ನಿಗಮದಿಂದ ಸಹಾಯಧನ ಮತ್ತು ಬ್ಯಾಂಕಿನ ಸಾಲದೊಂದಿಗೆ ಯೋಜನೆಯನ್ನು ಅನುಷ್ಟಾನ ಮಾಡಲಾಗುತ್ತಿದೆ.

  • ವಾಹನ ಅಲ್ಲದ ಇತರೇ ಉದ್ದೇಶಗಳಿಗೆ:
  • ಘಟಕ ವೆಚ್ಚ ಶೇ.50 ರಷ್ಟು ಅಥವಾ ಗರಿಷ್ಟ ರೂ.2.00 ಲಕ್ಷ ಸಹಾಯಧನ, ಉಳಿದ ಭಾಗ ಬ್ಯಾಂಕ್ ಸಾಲವಾಗಿರುತ್ತದೆ.

  • ಸರಕು ಸಾಗಾಣೆ ವಾಹನ ಉದ್ದೇಶಕ್ಕೆ
  • ಘಟಕ ವೆಚ್ಚದ ಶೇ.50 ರಷ್ಟು ಅಥವಾ ಗರಿಷ್ಟ ರೂ.3.50 ಲಕ್ಷಗಳ ಸಹಾಯಧನ ಉಳಿದ ಭಾಗ ಬ್ಯಾಂಕ್ ಸಾಲವಾಗಿರುತ್ತದೆ.


ಮೈಕ್ರೊ ಕ್ರೆಡಿಟ್ (ಪ್ರೇರಣಾ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ) ಯೋಜನೆ:

ಮಹಿಳೆಯರಲ್ಲಿ ಗುಂಪು ಚಟುವಟಿಕೆಗಳಿಗೆ ಉತ್ತೇಜನ ನೀಡಲು ಮಹಿಳಾ ಸ್ವಸಹಾಯ ಸಂಘಗಳಿಗೆ ಆದಾಯಗಳಿಸುವ ಉತ್ಪಾದನ/ಸೇವಾ ಘಟಕಗಳನ್ನು ಆರಂಬಿಸಲು ಒಂದು ಗುಂಪಿಗೆ ಕನಿಷ್ಟ ರೂ.2.50 ಲಕ್ಷ ಸಹಾಯಧನ/ಸಾಲ ಸೌಲಭ್ಯ ನೀಡಲಾಗುವುದು.

ಎಲ್ಲಾ ನಿಗಮಗಳಿಂದ ಯೋಜನೆಗಳ ಸೌಲಭ್ಯ ಪಡೆಯಲು ಇರಬೇಕಾದ ಸಾಮಾನ್ಯ ಅರ್ಹತೆಗಳು:

  • ಅರ್ಜಿದಾರರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿರಬೇಕು ಹಾಗೂ ಕಳೆದ 15 ವರ್ಷದಿಂದ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು
  • ಅರ್ಜಿದಾರರು 18 ವಷðದಿಂದ 60 ವರ್ಷದ ವಯೋಮಾನದವರಾಗಿರಬೇಕು.
  • ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ/ಇತರೆ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು.
  • ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು.
  • ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ರೂ.1,500,000/- ಗ್ರಾಮೀಣ ಹಾಗೂ ರೂ.2,00,000/- ನಗರ ಪ್ರದೇಶದವರಿಗೆ ಮಿತಿಯೊಳಗಿರಬೇಕು.
  • ವಿಕಲಚೇತನರು ಸೌಲಭ್ಯ ಪಡೆಯಲು ಸಂಬಂಧಪಟ್ಟವರಿಂದ ವಿಕಲಚೇತನರ ದೃಡೀಕರಣ ಪತ್ರವನ್ನು ನೀಡಬೇಕು.
  • ಜಿಲ್ಲೆಯಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಈಗಾಗಲೇ ನೊಂದಣೆ ಮಾಡಿಕೊಂಡ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಂಗವಿಕಲ ಫಲಾಪೇಕ್ಷಿಗಳಿಗೆ ನೇರವಾಗಿ ಜಿಲ್ಲಾ ವ್ಯವಸ್ಥಾಪಕರುಗಳ ಶಿಪಾರಸ್ಸಿನನ್ವಯ ಸೌಲಭ್ಯ ಕಲ್ಪಿಸಲಾಗುವುದು.
  • ಭೂ ಒಡೆತನ ಯೋಜನೆಯಡಿ ಸೌಲಭ್ಯ ಪಡೆಯಲು ಫಲಾಪೇಕ್ಷಿಯು ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಾಗಿರಬೇಕು ಮತ್ತು ಅವರ ಪತಿ ಅಥವಾ ಕುಟುಂಬದ ಸದಸ್ಯರ ಹೆಸರಿನಲ್ಲಿ ಕೃಷಿ ಜಮೀನಿರಬಾರದು. ಜಮೀನು ಮಾರಾಟ ಮಾಡುವ ಭೂಮಾಲೀಕರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರಬಾರದು.
  • ಗಂಗಾ ಕಲ್ಯಾಣ ಯೋಜನೆಯಡಿ ಸೌಲಭ್ಯ ಪಡೆಯಲು ಫಲಾಪೇಕ್ಷಿಯು ಸಣ್ಣ ಮತ್ತು ಅತಿಸಣ್ಣ ರೈತರಾಗಿರಬೇಕು.
  • ವಾಹನಗಳಿಗೆ ಸೌಲಭ್ಯ ಪಡೆಯಲು ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.

ಅರ್ಜಿದಾರರು ಸೌಲಭ್ಯ ಪಡೆಯಲು ಸಲ್ಲಿಸಬೇಕಾದ ದಾಖಲಾತಿಗಳು:

  • ಅರ್ಜಿಯೊಂದಿಗೆ ಭಾವಚಿತ್ರ.
  • ಪರಿಶಿಷ್ಟ ಜಾತಿ/ಪಂಗಡದ ಪ್ರಮಾಣ ಪತ್ರ.
  • ಕುಟುಂಬದ ವಾರ್ಷಿಕ ಆದಾಯ ಪತ್ರ.
  • ಕುಟುಂಬದ ಪಡಿತರ ಚೀಟಿ.
  • ಮತದಾರರ ಗುರುತಿನ ಚೀಟಿ.
  • ಆಧಾರ ಕಾರ್ಡ್.
  • ವಾಹನವಾಗಿದ್ದಲ್ಲಿ, ವಾಹನ ಚಾಲನಾ ಪರವಾನಗಿ.
  • ಪಹಣಿ/ ಆರ್ಟಿಸಿ (ಗಂಗಾಕಲ್ಯಾಣ ಯೋಜನೆ).
  • ಸಣ್ಣ ಅತಿಸಣ್ಣ ರೈತರ ಪ್ರಮಾಣ ಪತ್ರ (ಗಂಗಾಕಲ್ಯಾಣ ಯೋಜನೆ).
  • ವಂಶವೃಕ್ಷ (ಗಂಗಾಕಲ್ಯಾಣ ಯೋಜನೆ).
  • ಭೂರಹಿತ ಕೃಷಿ ಕಾರ್ಮಿಕರ ಪ್ರಮಾಣ ಪತ್ರ (ಭೂ ಒಡೆತನ ಯೋಜನೆ).