ಮುಚ್ಚಿ

ಮೀನುಗಾರಿಕೆ ಇಲಾಖೆ,ಕೊಡಗು ಜಿಲ್ಲೆ

ಕೊಡಗು ಜಿಲ್ಲೆಯ ಒಟ್ಟು 2500 ಹೆಕ್ಟರ್ ಪ್ರದೇಶದಲ್ಲಿ ಮೀನುಗಾರಿಕೆ ಕೈಗೊಳ್ಳಲಾಗುತ್ತಿದೆ. ರಾಜ್ಯದ ಇತರೆ ಜಿಲ್ಲೆಗಳಿಗಿಂತ ವಿಭಿನ್ನ ಹಾಗೂ ಇತರೆ ಜಿಲ್ಲೆಗಳಲ್ಲಿ ಸಾರ್ವಜನಿಕ ಸಂಪನ್ಮೂಲಗಳಲ್ಲಿ ಹೆಚ್ಚಾಗಿ ಮೀನು ಕೃಷಿ ಕೈಗೊಂಡರೆ ಕೊಡಗಿನಲ್ಲಿ ರೈತರ ಸ್ವಂತ ಕೆರೆಗಳಲ್ಲಿ ಮೀನು ಕೃಷಿ ಕೈಗೊಳ್ಳಲಾಗುತ್ತಿದೆ. ಅಂದಾಜು 480ಹೆಕ್ಟೇರ್ ಗಿಂತಲೂ ಹೆಚ್ಚಿನ ಪ್ರದೇಶದಲ್ಲಿ 3000 ಕ್ಕೂ ಹೆಚ್ಚು ರೈತರು ಮೀನು ಕೃಷಿ ಕೈಗೊಳ್ಳುತ್ತಿದ್ದಾರೆ. ಜಿಲ್ಲೆಯ ಎರಡು ಜಲಾಶಯಗಳಾದ ಹಾರಂಗಿ (1886 ಹೆ) ಹಾಗೂ ಚಿ್ಕ್ಲಿಹೊಳೆ (105 ಹೆ) ಮೀನು ಪಾಶುವಾರು ಹಕ್ಕನ್ನು ವಿಲೇವಾರಿ ಮಾಡಲಾಗಿದೆ.

2021-22 ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 70ಲಕ್ಷ ಮೀನು ಮರಿಗಳ ಬಿತ್ತನೆಗೆ ಗುರಿ ಹೊಂದಲಾಗಿದ್ದು, ಫೆಬ್ರವರಿ-22 ಅಂತ್ಯದವರೆಗೆ 53.45ಲಕ್ಷ ಮೀನುಮರಿಗಳನ್ನು ಅಂದಾಜು 1500 ಮೀನು ಕೃಷಿಕರಿಗೆ ವಿತರಣೆ ಮಾಡಲಾಗಿದೆ.

ಅಳಿವಿನ ಅಂಚಿನಲ್ಲಿದ್ದ ಮಹಶೀರ್ ಮೀನುಮರಿಗಳ ರಾಜ್ಯದ ಏಕೈಕ ಉತ್ಪಾದನಾ ಕೇಂದ್ರ ಹಾರಂಗಿ ಯಲ್ಲಿದ್ದು, ಅನೇಕ ವರ್ಷಗಳಿಂದ ಕೇಂದ್ರದಲ್ಲಿ ಉತ್ಪಾದನೆ ಮಾಡಲಾದ ಮಹಶೀರ್ ಮರಿಗಳನ್ನು ನದಿ ಭಾಗಗಳಲ್ಲಿ ಬಿತ್ತನೆ ಮಾಡಲಾಗುತ್ತಿದೆ. ಈ ಕೇಂದ್ರದಲ್ಲಿ ಫೆಬ್ರವರಿ-22 ರ ಅಂತ್ಯದವರೆಗೆ 25000 ಸಾವಿರ ಮಹಶೀರ್ ಮೀನು ಮರಿಗಳ ಉತ್ಪಾದನೆಯಾಗಿದೆ. ನೆರೆಯ ರಾಜ್ಯಗಳಿಗೂ ಈ ಕೇಂದ್ರದಿಂದ ಮರಿಗಳನ್ನು ಸರಬರಾಜು ಮಾಡಲಾಗುತ್ತಿದೆ ಹಾಗೂ ಮೀನುಗಾರಿಕೆ ಇಲಾಖೆಯ ಸತತ ಪ್ರಯತ್ನದಿಂದಾಗಿ ಇಂಟರ್ನ್ಯಾಷನಲ್ ಯೂನಿಯನ್ ಕನ್ಸವೇಷನ್ ನೆಚರ್ ( IUCN) ಸಂಸ್ಥೆಯು ಈಗ ಟಾರ್ ಕುದ್ರಿ ಮಹಶೀರ್ ತಳಿಯನ್ನು ಅಳಿವಿನ ಅಂಚಿನಲ್ಲಿ ಇದ್ದ ಸ್ಥಾನದಿಂದ “SPECIES OF LEAST CONCERN” ಸ್ಥಾನಕ್ಕೆ ವರ್ಗಾಯಿಸಿರುವುದು ಹೆಮ್ಮೆಯ ವಿಚಾರ.

ಕೊಡಗು ಜಿ್ಲ್ಲೆ ಮೀನುಗಾರಿಕೆ ಇಲಾಖೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಕಛೇರಿ ವಿಳಾಸ ಮತ್ತು ದೂರವಾಣಿ ಸಂಖ್ಯೆ

ಕ್ರಮ ಸಂಖ್ಯೆ ವಿಳಾಸ ಸಂಪರ್ಕ ಸಂಖ್ಯೆ ಇಮೇಲ್ ವಿಳಾಸ
1 ಮೀನುಗಾರಿಕೆ ಉಪ ನಿರ್ದೇಶಕರು
ಐ.ಟಿ.ಐ ಜಂಕ್ಷನ್ ಹತ್ತಿರ ,
ಕಾಲೇಜು ರಸ್ತೆ ಮಡಿಕೇರಿ- 571201
9483110539 Adf1mdk.kodagu@gmail.com
2 ಮೀನುಗಾರಿಕೆ ಸಹಾಯಕ ನಿರ್ದೇಶಕರು
ಐ.ಟಿ.ಐ ಜಂಕ್ಷನ್ ಹತ್ತಿರ ,
ಕಾಲೇಜು ರಸ್ತೆ ಮಡಿಕೇರಿ- 571201
8904809219 adf2.mdk@gmail.com
3 ಮೀನುಗಾರಿಕೆ ಸಹಾಯಕ ನಿರ್ದೇಶಕರು
ನಿಸರ್ಗ ಬಡವಣೆ ನಾಯ್ಯಲಯ ಹತ್ತಿರ ,
ಪೊನ್ನಂಪೇಟೆ-571206
9980674821 adfppet3@gmail.com
4 ಮೀನುಗಾರಿಕೆ ಸಹಾಯಕ ನರ‍್ದೇಶಕರು ಕಲ್ಕಂದೂರು ಕಲ್ಕಂದೂರು ಹನಗಲ್ ಅಂಚೆ ಸೋಮವಾರಪೇಟೆ-571236 9886717626 harangifisheries@gmail.com
5 ಮೀನುಗಾರಿಕೆ ಸಹಾಯಕ ನಿರ್ದೇಶಕರು –
ಮೀನುಮರಿ ಉತ್ಪಾದನಾ /ಪಾಲನಾ ಕೇಂದ್ರ ಹುಲ್ಲುಗುಂದ ಹಾರಂಗಿ ಕುಶಾಲನಗರ-571234
9886717626 harangifisheries@gmail.com

ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಇಲಾಖೆಯ ಉಚ್ಚಿತ ಸಹಾಯವಾಣಿ 24/7 ಅಥವಾ 8277200300