ಕೊಡಗು ಜಿಲ್ಲೆಯ ಮಡಿಕೇರಿ ಅಥವಾ ಮರ್ಕರ ಎಂದು ಕರೆಯಲಾಗುವ ಈ ಆಕರ್ಷಕ ಪಟ್ಟಣವು ಪಶ್ಚಿಮ ಘಟಗಳಲ್ಲಿ ನೆಲೆಸಿದೆ. ಈ ಪಟ್ಟಣವು ಸದಾ ಹಸಿರಾಗಿರುವ ಬೆಟ್ಟಗಳಿಂದ ಆವೃತವಾಗಿದೆ. ಇಲ್ಲಿ ಕಾಫಿಯ ಪರಿಮಳ, ಪಕ್ಷಿಗಳ ಕಲರವಗಳಿಂದ ಕೊಡಿರುತ್ತವೆ. ಇದು ವರ್ಣ ರಂಜಿತ ಕೊಡವರ ಭೂಮಿಯಾಗಿದೆ. ಕೊಡವರ ಉಡುಪು ಹಾಗೂ ಆಹಾರ ಪದ್ಧತಿಗಳು ವಿಶಿಷ್ಠವಾಗಿರುತ್ತದೆ. ರಾಜಧಾನಿಯಾದ ಮಡಿಕೇರಿಯನ್ನು ಮೊದಲು ಮುದ್ದರಾಜೇರಿ ಎಂದು ಕರೆಯಾಲಾಗುತ್ತಿತ್ತು. ಸಮುದ್ರ ಮಟ್ಟದಿಂದ 1170ಮೀ ಎತ್ತರದಲ್ಲಿ ಇದ್ದು ಹಚ್ಚ ಹಸಿರಿನಿಂದ ಮಡಿಕೇರಿಗೆ ಆಹ್ಲಾದಕರ ವಾತವರಣ ಇರುತ್ತದೆ. ಇದನ್ನು ‘ಭಾರತದ ಸ್ಕಾಟ್ಲೆಂಡ್ ‘ ಎಂದು ಕರೆಯುತ್ತಾರೆ. ಶ್ರೀಮಂತವಾದ ಪ್ರಕೃತಿ ಸೌಂದರ್ಯ ಹೊಂದಿದ್ದು, ಪ್ರವಾಸಿಗರ ಸ್ವರ್ಗವಾಗಿದೆ.
ಡೌನ್‌ಲೋಡ್‌ಗಾಗಿ PDF ಫೈಲ್