ಮುಚ್ಚಿ

ನಲ್ಕ್ನಾಡ್ ಅರಮನೆ

ನಿರ್ದೇಶನ

ಟಿಪ್ಪು ಸುಲ್ತಾನನ ಸೈನ್ಯದಿಂದ ತಪ್ಪಿಸಿಕೊಂಡ ನಂತರ ಹಾಲೇರಿ ರಾಜನು ನಲ್ಕ್ನಾಡ್ ಪ್ರದೇಶದಲ್ಲಿ ಯುವಕರ ಸೈನ್ಯದೊಂದಿಗೆ 1792ರಿಂದ 1794ರ ನಡುವೆ ಈ ಅರಮನೆಯನ್ನು ನಿರ್ಮಿಸಿದರು. ಈ ಅರಮನೆಯು ಅದರದೇ ಆದ ವರ್ಣಚಿತ್ರ ಹಾಗೂ ಕೆತ್ತನೆಗಳಿಗೆ ಹೆಸರುವಾಸಿಯಾಗಿದೆ. ಇದೇ ಅರಮನೆಯಲ್ಲಿ ದೊಡ್ಡ ರಾಜೇಂದ್ರ ಒಡೆಯರ್ 1796ರಲ್ಲಿ ಮಹಾದೇವ ಮಾಜಿಯನ್ನು ವರಿಸಿದರು. ಹಳರಿ ಕುಟುಂಬದ ಕೊನೆಯ ಚಕ್ರವರ್ತಿ ಚಿಕ್ಕ ವೀರರಾಜೇಂದ್ರ ಈ ಅರಮನೆಯ ಕೊನೆಯ ರಾಜರಾಗಿದ್ದರು. ಈಗ ಈ ಅರಮನೆ ಅರ್ಕಿಯೋಲಾಜಿ ವಿಭಾಗಕ್ಕೆ ಸೇರಿದೆ.

ಫೋಟೋ ಗ್ಯಾಲರಿ

  • ನಲ್ಕ್ನಾಡ್ ಅರಮನೆ
    ನಲ್ಕ್ನಾಡ್ ಅರಮನೆ

ತಲುಪುವ ಬಗೆ :

ವಿಮಾನದಲ್ಲಿ

ಕೊಡಗು ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ಇರುವುದಿಲ್ಲ.ಕೊಡಗುಯಿಂದ 137 ಕಿ.ಮೀ ದೂರದಲ್ಲಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಹತ್ತಿರದ ವಿಮಾನ ನಿಲ್ದಾಣವಾಗಿದೆ. ಮೈಸೂರು ದೇಶೀಯ ವಿಮಾನ ನಿಲ್ದಾಣವು ಮಡಿಕೇರಿನಿಂದ ಸುಮಾರು 121 ಕಿ.ಮೀ ದೂರದಲ್ಲಿದೆ. ಕನ್ನೂರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಡಿಕೇರಿನಿಂದ 120 ಕಿ.ಮೀ ದೂರದಲ್ಲಿದೆ.

ರೈಲಿನಿಂದ

ಕೊಡಗು ಜಿಲ್ಲೆಯಲ್ಲಿ ರೈಲ್ವೆ ನಿಲ್ದಾಣ ಇರುವುದಿಲ್ಲ. ಮಡಿಕೇರಿ ಹತ್ತಿರದ ರೈಲು ನಿಲ್ದಾಣವೆಂದರೆ (ಜಿಲ್ಲೆಯ ಪ್ರಧಾನ ಕಛೇರಿ, ಮಡಿಕೇರಿ), ಮೈಸೂರು ಹಾಸನ ಮತ್ತು ಕರ್ನಾಟಕ ರಾಜ್ಯದ ಮಂಗಳೂರು ಮತ್ತು ಕೇರಳ ರಾಜ್ಯದ ತಲಸ್ಸೆರಿ ಮತ್ತು ಕಣ್ಣೂರು

ರಸ್ತೆ ಮೂಲಕ

ಮಡಿಕೇರಿಯಿಂದ 41ಕಿಮೀ