ಮುಚ್ಚಿ

ಕಾರ್ಮಿಕ ಇಲಾಖೆ

ಕಾವೇರಿ ಟಿ

ಕಾರ್ಮಿಕ ಅಧಿಕಾರಿ

ಕೊಡಗು ಉಪ ವಿಭಾಗ, ಮಡಿಕೇರಿ.

ಮೊಬೈಲ್ ಸಂಖ್ಯೆ: 8660347185

ಪರಿಚಯ:-

ಜಿಲ್ಲೆಯಲ್ಲಿ ಕಾರ್ಮಿಕ ಅಧಿಕಾರಿ ಕಛೇರಿಯು 1954ರಲ್ಲಿ ಅಸ್ತಿತ್ವಕ್ಕೆ ಬಂದಿರುತ್ತದೆ. ಕಾರ್ಮಿಕ ಇಲಾಖೆಯ ಕಾರ್ಯ ಚಟುವಟಿಕೆಗಳಲ್ಲಿ ಮಹತ್ತರ ಬದಲಾವಣೆಯಾಗಿದೆ. ಕಾರ್ಮಿಕರ ಶ್ರೇಯೋಭಿವೃದ್ಧಿ ಹಾಗೂ ಕೈಗಾರಿಕೆಗಳ ಅಭಿವೃದ್ಧಿ ದೃಷ್ಟಿಯಿಂದ ವೈವಿದ್ಯಮಯವಾದ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಂಡು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇಲಾಖೆಯಲ್ಲಿ ಒಟ್ಟು 23 ಕಾರ್ಮಿಕ ಕಾಯ್ದೆಗಳ ಅನುಷ್ಠಾನಗೊಳಿಸುವುದು, ಕೈಗಾರಿಕಾ ವಿವಾದಗಳನ್ನು ಸೌಹಾರ್ದಯುತವಾಗಿ ಹಾಗೂ ತ್ರಿಪಕ್ಷೀಯವಾಗಿ ಬಗೆಹರಿಸುವುದು, ಇಲಾಖೆಯ ಪ್ರಮುಖ ಧ್ಯೇಯವಾಗಿದೆ.

ಇಲಾಖೆಯು ಪ್ರಸ್ತುತ ಬಹುಸಂಖ್ಯಾತ ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಹೆಚ್ಚು ಒತ್ತು ನೀಡಿದ್ದು, ಅಸಂಘಟಿತ ಕಾರ್ಮಿಕರು ಸೇರಿದಂತೆ, ಎಲ್ಲಾ ವರ್ಗಗಳ ಕಾರ್ಮಿಕರ ಸರ್ವತೋಮುಖ ಅಭಿವೃದ್ಧಿಗಾಗಿ ಹಲವಾರು ಸಾಮಾಜಿಕ ಹಾಗೂ ಆರ್ಥಿಕ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿರುತ್ತದೆ. ಉದಾಹರಣೆಗೆ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಜಾರಿಗೆ ತಂದಿರುವ ಕಲ್ಯಾಣ ಯೋಜನೆಗಳಡಿ ಲಭ್ಯವಿರುವ ಸೌಲಭ್ಯಗಳು, ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಜಾರಿಗೆ ತಂದಿರುವ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆ, ಪ್ರಮುಖವಾಗಿವೆ. ಇಲಾಖೆಯ ಕಾರ್ಯಚಟುವಟಿಕೆಗಳು ಹಾಗೂ ಯೋಜನೆಗಳ ಬಗ್ಗೆ ಸಂಬಂಧಿಸಿದ ಕಾರ್ಮಿಕರು, ಮಾಲೀಕರು ಹಾಗೂ ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ನಿಟ್ಟಿನಲ್ಲಿ ಹಲವಾರು ಕಾನೂನು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ ಹಾಗೂ ಹಮ್ಮಿಕೊಳ್ಳುತ್ತಿದೆ.

ಇಲಾಖೆಯ ರಚನೆ

L1

ಕ್ರ.ಸಂ ಮಂಡಳಿಯ/ಸಂಸ್ಥೆಯ ಹೆಸರು ವೆಬ್ಸೈಟ್
1 ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ https://karbwwb.karnataka.gov.in
2 ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ https://ksuwssb.karnataka.gov.in
3 ಕರ್ನಾಟಕ ಕಾರ್ಮಿಕ ಕಲ್ಯಾಣ ಮಂಡಳಿ https://www.klwb.karnataka.gov.in

ಕಾರ್ಮಿಕ ಇಲಾಖೆಯು ಅನುಷ್ಟಾನಗೊಳಿಸುತ್ತಿರುವ 23 ಕಾಯ್ದೆಗಳು

  • 1ಕರ್ನಾಟಕ ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, 1961 (ಕರ್ನಾಟಕ ಕಾಯ್ದೆ 1962)
  • 2ಬೀಡಿ ಮತ್ತು ಸಿಗಾರ್ ಕೆಲಸಗಾರರ (ಔದ್ಯೋಗಿಕ ಷರತ್ತು) ಕಾಯ್ದೆ 1966.
  • ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986.
  • ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ರದ್ದತಿ ) ಕಾಯ್ದೆ, 1970.
  • ಸಮಾನ ವೇತನ ಕಾಯ್ದೆ, 1976.
  • ಕೈಗಾರಿಕಾ ವಿವಾದಗಳ ಕಾಯ್ದೆ, 1947.
  • ಕೈಗಾರಿಕಾ ಉದ್ಯೋಗ (ಸ್ಥಾಯೀ ಆದೇಶಗಳು) ಕಾಯ್ದೆ, 1946.
  • ಅಂತರ ರಾಜ್ಯ ವಲಸೆ ಕಾರ್ಮಿಕರ (ಉದ್ಯೋಗ ನಿಯಂತ್ರಣ ಮತ್ತು ಸೇವಾ ಷರತ್ತು) ಕಾಯ್ದೆ, 1979.
  • ಕರ್ನಾಟಕ ಕೈಗಾರಿಕಾ ಸಂಸ್ಥೆಗಳ (ರಾಷ್ಟ್ರೀಯ ಮತ್ತು ಹಬ್ಬಗಳ ರಜೆ) ಕಾಯ್ದೆ, 1963.
  • ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ಕಾಯ್ದೆ, 1965.
  • ಕರ್ನಾಟಕ ಜೀವನ ನಿರ್ವಹಣಾ ಭತ್ಯೆ ಕಾಯ್ದೆ, 1988.
  • ಹೆರಿಗೆ ಸೌಲಭ್ಯ ಕಾಯ್ದೆ, 1961.
  • ಕನಿಷ್ಟವೇತನ ಕಾಯ್ದೆ, 1948.
  • ಮೋಟಾರು ಸಾರಿಗೆ ನೌಕರರ ಕಾಯ್ದೆ, 1961.
  • ಬೋನಸ್ ಪಾವತಿ ಕಾಯ್ದೆ, 1965.
  • ಉಪಧನ ಪಾವತಿ ಕಾಯ್ದೆ, 1972.
  • ವೇತನ ಪಾವತಿ ಕಾಯ್ದೆ, 1936.
  • ತೋಟ ಕಾರ್ಮಿಕ ಕಾಯ್ದೆ, 1951.
  • ಮಾರಾಟ ಉತ್ತೇಜನ ನೌಕರರ (ಉದ್ಯೋಗದ ಷರತ್ತುಗಳ) ಕಾಯ್ದೆ, 1976.
  • ಕಾರ್ಯನಿರತ ಪತ್ರಕರ್ತರ ಮತ್ತು ಇತರೆ ವಾರ್ತಾ ಪತ್ರಿಕೆ ಕಾರ್ಮಿಕರ (ಉದ್ಯೋಗದ ಷರತ್ತುಗಳು) ಮತ್ತು ಇತರೆ ಉಪಬಂಧಗಳ ಕಾಯ್ದೆ, 1955.
  • ಕಾರ್ಮಿಕ ಸಂಘಗಳ ಕಾಯ್ದೆ, 1926.
  • ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ (ಉದ್ಯೋಗ ನಿಯಂತ್ರಣ ಮತ್ತು ಸೇವಾ ಷರತ್ತು) ಕಾಯ್ದೆ, 1996.
  • ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸುಂಕ ಕಾಯ್ದೆ 1996 ಹಾಗೂ ನಿಯಮಗಳು 1998.

ಕಾರ್ಮಿಕ ಇಲಾಖೆಯ ಸಕಾಲ ಸೇವೆಗಳು.

ಕ್ರಮ ಸಂಖ್ಯೆ ಸೇವೆಗಳ ಹೆಸರು ಸೇವೆಯನ್ನು ಪಡೆಯಲು ನಿಗದಿ ಪಡಿಸಿದ ಕಾಲಮಿತಿ
1 ಗುತ್ತಿಗೆ ಕಾರ್ಮಿಕರ (ನಿಯಂತ್ರಣ ಮತ್ತು ನಿಷೇಧ) ಅಧಿನಿಯಮ 1970ರಡಿಯಲ್ಲಿ ಪ್ರಧಾನ ನಿಯೋಜಕರ ನೋಂದಣಿ 10 Days
2 ಗುತ್ತಿಗೆ ಕಾರ್ಮಿಕರ (ನಿಯಂತ್ರಣ ಮತ್ತು ನಿಷೇಧ) ಅಧಿನಿಯಮ 1970ರಡಿಯಲ್ಲಿ ಗುತ್ತಿಗೆ ದಾರರಿಗೆ ಲೈಸೆನ್ಸ್ 10 Days
3 ಗುತ್ತಿಗೆ ಕಾರ್ಮಿಕ (ನಿಯಂತ್ರಣ ಮತ್ತು ನಿಷೇಧ) ಅಧಿನಿಯಮ 1971ರಡಿಯಲ್ಲಿ ಗುತ್ತಿಗೆ ದಾರರಿಗೆ ಲೈಸೆನ್ಸ್ ನವೀಕರಣ 10 Days
4 ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆಗಳ ಅಧಿನಿಯಮ 1961 ರಡಿಯಲ್ಲಿ ನೋಂದಣಿ 1 Days
5 ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆಗಳ ಅಧಿನಿಯಮ 1961 ರಡಿಯಲ್ಲಿ ನೋಂದಣಿಯ ನವೀಕರಣ 10 Days
6 ಕಟ್ಟಡ ಮತ್ತು ಇತರ ಕಟ್ಟಡ ಕಾರ್ಮಿಕರ (ನಿಯೋಜನೆಯ ನಿಯಂತ್ರಣ ಮತ್ತು ಷರತ್ತುಗಳು) ಅಧಿನಿಯಮ,1996ರ ಅಡಿಯಲ್ಲಿ ಸ್ಥಾಪನೆಯ ನೋಂದಣಿ 10 Days
7 ಪ್ಲಾಂಟೇಷನ್ ಕಾರ್ಮಿಕರ ಅಧಿನಿಯಮ,1951ರ ಅಡಿಯಲ್ಲಿ ಪ್ಲಾಂಟೇಷನ್ ನೋಂದಣಿ 15 Days
8 ಟ್ರೇಡ್ ಯೂನಿಯನ್ ಅಧಿನಿಯಮ, 1926ರಡಿಯಲ್ಲಿ ನೋಂದಣಿ 30 Days
9 ಮೋಟಾರು ಸಾರಿಗೆ ಕಾರ್ಮಿಕರ ಅಧಿನಿಯಮ 1961 ರಡಿಯಲ್ಲಿ ನೋಂದಣಿ 15 Days
10 ಅಂತರರಾಜ್ಯ ವಲಸೆ ಕೆಲಸಗಾರರ (ನಿಯೋಜನೆಯ ನಿಯಂತ್ರಣ ಮತ್ತು ಸೇವಾ ಷರತ್ತುಗಳು) ಅಧಿನಿಯಮ,1979ರ ಅಡಿಯಲ್ಲಿ ನೋಂದಣಿ 15 Days
11 ಅಂತರರಾಜ್ಯ ವಲಸೆ ಕೆಲಸಗಾರರ (ನಿಯೋಜನೆಯ ನಿಯಂತ್ರಣ ಮತ್ತು ಸೇವಾ ಷರತ್ತುಗಳು) ಅಧಿನಿಯಮ,1980ರ ಅಡಿಯಲ್ಲಿ ಲೈಸನ್ಸ್ 15 Days
12 ಬೀಡಿ ಮತ್ತು ಸಿಗಾರ್ (ನಿಯೋಜನೆ ಷರತ್ತುಗಳು) ಕೆಲಸಗಾರರ ಅಧಿನಿಯಮ, 1966ರ ಅಡಿಯಲ್ಲಿ ಕೈಗಾರಿಕಾ ಆವರಣಗಳಿಗೆ ಲೈಸನ್ಸ್ ಗಳು 15 Days
13 ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯೊಂದಿಗೆ ನೋಂದಣಿಗೆ ಅರ್ಜಿ 45 Days
14 ವೈದ್ಯಕೀಯ ಸಹಾಯಧನ (ಕಾರ್ಮಿಕ ಆರೋಗ್ಯ ಭಾಗ್ಯ) 30 Days
15 ಮದುವೆ ಸಹಾಯ ಧನ (ಗೃಹ ಲಕ್ಷ್ಮೀ ಬಾಂಡ್) 60 Days
16 ಅಂತ್ಯಕ್ರಿಯೆ ವೆಚ್ಚ ಮತ್ತು ಅನುಗ್ರಹ ರಾಶಿ 45 Days
17 ಶೈಕ್ಷಣಿಕ ಧನಸಹಾಯ 45 Days
18 ಪ್ರಮುಖ ವೈಧ್ಯಕೀಯ ವೆಚ್ಚ ಸಹಾಯ ಧನ (ಕಾರ್ಮಿಕ ಚಿಕಿತ್ಸಾ ಭಾಗ್ಯ) 30 Days
19 ಹೆರಿಗೆ ಸೌಲಭ್ಯ (ತಾಯಿ ಲಕ್ಷ್ಮೀ ಬಾಂಡ್) 30 Days
20 ತಾಯಿ ಮಗು ಸಹಾಯ ಹಸ್ತ 30 Days
21 ಅಪಘಾತ ಪರಿಹಾರ 45 Days

ಕನಿಷ್ಠ ವೇತನ ದರಗಳು

  • ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳು

View

    • ನಗರ ಮತ್ತು ಸ್ಥಳೀಯ ಸಂಸ್ಥೆಗಳು

View

    • ತೋಟ ಕಾರ್ಮಿಕರು

View

    • ಹೋಟೇಲ್ ಕಾರ್ಮಿಕರು

View

ಗ್ರಾಹಕ ಸೂಚ್ಯಂಕ ಅಂಕಗಳು

ಕ್ರ.ಸಂ ವಿವರ ಲಿಂಕ್
1 ಗ್ರಾಹಕ ಸೂಚ್ಯಂಕ ಅಂಕಗಳು 2021 View
2 ಗ್ರಾಹಕ ಸೂಚ್ಯಂಕ ಅಂಕಗಳು 2022 View

ಅಧಿಕಾರಿಗಳ ವಿವರ

ಕ್ರ.ಸಂ ಹೆಸರು ಪದನಾಮ ದೂರವಾಣಿ ಸಂಖ್ಯೆ ಭಾವಚಿತ್ರ
1 ಶ್ರೀ.ಎಂ.ಎಂ.ಯತ್ನಟ್ಟಿ ಹಿರಿಯ ಕಾರ್ಮಿಕ ನಿರೀಕ್ಷಕರು ಮಡಿಕೇರಿ ವೃತ್ತ, ಮಡಿಕೇರಿ 9448642111  
2 ಶ್ರೀ.ಎಂ.ಎಂ.ಯತ್ನಟ್ಟಿ ಹಿರಿಯ ಕಾರ್ಮಿಕ ನಿರೀಕ್ಷಕರು ಸೋಮವಾರಪೇಟೆ ವೃತ್ತ, ಸೋಮವಾರಪೇಟೆ 9448642111  
3 ಶ್ರೀ ನಿಖಿಲ್ ಚಂದ್ರ ಪಿ.ಎಮ್ ಹಿರಿಯ ಕಾರ್ಮಿಕ ನಿರೀಕ್ಷಕರು ವಿರಾಜಪೇಟೆ ವೃತ್ತ, ವಿರಾಜಪೇಟೆ.  9964789587  

ಪ್ರಗತಿ ವಿವರ

ಕ್ರ.ಸಂ ವಿವಿಧ ಕಾರ್ಮಿಕ ಕಾಯ್ದೆಗಳು ನೊಂದಣಿಯಾದ ಸಂಸ್ಥೆಗಳ ಸಂಖ್ಯೆ
1 ತೋಟ ಕಾರ್ಮಿಕ ಕಾಯ್ದೆ 1951ರಡಿಯಲ್ಲಿ ನೋಂದಾಯಿತ ತೋಟಗಳು 514
2 ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾಯ್ದೆ 1996ರಡಿ ನೋಂದಣಿಯಾದ ಸಂಸ್ಥೆಗಳ ಸಂಖ್ಯೆ 47
3 ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಸೆಸ್ ಕಾಯ್ದೆ 1996ರಡಿ ಸೆಸ್ ಸಂಗ್ರಹಿಸಿರುವ ಸಂಸ್ಥೆಗಳ ಸಂಖ್ಯೆ 40
4 ನೋಂದಣಿಯಾದ ಅಂಗಡಿಗಳು 2431
5 ನೋಂದಣಿಯಾದ ವಾಣಿಜ್ಯ ಸಂಸ್ಥೆಗಳು 912

ವಿವಿಧ ಯೋಜನೆಗಳಡಿ ನೋಂದಾಯಿತರಾದ ಕಾರ್ಮಿಕರ ವಿವರ

ಕ್ರ.ಸಂ ವರ್ಗಗಳ ಹೆಸರು ನೋಂದಾಯಿತ ಕಾರ್ಮಿಕರ ಸಂಖ್ಯೆ
1 ನೋಂದಾಯಿತರಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು/td> 8833
2 ನೋಂದಾಯಿತರಾದ ಅಸಂಘಟಿತ ವಲಯದ 11 ವರ್ಗಗಳ ಕಾರ್ಮಿಕರು 3483

2013 ರಿಂದ ಮಾರ್ಚ್ 2022 ರವರೆಗೆ ಕೊಡಗು ಜಿಲ್ಲೆಯಲ್ಲಿ ನೋಂದಾಯಿತರಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ವಿವಿಧ ಸೌಲಭ್ಯಗಳಿಗೆ ಸಹಾಯಧನ ಮಂಜೂರು ಮಾಡಿದ ವಿವರ.

ಕ್ರ.ಸಂ ಸೌಲಭ್ಯಗಳ ಹೆಸರು ಫಲಾನುಭವಿಗಳ ಸಂಖ್ಯೆ ಸಹಾಯಧನದ ಮೊತ್ತ
1 ಶೈಕ್ಷಣಿಕ ಸಹಾಯಧನ 2296 17967030
2 ಹೆರಿಗೆ ಸಹಾಯಧನ 03 65000
3 ವೈಧ್ಯಕೀಯ ಸಹಾಯಧನ 13 50022
4 ಪ್ರಮುಖ ವೈಧ್ಯಕೀಯ ವೆಚ್ಚ ಸಹಾಯಧನ 15 605560
5 ಅನುಗ್ರಹರಾಶಿ ಸಹಾಯಧನ 03 12000
6 ಮದುವೆ ಸಹಾಯಧನ 171 8550000
7 ತಾಯಿ ಮಗು ಸಹಾಯ ಹಸ್ತ 02 12000
8 ಪಿಂಚಣಿ 14 8 ಪಿಂಚಣಿ 14 ಮಾಸಿಕ ರೂ.2000/-

ಕೋವಿಡ್-19 ಸಂದರ್ಭದಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ತಲಾ ರೂ. 5000/- ಮತ್ತು ರೂ.3000/- ಗಳಂತೆ ನೀಡಿದ ಪರಿಹಾರ ಧನದ ವಿವರ.

ಕ್ರ.ಸಂ ಸೌಲಭ್ಯಗಳ ಹೆಸರು ಫಲಾನುಭವಿಗಳ ಸಂಖ್ಯೆ ಸಹಾಯಧನದ ಮೊತ್ತ
1 ಕೋವಿಡ್-19 ಮೊದಲನೇ ಅಲೆ (ರೂ.5000/-) 1727 8635000
2 ಕೋವಿಡ್-19 ಎರಡನೇ ಅಲೆ (ರೂ.3000/-) 2914 8742000

ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ವಿತರಣೆ ಮಾಡಿರುವ ಕಿಟ್ ಗಳ ವಿವರ.

ಕ್ರ.ಸಂ ಕಿಟ್ ಗಳ ವಿವರ ಫಲಾನುಭವಿಗಳ ಸಂಖ್ಯೆ
1 ಆಹಾರ ಕಿಟ್ 6500
2 ಬಾರ್ ಬೆಂಡಿಂಗ್ ಕಿಟ್ 16
3 ಪೈಂಟಿಂಗ್ ಕಿಟ್ 75
4 ಸೇಫ್ಟಿ ಕಿಟ್ 7500
5 ಫ್ಲಂಬಿಂಗ್ ಕಿಟ್ 20
6 ಕಾರ್ಪೆಂಟರ್ ಕಿಟ್ 40
7 ಬೂಸ್ಟರ್ ಕಿಟ್ 2500
8 ಎಲೆಕ್ಟ್ರಿಷೀಯನ್ ಕಿಟ್ 20
9 ಮೇಸನ್ ಕಿಟ್ 320

ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯಿಂದ ನೀಡಿರುವ ಸೌಲಭ್ಯಗಳ ವಿವರ.

ಕ್ರ.ಸಂ ಸೌಲಭ್ಯಗಳ ವಿವರ ಫಲಾನುಭವಿಗಳ ಸಂಖ್ಯೆ ಸಹಾಯಧನದ ಮೊತ್ತ
1 ಕೋವಿಡ್-19 ಮೊದಲನೇ ಅಲೆಯ ಸಂದರ್ಭದಲ್ಲಿ ಅಗಸರು ಮತ್ತು ಕ್ಷೌರಿಕರಿಗೆ ರೂ.5000/ ಗಳ ಪರಿಹಾರಧನ 601 3005000
2 ಕೋವಿಡ್-19 ಎರಡನೇ ಅಲೆಯ ಸಂದರ್ಭದಲ್ಲಿ 11 ವಲಯದ ಅಸಂಘಟಿತ ಕಾರ್ಮಿಕರಿಗೆ ರೂ.2000/ ಗಳ ಪರಿಹಾರಧನ 5410 10820000
3 ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆ 03 1500000
4 ಅಪಘಾತದಿಂದ ಮರಣ ಹೊಂದಿದ ಅಥವಾ ಶಾಶ್ವತ ದುರ್ಬಲತೆ ಹೊಂದಿದ ಖಾಸಗಿ ವಾಣಿಜ್ಯ ವಾಹನ ಚಾಲಕರ ಇಬ್ಬರು ಮಕ್ಕಳಿಗೆ ಶೈಕ್ಷಣಿಕ ಸಹಾಯಧನ (ಮರಣ) 02 20000
5 ಆಶಾದೀಪ ಯೋಜನೆಯಡಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರ ಇ.ಪಿ.ಎಫ್ ಮತ್ತು ಇ.ಎಸ್.ಐ ಮಾಲೀಕರ ವಂತಿಗೆಯನ್ನು ಸಂಸ್ಥೆಯ ಮಾಲೀಕರಿಗೆ ಮರುಪಾವತಿ 14 (03 ಸಂಸ್ಥೆಗಳು) 396404

ಇ-ಶ್ರಮ ಯೋಜನೆ

ಭಾರತದಾದ್ಯಂತ ಸುಮಾರು 38 ಕೋಟಿ ಕಾರ್ಮಿಕರು ಅಸಂಘಟಿತ ವರ್ಗಗಳಲ್ಲಿ ತೊಡಗಿಕೊಂಡಿರುತ್ತಾರೆ. ಪ್ರಸ್ತುತ ಅಸಂಘಟಿತ ಕಾರ್ಮಿಕರ ಕೇಂದ್ರೀಕೃತ ದತ್ತಾಂಶ ಲಭ್ಯವಿರುವುದಿಲ್ಲ. ಇ-ಶ್ರಮ ಯೋಜನೆಯಡಿ 379 ಅಸಂಘಟಿತ ವರ್ಗ ಹಾಗೂ ವಲಸೆ ಕಾರ್ಮಿಕರನ್ನು ನೋಂದಣಿ ಮಾಡಬಹುದಾಗಿದೆ. ಆಧಾರ್ ಸಂಖ್ಯೆಗೆ ಜೋಡಣೆಯಾದ ಅಸಂಘಟಿತ ಕಾರ್ಮಿಕರ ರಾಷ್ಟ್ರೀಯ ದತ್ತಾಂಶವನ್ನು ಸಿದ್ದಪಡಿಸಲು, ಕಾರ್ಮಿಕ ಹಾಗೂ ಉದ್ಯೋಗ ಮಂತ್ರಾಲಯವು ಇ-ಶ್ರಮ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿರುತ್ತದೆ. ಇದು ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಯೋಜನೆಗಳ ಸೌಲಭ್ಯಗಳನ್ನು ವಿಸ್ತರಿಸಲು ಅನುಕೂಲವಾಗುವಂತೆ ಕಾರ್ಮಿಕರ ಹೆಸರು, ವೃತ್ತಿ, ವಿಳಾಸ, ವಿದ್ಯಾರ್ಹತೆ, ಕೌಶಲ್ಯದ ವಿಧ, ಕುಟುಂಬದ ವಿವರ, ಬ್ಯಾಂಕ್ ಖಾತೆ ವಿವರ ಇತ್ಯಾದಿ ವಿವರಗಳನ್ನು ಒಳಗೊಂಡಿರುತ್ತದೆ.

ನೋಂದಣಿಯ ಪ್ರಯೋಜನಗಳು

  • ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಯೋಜನೆಗಳನ್ನು ಪಡೆಯಲು ದತ್ತಾಂಶವು ಸರ್ಕಾರಕ್ಕೆ ಅಸಂಘಟಿತ ಕಾರ್ಮಿಕರಿಗೆ ವಿಶೇಷ ನೀತಿಗಳು ಹಾಗೂ ಯೋಜನೆಗಳನ್ನು ರೂಪಿಸಲು ಸಹಾಯಕ.
  • ಒಂದು ವರ್ಷದ ಅವಧಿಗೆ ಪ್ರಧಾನಮಂತ್ರಿ ಸುರಕ್ಷಾ ಬಿಮಾ ಯೋಜನೆ ಪ್ರಯೋಜನೆ ಪಡೆಯಬಹುದು (ಅಪಘಾತದಿಂದ ಮರಣ ಹೊಂದಿದ್ದಲ್ಲಿ ಅಥವಾ ಶಾಶ್ವತ ದುರ್ಬಲತೆ ಹೊಂದಿದ್ದಲ್ಲಿ ರೂ.2 ಲಕ್ಷ ಹಾಗೂ ಭಾಗಶಃ ಅಂಗವೈಕಲ್ಯಕ್ಕೆ ರೂ. 1 ಲಕ್ಷ ಪರಿಹಾರ)
  • ರಾಷ್ಟ್ರೀಯ ವಿಪತ್ತು ಅಥವಾ ಕೋವಿಡ್-19ರ ಸಾಂಕ್ರಾಮಿಕ ಪಿಡುಗಿನಂತಹ ಪರಿಸ್ಥಿತಿಯಲ್ಲಿ ಅರ್ಹ ಕಾರ್ಮಿಕರಿಗೆ ನೆರವು ನೀಡಲು ದತ್ತಾಂಶವನ್ನು ಬಳಸಿಕೊಳ್ಳಬಹುದಾಗಿದೆ.

ನೋಂದಣಿ ಅರ್ಹತೆ:

  • 16 ರಿಂದ 59 ವಯೋಮಾನದವರು.
  • ಆದಾಯ ತೆರಿಗೆ ಪಾವತಿದಾರರಾಗಿರಬಾರದು.
  • ಭವಿಷ್ಯನಿಧಿ ಹಾಗೂ ಇ.ಎಸ್.ಐ ಫಲಾನುಭವಿಯಾಗಿರಬಾರದು.

ಅವಶ್ಯಕ ದಾಖಲೆಗಳು

  • ಆಧಾರ್ ಕಾರ್ಡ್
  • ಆಧಾರ್ ಸಂಖ್ಯೆಗೆ ಜೋಡಣೆಯಾದ ಮೊಬೈಲ್ ಸಂಖ್ಯೆ.
  • ಬ್ಯಾಂಕ್ ಖಾತೆ ವಿವರಗಳು.

ನೋಂದಣಿಗಾಗಿ ಇ-ಶ್ರಮ್ ಪೋರ್ಟಲ್ ಸಂಪರ್ಕಿಸಿ

31/03/2022 ರವರೆಗೆ ಫೋರ್ಟಲ್ ನಲ್ಲಿ ನೋಂದಣಿಯಾದ ಫಲಾನುಭವಿಗಳ ಸಂಖ್ಯೆ:- 34148

ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ (ರಿ)

ಕೊಡಗು ಜಿಲ್ಲೆ, ಮಡಿಕೇರಿ ಇ-ಮೇಲ್-dclpsmadikeri[at]gmail[dot]com

ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಕಿರು ಪರಿಚಯ

ಕರ್ನಾಟಕ ರಾಜ್ಯವನ್ನು ಬಾಲಕಾರ್ಮಿಕ ಪದ್ಧತಿ ಮುಕ್ತ ರಾಜ್ಯ ಎಂಬ ಕೀರ್ತಿಗೆ ಪಾತ್ರವಾಗಬೇಕೆಂಬ ಮಹತ್ವಕಾಂಕ್ಷೆಯಿಂದ, ಕರ್ನಾಟಕ ಸರ್ಕಾರ ರಚಿಸಿದ ಐದು ಪ್ರಮುಖ ಉದ್ಧೇಶಗಳನ್ನೊಳಗೊಂಡ ಕ್ರಿಯಾ ಯೋಜನೆಯನ್ನು ದಿನಾಂಕ : 21-05-2001 ರಂದು ಬಿಡುಗಡೆಗೊಳಿಸಿರುತ್ತದೆ.

ಉದ್ಧೇಶಗಳು :

  • ಬಾಲ್ಯಾವಸ್ಥೆಯ ಹಾಗೂ ಕಿಶೋರವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ ) ಕಾಯ್ದೆ 1986ರ ಹಾಗೂ ತಿದ್ದುಪಡಿ 2016 ರ ಕಾಯ್ದೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸುವುದು.
  • 14 ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳು ವೇತನಕ್ಕಾಗಿ ಅಥವಾ ಜೀವನ ನಿರ್ವಹಣೆಗಾಗಿ ಅಪಾಯಕಾರಿ ಅಥವಾ ಅಪಾಯಕಾರಿ ಅಲ್ಲದ ಉದ್ದಿಮೆಗಳಲ್ಲಿ ದುಡಿಯುವುದನ್ನು ತಡೆಗಟ್ಟುವುದು ಹಾಗೂ ಕಿಶೋರಾವಸ್ಥೆಯ ಕಾರ್ಮಿಕರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ದುಡಿಯುವುದನ್ನು ತಡೆಯುವುದು.
  • ಕೆಲಸ ದಿಂದ ಬಿಡುಗಡೆಗೊಳಿಸಲ್ಪಟ್ಟ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು ಕ್ರಮ ಕೈಗೊಳ್ಳುವುದು.
  • ಬಾಲಕಾರ್ಮಿಕರ ಕುಟುಂಬಕ್ಕೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಕಲ್ಪಿಸುವುದು
  • ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡುವ ಸಂಬಂಧ ಸಹಕಾರದೊಂದಿಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು.

Tಸರ್ಕಾರ ರಚಿಸಿರುವ ಯೋಜನೆಯನ್ನು ಅನುಷ್ಠಾನಗೊಳಿಸಲು ಜಿಲ್ಲೆಯಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯನ್ನು ಸ್ಧಾಪಿಸಲಾಗಿದ್ದು, ಸದರಿ ಸೊಸೈಟಿಯಡಿ ಕ್ರಿಯಾ ಯೋಜನೆಯ ಕಾರ್ಯಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಕ್ರಿಯಾ ಯೋಜನೆಯನ್ನು ಅನುಷ್ಠಾನಗೊಳಿಸಲು ಕಂದಾಯ ಇಲಾಖೆಯ ತಹಶೀಲ್ದಾರ್ಗಳು, ನಾಡ ಕಛೇರಿಗಳ ಉಪ ತಹಶೀಲ್ದಾರ್ಗಳು, ಕಂದಾಯ ನಿರೀಕ್ಷಕರುಗಳು, ಪಂಚಾಯತ್ ರಾಜ್ ಇಲಾಖೆಯ ಕಾರ್ಯನಿರ್ವಹಣಾಧಿಕಾರಿಗಳು, ತಾಲ್ಲೂಕ್ ಪಂಚಾಯತ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬ್ಲಾಕ್ ರಿಸೋರ್ಸ್ ಕೋ-ಆರ್ಡಿನೇಟರ್, ಸರ್ವ ಶಿಕ್ಷಣ ಅಭಿಯಾನ ಅಧಿಕಾರಿಗಳು, ಕಾರ್ಖಾನೆ ಮತ್ತು ಬಾಯ್ಲರ್ಗಳ ಇಲಾಖೆಯ ಉಪ ನಿರ್ದೆಶಕರು, ಹಿರಿಯ ಸಹಾಯಕ ನಿರ್ದೆಶಕರುಗಳು, ಸಹಾಯಕ ನಿರ್ದೇಶಕರುಗಳು, ನಗರಾಭಿವೃದ್ಧಿ ಇಲಾಖೆಯ ನಗರ ಸಭೆ ಆಯುಕ್ತರು, ಮುಖ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಕರುಗಳು, ಕಂದಾಯ ನಿರೀಕ್ಷಕರುಗಳು, ರೇಷ್ಮೆ ಇಲಾಖೆಯ ರೇಷ್ಮೆ ಕೃಷಿ ವಿಸ್ತರಣಾಧಿಕಾರಿಗಳು, ರೇಷ್ಮೆ ಕೃಷಿ ಸಹಾಯಕ ನಿರ್ದೆಶಕರುಗಳು, ಸಮಾಜ ಕಲ್ಯಾಣ ಇಲಾಖೆಯ ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವಿಸ್ತರಣಾಧಿಕಾರಿಗಳು, ಕೃಷಿ ಇಲಾಖೆಯ ಸಹಾಯಕ ನಿರ್ದೆಶಕರುಗಳು, ಕೃಷಿ ಅಧಿಕಾರಿಗಳು, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಸಹಾಯಕ ನಿರ್ದೆಶಕರು, ಕೈಗಾರಿಕ ವಿಸ್ತರಣಾಧಿಕಾರಿಗಳು ಮುಂತಾದ ಮತ್ತು ಸರ್ಕಾರೇತರ ಸಂಸ್ಧೆಗಳ ಹಾಗೂ ಸಾರ್ವಜನಿಕರ ಸಹಕಾರದ ಅಗತ್ಯವಿದೆ. ಕ್ರಿಯಾ ಯೋಜನೆಯಡಿ 11 ಇಲಾಖೆಗಳಿಗೆ ವಹಿಸಿರುವ ಕರ್ತವ್ಯ ಮತ್ತು ಜವಾಬ್ದಾರಿಗಳಲ್ಲಿ ಕೆಲವು ಇಲಾಖೆಗಳಿಗೆ ಬಾಲಕಾರ್ಮಿಕ ಪದ್ಧತಿಯನ್ನು ತಡೆಗಟ್ಟುವುದಾಗಿದೆ ಮತ್ತು ಕೆಲವು ಇಲಾಖೆಗಳು ಪುನರ್ವಸತಿ ಕಾರ್ಯಕ್ರಮಗಳನ್ನು ಕೈಗೊಳ್ಳುವುದಾಗಿದೆ.

ಬಾಲ್ಯಾವಸ್ಧೆಯ ಹಾಗೂ ಕಿಶೋರಾವಸ್ಧೆಯ ಕಾರ್ಮಿಕ ಕಾಯ್ದೆ 1986 ರ ತಿದ್ದುಪಡಿ 2016 ರಡಿ ಜಿಲ್ಲೆಯಲ್ಲಿ ಪ್ರತಿ ತಿಂಗಳು ವಿವಿಧ ಇಲಾಖೆಗಳ ಹಾಗೂ ಸ್ವಯಂ ಸೇವಾ ಸಂಸ್ಧೆಗಳ ಸಹಕಾರದೊಂದಿಗೆ ಅನಿರೀಕ್ಷಿತ ದಾಳಿ ಹಾಗೂ ತಪಾಸಣೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ . ಈ ಸಂದರ್ಭದಲ್ಲಿ ರಕ್ಷಿಸಲಾದ 158 ಮಕ್ಕಳನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಹಾಜರುಪಡಿಸಿ ಮಕ್ಕಳ ವಿಶೇಷ ವಸತಿ ಶಾಲೆ ಹಾಗೂ ಸರ್ಕಾರಿ ಬಾಲಮಂದಿರಗಳಲ್ಲಿ ಪುನರ್ವಸತಿಗೊಳಿಸಲಾಗಿದೆ.

ಯೋಜನೆಗಳು:

ಎಸ್.ಸಿ.ಎಸ್.ಪಿ / ಟಿ.ಎಸ್.ಪಿ: ಬಾಲಕಾರ್ಮಿಕರ ಪುನರ್ವಸತಿ ಯೋಜನೆಯಡಿ ಹಂಚಿಕೆಯಾದ ಆಯವ್ಯಯದ ಪರಿಶಿಷ್ಟ ಪಂಗಡ ಉಪಯೋಜನೆ ಹಾಗೂ ಗಿರಿಜನ ಉಪಯೋಜನೆ ಅಡಿ ಬಾಲ್ಯಾವಸ್ಥೆಯ ಮತ್ತು ಕಿಶೋರಾವಸ್ಥೆಯ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ, ಪುನರ್ವಸತಿಗೊಳಿಸಲಾದ ಎಸ್.ಸಿ. / ಎಸ್. ಟಿ. ಮಕ್ಕಳನ್ನು ಪ್ರಥಮ ಆದ್ಯತೆಯಲ್ಲಿ ಆಹಾರ ಧಾನ್ಯ, ಸಮವಸ್ತ್ರ, ನೋಟ್ ಪುಸ್ತಕ, ಲೇಖನಾ ಸಾಮಾಗ್ರಿ ಹಾಗೂ ಇನ್ನಿತರೆ ವಸ್ತುಗಳನ್ನು ಕಿಟ್ ರೂಪದಲ್ಲಿ ಮಕ್ಕಳ ಮನೆಗಳಿಗೆ ಸರಬರಾಜು ಮಾಡಲಾಗುತ್ತಿದೆ.

ಎಮ್.ಎಸ್.ಓ.ಪಿ: ಕರ್ನಾಟಕದಲ್ಲಿ ಬಾಲ್ಯಾವಸ್ಥೆಯ ಹಾಗೂ ಕಿಶೋರವಸ್ಥೆಯ ಕಾರ್ಮಿಕ ಮುಕ್ತ ಜಿಲ್ಲೆಗಳನ್ನಾಗಿ ಘೋಷಣೆ ಮಾಡಲು ಮಾರ್ಗಸೂಚಿಗಳನ್ನು “Memorandum of Standard operating procedures (MSOP) for District administration to declare a district as “Child and Adoloscent labour free zone-calfz” ಅನ್ನು ಅನುಷ್ಟಾನಗೊಳಿಸುವುದು.

ವಿಶ್ವ ಬಾಲಕಾರ್ಮಿಕ ವಿರೋಧಿ ದಿನ: : ದಿನಾಂಕ 12 ಜೂನ್ ರಂದು ಪ್ರತಿ ವರ್ಷ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ತರಬೇತಿ ಕಾರ್ಯಗಾರ:

ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ ) ಕಾಯ್ದೆ 1986ರ ಹಾಗೂ ತಿದ್ದುಪಡಿ 2016ರಡಿ ಹೆಚ್ಚುವರಿ ನಿರೀಕ್ಷಕರುಗಳನ್ನಾಗಿ ನೇಮಿಸಿರುವ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಹಾಗೂ ಸ್ವಯಂ ಸೇವಕರಿಗೆ ಬಾಲಕಾರ್ಮಿಕ ಕಾಯ್ದೆಯ ಬಗ್ಗೆ ಕಾರ್ಯಗಾರಗಳನ್ನು ಆಯೋಜಿಸುವುದು.