ಮುಚ್ಚಿ

ಸಂಸ್ಥೆ ನಕಾಶೆ

ka

ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ನಿವಾಹರಣೆಗೆಗಾಗಿ ಜಿಲ್ಲೆಯ ಮಟ್ಟದ ಕಚೇರಿಗೆ ಬೇಟಿ ನೀಡುತ್ತಾರೆ. ಹಲವಾರು ಜನರಿಗೆ ತಮ್ಮ ಕುಂದುಕೊರತೆಗಳಿಗೆ ಯಾವ ಸಂಬಂಧಪಟ್ಟ ಅಧಿಕಾರಿಗಳನ್ನು ಎಷ್ಟು ಭಾರಿ ಬೇಟಿ ಮಾಡಬೇಕೆಂಬ ಮಾಹಿತಿ ಇರುವುದಿಲ್ಲ. ಸದರಿ ವಿಷಯಕ್ಕೆ ಸಂಬಂಧಪಟ್ಟ ಮಾಹಿತಿ ಈ ಕೆಳಗಿನಂತಿದೆ. ಜಿಲ್ಲಾಧಿಕಾರಿಗಳ ಕಛೇರಿಗೆ ವಿವಿಧ ಅಧೀನ ಕಛೇರಿಗಳಿದ್ದು, ಇವುಗಳು ಪರಸ್ಪರ ಹೊಂದಾಣಿಕೆಯಿಂದ ಕಾರ್ಯನಿರ್ವಾಹಿಸುತ್ತದೆ.

ಆಡಳಿತ ಶಾಖೆ:

ಖಾಲಿ ಹುದ್ದೆಗಳು, ವೇತನ ಮತ್ತು ಭತ್ಯೆ, ವರ್ಗಾವಣೆ ಮತ್ತು ಪ್ರಚಾರಗಳು, ನೇಮಕಾತಿ, ನಿವೃತ್ತಿಗಳು, CCA (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ), ವೈಯಕ್ತಿಕ ಠೇವಣಿ ಖಾತೆಗಳು, ಆಡಿಟ್ ವರದಿಗಳು, ಜಿಲ್ಲಾಧಿಕಾರಿಗಳ ದಿನಚರಿ ಡೈರಿ ಮತ್ತು ಉದ್ಯಮ ಅಂಕಿಅಂಶ ಸಂಬಂಧಿಸಿದ ವಿಷಯಗಳಲ್ಲಿ ವ್ಯವಹರಿಸುತ್ತದೆ.

ಕಂದಾಯ ಶಾಖೆ:

ಕಂದಾಯ ಶಾಖೆಯು ಜಮಾಬಂಡಿ, ಡಿ.ಸಿ.ಬಿ (ಬೇಡಿಕೆ ವಸೂಲಾತಿ ಮತ್ತು ಬಾಕಿ), ಭೂಮಂಜೂರಾತಿ, ಭೂಸ್ವಾಧೀನ, ¨ಭೂಪರಿವರ್ತನೆ, ಪಿಟಿಸಿಎಲ್ ಪ್ರಕರಣಗಳು, ಭೂಸುಧಾರಣೆ ಪ್ರಕರಣಗಳು, ಗಣಿಗಳು ಮತ್ತು ಖನಿಜಗಳು ಹಾಗೂ ಒತ್ತುವರಿ ಸಕ್ರಮಗೊಳಿಸುವ ಬಗ್ಗೆ ವ್ಯವಹರಿಸುತ್ತದೆ.

ಚುನಾವಣಾ ಶಾಖೆ:

ಈ ಶಾಖೆಯು ಲೋಕಸಭೆ, ವಿಧಾನಸಭೆ, ವಿಧಾನಪಾರಿಷತ್, ಗ್ರಾಮ ಪಂಚಾಯತ್, ತಾಲ್ಲೂಕು ಪಂಚಾಯತ್, ಜಿಲ್ಲಾ ಪಂಚಾಯತ್, ಪುರಸಭೆಗಳು, ಎಪಿಎಂಸಿ, ಮತ್ತು ಇತರ ಸಹಕಾರಿ ಸಂಸ್ಥೆಗಳ ಚುನಾವಣಾ ವಿಷಯಗಳ ಬಗ್ಗೆ ವ್ಯವಹರಿಸುತ್ತದೆ.

ಪುರಸಭಾಶಾಖೆ

ಈ ಶಾಖೆಯು ,SJSRY (ಸ್ವರ್ಣ ಜನಾಂತಿ ಶಹರಿ ರೋಜ್ರ್ ಯೋಜಾನ), IDSMT (ಸಣ್ಣ ಮತ್ತು ಮಧ್ಯದ ನಗರಗಳ ಸಮಗ್ರ ಅಭಿವೃದ್ಧಿ), ನೀರು ಸರಬರಾಜು ಯೋಜನೆಗಳು, ವಸತಿ ಯೋಜನೆಗಳು ಮತ್ತು ಕೊಳಚೆ ಪ್ರದೇಶ ಅಭಿವೃದ್ಧಿಗಳಂತಹ ವಿವಿಧ ಯೋಜನೆಗಳ ಪ್ರಗತಿ, ಹಾಗೂ ಸೇವಾ ವಿಷಯಗಳೂ ಸೇರಿದಂತೆ ಎಲ್ಲಾ ಪುರಸಭೆಯ ವಿಷಯಗಳ ಬಗ್ಗೆ ವ್ಯವಹರಿಸುತ್ತದೆ

ಮುಜರಾಯಿ ಶಾಖೆ

ಮುಜರಾಯಿ ದೇವಾಲಯಗಳ ನಿರ್ಮಾಣ ಮತ್ತು ನವೀಕರಣ , ಧರ್ಮದರ್ಶಿ ಮತ್ತು ಆರ್ಚಕರುಗಳಿಗೆ ಪಾವತಿ,’ನೇಮಕ (ತಸ್ ದಿಕ್ ಮತ್ತು ವರ್ಷಾಶನ) ಸಂಬಳ, ಆರಾಧನಾ ಯೋಜನೆಗಳ ಬಗ್ಗೆ ಈ ವಿಭಾಗವು ವ್ಯವಹರಿಸುತ್ತದೆ .

ಜನಗಣತಿಶಾಖೆ:

ಈ ಶಾಖೆಯು ಜನಗಣತಿ ವಿಷಯಗಳ ಬಗ್ಗೆ ವ್ಯವಹರಿಸುತ್ತದೆ.

ನ್ಯಾಯಾಂಗಶಾಖೆ:

ಈ ಶಾಖೆಯು ಕಾನೂನು ಮತ್ತು ಸುವ್ಯವಸ್ಥೆ (ಕಲಂ144 ಇತ್ಯಾದಿ.) ಶಸ್ರ್ತಾಸ್ರ್ತ ಪರವಾನಿಗೆ ಮತ್ತು ಸಿನೆಮಾಗಳ ಪರವಾನಗಿಗಳ ಬಗ್ಗೆ ವ್ಯವಹರಿಸುತ್ತದೆ.

ಇತರೆ ಶಾಖೆ:

ಈ ಶಾಖೆಯು ರಾಷ್ಟ್ರೀಯ ಸಾಮಾಜಿಕ ನೆರವು ಯೋಜನೆ,, ಸಂಧ್ಯಾ ಸುರಾಕ್ಷ ವೇತನ,, ವಿಧವಾ ವೇತನ, ಅಂಗವಿಕಲ ವೇತನ, ಸಂಸದ ಸದಸ್ಯರ ಸ್ಥಳೀಯ ಪ್ರದೇಶಾಭಿವ್ರದ್ದಿ ಯೋಜನೆ ಮತ್ತು ಇತರ ಯೋಜನೆಗಳು ಹಾಗೂ ಸಭೆಯ ಅಂಕಿಅಂಶಗಳು, ಲೋಕೊಪಯೋಗಿ, ಒಳನಾಡು ಮತ್ತು ಜಲ ಸಾರಿಗೆ ಇಲಾಖಾ ಕಾರ್ಯಗಳು, ಆದಾಯ ಮತ್ತು ಜಾತಿ ಪ್ರಮಾಣಪತ್ರಗಳು, ಗೃಹ ಬಾಡಿಗೆ ನಿಯಂತ್ರಣ ಮತ್ತು ಇತರೆ ಕಂದಾಯ ಇಲಾಖೆಯ ವಿಷಯಗಳ ಬಗ್ಗೆ ವ್ಯವಹರಿಸುತ್ತದೆ.