ಮುಚ್ಚಿ

ಕ ರಾ ರ ಸಾ ನಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ

ಪುತ್ತೂರು ವಿಭಾಗ

ರೋಡ್ ಟ್ರಾನ್ಸ್ಪೋರ್ಟ್ ಆಕ್ಟ್ (ಆರ್.ಟಿ.ಸಿ. ಆಕ್ಟ್) 1950 ರ ಸೆಕ್ಷನ್ (3)ರ ಪ್ರಕಾರ ದಿನಾಂಕ: ಆಗಸ್ಟ್ 01 1961 ರಂದು ಕ.ರಾ.ರ.ಸಾ. ನಿಗಮವು ಅಸ್ತಿತ್ವಕ್ಕೆ ಬಂದಿರುತ್ತದೆ. ಇವರೆಗೆ ರಾಷ್ಷ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಒಟ್ಟು 267 ಪ್ರಶಸ್ತಿಗಳು ಬಂದಿರುತ್ತವೆ.

ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಪ್ರಯಾಣಿಕರಿಗೆ ಹೆಚ್ಚಿನ ಸಾರಿಗೆ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ದಿನಾಂಕ:30-06-2011 ರಂದು ಮಂಗಳೂರು ವಿಭಾಗದಿಂದ ಆಡಳಿತಾತ್ಮಕವಾಗಿ ವಿಭಜನೆಗೊಂಡು ಹೊಸದಾಗಿ ಪುತ್ತೂರು ವಿಭಾಗವು ಪುತ್ತೂರು, ಧರ್ಮಸ್ಥಳ, ಮಡಿಕೇರಿ ಮತ್ತು ಬಿ.ಸಿ.ರೋಡು ಹೀಗೆ ಒಟ್ಟು 04 ಘಟಕಗಳೊಂದಿಗೆ ಕಾರ್ಯಾರಂಭಗೊಂಡಿರುತ್ತದೆ. ಸುಳ್ಯ ಘಟಕವನ್ನು ದಿನಾಂಕ:15-07-2017 ರಿಂದ ಪ್ರಾರಂಭಿಸಲಾಗಿರುತ್ತದೆ.

ವಿಭಾಗದ ಮುಖ್ಯಸ್ಥರು ವಿಭಾಗೀಯ ನಿಯಂತ್ರಣಾಧಿಕಾರಿ
ಮೊಬೈಲ್ ಸಂಖ್ಯೆ 7760990970
ಸಂಚಾರ ಶಾಖೆ ವಿಭಾಗೀಯ ಸಂಚಾಲನಾಧಿಕಾರಿ
ಮೊಬೈಲ್ ಸಂಖ್ಯೆ 7760990972
ಯಾಂತ್ರಿಕ ಶಾಖೆ ವಿಭಾಗೀಯ ಯಾಂತ್ರಿಕ ಅಭಿಯಂತರರು
ಮೊಬೈಲ್ ಸಂಖ್ಯೆ 7760990971

ಮಡಿಕೇರಿ ಘಟಕ
ಘಟಕದ ಮುಖ್ಯಸ್ಥರು ಘಟಕ ವ್ಯವಸ್ಥಾಪಕರು,ಮಡಿಕೇರಿ ಘಟಕ, ಜಿ.ಟಿ ರಸ್ತೆ ಮಡಿಕೇರಿ
ಮೊಬೈಲ್ ಸಂಖ್ಯೆ 7760990817

ಬಸ್ ನಿಲ್ದಾಣದ ಮೊಬೈಲ್ ಸಂಖ್ಯೆ

ಕ್ರ. ಸಂ ಸ್ಥಳ ಮೊಬೈಲ್ ಸಂಖ್ಯೆ
1 ಮಡಿಕೇರಿ 7760107788
2 ಕುಶಾಲನಗರ 7760107766
3 ವಿರಾಜಪೇಟೆ 7760107755
4 ಸೋಮವಾರಪೇಟೆ 7760107744

  • ಕೊಡಗು ಜಿಲ್ಲೆಯಲ್ಲಿ ಮಡಿಕೇರಿಯಲ್ಲಿ ಘಟಕವೊಂದಿದ್ದು, ಒಟ್ಟು 07 ರಾಜಹಂಸ 58 ವೇಗದೂತ ಹಾಗೂ 31 ಸಾಮಾನ್ಯ ಅನುಸೂಚಿಗಳು ಸೇರಿದಂತೆ ಒಟ್ಟು 96 ಅನುಸೂಚಿಗಳನ್ನು ಕಾರ್ಯಾಚರಿಸಲಾಗುತ್ತಿದೆ.
  • ಸಾರ್ವಜನಿಕ ಪ್ರಯಾಣಿಕರಿಗೆ ಸಾರಿಗೆ ಕಾರ್ಯಾಚರಣೆ ಮಾಹಿತಿ/ಇತರೇ ಸೌಲಭ್ಯ ನೀಡುವ ಸಲುವಾಗಿ ಕೊಡಗು ಜಿಲ್ಲೆಯ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ, ವಿರಾಜಪೇಟೆ, ಕುಶಾಲನಗರ ಹಾಗೂ ಹೆಬ್ಬಾಲೆಯಲ್ಲಿ ನಿಗಮದ ಬಸ್ಸು ನಿಲ್ದಾಣಗಳಿವೆ. ಅಲ್ಲದೇ ಗೋಣಿಕೊಪ್ಪದಲ್ಲಿ ನಿಗಮದ ಸಂಚಾರ ನಿಯಂತ್ರಣ ಕೇಂದ್ರವಿದೆ.
  • ನಿಗಮದ ಬಸ್ಸು ನಿಲ್ದಾಣಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಮೂತ್ರಾಲಯ/ಶೌಚಾಲಯದಂತಹ ಮೂಲ ಸೌಕರ್ಯ ವ್ಯವಸ್ಥೆಯೊಂದಿಗೆ ಮಿತರದರದಲ್ಲಿ ಅಗತ್ಯ ವಸ್ತು, ಆಹಾರ ನೀಡುವ ನಿಟ್ಟಿನಲ್ಲಿ ವಾಣಿಜ್ಯ ಮಳಿಗೆಗಳನ್ನು ಸ್ಥಾಪಿಸಿ, ಗುಣಮಟ್ಟ ಕಾಯ್ದುಕೊಳ್ಳಲಾಗಿರುತ್ತದೆ.
  • ಕರಾರಸಾ ನಿಗಮವು ಸಾರ್ವಜನಿಕ ಹಿತದೃಷ್ಠಿಯಿಂದ ಸಾಮಾಜಿಕ ಭದ್ರತೆಯನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಈ ಕೆಳಕಂಡ ಉಚಿತ/ರಿಯಾಯಿತಿ ಪಾಸಿನ ಸೌಲಭ್ಯವನ್ನು ಒದಗಿಸುತ್ತಿದೆ:ಕರಾರಸಾ ನಿಗಮವು ಸಾರ್ವಜನಿಕ ಹಿತದೃಷ್ಠಿಯಿಂದ ಸಾಮಾಜಿಕ ಭದ್ರತೆಯನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಈ ಕೆಳಕಂಡ ಉಚಿತ/ರಿಯಾಯಿತಿ ಪಾಸಿನ ಸೌಲಭ್ಯವನ್ನು ಒದಗಿಸುತ್ತಿದೆ:ಕರಾರಸಾ ನಿಗಮವು ಸಾರ್ವಜನಿಕ ಹಿತದೃಷ್ಠಿಯಿಂದ ಸಾಮಾಜಿಕ ಭದ್ರತೆಯನ್ನು ಹೊಂದಿದ್ದು, ಈ ನಿಟ್ಟಿನಲ್ಲಿ ಈ ಕೆಳಕಂಡ ಉಚಿತ/ರಿಯಾಯಿತಿ ಪಾಸಿನ ಸೌಲಭ್ಯವನ್ನು ಒದಗಿಸುತ್ತಿದೆ
    • ಅಂಗವಿಕಲರ ರಿಯಾಯಿತಿ ದರದ ಬಸ್ ಪಾಸ್
    • ಅಂಧರ ಉಚಿತ ಬಸ್ ಪಾಸು
    • ಎಂಡೋಸಲ್ಫಾನ್ ಉಚಿತ ಬಸ್ ಪಾಸು
    • ಸ್ವಾತಂತ್ರ್ಯ ಹೋರಾಟಗಾರರ ಉಚಿತ ಬಸ್ ಪಾಸ್ ಪ್ರಯಾಣದ ಬಸ್ ಪಾಸ್
    • ಸ್ವಾತಂತ್ರ್ಯ ಹೋರಾಟಗಾರರ/ವಿಧವಾ ಪತ್ನಿಯವರಿಗೆ ನೀಡುವ ಉಚಿತ ಕೂಪನ್

    ಅಲ್ಲದೇ ಹಿರಿಯ ನಾಗರೀಕರಿಗೆ ಅಧಿಕೃತ ದಾಖಲೆಗಳೊಂದಿಗೆ ಶೇ 50ರ ರಿಯಾಯಿತಿಯೊಂದಿಗೆ ಪ್ರಯಾಣಿಸಲು ಅವಕಾಶ

    • ಸಾರ್ವಜನಿಕ ಪ್ರಯಾಣಿಕರಿಗೆ ಪ್ರಯಾಣದ ಮುಂಗಡ ಆಸನ ಕಾಯ್ದಿರಿಸಲು ಮೊಬೈಲ್ ಟಿಕೆಟ್ ಬುಕಿಂಗ್, ಆನ್ಲೈನ್ ಟಿಕೆಟ್ ಬುಕಿಂಗ್ ಕಲ್ಪಿಸಲಾಗಿದೆ. ಅಲ್ಲದೇ ಕೊಡಗು ಜಿಲ್ಲೆಯ ಮಡಿಕೇರಿ, ಕುಶಾಲನಗರಯಲ್ಲಿ ಅವತಾರ್ ಮುಂಗಡ ಬುಕ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
    • ನಿಗಮದ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಪ್ರಯಾಣದ ಸಂದರ್ಭದಲ್ಲಿ ಅಪಘಾತವಾಗಿ ನಿಗಮದ ವಾಹನದಲ್ಲಿ ನಿಧನ ಹೊಂದಿದರೆ ನಿಗಮದ ಅಪಘಾತ ಪರಿಹಾರ ನಿಧಿಯಿಂದ ಮೃತರ ಕುಟುಂಬಕ್ಕೆ 3 ಲಕ್ಷ ರೂ. ಮೊತ್ತವನ್ನು ಹಾಗೂ ಅಪಘಾತದಲ್ಲಿ ಇತರೇ ವಾಹನದಲ್ಲಿ ಮೃತರಾದವರ ಕುಟುಂಬಕ್ಕೆ ರೂ 50000ವನ್ನು ಅಪಘಾತ ಪರಿಹಾರ ಸೌಲಭ್ಯವಾಗಿ ನೀಡಲಾಗುತ್ತಿದೆ. ಈ ಮೊತ್ತದಲ್ಲಿ ರೂ 25000ವನ್ನು ಮರಣ ಕಾರ್ಯ ನಿರ್ವಹಣೆಗಾಗಿ ತುರ್ತು ಪರಿಹಾರವಾಗಿ ಅಪಘಾತ ಸ್ಥಳದಲ್ಲೇ ವಿತರಿಸಲಾಗುತ್ತಿದೆ. ಅಲ್ಲದೇ ಅಪಘಾತದಲ್ಲಿ ನಿಗಮದ ವಾಹನದಲ್ಲಿ ಪ್ರಯಾಣಿಕರು ಗಾಯಗೊಂಡಲ್ಲಿ ನಿಗಮದ ಚಾಲಕರ ತಪ್ಪು ಇದ್ದಲ್ಲಿ ಆಸ್ಪತ್ರೆಯ ಖರ್ಚುವೆಚ್ಚವನ್ನು ಸಂಪೂರ್ಣವಾಗಿ ನಿಗಮದ ವತಿಯಿಂದಲೇ ಒದಗಿಸಲಾಗುತ್ತಿದೆ.
    • ಪ್ರತೀ ನಿಲ್ದಾಣದಲ್ಲಿ ಪ್ರತೀ 5 ವರ್ಷಗಳಿಗೆ ಅನ್ವಯವಾಗುವಂತೆ ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ನೀಡಲಾಗುವುದು ಮತ್ತು ಸುತ್ತೋಲೆ ಸಂಖ್ಯೆ 1667ರಂತೆ ಖಾಯಂ ಗುತ್ತಿಗೆ ಒಪ್ಪಂದದ ಆಚರಣೆ ಜಾರಿಯಿದ್ದು, ಈಗಾಗಲೇ ಕೊಡಗು ವೈದ್ಯಕೀಯ ಕಾಲೇಜಿಗೆ 12 ಬಸ್ಸುಗಳನ್ನು ಈ ಸುತ್ತೋಲೆಯ ಅಡಿಯಲ್ಲಿ ನೀಡಲಾಗುತ್ತಿದೆ. ಇದರೊಂದಿಗೆ ಮಡಿಕೇರಿ ಘಟಕವು ಆಡಳಿತ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ ಮತ್ತು ಚಾಲನಾ ಸಿಬ್ಬಂದಿಗಳು ಸೇರಿ ಒಟ್ಟು 399 ಜನ ನೌಕರರಿದ್ದು, ಪ್ರತೀ ದಿನ 110 ವಾಹನಗಳೊಂದಿಗೆ 34,389 ಕಿ.ಮೀ ಕ್ರಮಿಸುವ ಮೂಲಕ ಸುಮಾರು 23,000 ಜನರು ಪ್ರತೀ ದಿನ ನಮ್ಮ ವಾಹನಗಳು ಪ್ರಯಾಣಿಸುತ್ತಿರುತ್ತಾರೆ ಎಂದು ತಿಳಿಯಪಡಿಸಲು ಆಶಿಸುತ್ತೇನೆ.
    • ಒಪ್ಪಂದದಾರರಿಗೆ ಒಪ್ಪಂದದ ಮೇಲೆ ಕಿ.ಮೀ ಆಧಾರಕ್ಕೆ ದರ ಪಾವತಿಸಿದಲ್ಲಿ ವಾಹನಗಳನ್ನು ನೀಡುವ ವ್ಯವಸ್ಥೆಯು ಸಂಸ್ಥೆಯಲ್ಲಿ ಜಾರಿಯಲ್ಲಿರುತ್ತದೆ.
    • ಮಡಿಕೇರಿ, ವಿರಾಜಪೇಟೆ ಮತ್ತು ಕುಶಾಲನಗರ ಬಸ್ ನಿಲ್ದಾಣಗಳಲ್ಲಿ ಪಾರ್ಸೆಲ್ ಮತ್ತು ಕೊರಿಯರ್ ವ್ಯವಸ್ಥೆ ಜಾರಿಗೆ ತರಲಾಗಿದೆ. ಬಿಸಿನೆಸ್ ಫೆಸಿಲಿಟೇಟರ್ ಅವರ ಮುಖಾಂತರ ಈಗಾಗಲೇ ಕಾರ್ಯಾಚರಿಸಲಾಗಿರುತ್ತದೆ.

    ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಕೊರಿಯರ್ ಮೊಬೈಲ್ ಸಂಖ್ಯೆ

    ಕ್ರ. ಸಂ ಸ್ಥಳ ಮೊಬೈಲ್ ಸಂಖ್ಯೆ
    1 ಮಡಿಕೇರಿ 8277236463
    2 ಕುಶಾಲನಗರ 9740720234
    3 ವಿರಾಜಪೇಟೆ 7760107755