ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ
ಕ್ರ.ಸಂ | ಹೆಸರು | ಪದನಾಮ | ಮೊಬೈಲ್ ಸಂಖ್ಯೆ | ಫೋಟೋ |
---|---|---|---|---|
1 | ಚಂದ್ರಶೇಖರ್ ಎನ್.ಬಿ | ಜಿಲ್ಲಾ ವ್ಯವಸ್ಥಾಪಕರು | 9448217369 | . |
2 | ಏಜಾಸ್ ಬಾನು | ಪ್ರಭಾರ ತಾಲ್ಲೂಕು ಅಭಿವೃದ್ಧಿ ಅಧಿಕಾರಿ | 9731798083 | . |
ಕಚೇರಿ ವಿಳಾಸ:
ಕರ್ನಾಟಕ ಭೊವಿ ಅಭಿವೃದ್ಧಿ ನಿಗಮ,
ರೇಸ್ ಕೋರ್ಸ್ ರಸ್ತೆ, ಹೊಸ ಬಡಾವಣೆ, ಮಡಿಕೇರಿ,
ಕೊಡಗು ಜಿಲ್ಲೆ-571201
ದೂರವಾಣಿ ಸಂಖ್ಯೆ: 08272-228857
ಈ-ಮೇಲ್ ವಿಳಾಸ: dmkodagu@gmail.com
2021-22 ನೇ ಸಾಲಿನಲ್ಲಿ ಅನುಷ್ಟಾನಗೊಳಿಸುವ ಯೋಜನೆಗಳು
ಸ್ವಯಂ ಉದ್ಯೋಗ ನೇರಸಾಲ ಯೋಜನೆ :
ಪರಿಶೀಷ್ಟ ಜಾತಿಯ ಭೋವಿ ಜನಾಂಗಕ್ಕೆ ಸೇರಿದ ಯುವಕ/ ಯುವತಿಯರಿಗೆ ತರಕಾರಿ, ಹಣ್ಣು-ಹಂಪಲು, ಮೀನು ಮಾರಾಟ, ಕುರಿ/ಹಂದಿ/ಮೊಲ ಸಾಕಾಣಿಕೆ ಘಟಕಗಳನ್ನು ಸ್ಥಾಪಿಸಲು ಘಟಕ ವೆಚ್ಚ ರೂ. 50,000/- ಇದ್ದು, ರೂ. 25,000/- ಸಹಾಯಧನ ಹಾಗೂ ರೂ. 25,000/- ಅಂಚಿನಹಣ ಸಾಲವನ್ನು ಶೇ.4 ರ ಬಡ್ಡಿ ದರದಲ್ಲಿ ನಿಗಮದಿಂದ ನೀಡಲಾಗುವುದು.
ಉದ್ಯಮ ಶೀಲತಾ ಯೋಜನೆ -ಐ.ಎಸ್.ಬಿ (ಬ್ಯಾಂಕುಗಳ ಸಹಯೋಗದಿಂದ) :
ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆಯಡಿ ಪರಿಶೀಷ್ಟ ಜಾತಿಯ ಭೋವಿ ಜನಾಂಗಕ್ಕೆ ಸೇರಿದ ನಿರುದ್ಯೋಗ ಯುವಕ/ ಯುವತಿಯರಿಗೆ ಸಣ್ಣ ಕೈಗಾರಿಕೆ, ಸೇವಾ ಕ್ಷೇತ್ರ ಮತ್ತು ವ್ಯಾಪಾರಿ ಕ್ಷೇತ್ರಗಳಲ್ಲಿ ಸ್ವಯಂ ಉದ್ಯೋಗ ಘಟಕಗಳನ್ನು ಆರಂಭಿಸಲು ನಿಗಮದಿಂದ ಸಹಾಯಧನ ಮತ್ತು ಬ್ಯಾಂಕಿನ ಸಾಲದೊಂದಿಗೆ ಯೋಜನೆಯನ್ನು ಅನುಷ್ಟಾನ ಮಾಡಲಾಗುತ್ತಿದೆ.
- ವಾಹನ ಅಲ್ಲದ ಇತರೇ ಉದ್ದೇಶಗಳಿಗೆ:
- ಸರಕು ಸಾಗಾಣೆ ವಾಹನ ಉದ್ದೇಶಕ್ಕೆ:
ಘಟಕ ವೆಚ್ಚ ಶೇ.50 ರಷ್ಟು ಅಥವಾ ಗರಿಷ್ಟ ರೂ.2.00 ಲಕ್ಷ ಸಹಾಯಧನ, ಉಳಿದ ಭಾಗ ಬ್ಯಾಂಕ್ ಸಾಲವಾಗಿರುತ್ತದೆ.
ಘಟಕ ವೆಚ್ಚದ ಶೇ.50 ರಷ್ಟು ಅಥವಾ ಗರಿಷ್ಟ ರೂ.3.50 ಲಕ್ಷಗಳ ಸಹಾಯಧನ ಉಳಿದ ಭಾಗ ಬ್ಯಾಂಕ್ ಸಾಲವಾಗಿರುತ್ತದೆ.
ಪ್ರೇರಣಾ (ಮೈಕ್ರೋ ಕ್ರೆಡಿಟ್) ಯೋಜನೆ:
ಪರಿಶಿಷ್ಟ ಜಾತಿಯ ಭೋವಿ ಜನಾಂಗಕ್ಕೆ ಸೇರಿದ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಸಾಮೂಹಿಕ ಉತ್ಪಾದನಾ/ಸೇವಾ ಘಟಕಗಳಿಗೆ ಆರ್ಥಿಕ ನೆರವು ನೀಡಲಾಗುವುದು. 10 ಸದಸ್ಯರ ಒಂದು ಗುಂಪಿಗೆ ರೂ. 2,50,000/- ಮಂಜೂರು ಮಾಡಲು ಅವಕಾಶವಿರುತ್ತದೆ. ಪ್ರತಿಯೊಬ್ಬ ಸದಸ್ಯರಿಗೆ ರೂ. 15,000/- ಸಹಾಯಧನ ರೂ.10,000/- ಬೀಜಧನಸಾಲ ಒಟ್ಟು ರೂ.25,000/- ಹಣವನ್ನು ಸಂಘದ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುವುದು.
ಗಂಗಾಕಲ್ಯಾಣ ಯೋಜನೆ: ವೈಯುಕ್ತಿಕ ನೀರಾವರಿ:
ಕನಿಷ್ಟ 1.00 ಎಕರೆ ಖುಷ್ಕಿ ಜಮೀನಿರುವ ಪರಿಶಿಷ್ಟ ಜಾತಿಯ ಭೋವಿ ಜನಾಂಗಕ್ಕೆ ಸೇರಿದ ಸಣ್ಣ ಮತ್ತು ಅತಿಸಣ್ಣ ರೈತರ ಜಮೀನಿನಲ್ಲಿ ತೆರೆದ ಬಾವಿ/ಕೊಳವೆ ಬಾವಿ ಕೊರೆಸಿ ಪಂಪ್‌ಸೆಟ್ ಅಳವಡಿಸಿ ವಿದ್ಯುದ್ದೀಕರಣಗೊಳಿಸಿ ನೀರಾವರಿ ಸೌಲಭ್ಯ ಒದಗಿಸಲಾಗುವುದು. ರೂ.3.00 ಲಕ್ಷ ಸಹಾಯಧನ ಮತ್ತು ರೂ.0.50 ಲಕ್ಷ ಅವಧಿಸಾಲವಾಗಿರುತ್ತದೆ.
ಭೂ ಒಡೆತನ ಯೋಜನೆ :
ಪರಿಶಿಷ್ಟ ಜಾತಿಯ ಭೋವಿ ಜನಾಂಗಕ್ಕೆ ಸೇರಿದ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ರೂ.15.00ಲಕ್ಷ ಘಟಕ ವೆಚ್ಚದ ಮಿತಿಯೊಳಗೆ ಕನಿಷ್ಟ ೫೦ ಸೆಂಟ್ಸ್ ತರಿ/ಬಾಗಾಯ್ತು ಅಥವಾ 1.00 ಎಕರೆ ಖುಷ್ಕಿ ಜಮೀನನ್ನು ಖರೀದಿಸಿ ನೋಂದಣಿ ಮಾಡಿಸಿಕೊಡಲಾಗುವುದು. ಘಟಕ ವೆಚ್ಚದಲ್ಲಿ ಶೇ.50% ಭಾಗ ಸಹಾಯಧನ ಹಾಗೂ ಶೇ.50% ಭಾಗ ಅವಧಿ ಸಾಲವಾಗಿದ್ದು, ಶೇ.6%ರ ಬಡ್ಡಿ ದರದಲ್ಲಿ ನಿಗಮದಿಂದಲೇ ನೀಡಲಾಗುವುದು. ಖರೀದಿಸುವ ಜಮೀನು ಫಲಾನುಭವಿಯು ವಾಸಿಸುವ ಸ್ಥಳದಿಂದ ಗರಿಷ್ಟ 10 ಕಿ.ಮೀ. ವ್ಯಾಪ್ತಿಯಲ್ಲಿರಬೇಕು. ಜಮೀನು ಮಾರಾಟ ಮಾಡುವವರು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿರಬಾರದು ಫಲಾನುಭವಿಗಳು ಸಾಲದ ಹಣವನ್ನು ಬಡ್ಡಿ ಸಮೇತವಾಗಿ ಹತ್ತು ವರ್ಷಗಳಲ್ಲಿ ಪ್ರತಿ 06 ತಿಂಗಳಿಗೊಮ್ಮೆ 20 ಸಮಕಂತುಗಳಲ್ಲಿ ನಿಗಮಕ್ಕೆ ಮರುಪಾವತಿ ಮಾಡಬೇಕು.
ನಿಗಮದ ಯೋಜನೆಗಳ ಸೌಲಭ್ಯ ಪಡೆಯಲು ಇರಬೇಕಾದ ಸಾಮಾನ್ಯ ಅರ್ಹತೆಗಳು
- ಅರ್ಜಿದಾರರು ಪರಿಶಿಷ್ಟ ಜಾತಿಯ ಭೋವಿ ಜನಾಂಗಕ್ಕೆ ಸೇರಿದವರಾಗಿರಬೇಕು ಹಾಗೂ ಕಳೆದ 15 ವರ್ಷದಿಂದ ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.
- ಅರ್ಜಿದಾರರು 18 ವರ್ಷದಿಂದ 60 ವರ್ಷದ ವಯೋಮಾನದವರಾಗಿರಬೇಕು.
- ಅರ್ಜಿದಾರರ ಕುಟುಂಬದ ಯಾವುದೇ ಸದಸ್ಯರು ಸರ್ಕಾರಿ/ಅರೆ ಸರ್ಕಾರಿ/ಇತರೆ ಸಂಸ್ಥೆಯಲ್ಲಿ ನೌಕರಿಯಲ್ಲಿರಬಾರದು.
- ಅರ್ಜಿದಾರರು ಅಥವಾ ಅವರ ಕುಟುಂಬದವರು ಈ ಹಿಂದೆ ನಿಗಮದಿಂದ ಯಾವುದೇ ಸೌಲಭ್ಯ ಪಡೆದಿರಬಾರದು.
- ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು ರೂ.1,50,000/- ಗ್ರಾಮೀಣ ಹಾಗೂ ರೂ.2,00,000/- ನಗರ ಪ್ರದೇಶದವರಿಗೆ ಮಿತಿಯೊಳಗಿರಬೇಕು.
- ವಿಕಲಚೇತನರು ಸೌಲಭ್ಯ ಪಡೆಯಲು ಸಂಬಂಧಪಟ್ಟವರಿಂದ ವಿಕಲಚೇತನರ ದೃಢೀಕರಣ ಪತ್ರವನ್ನು ನೀಡಬೇಕು.
- ಜಿಲ್ಲೆಯಲ್ಲಿ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಈಗಾಗಲೇ ನೊಂದಣೆ ಮಾಡಿಕೊಂಡ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಂಗವಿಕಲ ಫಲಾಪೇಕ್ಷಿಗಳಿಗೆ ನೇರವಾಗಿ ಜಿಲ್ಲಾ ವ್ಯವಸ್ಥಾಪಕರುಗಳ ಶಿಪಾರಸ್ಸಿನನ್ವಯ ಸೌಲಭ್ಯ ಕಲ್ಪಿಸಲಾಗುವುದು.
- ಭೂ ಒಡೆತನ ಯೋಜನೆಯಡಿ ಸೌಲಭ್ಯ ಪಡೆಯಲು ಫಲಾಪೇಕ್ಷಿಯು ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಾಗಿರಬೇಕು ಮತ್ತು ಅವರ ಪತಿ ಅಥವಾ ಕುಟುಂಬದ ಸದಸ್ಯರ ಹೆಸರಿನಲ್ಲಿ ಕೃಷಿ ಜಮೀನಿರಬಾರದು. ಜಮೀನು ಮಾರಾಟ ಮಾಡುವ ಭೂಮಾಲೀಕರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರಬಾರದು.
- ಗಂಗಾ ಕಲ್ಯಾಣ ಯೋಜನೆಯಡಿ ಸೌಲಭ್ಯ ಪಡೆಯಲು ಫಲಾಪೇಕ್ಷಿಯು ಸಣ್ಣ ಮತ್ತು ಅತಿಸಣ್ಣ ರೈತರಾಗಿರಬೇಕು.
- ವಾಹನಗಳಿಗೆ ಸೌಲಭ್ಯ ಪಡೆಯಲು ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
ಅರ್ಜಿದಾರರು ಸೌಲಭ್ಯ ಪಡೆಯಲು ಸಲ್ಲಿಸಬೇಕಾದ ದಾಖಲಾತಿಗಳು:
- ಅರ್ಜಿಯೊಂದಿಗೆ ಭಾವಚಿತ್ರ
- ಪರಿಶಿಷ್ಟ ಜಾತಿಯ ಭೋವಿ ಜನಾಂಗಕ್ಕೆ ಸೇರಿದ ಪ್ರಮಾಣ ಪತ್ರ
- ಕುಟುಂಬದ ವಾರ್ಷಿಕ ಆದಾಯ ಪತ್ರ
- ಕುಟುಂಬದ ಪಡಿತರ ಚೀಟಿ
- ಮತದಾರರ ಗುರುತಿನ ಚೀಟಿ
- ಆಧಾರ ಕಾರ್ಡ್
- ವಾಹನವಾಗಿದ್ದಲ್ಲಿ, ವಾಹನ ಚಾಲನಾ ಪರವಾನಗಿ
- ಪಹಣಿ/ ಆರ್‌ಟಿಸಿ (ಗಂಗಾ ಕಲ್ಯಾಣ ಯೋಜನೆ)
- ಸಣ್ಣ ಅತಿಸಣ್ಣ ರೈತರ ಪ್ರಮಾಣ ಪತ್ರ (ಗಂಗಾ ಕಲ್ಯಾಣ ಯೋಜನೆ)
- ವಂಶವೃಕ್ಷ (ಗಂಗಾ ಕಲ್ಯಾಣ ಯೋಜನೆ)
- ಭೂರಹಿತ ಕೃಷಿ ಕಾರ್ಮಿಕರ ಪ್ರಮಾಣ ಪತ್ರ (ಭೂ ಒಡೆತನ ಯೋಜನೆ)