ಮುಚ್ಚಿ

ಲೋಕೋಪಯೋಗಿ ಇಲಾಖೆ

ಲೋಕೋಪಯೋಗಿ ಇಲಾಖೆಯು ರಾಜ್ಯದಲ್ಲಿರುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಕಾಮಗಾರಿ ಮತ್ತು ನಿರ್ವಹಣೆ ಹಾಗೂ ಸರ್ಕಾರಿ ಕಟ್ಟಡಗಳ ನಿರ್ಮಾಣ ಮತ್ತು ನಿರ್ವಹಣೆ ಕಾರ್ಯಗಳ ಜವಾಬ್ದಾರಿ ಹೊಂದಿರುತ್ತದೆ. ಈ ಇಲಾಖೆಯು ಠೇವಣಿ ವಂತಿಗೆ ಕಾಮಗಾರಿಗಳು ಅಡಿಯಲ್ಲಿ ಇತರೆ ಇಲಾಖೆಗಳ ಪರವಾಗಿ ನಿರ್ಮಾಣ ಕಾರ್ಯ ಸಹ ನಿರ್ವಹಿಸುತ್ತದೆ.

ಇಲಾಖೆಯ ದೃಷ್ಟಿಕೋನ :

  • “ರಾಜ್ಯದ ಸಾಮಾಜಿಕ – ಆರ್ಥಿಕ ಬೆಳವಣಿಗೆಗೆ ಅಗತ್ಯ ರಸ್ತೆ ಜಾಲ ನಿರ್ವಹಣೆ; ದಕ್ಷ ಮತ್ತು ಹೆಚ್ಚು ಗುಣಮಟ್ಟದ ಸಾರ್ವಜನಿಕ ಕ್ಷೇತ್ರಗಳ ನಿರ್ಮಾಣ”.

ಇಲಾಖೆಯ ಧ್ಯೇಯ ::

  • ತಾಂತ್ರಿಕತೆಯಲ್ಲಿ ದೃಢವಾದ ಮತ್ತು ವೆಚ್ಚ ಪರಿಣಾಮಕಾರಿಯಾದ ರಸ್ತೆ ಸಂಪರ್ಕ ಜಾಲಕ್ಕಾಗಿ ಯೋಜನೆ, ನಕ್ಷೆ, ನಿರ್ಮಾಣ ಹಾಗೂ ಸುರಕ್ಷಿತ ನಿರ್ವಹಣೆ.
  • ದೂರದ ಹಾಗೂ ಪ್ರತ್ಯೇಕವಾಗಿರುವ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಕಲ್ಪಿಸುವುದು.
  • ಬೃಹತ್ ಮತ್ತ ಕಿರು ಸೇತುವೆಗಳ ನಿರ್ಮಾಣ ಮತ್ತು ನಿರ್ವಹಣೆ
  • ಸುವ್ಯವಸ್ಥಿತ, ಸದೃಡ ಸರ್ಕಾರಿ ಕಟ್ಟಡಗಳ ನಿರ್ಮಾಣ
  • ನಿರ್ಮಾಣ ಮತ್ತು ನಿರ್ವಹಣೆಯಲ್ಲಿ ಗುಣಮಟ್ಟ ಹೆಚ್ಚಿಸಿ, ಅಗತ್ಯ ನವೀನ ತಾಂತ್ರಿಕ ಮಾರ್ಗೋಪಾಯಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಕಾಮಗಾರಿ ವೆಚ್ಚವನ್ನು ಕಡಿಮೆ ಮಾಡುವುದು.

ಧ್ಯೆಯೋದ್ದೇಶಗಳು :

  • ಬೆಳೆಯುತ್ತಿರುವ ಸಂಚಾರ ಸಾಂದ್ರತೆಗನುಗುಣವಾಗಿ ರಾಜ್ಯ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುವುದು.
  • ಉತ್ತಮವಾಗಿ ನಿರ್ವಹಿಸಿದ ರಸ್ತೆ ಜಾಲದ ಮುಖಾಂತರ ಪರಿಣಾಮಕಾರಿ ಹಾಗೂ ಸುರಕ್ಷಿತ ಸಾರಿಗೆ ಸಂಚಾರ
  • ಪ್ರಸ್ತುತ ಇರುವ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು
  • ಸುಸಜ್ಜಿತ ಸಾರ್ವಜನಿಕ ಕಟ್ಟಡ ಹಾಗೂ ವಸತಿ ಕಟ್ಟಡಗಳ ನಿರ್ಮಾಣ
  • ಹೊಸ ಸೇತುವೆಗಳ ನಿರ್ಮಾಣ ಹಾಗೂ ಜೀರ್ಣಾವಸ್ಥೆಯಲ್ಲಿರುವ ಸೇತುವೆಗಳ ಪುನರ್ ನಿರ್ಮಾಣ
  • ಪರಿಶಿಷ್ಟ ಜಾತಿ ಉಪ ಯೋಜನೆ ಹಾಗೂ ಬುಡಕಟ್ಟು ಉಪಯೋಜನೆಗಳಡಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳು ವಾಸಿಸುವ ಕಾಲೋನಿಗಳಲ್ಲಿ ಕಾಂಕ್ರೀಟ್ ರಸ್ತೆ, ಚರಂಡಿ ಹಾಗೂ ಮುಖ್ಯ ರಸ್ತೆಗಳಿಗೆ ಸಂಪರ್ಕಿಸಲು ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು
  • ವಿಶೇಷ ಅಭಿವೃದ್ಧಿ ಯೋಜನೆಯಡಿ ಹಿಂದುಳಿದ ತಾಲ್ಲೂಕುಗಳಲ್ಲಿ ರಸ್ತೆಗಳ ಕೊರತೆಯನ್ನು ನಿವಾರಿಸುವುದು
  • ಇಂಜಿನಿಯರ್ಗಳ ತಾಂತ್ರಿಕ ಸಾಮಥ್ರ್ಯವನ್ನು ಹೆಚ್ಚಿಸುವುದು.
  • ಪ್ರತಿ ವಿಭಾಗಗಳಲ್ಲಿನ ಸ್ಥಿರಾಸ್ಥಿಗಳ ವಹಿಯನ್ನು ಸಮನ್ವಯಗೊಳಿಸಿ ಇಂದೀಕರಿಸಿ ದಾಖಲಿಸುವುದು ಹಾಗೂ ರಾಜ್ಯ ಹೆದ್ದಾರಿ ರಸ್ತೆಗಳ ಸರಹದ್ದು ಸ್ಥಾಪನೆಗೊಳಿಸುವುದು
  • ಸರ್ಕಾರಿ ಕಟ್ಟಡಗಳ ನಕ್ಷೆಗಳನ್ನು ತಯಾರಿಸುವುದು

ಕರ್ತವ್ಯಗಳು :

  • ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆ
  • ಸಾರ್ವಜನಿಕ ಕಟ್ಟಡಗಳ ಹಾಗೂ ವಸತಿ ಸಂಕೀರ್ಣಗಳ ನಿರ್ಮಾಣ ಮತ್ತು ನಿರ್ವಹಣೆ
  • ಎಲ್ಲಾ ಸರ್ಕಾರಿ ಇಲಾಖೆಗಳು ಹಾಗೂ ಸ್ಥಳೀಯ ಸಂಸ್ಥೆಗಳಿಗೆ ಸವಿವರ ಯೋಜನಾ ವರದಿಗಳನ್ನು ತಯಾರಿಸಲು ಅನುಕೂಲವಾಗುವಂತೆ ಪ್ರತಿ ವರ್ಷ ದರಪಟ್ಟಿಗಳನ್ನು ಸಿದ್ದಪಡಿಸುವುದು
  • ಸರ್ಕಾರಿ ಕಟ್ಟಡಗಳ ರೇಖಾಚಿತ್ರ (ನಕ್ಷೆ) ತಯಾರಿಸುವುದು.
  • ರಾಜ್ಯ ಹೆದ್ದಾರಿಗಳ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ವಿವರವಾದ ಸಂಚಾರ ಸಮೀಕ್ಷೆಯನ್ನು ಪ್ರತಿ 5 ವರ್ಷಕ್ಕೊಮ್ಮೆ ಹಾಗೂ ಮಾದರಿ ವಾರ್ಷಿಕ ಸಮೀಕ್ಷೆ ಮಾಡುವುದು.
  • ಕರ್ನಾಟಕ ರಾಜ್ಯ ಹೆದ್ದಾರಿ ಕಾಯ್ದೆ – 1964 ಅನ್ನು ಅನುಷ್ಟಾನಗೊಳಿಸುವುದು.
  • ಇತರೆ ಇಲಾಖೆಗಳಿಗೆ ತಾಂತ್ರಿಕ ಸಹಾಯ ಹಾಗೂ ಪರಿಹಾರಗಳನ್ನು ಒದಗಿಸುವುದು.

ಲೋಕೋಪಯೋಗಿ ಇಲಾಖೆ ಕೊಡಗು ವಿಭಾಗ :

ಲೋಕೋಪಯೋಗಿ ಇಲಾಖೆ ಕೊಡಗು ವಿಭಾಗ ಕಛೇರಿಯು ಕೊಡಗು ಜಿಲ್ಲಾ ಕೇಂದ್ರ ಸ್ಥಳ ಮಡಿಕೇರಿಯಲ್ಲಿದ್ದು, ಕಾರ್ಯಪಾಲಕ ಇಂಜಿನಿಯರ್ ರವರು ವಿಭಾಗದ ಮುಖ್ಯಸ್ಥರಾಗಿರುತ್ತಾರೆ. ಲೋಕೋಪಯೋಗಿ ಇಲಾಖೆ ಕೊಡಗು ವಿಭಾಗವು ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿನ ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗಳ ಕಾಮಗಾರಿ ಮತ್ತು ನಿರ್ವಹಣೆ ಹಾಗೂ ಸರ್ಕಾರಿ ಕಟ್ಟಡಗಳ ನಿರ್ಮಾಣ ಮತ್ತು ನಿರ್ವಹಣೆ ಕಾರ್ಯಗಳ ಜವಾಬ್ದಾರಿ ಹೊಂದಿರುತ್ತದೆ.

ಲೋಕೋಪಯೋಗಿ ಇಲಾಖೆ ಕೊಡಗು ವಿಭಾಗದಡಿಯಲ್ಲಿ ಮೂರು ಉಪವಿಭಾಗಗಳಿದ್ದು, ಅವುಗಳ ಕಛೇರಿ ಕ್ರಮವಾಗಿ ಮಡಿಕೇರಿ, ಸೋಮವಾರಪೇಟೆ ಮತ್ತು ವಿರಾಜಪೇಟೆ ಪಟ್ಟಣದಲ್ಲಿರುತ್ತದೆ. ಸಹಾಯಕ ಕಾರ್ಯಪಾಲಕ ಇಂಜಿನಿಯರ್ ರವರು ಉಪವಿಭಾಗದ ಮುಖ್ಯಸ್ಥರಾಗಿರುತ್ತಾರೆ.

ರಸ್ತೆಗಳು ಮತ್ತು ಭಾರಿ ಸೇತುವೆಗಳು :

ಲೋಕೋಪಯೋಗಿ ಇಲಾಖೆ ಕೊಡಗು ವಿಭಾಗದ ವ್ಯಾಪ್ತಿಯಲ್ಲಿನ ರಸ್ತೆಗಳು ಮತ್ತು ಭಾರಿ ಸೇತುವೆಗಳ ವಿವರ ಕೆಳಕಂಡಂತಿರುತ್ತದೆ.

ಉಪ-ವಿಭಾಗ ರಾಜ್ಯ ಹೆದ್ದಾರಿಗಳ ಉದ್ದ(ಕಿ.ಮೀ) ಜಿಲ್ಲಾ ಮುಖ್ಯ ರಸ್ತೆಗಳ ಉದ್ದ (ಕಿ.ಮೀ) ಭಾರಿ ಸೇತುವೆಗಳು (ಸಂಖ್ಯೆ)
ನಂ.1 ಉಪ ವಿಭಾಗ, ಮಡಿಕೇರಿ 154.60 332.20 2
ನಂ.2 ಉಪ ವಿಭಾಗ, ಸೋಮವಾರಪೇಟೆ 252.90 333.10 4
ನಂ.3 ಉಪ ವಿಭಾಗ, ವಿರಾಜಪೇಟೆ 156.51 458.15 3
ಕೊಡಗು ವಿಭಾಗ/ ಜಿಲ್ಲೆ ಒಟ್ಟು 564.01 1123.45 9

ಅಥಿತಿ ಗೃಹ/ಪ್ರವಾಸಿ ಮಂದಿರಗಳು/ಪರಿವೀಕ್ಷಣಾ ಮಂದಿರಗಳು :

ಲೋಕೋಪಯೋಗಿ ಇಲಾಖೆ ಕೊಡಗು ವಿಭಾಗದ ವ್ಯಾಪ್ತಿಯಲ್ಲಿನ ಅಥಿತಿ ಗೃಹ/ ಪ್ರವಾಸಿ ಮಂದಿರಗಳು/ ಪರಿವೀಕ್ಷಣಾ ಮಂದಿರಗಳ ವಿವರ ಕೆಳಕಂಡಂತಿರುತ್ತದೆ.

ಸ್ಥಳ ಸಂಖ್ಯೆ
ಮಡಿಕೇರಿ 2
ಭಾಗಮಂಡಲ 1
ನಾಪೋಕ್ಲು 1
ಸೋಮವಾರಪೇಟೆ 1
ಶನಿವಾರಸಂತೆ 1
ಮಾದಾಪುರ 1
ಶುಂಠಿಕೊಪ್ಪ 1
ಕುಶಾಲನಗರ 1
ವಿರಾಜಪೇಟೆ 2
ಶ್ರೀಮಂಗಲ 1
ಪೊನ್ನಂಪೇಟೆ 1

ವಿಭಾಗ ಮತ್ತು ಉಪ ವಿಭಾಗಗಳು :

ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿನ ಲೋಕೋಪಯೋಗಿ ಇಲಾಖೆ ವಿಭಾಗ ಮತ್ತು ಉಪವಿಭಾಗಗಳ ವಿವರ ಕೆಳಕಂಡಂತಿರುತ್ತದೆ.

ಕ್ರಮ ಸಂಖ್ಯೆ ಕಛೇರಿ ಕಛೇರಿ ಮುಖ್ಯಸ್ಥರ ಹೆಸರು ಮತ್ತು ಪದನಾಮ ಸಂಪರ್ಕ ಸಂಖ್ಯೆ ಇ-ಮೇಲ್ ವಿಳಾಸ
1 ಲೋಕೋಪಯೋಗಿ ಇಲಾಖೆ, ಕೊಡಗು ವಿಭಾಗ, ಮಡಿಕೇರಿ ಡಿ.ನಾಗರಾಜ್ಕಾ ರ್ಯಪಾಲಕ ಇಂಜಿನಿಯರ್ 9449033652 eepwdkodagu@gmail.com
2 ಲೋಕೋಪಯೋಗಿ ಇಲಾಖೆ, ನಂ.1 ಉಪವಿಭಾಗ, ಮಡಿಕೇರಿ ಹೆಚ್.ಬಿ.ಶಿವರಾಂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ 9483835229 aeepwdmadikeri1@gmail.com
3 ಲೋಕೋಪಯೋಗಿ ಇಲಾಖೆ, ನಂ.2 ಉಪವಿಭಾಗ, ಸೋಮವಾರಪೇಟೆ ಕೆ.ಎಸ್.ಮೋಹನ್ ಕುಮಾರ್ ಸಹಾಯಕ ಕಾರ್ಯಪಾಲಕ ಇಂಜಿನಿಯರ್ 8277038026 aeeswp@gmail.com
4 ಲೋಕೋಪಯೋಗಿ ಇಲಾಖೆ, ನಂ.3 ಉಪವಿಭಾಗ, ವಿರಾಜಪೇಟೆ ವೈ.ಎಸ್.ಸಿದ್ದೇಗೌಡ ಸಹಾಯಕ ಕಾರ್ಯಪಾಲಕ ಇಂಜಿನಿಯರ್ 9449627780 aeepwdvpet@rediffmail.com