ಮುಚ್ಚಿ

ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ

ಚೈನ್ಗೇಟ್ ಬಳಿ, ಮೈಸೂರು ರಸ್ತೆ, ಮಡಿಕೇರಿ ಕೊಡಗು ಜಿಲ್ಲೆ-571201

ದೂರವಾಣಿ : 08272-298379

ಸಾರ್ವಜನಿಕ ಪ್ರಾಧಿಕಾರದ ಕರ್ತವ್ಯಗಳು ಮತ್ತು ಪ್ರಾಕಾರ್ಯಗಳು

ಸಾರ್ವಜನಿಕ ಪ್ರಾಧಿಕಾರ ಉಪನಿರ್ದೇಶಕರ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಡಗು ಜಿಲ್ಲೆ.
ಕಚೇರಿ ವಿಳಾಸ : ಚೈನ್ಗೇಟ್ ಬಳಿ, ಮೈಸೂರು ರಸ್ತೆ, ಮಡಿಕೇರಿ – 571201
ಕಚೇರಿಯ ಮುಖ್ಯಸ್ಥರು : ಉಪನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಡಗು ಜಿಲ್ಲೆ.
ಯಾವ ಪ್ರಾಧಿಕಾರದ ಅಧೀನಕ್ಕೊಳಪಟ್ಟಿದೆ? 1. ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ 2. ಕೊಡಗು ಜಿಲ್ಲಾ ಪಂಚಾಯತ್
ಪ್ರಾಧಿಕಾರದ ವ್ಯಾಪ್ತಿ : ಕೊಡಗು ಜಿಲ್ಲೆ, ಕರ್ನಾಟಕ ರಾಜ್ಯ
ಕಚೇರಿಯ ಧ್ಯೇಯೋದ್ದೇಶಗಳು ಮತ್ತು ಕಾರ್ಯ ಚಟುವಟಿಕೆ (ಸಂಕ್ಷಿಪ್ತವಾಗಿ) ಮಹಿಳೆಯರ ಅಭಿವೃದ್ಧಿಗಾಗಿ ಅವರನ್ನು ಆರ್ಥಿಕ ಮುಖ್ಯ ವಾಹಿನಿಯಲ್ಲಿ ತೊಡಗಿಸಿ ಅವರಿಗೆ ಸಮಾನತೆ ಮತ್ತು ಸಾಮಾಜಿಕ ನ್ಯಾಯ ಒದಗಿಸುವ ಉದ್ದೇಶವನ್ನು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹೊಂದಿದೆ. ಮಹಿಳೆಯರು ಕೇವಲ ಗೃಹ ನಿರ್ವಹಣೆಗೆ ಸೀಮಿತರಲ್ಲ. ಗೌರವಿಸಲೂ ಸಹ ಅರ್ಹರಾದವರು ಎಂಬುದನ್ನು ಮನಗಂಡು ಅವರ ಸರ್ವತೋಮುಖ ಅಭಿವೃದ್ಧಿಯ ಕಡೆ ಗಮನ ಹರಿಸಲಾಗುತ್ತಿದೆ. ಇದಲ್ಲದೆ ಮಕ್ಕಳನ್ನು ನಿರ್ಲಕ್ಷತೆ, ದುರುಪಯೋಗ ಹಾಗೂ ಶೋಷಣೆಯಿಂದ ತಪ್ಪಿಸಿ ಅವರಿಗೆ ರಕ್ಷಣೆ, ಆಹಾರ, ವಸತಿ, ವಿದ್ಯಾಭ್ಯಾಸ, ಆರೋಗ್ಯ, ಸಾಂಸ್ಕೃತಿಕ ತರಬೇತಿ ಮುಂತಾದ ಮೂಲಭೂತ ಹಕ್ಕುಗಳನ್ನು ಒದಗಿಸಲು ಇಲಾಖೆಯು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ರಾಜ್ಯ ಸರ್ಕಾರವು ಮಹಿಳೆಯರ ಮತ್ತು ಮಕ್ಕಳ ಕ್ಷೇಮಾಭ್ಯಯದಕ್ಕಾಗಿ ರೂಪಿಸುವ ವಿವಿಧ ರಾಜ್ಯ ವಲಯ ಕಾರ್ಯಕ್ರಮಗಳನ್ನು ಜಿಲ್ಲಾ ಮಟ್ಟದಲ್ಲಿ ಅನುಷ್ಠಾನ ಮಾಡುವ ಮತ್ತು ಜಿಲ್ಲಾ ವಲಯ ಕಾರ್ಯಕ್ರಮಗಳನ್ನು ಮೇಲ್ವಿಚಾರಣೆ ಮಾಡುವ ಜವಾಬ್ದಾರಿಯನ್ನು ಈ ಕಚೇರಿಯು ಹೊಂದಿರುತ್ತದೆ. ಇಲಾಖೆಯ ಕಾರ್ಯಕ್ರಮಗಳ ಸಂಕ್ಷಿಪ್ತ ವಿವರಗಳನ್ನು ಮುಂದಿನ ಪುಟದಲ್ಲಿ ಒದಗಿಸಲಾಗಿದೆ.
ಕಚೇರಿಯ ಆಸ್ತಿ (ಜಮೀನು, ಕಟ್ಟಡ ಇತ್ಯಾದಿ) ಈ ಕಚೇರಿಗೆ ಸ್ವಂತ ಕಚೇರಿ ಇರುತ್ತದೆ.
ಕಚೇರಿಯ ದೂರವಾಣಿ ಸಂಖ್ಯೆಗಳು ಮತ್ತು ಕಚೇರಿ ಕೆಲಸದ ವೇಳೆ 08272-298379 ಬೆಳಿಗ್ಗೆ 10.00 ರಿಂದ ಸಂಜೆ 5.30ರ ತನಕ (ಸಾರ್ವತ್ರಿಕ ರಜಾ ದಿನಗಳನ್ನು ಹೊರತು ಪಡಿಸಿ ಉಳಿದೆಲ್ಲಾ ದಿನಗಳು)

ಕೊಡಗು ಜಿಲ್ಲೆಯಲ್ಲಿ ಅನುಷ್ಠಾನದಲ್ಲಿರುವ ಇಲಾಖೆಯ ಕಾರ್ಯಕ್ರಮಗಳ ಸಂಕ್ಷಿಪ್ತ ವಿವರಣೆ

ಪ್ರಾಸ್ತಾವಿಕ

ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮಹಿಳೆಯರಿಗೆ ಲಿಂಗ ಸಮಾನತೆ ನ್ಯಾಯ ಒದಗಿಸಿ ಅವರನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡುವ ಹಾಗೂ ಮಕ್ಕಳ ಕಲ್ಯಾಣ ಮತ್ತು ಅಭಿವೃದ್ಧಿಯ ಜವಾಬ್ದಾರಿ ಹೊಂದಿರುವ ಸರ್ಕಾರದ ಇಲಾಖೆಯಾಗಿರುತ್ತದೆ.
ಇಲಾಖೆಯು ಮಹಿಳೆಯರ ಆರ್ಥಿಕ ಅಭಿವೃದ್ಧಿಗಾಗಿ ಮತ್ತು ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಸಮಾನತೆಯ ಮುಖ್ಯ ವಾಹಿನಿಗೆ ತರಲು ಶ್ರಮಿಸುತ್ತಿದೆ. ಸಂವಿಧಾನವು ಮಹಿಳೆಯರಿಗೆ ಸಮಾನತೆ ನೀಡುವುದಕ್ಕಷ್ಟೇ ಅವಕಾಶ ಒದಗಿಸದೆ ಮಹಿಳೆಯರ ಪರವಾಗಿ ಸಕಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಲೂ ಸಹ ಅಧಿಕಾರ ನೀಡಿರುತ್ತದೆ. ಅಲ್ಲದೆ ಇಲಾಖೆಯು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಮತ್ತು ಮಹಿಳೆಯರ ಸಶಕ್ತೀಕರಣಕ್ಕಾಗಿ ಗಮನ ಹರಿಸುತ್ತಿದೆ.
ಮಹಿಳೆಯರ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಲಾಖೆಯು ಹಾಕಿಕೊಂಡಿರುವ ಕಾರ್ಯಕ್ರಮಗಳಲ್ಲಿ ಮಹಿಳೆಯರಲ್ಲಿ ಅರಿವು ಮೂಡಿಸಿ ಸಶಕ್ತೀಕರಣಗೊಳಿಸುವುದು, ಶಿಕ್ಷಣ, ತರಬೇತಿಗೆ ಹಾಗೂ ಸ್ವಸಹಾಯ ಗುಂಪುಗಳ ರಚನೆಗೆ ಹೆಚ್ಚಿನ ಒತ್ತು ನೀಡುವುದಾಗಿದೆ. ಮಹಿಳೆಯರು ಆದಾಯೋತ್ಪನ್ನ ಚಟುವಟಿಕೆಗಳನ್ನು ಕೈಗೊಳ್ಳುವ ಮೂಲಕ ತಮ್ಮ ಆರ್ಥಿಕ ಮಟ್ಟವನ್ನು ಹೆಚ್ಚಿಸಿ ಜೀವನದ ಮಟ್ಟವನ್ನು ಸುಧಾರಿಸುವ ಕಡೆ ಹೆಚ್ಚಿನ ಒತ್ತು ನೀಡುವ ಕಾರ್ಯಕ್ರಮಗಳಾಗಿವೆ.

ಮಕ್ಕಳ ನಿರ್ಲಕ್ಷಿಸುವಿಕೆ, ಅವರು ದುರುಪಯೋಗವಾಗುವುದನ್ನು ಹಾಗೂ ಶೋಷಣೆ ಗೊಳಗಾಗುವುದನ್ನು ತಪ್ಪಿಸಲು ಅವರ ಉಳಿವಿಗೆ, ಅಭಿವೃದ್ಧಿಗೆ, ಬೆಳವಣಿಗೆಗೆ, ಶ್ರೇಯೋಭಿವೃದ್ಧಿಗೆ ಹಾಗೂ ಅವರಿಗೆ ಇರುವ ಮೂಲಭೂತ ಹಕ್ಕುಗಳನ್ನು ಒದಗಿಸಲು ಮತ್ತು ಅವರು ವೈಯಕ್ತಿಕವಾಗಿ ಬೆಳೆದು ಆರೋಗ್ಯದಿಂದಿರಲು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಮತ್ತು ಇತರೆ ಸಾಹಸಗಳಲ್ಲಿ ಭಾಗವಹಿಸಲು ಅನುವಾಗುವಂತೆ ಇಲಾಖೆಯು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ. ಇವೆಲ್ಲವುಗಳನ್ನು ಮಹಿಳೆಯರು ಮತ್ತು ಮಕ್ಕಳಿಗೆ ಒದಗಿಸುವುದಕ್ಕಾಗಿ ರಾಜ್ಯ ಸರ್ಕಾರದ ಹಣದಿಂದ, ಕೇಂದ್ರ ಸರ್ಕಾರದ ಅನುದಾನದಿಂದ, ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳ ಮೂಲಕ ಹತ್ತು ಹಲವು ಯೋಜನೆಗಳನ್ನು / ಕಾರ್ಯಕ್ರಮಗಳನ್ನು ಇಲಾಖೆಯು ಅನುಷ್ಠಾನಗೊಳಿಸುತ್ತಿದೆ.

ಕೊಡಗು ಜಿಲ್ಲೆಯ ಕೇಂದ್ರ ಸ್ಥಾನವಾದ ಮಡಿಕೇರಿಯಲ್ಲಿರುವ ಇಲಾಖೆಯ ಉಪನಿರ್ದೇಶಕರ ಕಚೇರಿಯು (ಸಾರ್ವಜನಿಕ ಪ್ರಾಧಿಕಾರ) ಸರ್ಕಾರವು ಮಹಿಳೆಯರ ಮತ್ತು ಮಕ್ಕಳ ಕ್ಷೇಮಾಭ್ಯಯದಕ್ಕಾಗಿ ರೂಪಿಸುವ ವಿವಿಧ ರಾಜ್ಯ ವಲಯದ ಮತ್ತು ಕೆಲವು ಜಿಲ್ಲಾ ವಲಯದ ಕಾರ್ಯಕ್ರಮಗಳನ್ನು ನೇರವಾಗಿ ಅನುಷ್ಠಾನ ಮಾಡುತ್ತದೆ. ಇಲಾಖೆಯ ಕೆಲವು ಕಾರ್ಯಕ್ರಮಗಳನ್ನು ತಾಲೂಕು ಪಂಚಾಯಿತಿಗಳು ಅನುಷ್ಠಾನ ಮಾಡುತ್ತಿರುವುದರಿಂದ ಅಂತಹ ಕಾರ್ಯಕ್ರಮಗಳ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡುವ ಜವಾಬ್ದಾರಿಯನ್ನು ಮಾತ್ರ ಈ ಕಚೇರಿಯು ಹೊಂದಿರುತ್ತದೆ. ಉಳಿದಂತೆ ಇಲಾಖೆಯ ಎಲ್ಲಾ ಕಾರ್ಯಕ್ರಮಗಳ ಅಂಕಿ ಅಂಶಗಳ ಕ್ರೋಢೀಕರಣ ಮತ್ತು ಕಾಲ ಕಾಲಕ್ಕೆ ಮೇಲಿನ ಪ್ರಾಧಿಕಾರಗಳಿಗೆ ಇಲಾಖೆಯ ಕಾರ್ಯಕ್ರಮಗಳ ಪ್ರಗತಿ ವಿವರಗಳನ್ನು ಸಲ್ಲಿಸುವ ಕೆಲಸವನ್ನು ಈ ಕಚೇರಿಯು ಮಾಡುತ್ತದೆ. ಸರ್ಕಾರದಿಂದ, ಇಲಾಖಾ ನಿರ್ದೇಶಕರಿಂದ ಮತ್ತು ಜಿಲ್ಲಾ ಪಂಚಾಯಿತಿಯಿಂದ ವಿವಿಧ ಕಾರ್ಯಕ್ರಮಗಳಿಗಾಗಿ ಬಿಡುಗಡೆಯಾಗುವ ಅನುದಾನವನ್ನು ಮಡಿಕೇರಿಯಲ್ಲಿರುವ ಜಿಲ್ಲಾ ಖಜಾನೆ ಗಣಕಜಾಲದ ಮೂಲಕ ಅಧೀನ ಕಛೇರಿಗಳಿಗೆ ಬಿಡುಗಡೆ ಮಾಡಿ ಇಲಾಖೆಯ ಕಾರ್ಯಕ್ರಮಗಳು ಸುಸೂತ್ರವಾಗಿ ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳುವುದೂ ಈ ಕಚೇರಿಯ ಪ್ರಮುಖ ಜವಾಬ್ದಾರಿಯಾಗಿರುತ್ತದೆ.


ರಾಜ್ಯ ವಲಯ ಯೋಜನೆಗಳು

ಸ್ತ್ರೀಶಕ್ತಿ ಯೋಜನೆ

ಗ್ರಾಮೀಣ ಮಹಿಳೆಯರನ್ನು ಸ್ವಸಹಾಯ ಗುಂಪುಗಳ ಮೂಲಕ ಸಂಘಟಿಸಿ ಅವರಿಗೆ ಸಾಮಾಜಿಕ ಮತ್ತು ಆರ್ಥಿಕ ಸಶಕ್ತತೆಯನ್ನು ತರುವುದು ಸ್ತ್ರೀಶಕ್ತಿ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಕೊಡಗು ಜಿಲ್ಲೆಯಲ್ಲಿ 928 ಸ್ತ್ರೀಶಕ್ತಿ ಸ್ವ-ಸಹಾಯ ಗುಂಪುಗಳನ್ನು ರಚಿಸಲಾಗಿದೆ. ಪ್ರತಿಯೊಂದು ಗುಂಪಿಗೂ ಸರ್ಕಾರದ ವತಿಯಿಂದ ರೂ. 5000/- ಸುತ್ತುನಿಧಿಯನ್ನು ನೀಡಲಾಗಿದೆ. ಗುಂಪುಗಳ ಸದಸ್ಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಲಾಗುತ್ತದೆ. ರಚನೆಯಾಗಿರುವ ಗುಂಪುಗಳ ಪೈಕಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ ಗುಂಪುಗಳಿಗೆ ಪ್ರತೀ ವರ್ಷ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಒಂದೊಂದು ಗುಂಪಿಗೆ ಪ್ರಶಸ್ತಿಯನ್ನು ಮತ್ತು ಪ್ರಶಸ್ತಿ ಮೊತ್ತವನ್ನು ನೀಡಲಾಗುವುದು. ಅಲ್ಲದೆ ಪ್ರತೀ ವರ್ಷ ರೂ. 75,000 ದಿಂದ 1,00,000 ಉಳಿತಾಯ ಮಾಡುವ ಗುಂಪುಗಳಿಗೆ ರೂ. 15,000ದಂತೆ ಮತ್ತು ರೂ. 1,00,000ಕ್ಕಿಂತಲೂ ಅಧಿಕ ಉಳಿತಾಯ ಮಾಡುವ ಗುಂಪುಗಳಿಗೆ ರೂ. 20,000 ದಂತೆ ಪ್ರೋತ್ಸಾಹಧನವನ್ನು ಸರ್ಕಾರದಿಂದ ನೀಡಲಾಗುವುದು. ಗುಂಪುಗಳು ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗುವುದನ್ನು ಪ್ರೋತ್ಸಾಹಿಸಲು ಪ್ರತೀ ಗುಂಪಿಗೆ ರೂ. 5000/- ಪ್ರೋತ್ಸಾಹಧನವನ್ನು ಕೂಡಾ ನೀಡಲಾಗುತ್ತದೆ. ಸ್ತ್ರೀಶಕ್ತಿ ಗುಂಪುಗಳು ಉತ್ಪಾದಿಸುವ ನಾನಾ ರೀತಿಯ ಉತ್ಪನ್ನಗಳಿಗೆ ಸರಿಯಾದ ಮಾರುಕಟ್ಟೆ ಒದಗಿಸಲು ಪ್ರತಿಯೊಂದು ತಾಲೂಕು ಮಟ್ಟದಲ್ಲಿ ಮಾರುಕಟ್ಟೆ ಮಳಿಗೆಗಳನ್ನು ಸರ್ಕಾರದ ಸಹಾಯಧನ ಮತ್ತು ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ನಿರ್ಮಿಸಿಕೊಡಲಾಗುವುದು.

ಸಾಂತ್ವನ

ದೌರ್ಜನ್ಯ ಹಾಗೂ ಅತ್ಯಾಚಾರಕ್ಕೊಳಪಟ್ಟ ಮಹಿಳೆಯರಿಗೆ ಆರ್ಥಿಕ ಸಹಾಯ, ಕಾನೂನು ಸಲಹೆ, ಆರ್ಥಿಕ ಪರಿಹಾರ, ತಾತ್ಕಾಲಿಕ ಆಶ್ರಯ ಒದಗಿಸುವುದು ಹಾಗೂ ಸ್ವಉದ್ಯೋಗ ಮಾಡಲು ಅನುಕೂವಾಗುವಂತೆ ತರಬೇತಿ ನೀಡಿ ಸ್ವಾವಲಂಬಿಗಳಾಗಿ ಬದುಕುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಸಾಂತ್ವನ ಕೇಂದ್ರಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಅನುಷ್ಠಾನಗೊಳಿಸಲಾಗುವುದು. ಪ್ರತಿಯೊಂದು ಕೇಂದ್ರದಲ್ಲಿ ಶುಲ್ಕರಹಿತ ದೂರವಾಣಿಯನ್ನು ಒದಗಿಸಲಾಗಿದೆ. (ದೂರವಾಣಿ ಸಂಖ್ಯೆ 1091) ಈ ಮಹಿಳಾ ಸಹಾಯವಾಣಿಯು ದಿನದ 24 ಗಂಟೆಯೂ ಸಂಕಷ್ಟಕ್ಕೊಳಗಾದ ಮಹಿಳೆಯರಿಂದ ಕರೆಗಳನ್ನು ಸ್ವೀಕರಿಸುತ್ತದೆ. ಸಂಕಷ್ಟದಲ್ಲಿರುವ ಮಹಿಳೆಯರಿಗೆ ಜಿಲ್ಲಾ ಸಮಿತಿಯ ಶಿಫಾರಸ್ಸಿನ ಮೇರೆಗೆ ಅವಶ್ಯ ಸೌಲಭ್ಯ ಹಾಗೂ ಪುನರ್ವಸತಿ ಸೇವೆಗಳನ್ನು ಅರ್ಹತಾನುಸಾರ ನೀಡಲಾಗುತ್ತದೆ. ದೌರ್ಜನ್ಯಕ್ಕೊಳಗಾದ ಮಹಿಳೆಗೆ ತಕ್ಷಣ ಆರ್ಥಿಕ ನೆರವು ಅವಶ್ಯಕತೆ ಇದ್ದಲ್ಲಿ ರೂ. 2000 ದಿಂದ ರೂ. 10000 ವರೆಗೆ ನೀಡಲು ಅವಕಾಶವಿದೆ

ಮಕ್ಕಳ ಕಲ್ಯಾಣ ಸಮಿತಿ, ಬಾಲ ನ್ಯಾಯ ಮಂಡಳಿ

ಬಾಲನ್ಯಾಯ ಕಾಯ್ದೆ 2000 ಅನ್ವಯ ಜಿಲ್ಲೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಸ್ತಿತ್ವದಲ್ಲಿದೆ. ರಕ್ಷಣೆ ಮತ್ತು ಪೋಷಣೆಯ ಅಗತ್ಯವುಳ್ಳ 18 ವರ್ಷದೊಳಗಿನ ಬಾಲಕರನ್ನು ಸ್ವೀಕರಿಸಲು ಮತ್ತು ಅವರಿಗೆ ಪುನರ್ವಸತಿಯನ್ನು ಕಲ್ಪಿಸಲು ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ‘ಬಾಲಮಂದಿರ’ ಎಂಬ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಅದೇ ರೀತಿ ಕಾನೂನಿನೊಂದಿಗೆ ಸಂಘರ್ಷಕ್ಕೆ ಒಳಗಾದ ಮಕ್ಕಳ ಪ್ರಕರಣಗಳನ್ನು ವಿಚಾರಣೆ ಮಾಡಲು ಬಾಲಕರ ನ್ಯಾಯ ಮಂಡಳಿ ಅಸ್ತಿತ್ವದಲ್ಲಿದೆ.

ಅಪರಾಧಿಗಳ ಪರಿವೀಕ್ಷಣೆಯ ಅಧಿನಿಯಮ 1956 :

ಕೇಂದ್ರ ಅಪರಾಧಿಗಳ ಪರಿವೀಕ್ಷಣೆಯ ಕಾಯ್ದೆ 1958ರಡಿಯಲ್ಲಿ 21 ವರ್ಷದೊಳಗಿನ ಪ್ರಥಮ ಅಪರಾಧಿಗಳನ್ನು ಉತ್ತಮ ನಡತೆಗಾಗಿ ಪರಿವೀಕ್ಷಣೆಯಲ್ಲಿ ಇಡಲಾಗುವುದು. ಈ ಕಾಯ್ದೆಯಡಿ ಜಿಲ್ಲೆಯಲ್ಲಿ ಒಬ್ಬರು ಪರಿವೀಕ್ಷಣಾಧಿಕಾರಿಯವರು ಕಾರ್ಯ ನಿರ್ವಹಿಸುತ್ತಿದ್ದು ಇವರು ನ್ಯಾಯಾಲಯದ ಆದೇಶದ ಮೇರೆಗೆ ಅಪರಾಧಿಗಳ ಪೂರ್ವೋತ್ತರ ಬಗ್ಗೆ ತನಿಖೆ ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತಾರೆ. ಜತೆಗೆ ಇಲಾಖೆಯ ವಿವಿಧ ಸುಧಾರಣಾ ಸಂಸ್ಥೆಗಳ ಕೋರಿಕೆ ಮೇರೆಗೆ ಮಕ್ಕಳ ಮತ್ತು ಮಹಿಳೆಯರ ಗೃಹ ತನಿಖೆ ಮಾಡಿ ಸಂಬಂಧಪಟ್ಟ ಕಚೇರಿಗಳಿಗೆ ವರದಿಯನ್ನು ಕಾಲಕಾಲಕ್ಕೆ ಸಲ್ಲಿಸುತ್ತಾರೆ.

ಭಾಗ್ಯಲಕ್ಷ್ಮೀ ಯೋಜನೆ

2001ರ ಜನಗಣತಿಯ ಅನುಸಾರ ಕರ್ನಾಟಕದಲ್ಲಿ ಲಿಂಗ ಅನುಪಾತವು 1000 ಪುರುಷರಿಗೆ 964 ಇರುತ್ತದೆ. ಈ ಅನುಪಾತವು ರಾಷ್ಟ್ರೀಯ ಸರಾಸರಿಗಿಂತ ಉತ್ತಮವಾಗಿದ್ದರೂ ಸಹ ಪ್ರಸ್ತುತ ಪರಿಸ್ಥಿತಿಯಲ್ಲಿ ಹೆಣ್ಣು ಮಗುವಿನ ಜೀವನಕ್ಕೆ ಹೆಚ್ಚಿನ ಮೌಲ್ಯ ಕಲ್ಪಿಸುವ ಅಗತ್ಯವಿರುತ್ತದೆ. ಗಂಡು ಸಂತಾನಕ್ಕೆ ತೋರಲಾಗುವ ಉತ್ತೇಜನಕ್ಕೆ ಅನೇಕ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿದ್ದರೂ ಈ ಆದ್ಯತೆಯ ಕಾರಣದಿಂದ ಹೆಣ್ಣು ಮಕ್ಕಳ ಆರೋಗ್ಯ, ಶಿಕ್ಷಣ, ಪೋಷಣೆ ಹಾಗೂ ಸರ್ವಾಂಗೀಣ ಅಭಿವೃದ್ಧಿಗೆ ಅಡಚಣೆಯಾಗಿದೆ. ರಾಜ್ಯ ಸರ್ಕಾರಕ್ಕೆ ಹೆಣ್ಣು ಮಗುವಿನ ಬಗ್ಗೆ ಇರುವ ಕಳಕಳಿ, ಸಾಮಾಜಿಕ ಪ್ರಜ್ಞೆ ವ್ಯಕ್ತಪಡಿಸಲು ಹಾಗು ಹೆಣ್ಣು ಮಗುವಿನ ವಿರುದ್ಧ ಸಮಾಜದಲ್ಲಿರುವ ಧೋರಣೆಯನ್ನು ಬದಲಿಸಲು ಮತ್ತು ಹೆಣ್ಣು ಮಗುವಿನ ಜನನವನ್ನು ಉತ್ತೇಜಿಸಲು 2006-07ನೇ ಸಾಲಿನಲ್ಲಿ ಹೆಣ್ಣು ಮಕ್ಕಳ ರಕ್ಷಣೆಗಾಗಿ “ಭಾಗ್ಯಲಕ್ಷ್ಮೀ” ಎಂಬ ಯೋಜನೆಯನ್ನು ಸರ್ಕಾರವು ರೂಪಿಸಿದೆ. ಈ ಯೋಜನೆಯ ಸೌಲಭ್ಯಗಳನ್ನು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದ ಇಬ್ಬರು ಹೆಣ್ಣುಮಕ್ಕಳಿಗೆ ಸೀಮಿತಗೊಳಿಸಲಾಗಿದೆ. ಕುಟುಂಬದಲ್ಲಿನ ಮಕ್ಕಳ ಸಂಖ್ಯೆ 2ನ್ನು ಮೀರಬಾರದು. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಲ್ಲಿ ಜನಿಸಿದ ಇಬ್ಬರು ಹೆಣ್ಣು ಮಕ್ಕಳಿಗೆ ದಿನಾಂಕ 31-03-2006 ರಿಂದ ದಿನಾಂಕ 31-07-2008 ರವರೆಗೆ ಜನಿಸಿದ ಹೆಣ್ಣು ಮಕ್ಕಳಿಗೆ ರೂ. 10000/- ಹಾಗೂ ದಿನಾಂಕ 01-08-2008ರ ನಂತರ ಜನಿಸಿದ ಮೊದಲನೇ ಹೆಣ್ಣು ಮಗುವಿಗೆ ರೂ. 19300/- ಹಾಗೂ ಎರಡನೇ ಹೆಣ್ಣು ಮಗುವಿಗೆ ರೂ. 18350/- ರಂತೆ ಪಾಲುದಾರ ಹಣಕಾಸು ಸಂಸ್ಥೆಯಲ್ಲಿ ಠೇವಣಿ ಇಡಲಾಗುವುದು. ಪಾಲುದಾರ ಹಣಕಾಸು ಸಂಸ್ಥೆಯು ಹೆಣ್ಣು ಮಗುವಿನ ಹೆಸರಿನಲ್ಲಿ ಇಟ್ಟ ಠೇವಣಿ ಮೇಲಿನ ಆದಾಯವನ್ನು ಗರಿಷ್ಠಗೊಳಿಸಿ, ಠೇವಣಿ ಹಣವನ್ನು ಬಡ್ಡಿ ಸಮೇತವಾಗಿ ಫಲಾನುಭವಿಗೆ 18 ವರ್ಷ ಪೂರ್ಣಗೊಂಡ ನಂತರ ದೊರಕಿಸಿಕೊಡುತ್ತದೆ. ಮಗುವಿನ ಹೆಸರು ನೋಂದಾಯಿಸಲು ಮಗು ಜನಿಸಿದ ದಿನಾಂಕದಿಂದ 2 ವರ್ಷಗಳವರೆಗೆ ಅವಕಾಶವಿರುತ್ತದೆ.

ಸರ್ಕಾರದ ಆದೇಶ ಸಂಖ್ಯೆ: ಮಮಇ 87 ಮಮಅ 2020 ದಿನಾಂಕ 10-11-2020ರಂತೆ ಭಾಗ್ಯಲಕ್ಷ್ಮೀ ಯೋಜನೆಯನ್ನು 2020-21ನೇ ಸಾಲಿನಿಂದ ಅಂಚೆ ಇಲಾಖೆಯ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ

 • ಭಾಗ್ಯಲಕ್ಷ್ಮೀ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯಡಿ ಬಿಪಿಎಲ್ ಕುಟುಂಬದ 2 ಹೆಣ್ಣು ಮಕ್ಕಳಿಗೆ ಪ್ರತಿ ಮಗುವಿನ ಹೆಸರಿನಲ್ಲಿ ವಾರ್ಷಿಕ ರೂ. 3000/- ದಂತೆ 15 ವರ್ಷಗಳವರೆಗೆ ಒಟ್ಟು ರೂ. 45000/- ಗಳನ್ನು ಅಂಚೆ ಇಲಾಖೆಯಲ್ಲಿ ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯಡಿ ಠೇವಣಿ ಹೂಡಲಾಗುತ್ತದೆ.
 • ಫಲಾನುಭವಿಗೆ ಠೇವಣಿ ಹೂಡಿದ ವರ್ಷದಿಂದ 21 ವರ್ಷ ಅವಧಿ ಪೂರ್ಣಗೊಂಡ ನಂತರ ಪರಿಪಕ್ವ ಮೊತ್ತ ಅಂದಾಜು ರೂ. 1.27 ಲಕ್ಷ (ಪ್ರಸ್ತುತ ಬಡ್ಡಿದರದಂತೆ) ನೀಡಲಾಗುತ್ತಿದೆ.
 • 10ನೇ ತರಗತಿ ಉನ್ನತ ವಿದ್ಯಾಭಾಸಕ್ಕಾಗಿ ಖಾತೆಯಲ್ಲಿರುವ ಮೊತ್ತದ ಶೇ. 50 ರಷ್ಟು ಹಿಂಪಡೆಯಲು ಅವಕಾಶವಿರುತ್ತದೆ.
 • ಫಲಾನುಭವಿಗಳ ನೋಂದಣಿಗೆ ಇರುವ ಷರತ್ತುಗಳು ಹಿಂದಿನAತೆಯೇ ಮುಂದುವರೆಯುತ್ತವೆ.
ಅರ್ಜಿಯೊಂದಿಗೆ ಸಲ್ಲಿಸಬೇಕಾದ ಅವಶ್ಯಕ ದಾಖಲಾತಿಗಳು:
 • ನಿಗದಿತ ಅರ್ಜಿ ನಮೂನೆ
 • ಪೋಷಕರೊಂದಿಗೆ ಮಗುವಿನ ಭಾವಚಿತ್ರ
 • ಮಗುವಿನ ಜನನ ಪ್ರಮಾಣ ಪತ್ರ
 • ಕುಟುಂಬದ ಆದ್ಯತಾ ಕುಟುಂಬ ಪಡಿತರ ಚೀಟಿ
 • ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಕ್ಕೆ ಸೇರಿದ್ದಲ್ಲಿ ಜಾತಿ ಪ್ರಮಾಣ ಪತ್ರ
 • ವಿವಾಹ ನೋಂದಣಿ ಪ್ರಮಾಣ ಪತ್ರ/ ಸ್ವಯಂ ಘೋಷಣಾ ವಿವಾಹ ಪ್ರಮಾಣ ಪತ್ರ (ನಮೂನೆ-6)
 • ಆದ್ಯತೆ ಮೇರೆಗೆ ಮಗುವಿನ/ ಪೋಷಕರ ಆಧಾರ್ ಕಾರ್ಡ್
 • ಪಾನ್ ಕಾರ್ಡ್ / ಫಾರಂ 60

ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಮರಣ ಪರಿಹಾರ ಹಾಗೂ ತೀವ್ರತರ ಕಾಯಿಲೆಗಳಿಗೆ ಆರ್ಥಿಕ ನೆರವು

ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಯಕರ್ತರು ಮತ್ತು ಸಹಾಯಕಿಯರು ಗೌರವಧನದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರು ಗೌರವಸೇವೆಯಲ್ಲಿರುವಾಗ ಮರಣ ಹೊಂದಿದಲ್ಲಿ ಅವರ ಕುಟುಂಬದವರಿಗೆ ಆರ್ಥಿಕ ಪರಿಹಾರವನ್ನು ಮತ್ತು ತೀವ್ರತರವಾದ ಕಾಯಿಲೆಯಿಂದ ನರಳುತ್ತಿರುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಆರ್ಥಿಕ ಪರಿಹಾರವನ್ನು ಈ ಯೋಜನೆಯಡಿ ನೀಡಲಾಗುವುದು. ಮರಣ ಹೊಂದಿದ ಕಾರ್ಯಕರ್ತೆಯರ ಕುಟುಂಬದ ವಾರಸುದಾರರಿಗೆ ರೂ. 50,000 ಮತ್ತು ಮರಣ ಹೊಂದಿದ ಸಹಾಯಕಿಯರ ಕುಟುಂಬದ ವಾರಸುದಾರರಿಗೆ ರೂ. 50,000 ಗಳನ್ನು ಮರಣ ಪರಿಹಾರ ಧನವನ್ನಾಗಿ ಮಂಜೂರು ಮಾಡಲಾಗುವುದು. ತೀವ್ರತರ ಕಾಯಿಲೆಯಲ್ಲಿರುವ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ನೀಡುವ ವೈದ್ಯಕೀಯ ಪರಿಹಾರ ಕೂಡಾ ಇದೇ ಮೊತ್ತದ್ದಾಗಿರುತ್ತದೆ. ಈ ಸೌಲಭ್ಯಕ್ಕೆ ಅರ್ಹರಾಗಲು ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕನಿಷ್ಠ ಒಂದು ವರ್ಷಗಳ ಗೌರವ ಸೇವೆಯನ್ನು ಪೂರೈಸಿರಬೇಕು.

ಸಾಮಾಜಿಕ ಪಿಡುಗುಗಳ ನಿವಾರಣೆಗಾಗಿ ಅರಿವು ಮೂಡಿಸುವ ಕಾರ್ಯಕ್ರಮಗಳು

ಸಾಮಾಜಿಕ ಪಿಡುಗುಗಳಾದ ವರದಕ್ಷಿಣೆ, ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಕೌಟುಂಬಿಕ ದೌರ್ಜನ್ಯ, ಬಾಲ್ಯ ವಿವಾಹ, ಮದ್ಯ ಮತ್ತು ಮಾದಕ ವಸ್ತು ಸೇವನೆ ಮುಂತಾದುವುಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಪ್ರಚಾರ ಕಾರ್ಯಕ್ರಮಗಳು ಮತ್ತು ಶಿಬಿರಗಳನ್ನು ಏರ್ಪಡಿಸಲಾಗುವುದು.

ಕೌಟುಂಬಿಕ ಹಿಂಸೆಯಿದ ಮಹಿಳೆಯರನ್ನು ರಕ್ಷಿಸುವ ಕಾಯ್ದೆ-2005 :

ಸಂವಿಧಾನದಲ್ಲಿ ಮಹಿಳೆಯರಿಗೆ ಒದಗಿಸಿರುವ ಹಕ್ಕುಗಳ ರಕ್ಷಣೆಯ ಭದ್ರತೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಒದಗಿಸುವುದಕ್ಕಾಗಿ ಭಾರತ ಸರ್ಕಾರವು ಕೌಟುಂಬಿಕ ಹಿಂಸೆಯಿಂದ ಮಹಿಳೆಯರನ್ನು ರಕ್ಷಿಸುವ ಅಧಿನಿಯಮ-2005 ಹಾಗೂ ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ನಿಯಮ 2006ರನ್ನು ಜಾರಿಗೆ ತಂದಿರುತ್ತದೆ. ಜಿಲ್ಲಾ ಮಟ್ಟದಲ್ಲಿ ಉಪನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ತಾಲೂಕು ಮಟ್ಟದಲ್ಲಿ ಆಯಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ದೌರ್ಜನ್ಯಕ್ಕೊಳಗಾದ ಮಹಿಳೆಯರನ್ನು ಸಂರಕ್ಷಿಸುವ ‘ಸಂರಕ್ಷಣಾಧಿಕಾರಿ’ (ಪ್ರೊಟೆಕ್ಷನ್ ಆಫೀಸರ್) ಎಂದು ಸರ್ಕಾರದಿಂದ ನೇಮಕಗೊಂಡಿರುತ್ತಾರೆ. ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಈ ಅಧಿಕಾರಿಗಳನ್ನು ಸಂಪರ್ಕಿಸಿದಲ್ಲಿ ಈ ಕಾಯ್ದೆಯಡಿ ಲಭ್ಯವಿರುವ ಎಲ್ಲಾ ಪರಿಹಾರ ಸೌಲಭ್ಯಗಳನ್ನು ಒದಗಿಸಲು ಅವರು ಸಹಾಯ ಮಾಡುತ್ತಾರೆ. ಪ್ರತಿಯೊಂದು ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸಹಯೋಗದಲ್ಲಿ ಉಚಿತ ಕಾನೂನು ಸಲಹಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಈ ಕೇಂದ್ರಗಳಲ್ಲಿ ನುರಿತ ವಕೀಲರು ಪ್ರತಿ ಬುಧವಾರ ಮತ್ತು ಶನಿವಾರ ಉಚಿತ ಕಾನೂನು ಸಲಹೆ ನೀಡುವರು.

ದತ್ತು ಸ್ವೀಕಾರ ಕಾರ್ಯಕ್ರಮ

ದತ್ತು ಕಾರ್ಯಕ್ರಮವು ಅನಾಥ, ನಿರ್ಗತಿಕ ಹಾಗೂ ತಿರಸ್ಕರಿಸಲ್ಪಟ್ಟ ಮಕ್ಕಳಿಗೆ ಒಂದು ಉತ್ತಮವಾದ ಕುಟುಂಬದ ವಾತಾವರಣವನ್ನು ನೀಡಿ ಅವರಿಗೆ ವಾತ್ಸಲ್ಯ, ಪ್ರೀತಿ, ರಕ್ಷಣೆ ಒದಗಿಸಿ ಆ ಮಕ್ಕಳ ಮುಂದಿನ ಭವಿಷ್ಯವನ್ನು ರೂಪಿಸುವುದು ಹಾಗೂ ತಮ್ಮ ನೈಜ ಮಕ್ಕಳನ್ನು ಹೊಂದಿಲ್ಲದ ಪೋಷಕರಿಗೆ ಮಕ್ಕಳ ಕೊರತೆಯನ್ನು ಹೋಗಲಾಡಿಸಿ ಅವರ ಬದುಕಿನಲ್ಲಿ ಉತ್ಸಾಹ, ಜವಾಬ್ದಾರಿ ಮೂಡಿಸುವುದಾಗಿದೆ. ಸವೋಚ್ಛ ನ್ಯಾಯಾಲಯದ ಸೂಚನೆಗಳಂತೆ ಮಗುವಿನ ಸರ್ವಾಂಗೀಣ ಅಭಿವೃದ್ಧಿಗೆ ಕುಟುಂಬವು ಒಂದು ಉತ್ತಮ ಸ್ಥಳವಾಗಿರುತ್ತದೆ. ದತ್ತು ಪ್ರಕ್ರಿಯೆಯು ಮಗುವಿಗೆ ಕುಟುಂಬದ ಹಕ್ಕನ್ನು ಖಚಿತಪಡಿಸುತ್ತದೆ.

‘ಹೊಯ್ಸಳ’ ಮತ್ತು ‘ಕೆಳದಿ ಚೆನ್ನಮ್ಮ’ ಶೌರ್ಯ ಪ್ರಶಸ್ತಿಗಳು :

ವಯೋಮಿತಿಯೊಳಗಿನ ಅಪ್ರತಿಮ ಧೈರ್ಯ, ಶೌರ್ಯ ಪ್ರದರ್ಶಿಸಿ, ಇತರರ ಜೀವ ರಕ್ಷಣೆ ಮಾಡಿದ ಜಿಲ್ಲೆಯ ಇಬ್ಬರು ಬಾಲಕರಿಗೆ ‘ಹೊಯ್ಸಳ’ ಹಾಗೂ ಇಬ್ಬರು ಬಾಲಕಿಯರಿಗೆ ‘ಕೆಳದಿ ಚೆನ್ನಮ್ಮ’ ಪ್ರಶಸ್ತಿಯನ್ನು ನೀಡುವ ಯೋಜನೆ ಇದಾಗಿದೆ. ಮಗುವು ತನ್ನಲ್ಲಿರುವ ಸಮಯ ಪ್ರಜ್ಞೆ ಉಪಯೋಗಿಸಿ ಜೀವದ ಹಂಗನ್ನು ತೊರೆದು ಇತರರ ಪ್ರಾಣ ರಕ್ಷಣೆಗಾಗಿ ಧೈರ್ಯ ಸಾಹಸ ತೋರಿದ ಪ್ರಕರಣಗಳು ಇತರೆ ಮಕ್ಕಳಿಗೆ ಮಾದರಿಯಾಗುವುದನ್ನು ಉತ್ತೇಜಿಸುವ ಸಲುವಾಗಿ ಪ್ರಶಸ್ತಿಯನ್ನು ಪ್ರದಾನ ಮಾಡಲು ಈ ಯೋಜನೆಯನ್ನು ರೂಪಿಸಲಾಗಿದೆ. ಈ ಪ್ರಶಸ್ತಿಯಡಿ ಶೌರ್ಯ ಪ್ರದರ್ಶಿಸಿದ ಮಗುವಿಗೆ ಪ್ರಶಸ್ತಿ ಪತ್ರದೊಂದಿಗೆ ರೂ. 10,000-00 ನಗದು ಪಾವತಿಸಲಾಗುವುದಲ್ಲದೆ ಶಾಲಾ ಶಿಕ್ಷಣ ಪೂರೈಸುವ ವರೆಗೆ ರೂ. 2000-00ಗಳ ವಿದ್ಯಾರ್ಥಿವೇತನ ನೀಡಲಾಗುವುದು.

ಪ್ರಾಯೋಜಕತ್ವ ಯೋಜನೆ :

ಈ ಯೋಜನೆಯನ್ನು ಬಾಲನ್ಯಾಯ ಕಾಯ್ದೆ (ರಕ್ಷಣೆ ಮತ್ತು ಪೋಷಣೆ) ಕಾಯ್ದೆ 2000ರ ಸೆಕ್ಷನ್ 43 ಮತ್ತು ಕರ್ನಾಟಕ ಬಾಲನ್ಯಾಯ (ರಕ್ಷಣೆ ಮತ್ತು ಪೋಷಣೆ) ನಿಯಮ 2002ರ ನಿಯಮ 30ರನ್ವಯ ಅನುಷ್ಠಾನಗೊಳಿಸಲಾಗುವುದು. ಈ ಯೋಜನೆಯಡಿ ಬಾಲನ್ಯಾಯ ಕಾಯ್ದೆ 2000ರಡಿಯಲ್ಲಿ ಬರುವ ಮಕ್ಕಳ ಪಾಲಕರಿಗೆ ಅಥವಾ ಪೋಷಕರಿಗೆ ಪೂರಕ ಸಂಪನ್ಮೂಲಗಳನ್ನು ಒದಗಿಸುವುದು, ಮಗುವಿನ ಶಿಕ್ಷಣ, ವೃತ್ತಿ ತರಬೇತಿ, ಆರೋಗ್ಯ ರಕ್ಷಣೆ ಇತ್ಯಾದಿಗಳಿಗೆ ಆರ್ಥಿಕ ನೆರವು ನೀಡುವುದು, ಪಾಲಕರು/ಪೋಷಕರಿಗೆ ಮಗುವನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೆಚ್ಚಿಸುವ ಸಲುವಾಗಿ ಪ್ರೋತ್ಸಾಹಿಸಲು ಕುಟುಂಬಕ್ಕೆ ಪೂರಕ ಆದಾಯ ನೀಡುವುದು, ಇಲಾಖೆಯ ವಿವಿಧ ಸಂಸ್ಥೆಗಳಿಂದ ಬಿಡುಗಡೆ ಹೊಂದುವ ಮಕ್ಕಳ ಅವಶ್ಯಕತೆಗಳನ್ನು ಪೂರೈಸುವ ಸಲುವಾಗಿ ಈ ಯೋಜನೆಯಡಿ ಸಹಾಯವನ್ನು ನೀಡಲಾಗುವುದು. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯಯು ಈ ಯೋಜನೆಯಡಿಯಲ್ಲಿ ಮಕ್ಕಳಿಗೆ ಆರ್ಥಿಕ ಸಹಾಯ ನೀಡುವ ಅಧಿಕಾರ ಹೊಂದಿರುತ್ತದೆ.

ನಬಾರ್ಡ್ ನೆರವಿನ ಅಂಗನವಾಡಿ ಕಟ್ಟಡಗಳ ನಿರ್ಮಾಣ

ಅಂಗನವಾಡಿ ಕೇಂದ್ರಗಳನ್ನು ನಡೆಸಲು ಕಟ್ಟಡದ ತೀವ್ರ ಅವಶ್ಯಕತೆಯನ್ನು ಮನಗಂಡು ನಬಾರ್ಡ್ ಸಂಸ್ಥೆಯು ಕಟ್ಟಡ ಕಟ್ಟಲು ಸಾಲದ ರೂಪದಲ್ಲಿ ಆರ್ಥಿಕ ನೆರವನ್ನು ನೀಡುತ್ತದೆ. ಪ್ರತೀ ವರ್ಷ ನಬಾರ್ಡ್ ನೆರವಿನ ಆರ್ಐಡಿಎಫ್ ಯೋಜನೆಯಡಿ ಅಂಗನವಾಡಿ ಕಟ್ಟಡಗಳನ್ನು ನಿರ್ಮಿಸಲು ಸರ್ಕಾರದಿಂದ ಹಣ ಬಿಡುಗಡೆಯಾಗುತ್ತಿದ್ದು ಈ ಹಣದಲ್ಲಿ ನಿಗದಿತ ವಿನ್ಯಾಸ ಮತ್ತು ಇಲಾಖೆಯ ಮಾರ್ಗಸೂಚಿಗಳನುಸಾರವಾಗಿ ಜಿಲ್ಲಾ ಪಂಚಾಯತ್ನವರು ನಿಗದಿಪಡಿಸುವ ನಿರ್ಮಾಣ ಏಜನ್ಸಿಯ ಮೂಲಕ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.

ಮಹಿಳೆಯರ ಮತ್ತು ಮಕ್ಕಳ ಸಾಗಣೆ ನಿವಾರಣೆ ಯೋಜನೆ :

ಅನೈತಿಕ ಚಟುವಟಿಕೆಗಳಿಗಾಗಿ ಸರಕಿನ ರೂಪದಲ್ಲಿ ಮಹಿಳೆಯರ ಮತ್ತು ಮಕ್ಕಳ ಸಾಗಣೆಯು (ಟ್ರಾಫಿಕಿಂಗ್) ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದ್ದು ಇದು ನಾಗರಿಕ ಸಮಾಜಕ್ಕೆ ಒಂದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಪಿಡುಗನ್ನು ಸ್ಥಳೀಯ ಮಟ್ಟದಲ್ಲಿ ತಡೆಯುವುದು ಅನಿವಾರ್ಯವಾಗಿರುತ್ತದೆ. ಮಾನವ ಸಾಗಣೆಯನ್ನು ತಡೆಗಟ್ಟಲು ಮತ್ತು ಸಾಗಣೆಗೆ ಒಳಪಟ್ಟ ಮಹಿಳೆಯರ ಮತ್ತು ಮಕ್ಕಳ ಪುನರ್ವಸತಿ ಮಾಡುವುದು ನಾಗರಿಕ ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿರುತ್ತದೆ. ಈ ವ್ಯವಸ್ಥಿತ ಪಿಡುಗನ್ನು ನಿಯಂತ್ರಿಸಲು ಜಿಲ್ಲಾ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಜಾಗೃತಿಯನ್ನು ಮೂಡಿಸುವುದು ಅಗತ್ಯವೆಂದು ಭಾವಿಸಿ ಇಲಾಖೆಯು ಈ ಕಾರ್ಯಕ್ರಮವನ್ನು ಜಾರಿಗೆ ತಂದಿರುತ್ತದೆ. ಜಿಲ್ಲಾ, ತಾಲೂಕು ಮತ್ತು ಗ್ರಾಮ ಮಟ್ಟದಲ್ಲಿ ಸಾಗಣೆ ತಡೆಗಟ್ಟಲು ಸಮಿತಿಗಳನ್ನು ರಚಿಸಲಾಗಿದೆ. ತಾಲೂಕು ಮತ್ತು ಗ್ರಾಮ ಮಟ್ಟದ ಸದಸ್ಯರಿಗೆ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಅಲ್ಲದೆ ತಾಲೂಕು ಮಟ್ಟದಲ್ಲಿ ಸಾರ್ವಜನಿಕರಿಗೂ ಈ ಸಮಸ್ಯೆಯ ಬಗ್ಗೆ ಅರಿವು ಮೂಡಿಸಲು ಜಾಥಾ, ಮೆರವಣಿಗೆಗಳು ಮತ್ತು ಬೀದಿ ನಾಟಕಗಳನ್ನು ಏರ್ಪಡಿಸಲಾಗುತ್ತದೆ.

ಅಸಾಧಾರಣ ಪ್ರತಿಭೆ ಹೊಂದಿರುವ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ :

ಶಿಕ್ಷಣ, ಕಲೆ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ಅಸಾಧಾರಣ ಪ್ರತಿಭೆಯುಳ್ಳ ಪ್ರತೀ ಕ್ಷೇತ್ರದಲ್ಲಿ ಇಬ್ಬರು ಮಕ್ಕಳನ್ನು ಗುರುತಿಸಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿಯ ಅನುಮೋದನೆಯೊಂದಿಗೆ ಪ್ರಶಸ್ತಿ ನೀಡುವ ಯೋಜನೆ ಇದಾಗಿದೆ. ಈ ಪ್ರಶಸ್ತಿಯು ರೂ. 10,000 ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿರುತ್ತದೆ. ಪ್ರತೀ ವರ್ಷ ಜಿಲ್ಲೆಯಲ್ಲಿ 8 ಇಂತಹ ಮಕ್ಕಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಕೌಶಲ್ಯ ಅಭಿವೃದ್ಧಿ ತರಬೇತಿ :

Tಸುಧಾರಣಾ ಸಂಸ್ಥೆಗಳಲ್ಲಿ ದಾಖಲಾಗುವ ಮಕ್ಕಳು ಹಾಗೂ ಮಹಿಳೆಯರ ಹಿನ್ನೆಲೆ ಶೋಚನೀಯ. ಈ ಮಕ್ಕಳು ಹಾಗೂ ಮಹಿಳೆಯರು ತೀರಾ ಬಡತನದಿಂದ, ಒಡೆದ ಕುಟುಂಬದಿAದ, ಸಾಮರಸ್ಯವಿಲ್ಲದ ಕುಟುಂಬದಿಂದ, ಏಕ ಪೋಷಕರು ಅಥವಾ ಯಾರೂ ಪೋಷಕರಿಲ್ಲದ ಕುಟುಂಬದಿAದ ಬಂದಂತಹವರಾಗಿರುತ್ತಾರೆ. ಇಂತಹ ಮಕ್ಕಳನ್ನು ಸಮಾಜದ ಮುಖ್ಯ ವಾಹಿನಿಗೆ ತರುವಲ್ಲಿ ಇಲಾಖೆಯು ಶ್ರಮಿಸುತ್ತಿದ್ದು ಈಗ ಸದ್ಯ ನೀಡಲಾಗುತ್ತಿರುವ ಔಪಚಾರಿಕ ಶಿಕ್ಷಣದ ಜೊತೆಗೆ ಈ ಸಂಸ್ಥೆಗಳಲ್ಲಿನ ಮಕ್ಕಳು ಮತ್ತು ಮಹಿಳೆಯರು ಸ್ಪರ್ಧಾತ್ಮಕ ಜಗತ್ತಿನಲ್ಲಿ ಜೀವನದ ಮುಖ್ಯವಾಹಿನಿಗೆ ಸೇರಲು ಉದ್ಯೋಗಾಧಾರಿತ ಕೌಶಲ್ಯ ತರಬೇತಿಗಳನ್ನು ಪಡೆಯುವುದು ಅವಶ್ಯಕವೆಂದು ಮನಗಂಡು ಸರ್ಕಾರವು ಸುಧಾರಣಾ ಸಂಸ್ಥೆಗಳ ನಿವಾಸಿಗಳಿಗೆ ಕೌಶಲ್ಯತೆ ಅಭಿವೃದ್ಧಿ ತರಬೇತಿ ಯೋಜನೆಯನ್ನು ಜಾರಿಗೆ ತಂದಿದೆ. ಸದ್ಯದಲ್ಲಿ ಮಡಿಕೇರಿಯಲ್ಲಿರುವ ಬಾಲಮಂದಿರ ಸುಧಾರಣಾ ಸಂಸ್ಥೆಯಲ್ಲಿ ಈ ತರಬೇತಿಯನ್ನು ನೀಡಲಾಗುತ್ತಿದೆ. ಈ ಯೋಜನೆಯಡಿ ಸಂಸ್ಥೆಯ ನಿವಾಸಿಗಳು ಅವರ ಆಸಕ್ತಿ, ಅರ್ಹತೆಗನುಗುಣವಾಗಿ ಯಾವುದೇ ಕುಶಲತೆಯಲ್ಲಿ ತರಬೇತಿಯನ್ನು ಹೊಂದಬಹುದು.

ಬಾಲಭವನ:

6-16 ವರ್ಷದ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಜಿಲ್ಲಾ ಬಾಲಭವನದಿಂದ ಸೃಜನಾತ್ಮಕ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತದೆ. ಈ ಚಟುವಟಿಕೆಗಳಲ್ಲಿ ಸಂಗೀತಾ, ನೃತ್ಯ, ಚಿತ್ರಕಲೆ, ಕರಕುಶಲ ಕಲೆ, ಜೇಡಿ ಮಣ್ಣಿನ ಕಲೆ, ನಾಟಕ ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಂಡು ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಗುರುತಿಸಿ ಬೆಳಕಿಗೆ ತರುವುದೇ ಬಾಲಭವನದ ಉದ್ದೇಶವಾಗಿರುತ್ತದೆ. ಈ ಕಾರ್ಯಕ್ರಮಗಳನ್ನು ಸರ್ಕಾರಿ ಶಾಲಾ ಮಕ್ಕಳು ಹಾಗೂ ಸೌಲಭ್ಯ ವಂಚಿತ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡುವುದು ಸರ್ಕಾರಿ ಬಾಲಕರು/ಬಾಲಕಿಯರು ಬಾಲಮಂದಿರದ ಸಂಸ್ಥೆಗಳ ಮಕ್ಕಳಿಗೆ, ವಿಕಲಚೇತನ ಮಕ್ಕಳಿಗೆ ಮತ್ತು ಹೆಚ್ ಐ ವಿ ಸೊಂಕುಪೀಡಿತ ಮಕ್ಕಳಿಗೂ ವಿಶೇಷ ಆದ್ಯತೆ ನೀಡುವುದು.

ಜಿಲ್ಲಾ ಬಾಲಭವನ ಸಮಿತಿ ವಿವರ ಈ ಕೆಳಕಂಡಂತಿರುತ್ತದೆ.

1 ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರು,ಕೊಡಗು ಜಿಲ್ಲಾ ಪಂಚಾಯತ್, ಮಡಿಕೇರಿ ಅಧ್ಯಕ್ಷರು
2 ಉಪ ನಿರ್ದೇಶಕರು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಕೊಡಗು ಜಿಲ್ಲೆ. ಸದಸ್ಯರು ಕಾರ್ಯದರ್ಶಿ
3 ಆಯುಕ್ತರು ನಗರ ಸಭೆ, ಮಡಿಕೇರಿ, ಸದಸ್ಯರು
4 ಕಾರ್ಯನಿರ್ವಾಹಕ ಅಭಿಯಂತರರು ಲೋಕೋಪಯೋಗಿ ಇಲಾಖೆ, ಮಡಿಕೇರಿ ಸದಸ್ಯರು
5 ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ, ಮಡಿಕೇರಿ ಕೊಡಗು ಜಿಲ್ಲೆ ಸದಸ್ಯರು
6 ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸೃತಿ ಇಲಾಖೆ, ಮಡಿಕೇರಿ, ಕೊಡಗು ಜಿಲ್ಲೆ i ಸದಸ್ಯರು
7 ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಮಡಿಕೇರಿ ಕೊಡಗು ಜಿಲ್ಲೆ ಸದಸ್ಯರುs
8 ನಿರ್ದೇಶಕರು, ಸ್ವಸ್ಥ ಸಂಸ್ಥೆ, ಸುಂಟಿಕೊಪ್ಪ, ಕೊಡಗು ಜಿಲ್ಲೆt ನಾಮ ನಿರ್ದೇಶಿತ ಸದಸ್ಯರು
9 ಅಧ್ಯಕ್ಷರು, ರೋಟರಿ ಮಿಸ್ಟಿ ಹಿಲ್ಸ್, ಸಂಸ್ಥೆ, ಮಡಿಕೇರಿ, ಕೊಡಗು ಜಿಲ್ಲೆ ನಾಮ ನಿರ್ದೇಶಿತ ಸದಸ್ಯರು

ಜಿಲ್ಲಾ ವಲಯ ಯೋಜನೆಗಳು

ಸಮಗ್ರ ಶಿಶು ಅಭಿವೃದ್ಧಿ ಸೇವಾ ಯೋಜನೆ (ಐ.ಸಿ.ಡಿ.ಎಸ್) :

ಇದು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು ಮಕ್ಕಳ ಸರ್ವತೋಮುಖ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲ್ಪಟ್ಟಿದೆ. ಇದರಡಿ ಆರು ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಪೂರಕ ಪೌಷ್ಟಿಕ ಆಹಾರ, ಚುಚ್ಚುಮದ್ದು, ಅನೌಪಚಾರಿಕ ಶಾಲಾಪೂರ್ವ ಶಿಕ್ಷಣ, ಆರೋಗ್ಯ ತಪಾಸಣೆ, ಅಪೌಷ್ಟಿಕತೆಗೆ ಒಳಗಾದ ಮಕ್ಕಳನ್ನು ಆರೋಗ್ಯ ಇಲಾಖೆಯ ಎನ್ಆರ್ಸಿ ಕೇಂದ್ರಗಳಿಗೆ ದಾಖಲಿಸುವುದು ಮತ್ತು ಆರೋಗ್ಯ ಮತ್ತು ಪೌಷ್ಟಿಕಾಂಶ ಶಿಕ್ಷಣವನ್ನು ನೀಡಲಾಗುತ್ತದೆ. ಈ ಯೋಜನೆಯ ಸೌಲಭ್ಯಗಳನ್ನು ಅಂಗನವಾಡಿ ಕೇಂದ್ರಗಳ ಮೂಲಕ ಜಾರಿಗೊಳಿಸಲಾಗುತ್ತದೆ. ಪ್ರಸ್ತುತ ಜಿಲ್ಲೆಯಲ್ಲಿ 848 ಅಂಗನವಾಡಿ ಕೇಂದ್ರಗಳು ಮತ್ತು 23 ಮಿನಿ ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿಯೊಂದು ಅಂಗನವಾಡಿ ಕೇಂದ್ರದಲ್ಲಿ ಗೌರವಧನದ ಆಧಾರದಲ್ಲಿ ಕಾರ್ಯನಿರ್ವಹಿಸುವ ಒಬ್ಬರು ಕಾರ್ಯಕರ್ತೆ ಮತ್ತು ಒಬ್ಬರು ಸಹಾಯಕಿ ಇರುತ್ತಾರೆ. ಈ ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿಗಳ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ.

ಕ್ರ.ಸಂ ತಾಲ್ಲೂಕಿನ ಹೆಸರು ಅಂಗನವಾಡಿ ಕೇಂದ್ರಗಳ ಸಂಖ್ಯೆ ಮಿನಿ ಅಂಗನವಾಡಿ ಕೇಂದ್ರಗಳು ಒಟ್ಟು ಅಂಗನವಾಡಿ ಕೇಂದ್ರಗಳ ಅಂಗನವಾಡಿ ಕಾರ್ಯಕರ್ತೆಯರು/ ಸಂಖ್ಯೆ ಅಂಗನವಾಡಿ ಸಹಾಯಕಿಯರಸಂಖ್ಯೆ
1 ಮಡಿಕೇರಿ 247 4 251 251 247
2 ಸೋಮವಾರಪೇಟೆ 275 9 284 284 275
3 ಪೊನ್ನಂಪೇಟೆ 326 10 336 336 326
ಒಟ್ಟು 848 23 871 871 848

ಸಮಗ್ರ ಶಿಶು ಅಭಿವೃದ್ಧಿ ಸೇವೆಗಳ ಗುಣಮಟ್ಟ ಮತ್ತು ಬಲವರ್ಧನೆಗಾಗಿ ಜಿಲ್ಲಾ ಮಟ್ಟದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಸೇವಾ ಯೋಜನೆಯ ಉಸ್ತುವಾರಿ ಮತ್ತು ಪರಿಶೀಲನಾ ಸಮಿತಿಯನ್ನು ಸರ್ಕಾರದ ಆದೇಶ ಸಂಖ್ಯೆ: ಡಬ್ಲ್ಯೂಸಿಡಿ 248 ಐಸಿಡಿ 2012 (ಭಾ-1) ದಿನಾಂಕ 10-07-2012ರ ಪ್ರಕಾರ ರಚಿಸಲಾಗಿರುತ್ತದೆ.

ಜಿಲ್ಲಾ ಮಟ್ಟದ ಐಸಿಡಿಎಸ್ ಮೇಲ್ವಿಚಾರಣಾ ಮತ್ತು ಪರಿಶೀಲನಾ ಸಮಿತಿಯ ವಿವರ ಕೆಳಕಂಡಂತಿರುತ್ತದೆ.
 • ಜಿಲ್ಲಾಧಿಕಾರಿಯವರು: ಅಧ್ಯಕ್ಷರು
 • ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರು:ಉಪಾಧ್ಯಕ್ಷರು
 • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರು:ಸದಸ್ಯರು
 • ಮುಖ್ಯ ಯೋಜನಾಧಿಕಾರಿಗಳು, ಕೊಡಗು ಜಿಲ್ಲಾ ಪಂಚಾಯತ್: ಸದಸ್ಯರು
 • ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಯವರು: ಸದಸ್ಯರು
 • ಜಂಟಿ ಕೃಷಿ ನಿರ್ದೇಶಕರು: ಸದಸ್ಯರು
 • ಉಪ ನಿರ್ದೇಶಕರು, ತೋಟಗಾರಿಕೆ ಇಲಾಖೆ: ಸದಸ್ಯರು
 • ಜಿಲ್ಲಾ ಅಧಿಕಾರಿಯವರು, ರಾಷ್ಟಿçÃಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ): ಸದಸ್ಯರು
 • ಕಾರ್ಯಪಾಲಕ ಅಭಿಯಂತರರು, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗ: ಸದಸ್ಯರು
 • ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ :ಸದಸ್ಯರು
 • ಜಿಲ್ಲೆಯ ಲೋಕಸಭಾ ಸದಸ್ಯರು: ಸದಸ್ಯರು
 • ಜಿಲ್ಲೆಯ ಶಾಸಕರು: ಸದಸ್ಯರು
 • ಪ್ರಾಂಶುಪಾಲರು, ಅಂಗನವಾಡಿ ತರಬೇತಿ ಕೇಂದ್ರ: ಸದಸ್ಯರು
 • ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು (3) : ಸದಸ್ಯರು
 • ಜಿಲ್ಲಾ ನಿರೂಪಣಾಧಿಕಾರಿಯವರು : ಸದಸ್ಯ ಕಾರ್ಯದರ್ಶಿ

ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮ :

ಆರು ವರ್ಷದೊಳಗಿನ ಮಕ್ಕಳ, ಗರ್ಭಿಣಿ ಮತ್ತು ಬಾಣಂತಿಯರ ಪೌಷ್ಟಿಕ ಮಟ್ವನ್ನು ಉತ್ತಮಪಡಿಸುವುದು ಮತ್ತು ಅಪೌಷ್ಟಿಕತೆಯನ್ನು ಹೋಗಲಾಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿರುತ್ತದೆ. ಅಂಗನವಾಡಿ ಕೇಂದ್ರಗಳ ಮೂಲಕ ಪ್ರತೀ ದಿನ 6 ವರ್ಷದೊಳಗಿನ ಮಕ್ಕಳಿಗೆ ರೂ. 8.00 ಮೌಲ್ಯದ ಮತ್ತು ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರು, ಬಾಣಂತಿಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ರೂ.21.00 ಮೌಲ್ಯದ ಪೂರಕ ಪೌಷ್ಟಿಕ ಆಹಾರ (ಹಾಲಿನ ಪುಡಿ, ಮೊಟ್ಟೆ. ತರಕಾರಿ, ಆಹಾರ ಸಾಮಾಗ್ರಿಗಳು)ವನ್ನು ಮತ್ತು ಕಿಶೋರಿಯರಿಗೆ ರೂ. 9.50 ಮೌಲ್ಯದ ಪೂರಕ ಪೌಷ್ಟಿಕ ಆಹಾರವನ್ನು ವರ್ಷದಲ್ಲಿ 300 ದಿನಗಳು ನೀಡಲಾಗುತ್ತದೆ. ಅಲ್ಲದೆ ತೀವ್ರತರವಾದ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ದಿನಕ್ಕೆ ರೂ. 12.00ರ ಮೌಲ್ಯದ ಪೌಷ್ಟಿಕ ಆಹಾರವನ್ನು ವರ್ಷದಲ್ಲಿ 300 ದಿನ ನೀಡಲಾಗುತ್ತದೆ. ಐ.ಸಿ.ಡಿ.ಎಸ್. ಮಾರ್ಗಸೂಚಿಯಂತೆ ಫಲಾನುಭವಿಗಳು ಪ್ರತಿ ದಿನ ಸೇವಿಸುವ ಆಹಾರಕ್ಕೆ ಪೂರಕವಾಗಿ ನಿರ್ದೀಷ್ಟ ಪಡಿಸಲಾದ ಕ್ಯಾಲೋರಿಗಳನ್ನು ಮತ್ತು ಪ್ರೊಟೀನನ್ನು ಒದಗಿಸುವ ಸಲುವಾಗಿ ಪೂರಕ ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ. ಪ್ರಾಯಪೂರ್ವ ಬಾಲಕಿಯರು (ಕಿಶೋರಿಯರು) ಮತ್ತು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನೂ ಈ ಕಾರ್ಯಕ್ರಮದಡಿ ಫಲಾನುಭವಿಗಳೆಂದು ಗುರುತಿಸಲಾಗಿದೆ. ಈ ಕಾರ್ಯಕ್ರಮವನ್ನು ತಾಲೂಕು ಪಂಚಾಯಿತಿಗಳ ಮೂಲಕ ಅನುಷ್ಠಾನ ಮಾಡಲಾಗುತ್ತಿದೆ.

ಜಿಲ್ಲೆಯಲ್ಲಿ 2 (ಎರಡು) ಎಂ.ಎಸ್.ಪಿ.ಸಿ (ಮಹಿಳಾ ಪೂರಕ ಪೌಷ್ಟಿಕ ಆಹಾರ ಸರಬರಾಜು ಮತ್ತು ಉತ್ಪಾದನ ಘಟಕ)ಗಳ ಮುಖಾಂತರ ಪೂರಕ ಪೌಷ್ಟಿಕ ಆಹಾರಗಳನ್ನು ಖರೀದಿಸಿ, ಸ್ವಚ್ಛಗೊಳಿಸಿ, ಸಂಸ್ಕರಿಸಿ, ಪ್ಯಾಕಿಂಗ್ ಮಾಡಿ ಫಲಾನುಭವಿಗಳಿಗೆ ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿಗಳ ಹಾಗೂ ಅಂಗನವಾಡಿ ಕೇಂದ್ರಗಳ ಮುಖಾಂತರ ಆರು ತಿಂಗಳಿಂದ 6 ವರ್ಷದ ಮಕ್ಕಳು, ಗರ್ಭಿಣಿ, ಬಾಣಂತಿಯರು, ಕಿಶೋರಿಯರು, ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರು ಗಳಿಗೆ ಪೂರಕ ಪೌಷ್ಟಿಕ ಆಹಾರವನ್ನು ವಿತರಿಸಲಾಗುತ್ತಿದೆ. ಅಪೌಷ್ಟಿಕತೆಯನ್ನು ಹೊಗಲಾಡಿಸಲು ಇಲಾಖೆಯಿಂದ ಪೂರಕ ಪೌಷ್ಟಿಕ ಆಹಾರ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿರುತ್ತದೆ.

ಕ್ರ.ಸಂ ಎಂ.ಎಸ್.ಪಿ.ಸಿ ಘಟಕದ ಹೆಸರು ಮತ್ತು ವಿಳಾಸ ಸದಸ್ಯರ ಸಂಖ್ಯೆ ರಿಜಿಸ್ಟರ್
1 ಮಡಿಕೇರಿ ಮತ್ತು ಸೋಮವಾರಪೇಟೆ ಎಂ.ಎಸ್.ಪಿ.ಸಿ ಕೂಡ್ಲೂರು, ಸೋಮವಾರಪೇಟೆ ತಾಲ್ಲೂಕು ಕೊಡಗು ಜಿಲ್ಲೆ 17 ಸೊಸೈಟಿ ಆಕ್ಟ್ 1960 ರನ್ವಯ ನೋಂದಾಯಿಸಲ್ಪಟಿರುತ್ತದೆ
2 ಪೊನ್ನಂಪೇಟೆ ಎಂ.ಎಸ್.ಪಿ.ಸಿ, ಬೆಕ್ಕೆ ಸುಡ್ಲೂರು ಗ್ರಾಮ, ಪೊನ್ನಂಪೇಟೆ ತಾಲ್ಲೂಕು ಕೊಡಗು ಜಿಲ್ಲೆ 22 ಸೊಸೈಟಿ ಆಕ್ಟ್ 1960 ರನ್ವಯ ನೋಂದಾಯಿಸಲ್ಪಟಿರುತ್ತದೆ

ಸೋಮವಾರಪೇಟೆ ತಾಲ್ಲೂಕು ಎಂಎಸ್ಪಿಸಿ ಘಟಕದಿಂದ ಮಡಿಕೇರಿ ಯೋಜನೆಯ ಅಂಗನವಾಡಿ ಕೇಂದ್ರಗಳಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲಾಗುತ್ತಿದೆ. ವಿರಾಜಪೇಟೆ ತಾಲ್ಲೂಕು ಎಂಎಸ್ಪಿಸಿ ಘಟಕದಿಂದ ಮಡಿಕೇರಿ ಮತ್ತು ಪೊನ್ನಂಪೇಟೆ ಯೋಜನೆಯ ಅಂಗನವಾಡಿ ಕೇಂದ್ರಗಳಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲಾಗುತ್ತಿದೆ.

ಪ್ರಾದೇಶಿಕ ಬೇಡಿಕೆಗನುಗುಣವಾಗಿ ಫಲಾನುಭವಿಗಳ ಆಹಾರ ಪದ್ಧತಿ ಮತ್ತು ಇಚ್ಛೆಯಾಧರಿಸಿ ಪೌಷ್ಠಿಕ ಆಹಾರವನ್ನು ಒದಗಿಸುವ ಬಗ್ಗೆ ಮತ್ತು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ನೀಡುವ ಬೇಡಿಕೆ ಪತ್ರದನ್ವಯ ಗುಣಮಟ್ಟದ ಪೂರಕ ಪೌಷ್ಠಿಕ ಆಹಾರ ಪದಾರ್ಥಗಳನ್ನು ನಿಗದಿತ ಸಮಯದಲ್ಲಿ ಎಂಎಸ್ಪಿಸಿ ಗಳು ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡುತ್ತಿರುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಲು ಜಿಲ್ಲಾ ಮಟ್ಟದಲ್ಲಿ ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗಿರುತ್ತದೆ.

ಸಮಿತಿಯ ವಿವರ ಕೆಳಕಂಡಂತಿರುತ್ತದೆ
 • ಜಿಲ್ಲಾಧಿಕಾರಿಯವರು: ಅಧ್ಯಕ್ಷರು
 • ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್: ಉಪಾಧ್ಯಕ್ಷರು
 • ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: ಸದಸ್ಯರು
 • ಜಿಲ್ಲೆಯ ಎಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು: ಸದಸ್ಯರು
 • ಜಿಲ್ಲಾ ನಿರೂಪಣಾಧಿಕಾರಿ : ಸದಸ್ಯ ಕಾರ್ಯದರ್ಶಿ

ಮಾತೃಪೂರ್ಣ ಯೋಜನೆ:-:

ಸರ್ಕಾರದ ಆದೇಶ ಸಂಖ್ಯೆ: ಮಮಇ 152 ಐಸಿಡಿ 2017 (ಭಾ-2) ದಿನಾಂಕ 23-08-2017 ರಂತೆ ಗರ್ಭಿಣಿ/ ಬಾಣಂತಿಯರಿಗೆ ಅಂಗನವಾಡಿ ಕೇಂದ್ರದಲ್ಲಿ ಹೆಚ್ಚು ಪೌಷ್ಠಿಕತೆ ಅಂಶಗಳನ್ನು ಒಳಗೊಂಡ ಮಧ್ಯಾಹ್ನದ ಪೌಷ್ಠಿಕ ಊಟವನ್ನು ಒದಗಿಸುವ ಮಾತೃಪೂರ್ಣ ಯೋಜನೆಯನ್ನು ಜಾರಿಗೆ ತರಲಾಗಿರುತ್ತದೆ. .

ಸದರಿ ಯೋಜನೆಯ ಪ್ರಮುಖ ಉದ್ಧೇಶ ಕೆಳಕಂಡಂತಿರುತ್ತದೆ.
 • ಗರ್ಭಿಣಿ/ ಬಾಣಂತಿಯರ ಪೌಷ್ಠಿಕಾಂಶದ ಪ್ರಮಾಣವನ್ನು ಹೆಚ್ಚಿಸಿ, ಕಡಿಮೆ ತೂಕದ ಮಕ್ಕಳ ಜನನ ಹಾಗೂ ಮಕ್ಕಳಲ್ಲಿನ ಅಪೌಷ್ಠಿಕತೆ ಪ್ರಮಾಣ ಕಡಿಮೆ ಮಾಡುವುದು
 • ರಕ್ತಹೀನತೆ ಮತ್ತು ಅಪೌಷ್ಠಿಕತೆಯಿಂದ ಬಳಲುತ್ತಿರುವ ಗರ್ಭಿಣಿ/ ಬಾಣಂತಿಯರ ಪ್ರಮಾಣವನ್ನು ಕಡಿಮೆ ಮಾಡುವುದು.
 • ಗರ್ಭಿಣಿಯರು 100 ಕಬ್ಬಿಣಾಂಶದ ಮಾತ್ರೆಗಳನ್ನು ಸೇವಿಸುವುದನ್ನು ಖಚಿತ ಪಡಿಸಿಕೊಳ್ಳುವುದು
 • ಗರ್ಭಿಣಿ / ಬಾಣಂತಿಯರು ಅವರಿಗೆ ನೀಡುವ ಆಹಾರವನ್ನು ಕುಟುಂಬದ ಇತರೆ ಸದಸ್ಯರೊಡನೆ ಹಂಚಿಕೊಳ್ಳದೆ ಸ್ವತ: ಸೇವಿಸುವಂತೆ ನೋಡಿಕೊಳ್ಳುವುದು.
 • ಶಿಶು ಮರಣ ಮತ್ತು ಮಾತೃತ್ವ ಮರಣ ಪ್ರಮಾಣಗಳನ್ನು ಮತ್ತು ಕಡಿಮೆ ತೂಕದ ಮಕ್ಕಳ ಜನನ ಪ್ರಮಾಣವನ್ನು ಕಡಿಮೆ ಮಾಡುವುದು
 • ಗರ್ಭಿಣಿ ಮಹಿಳೆಯರು ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಹಾಗೂ ಚುಚ್ಚುಮದ್ದು ಸೇವೆಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು

ಮಾತೃಪೂರ್ಣ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಸರ್ಕಾರದ ಆದೇಶ ಸಂಖ್ಯೆ: ಮಮಇ 306 ಐಸಿಡಿ 2017 ದಿನಾಂಕ 20-09-2017ರ ಪ್ರಕಾರ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಲಾಗಿತ್ತದೆ

ಸಮಿತಿಯ ವಿವರ ಕೆಳಕಂಡಂತಿರುತ್ತದೆ.
 • ಜಿಲ್ಲಾಧಿಕಾರಿಯವರು: ಅಧ್ಯಕ್ಷರುent
 • ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಯವರು: ಉಪಾಧ್ಯಕ್ಷರು
 • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರು:ಸದಸ್ಯರು
 • ಜಿಲ್ಲಾ ಸಾರ್ವಜನಿಕ ಶಿಕ್ಷಣಾಧಿಕಾರಿಗಳು: ಸದಸ್ಯರು
 • ಜಿಲ್ಲಾ ಆಹಾರ ಸುರಕ್ಷತೆ ಅಧಿಕಾರಿ: ಸದಸ್ಯರು
 • ನ್ಯೂಟ್ರಿಷನ್ ಮತ್ತು ರಿಹ್ಯಾಬಿಲಿಟೇಷನ್ ಸೆಂಟರ್ನ ನ್ಯೂಟ್ರಿಷನ್ ತಜ್ಞರು: ಸದಸ್ಯರು
 • ಸಮಾಲೋಚಕರು-ಜಿಲ್ಲಾಧಿಕಾರಿಗಳಿಂದ ನಾಮ ನಿರ್ದೇಶಿತ : ಸದಸ್ಯರು
 • ಜಿಲ್ಲಾ ಸ್ತಿçÃಶಕ್ತಿ ಒಕ್ಕೂಟದ ಅಧ್ಯಕ್ಷರು: ಸದಸ್ಯರು
 • ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: ಸದಸ್ಯ ಕಾರ್ಯದರ್ಶಿ

ಬಾಲವಿಕಾಸ ಸಮಿತಿ:-

ಸರ್ಕಾರದ ಆದೇಶ ಸಂಖ್ಯೆ: ಮಮಇ 15 ಐಸಿಡಿ 2018 ದಿನಾಂಕ 22-01-2018ರ ಪ್ರಕಾರ ಪ್ರತಿಯೊಂದು ಅಂಗನವಾಡಿ ವ್ಯಾಪ್ತಿಯಲ್ಲಿ ಬಾಲವಿಕಾಸ ಸಮಿತಿಯನ್ನು ರಚಿಸಲಾಗಿರುತ್ತದೆ.

ಸಮಿತಿಯ ವಿವರ ಕೆಳಕಂಡಂತಿರುತ್ತದೆ.
 • ಅಂಗನವಾಡಿ ಕೇಂದ್ರದ ಫಲಾನುಭವಿಯಾದ ಯಾವುದಾದರೂ ಒಂದು ಮಗುವಿನ ತಾಯಿ (ದೀರ್ಘಾವಧಿ ಫಲಾನುಭವಿ ಮಗುವಿನ ತಾಯಿ): ಅಧ್ಯಕ್ಷರು
 • ಗ್ರಾಮ ಪಂಚಾಯಿತಿ / ನಗರ ಸಭೆ / ಪುರಸಭೆ / ಮಹಾನಗರ ಪಾಲಿಕೆಯ ಸದಸ್ಯರು: ಸದಸ್ಯರು
 • ಮುಖ್ಯೋಪಾಧ್ಯಾಯರು (ಪ್ರಾಥಮಿಕ / ಹಿರಿಯ ಪ್ರಾಥಮಿಕ ಶಾಲೆ):ಸದಸ್ಯರು
 • ಆರೋಗ್ಯ ಇಲಾಖೆಯ ಆಶಾ / ಕಿರಿಯ ಮಹಿಳಾ ಆರೋಗ್ಯ ಸಹಾಯಕಿ: ಸದಸ್ಯರು
 • ಅಂಗನವಾಡಿ ವ್ಯಾಪ್ತಿಯಲ್ಲಿ ಬರುವ ಪ್ರಾಯಪೂರ್ವ ಬಾಲಕಿ: ಸದಸ್ಯರು
 • ಅಂಗನವಾಡಿ ಮಕ್ಕಳ ಇಬ್ಬರು ತಾಯಂದಿರು (ಒಬ್ಬರು ಪ.ಜಾ. / ಪ.ಪಂ. ಕ್ಕೆ ಸೇರಿದವರು) :ಸದಸ್ಯರು
 • ಅಂಗನವಾಡಿ ಫಲಾನುಭವಿಯಾದ ಒಂದು ಮಗುವಿನ ಅರ್ಜಿ :ಸದಸ್ಯರು
 • ಅಂಗನವಾಡಿ ಫಲಾನುಭವಿಯಾದ ಒಂದು ಮಗುವಿನ ತಂದೆ :ಸದಸ್ಯರು
 • ಸಮುದಾಯ ಆಧಾರಿತ ಸ್ವಯಂ ಸೇವಾ ಸಂಸ್ಥೆಯ ಪ್ರತಿನಿಧಿ :ಸದಸ್ಯರು
 • ಸ್ತ್ರೀಶಕ್ತಿ ಗುಂಪಿನ ಒಬ್ಬರು ಪ್ರತಿನಿಧಿ :ಸದಸ್ಯರು
 • ಅಂಗನವಾಡಿ ಕಾರ್ಯಕರ್ತೆ :ಸದಸ್ಯ ಕಾರ್ಯದರ್ಶಿ

ಈ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯ ಕಾರ್ಯದರ್ಶಿಗಳ ಹೆಸರಿನಲ್ಲಿ ಜಂಟಿ ಖಾತೆಯನ್ನು ಬ್ಯಾಂಕಿನಲ್ಲಿ ತೆರೆಯಲು ಹಾಗೂ ಈ ಇಬ್ಬರು ಜಂಟಿಯಾಗಿ ಚೆಕ್ನಲ್ಲಿ ಸಹಿ ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ. ಇದರ ಸಂಬಂಧ ಲೆಕ್ಕಪತ್ರಗಳನ್ನು ಸದಸ್ಯ ಕಾರ್ಯದರ್ಶಿಗಳು ನಿರ್ವಹಿಸುವರು. ಸದರಿ ಸಮಿತಿಗೆ ಈ ಕೆಳಗೆ ಸೂಚಿಸಿರುವ ಚಟುಟಿಕೆಗಳನ್ನು ಹಾಗೂ ಕಾಲಕಾಲಕ್ಕೆ ಜಾರಿಯಾಗುವ ಆದೇಶಗಳಂತೆ ಮಾರ್ಪಾಡಾಗುವ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ನಡೆಸಲು ಸೂಕ್ತ ಕ್ರಮ ಜರುಗಿಸಲು ಹಣಕಾಸಿನ ಅಧಿಕಾರವನ್ನು ನೀಡಲಾಗಿದೆ.

 • ಅಂಗನವಾಡಿ ಕೇಂದ್ರದ ಮಕ್ಕಳಿಗೆ ಹಾಗೂ ಮಾತೃಪರ‍್ಣ ಯೋಜನೆಯ ಫಲಾನುಭವಿಗಳಿಗೆ ಸ್ಥಳೀಯವಾಗಿ ಖರೀದಿಸಬಹುದಾದ ತರಕಾರಿ, ಮೊಟ್ಟೆ, ಚಿಕ್ಕಿ ಖರೀದಿಸುವುದು ಹಾಗೂ ಅಂಗನವಾಡಿ ದಿನಾಚರಣೆಗೆ ಸಂಬಂಧ ಪಟ್ಟಂತೆ ಹಣಕಾಸಿನ ಅಧಿಕಾರ
 • ಅಪೌಷ್ಠಿಕ ಮಕ್ಕಳ ವೈದ್ಯಕೀಯ ವೆಚ್ಚ
 • ಅಂಗನವಾಡಿ ಕೇಂದ್ರಗಳಲ್ಲಿ ಶೌಚಾಲಯ ನಿರ್ಮಾಣ
 • ಅಂಗನವಾಡಿ ನಿರ್ವಹಣಾ ವೆಚ್ಚ, ಅಂಗನವಾಡಿ ಕಟ್ಟಡ ದುರಸ್ತಿ
 • ಅಂಗನವಾಡಿ ದಿನಾಚರಣೆ
 • ಬಾಲಸ್ನೇಹಿ ಯೋಜನೆ.

ಬಾಲವಿಕಾಸ ಸಮಿತಿಯ ಕರ್ತವ್ಯಗಳು ಮತ್ತು ಜವಾಬ್ದಾರಿಗಳು:

 • ಅಂಗನವಾಡಿ ಕೇಂದ್ರದ ಸುಧಾರಣೆಗಾಗಿ ಅಗತ್ಯತೆ ಅನುಗುಣವಾಗಿ ಮೂಲಭೂತ ಸೌಕರ್ಯಗಳ ಸಮಿತಿಯು ವರ್ಷಕ್ಕೆ 2 ಬಾರಿ ಕ್ರಿಯಾ ಯೋಜನೆಯನ್ನು ಫಲಾನುಭವಿಗಳ ಹಿತದೃಷ್ಟಿಯಿಂದ ರೂಪಿಸಿ ಕೇಂದ್ರದ ಸುಧಾರಣೆಗೆ ಕ್ರಮ ವಹಿಸುವುದು. .
 • ಅಂಗನವಾಡಿ ಕೇಂದ್ರ ಸ್ವಂತೆ ಕಟ್ಟಡ ನಿರ್ಮಿಸಲು ಸೂಕ್ತವಾದ ನಿವೇಶನ ಒದಗಿಸಿಕೊಡುವುದು.
 • ಅಂಗನವಾಡಿ ಕಟ್ಟಡಕ್ಕೆ ಸಣ್ಣ ಪುಟ್ಟ ದುರಸ್ತಿ, ಸುಣ್ಣ ಬಣ್ಣವನ್ನು ಕಾಲಕಾಲಕ್ಕೆ ಮಾಡಿಸುವುದು.
 • ಅಂಗನವಾಡಿಗಳಲ್ಲಿ ಶೌಚಾಲಯ ನಿರ್ಮಿಸುವಂತೆ ಹಾಗೂ ವಿಕಲಚೇತನ ಮಕ್ಕಳ ಅನುಕೂಲವನ್ನು ಗಮನಿಸಿ ನೀರಿನ ಸೌಕರ್ಯವನ್ನು ಒದಗಿಸುವಂತೆ ಮೇಲುಸ್ತುವಾರಿ ಮಾಡುವುದು
 • ಅಂಗನವಾಡಿ ಕಾರ್ಯಕರ್ತೆಯು ಪ್ರತಿ ವರ್ಷ ತಪ್ಪದೇ ತನ್ನ ಕೇಂದ್ರ ವ್ಯಾಪ್ತಿಯ ಸಮೀಕ್ಷಾ ಕಾರ್ಯ ನಿರ್ವಹಿಸುವಂತೆ ಮೇಲ್ವಿಚಾರಣೆ ಮಾಡುವುದು.
 • ಸಮೀಕ್ಷಾ ವ್ಯಾಪ್ತಿಯ 6 ವರ್ಷದೊಳಗಿನ ಎಲ್ಲಾ ಮಕ್ಕಳು, ಗರ್ಭಿಣಿ ಮತ್ತು ಬಾಣಂತಿಯರು ಅಂಗನವಾಡಿ ಫಲಾನುಭವಿಗಳಾಗಿ ದಾಖಲಾಗುವಂತೆ ನೋಡಿಕೊಳ್ಳುವುದು, ಪರಿಶೀಲಿಸುವುದು, ವರ್ಷಕ್ಕೊಂದು ಬಆರಿ ದಾಖಲಾತಿ ಆಂದೋಲನ ನಡೆಸುವುದು.
 • ಅಂಗನವಾಡಿ ಕೇಂದ್ರ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 4.00 ಗಂಟೆಯವರೆಗೆ ಸಮರ್ಪಕವಾಗಿ ನಡೆಯುವಂತೆ ಮೇಲ್ವಿಚಾರಣೆ ಮಾಡುವುದು
 • ಅಂಗನವಾಡಿ ಕಾರ್ಯಕರ್ತೆಯು ಮಧ್ಯಾಹ್ನ 2.30 ರಿಂದ 4.00ರವರೆಗೆ ಮನೆ ಭೇಟಿ ಅಗತ್ಯವಿದ್ದಲ್ಲಿ ಸಹಕರಿಸುವುದು.
 • ಅಂಗನವಾಡಿ ಕೇಂದ್ರಕ್ಕೆ ಆಹಾರ ಸಾಮಗ್ರಿಗಳ ಸರಬರಾಜು ಆಗುವ ವೇಳೆಯನ್ನು ಸಮಿತಿಯ ಇಬ್ಬರು ಸದಸ್ಯರು ಖುದ್ದಾಗಿ ಹಾಜರಿದ್ದು, ಗುಣಮಟ್ಟದ ಮತ್ತು ಸರಿಯಾದ ಪ್ರಮಾಣದಲ್ಲಿ ಸರಬರಾಜಾಗುವಂತೆ ನೋಡಿಕೊಂಡು ದೃಢೀಕರಿಸುವುದು.
 • ಸ್ಥಳೀಯವಾಗಿ ದೊರಕುವ ಆಹಾರ ಪದಾರ್ಥಗಳಾದ ತರಕಾರಿ, ಸೊಪ್ಪು ಮತ್ತು ಹಣ್ಣುಗಳನ್ನು ಉಚಿತವಾಗಿ ಪಡೆಯಲು ಪ್ರಯತ್ನಿಸುವುದು.
 • ತೀವ್ರ ನ್ಯೂನತೆಗೆ ಒಳಗಾದ ಮಕ್ಕಳ ತಂದೆ-ತಾಯಿಯರು ಹೆಚ್ಚಿನ ಪೌಷ್ಠಿಕ ಆಹಾರ ಹಾಗೂ ಔಷಧೋಪಚಾರ ನೀಡಲು ಆಸಕ್ತರಾಗಿದ್ದಲ್ಲಿ ತೀವ್ರ ನ್ಯೂನತೆಗೆ ಒಳಗಾದ ಮಕ್ಕಳ ಸುಧಾರಣೆಗೆ ಕ್ರಮ ವಹಿಸುವುದು.
 • ಆರೋಗ್ಯ ಸೇವೆಗಳಾದ ಚುಚ್ಚುಮದ್ದು ಕಾರ್ಯಕ್ರಮ, ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಮತ್ತು ಪೌಷ್ಠಿಕ ಶಿಬಿರಗಳು ಕ್ರಮವಾಗಿ ನಡೆಯುವಂತೆ ನೋಡಿಕೊಳ್ಳುವುದು.
 • ಅಂಗನವಾಡಿ ಕೇಂದ್ರದಲ್ಲಿ ದಾಖಲಾಗಿರುವ ಮಕ್ಕಳ ಹುಟ್ಟು ಹಬ್ಬಗಳನ್ನು ಆಚರಿಸುವಂತೆ ಕ್ರಮ ವಹಿಸುವುದು.
 • ಕೇಂದ್ರಗಳಲ್ಲಿ ವಾರ್ಷಿಕ ವೇಳಾಪಟ್ಟಿ ಪ್ರಕಾರ ರಾಷ್ಟೀಯ ಹಬ್ಬಗಳು ಮತ್ತು ದಿನಾಚರಣೆಗೆ ನಡೆಯುವಂತೆ ಕ್ರಮ ವಹಿಸುವುದು.
 • ಅಂಗನವಾಡಿ ಕಾರ್ಯಕರ್ತೆ, ಮೇಲ್ವಿಚಾರಕಿ ಮತ್ತು ಗ್ರಾಮ ಪಂಚಾಯತ್ ನಡುವೆ ಸಂಪರ್ಕ ಸೇತುವೆಯಂತಿರಬೇಕು.
 • ಬಾಲವಿಕಾಸ ಸಮಿತಿಯು ಪ್ರತಿ ತಿಂಗಳು ಸಭೆ ನಡೆಸಿ, ಕೇಂದ್ರದ ಕುಂದು ಕೊರತೆಯ ಬಗ್ಗೆ ಚರ್ಚಿಸಿ ಸೂಕ್ತ ಕ್ರಮ ಜರುಗಿಸುವುದು.
 • ಅಂಗನವಾಡಿ ಕೇಂದ್ರಗಳಲ್ಲಿ 6 ವರ್ಷದೊಳಗಿನ ಮಕ್ಕಳು ಕೇಂದ್ರವನ್ನು ಬಿಡದಂತೆ ಪೋಷಕರಿಗೆ ತಿಳಿಸಿ ಅನುಪಾಲನೆ ಮಾಡುವುದು.
 • ಅಂಗನವಾಡಿ ಕೇಂದ್ರ ಬಿಟ್ಟ ನಂತರ ಎಲ್ಲಾ ಮಕ್ಕಳು ಶಾಲೆಗೆ ದಾಖಲಾಗುವಂತೆ ಪೋಷಕರಿಗೆ ತಿಳಿಸಿ ಅನುಪಾಲನೆ ಮಾಡುವುದು.
 • ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಗೆ ಅವಶ್ಯಕವಾಗಿರುವ ಇತರೆ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದು
 • ಯಾವುದೇ ಆಕಸ್ಮಿಕ ಸಮಸ್ಯೆ, ಅಪಘಾತ ಹಾಗೂ ತುರ್ತು ಸಂದರ್ಭಗಳಲ್ಲಿ ತಕ್ಷಣ ಸ್ಪಂದಿಸಿ ಸಮಸ್ಯೆ ಪರಿಹರಿಸಲು ಕ್ರಮ ವಹಿಸುವುದು. ಅಗತ್ಯವಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವುದು.

ಇಲಾಖೆಯ ವತಿಯಿಂದ ಅಂಗನವಾಡಿ ಕಟ್ಟಡಗಳ ನಿರ್ವಹಣೆಗೆ ಅನುದಾನ

ಕೇಂದ್ರಗಳಿಗೆ ಬರುವ ಮಕ್ಕಳಿಗೆ ಶಾಲಾ ಪೂರ್ವ ಶಿಕ್ಷಣ ನೀಡಲು, ಮಕ್ಕಳಿಗೆ ಮಳೆ, ಗಾಳಿ ಮತ್ತು ಬಿಸಿಲಿನಿಂದ ರಕ್ಷಣೆ ಒದಗಿಸಲು ಮತ್ತು ಕೇಂದ್ರಗಳಿಗೆ ಬರುವ ಆಹಾರ ಪದಾರ್ಥಗಳನ್ನು ಸಂರಕ್ಷಿಸಿಡಲು ಹಾಗೂ ಆಹಾರ ಪದಾರ್ಥಗಳನ್ನು ತಯಾರಿಸಲು ಈಗಾಗಲೇ ವಿವಿಧ ಸಂಪನ್ಮೂಲಗಳನ್ನು ಬಳಸಿ ನಿರ್ಮಿಸಲಾಗಿರುವ ಅಂಗನವಾಡಿ ಕಟ್ಟಡಗಳ ನಿರ್ವಹಣೆ ಮತ್ತು ದುರಸ್ತಿಗೆ ಈ ಅನುದಾನವನ್ನು ಬಳಸಿಕೊಳ್ಳಲಾಗುತ್ತದೆ. ಸಮಗ್ರ ಶಿಶು ಅಭಿವೃದ್ಧಿ ಸೇವಾ ಯೋಜನೆಯ ಸೇವೆಗಳನ್ನು ಸರಿಯಾಗಿ ಒದಗಿಸುವುದಕ್ಕೆ ಮತ್ತು ಅಂಗನವಾಡಿ ಕೇಂದ್ರಗಳ ಸುಗಮ ಕಾರ್ಯನಿರ್ವಹಣೆಗೆ ಉತ್ತಮ ಕಟ್ಟಡ ಹೊಂದಿರುವುದು ಮೂಲಭೂತ ಸೌಕರ್ಯಗಳಲ್ಲಿ ಒಂದಾಗಿರುತ್ತದೆ. ಈಗ ಇದು ತಾಲೂಕು ಪಂಚಾಯಿತಿ ಕಾರ್ಯಕ್ರಮವಾಗಿದೆ.

ನಿರ್ಗತಿಕ ಮಕ್ಕಳ ಕುಟೀರಗಳು :

ನಿರ್ಗತಿಕ ಮಕ್ಕಳ ಪಾಲನೆ, ಪೋಷಣೆ, ರಕ್ಷಣೆ ಹಾಗೂ ಪುನರ್ವಸತಿ ಮತ್ತು ಅವರಿಗೆ ಕೌಟುಂಬಿಕ ವಾತಾವರಣವನ್ನು ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದ್ದು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಗುತ್ತದೆ. ಈ ಯೋಜನೆಯಡಿ ಕನಿಷ್ಠ ಮೂರು ವರ್ಷ ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿರುವ ನೋಂದಾಯಿತ ಸ್ವಯಂ ಸೇವಾ ಸಂಸ್ಥೆಗಳಿಗೆ 25 ನಿರ್ಗತಿಕ ಮಕ್ಕಳ ಪಾಲನೆ ಮತ್ತು ಪೋಷಣೆಗೆ ಕುಟೀರಗಳನ್ನು ತೆರೆಯಲು ಅನುಮತಿ ನೀಡಲಾಗುವುದು. ಯೋಜನೆಯ ರೂಪುರೇಷೆಗಳ ಪ್ರಕಾರ ಅನುಮೋದಿತ ವೆಚ್ಚದ ಶೇಕಡಾ 90ರಷ್ಟನ್ನು ಸಹಾಯಾನುದಾನದ ರೂಪದಲ್ಲಿ ನೀಡಲಾಗುವುದು. ಉಳಿದ ಶೇಕಡಾ 10ರಷ್ಟು ವೆಚ್ಚವನ್ನು ಸ್ವಯಂ ಸೇವಾ ಸಂಸ್ಥೆಯೇ ಭರಿಸಬೇಕಾಗುತ್ತದೆ. ಈ ಯೋಜನೆಯಡಿ ಪ್ರತಿ ನಿರ್ಗತಿಕ ಮಗುವಿನ ಪೋಷಣೆಗಾಗಿ ಸಿಬ್ಬಂದಿ ವೆಚ್ಚ ಸೇರಿದಂತೆ ತಿಂಗಳಿಗೆ ರೂ. 1000 ಗಳನ್ನು ಮತ್ತು ಪ್ರತಿ ಮಗುವಿಗೆ ರೂ. 50ರಂತೆ ಕಟ್ಟಡ ಬಾಡಿಗೆಯನ್ನು ಕೊಡಲಾಗುತ್ತದೆ. ಕೊಡಗು ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಿರ್ಗತಿಕ ಕುಟೀರಗಳು ಕೆಳಕಂಡಂತಿವೆ.

 • (1) ಕಾವೇರಿ ನಿರ್ಗತಿಕ ಮಕ್ಕಳ ಕುಟೀರ, ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ, ಸರ್ಕಾರಿ ಬಸ್ ನಿಲ್ದಾಣದ ಬಳಿ, ಮಡಿಕೇರಿ – 25 ಮಕ್ಕಳ ಒಂದು ಕುಟೀರ
 • (2) ಕ್ಯಾಥರಿನ್ ಸಿತಾಡೈನ್ ಕಾನ್ವೆಂಟ್ ನಿರ್ಗತಿಕ ಮಕ್ಕಳ ಕುಟೀರ, ಕೆದಮುಳ್ಳೂರು ಗ್ರಾಮ, ವಿರಾಜಪೇಟೆ ತಾಲ್ಲೂಕು – 18 ಮಕ್ಕಳಿರುವ ಎರಡು ಕುಟೀರಗಳು.

ಕೇಂದ್ರ ಸರ್ಕಾರದ ಅನುದಾನಿತ ಯೋಜನೆಗಳು

ಐ.ಸಿ.ಡಿ.ಎಸ್. ಕಾರ್ಯಕರ್ತರಿಗೆ ತರಬೇತಿ ಯೋಜನೆ :

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಕರ್ಮಚಾರಿಗಳಿಗೆ ತರಬೇತಿ ನೀಡಿ ಸಾಮಾಜಿಕ ಬದಲಾವಣೆಯ ಕಾರ್ಯಭಾರಿಗಳನ್ನಾಗಿ ಮಾಡುವುದು. ಈ ತರಬೇತಿಯ ಮೂಲಕ ಕ್ರಿಯಾತ್ಮಕ, ಪ್ರಭಾವಿಕ, ಗ್ರಹಿಸತಕ್ಕ ಬದಲಾವಣೆಯನ್ನು ತರತಕ್ಕಂತಹ ಹಾಗೂ ಐ.ಸಿ.ಡಿ.ಎಸ್. ಕಾರ್ಯಕ್ರಮದ ಉದ್ದೇಶವನ್ನು ಸಾಧಿಸತಕ್ಕಂತಹ ಹಾಗೂ ಐಸಿಡಿಎಸ್ ಕಾರ್ಯಕ್ರಮವನ್ನು ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮವನ್ನಾಗಿ ಮಾಡುವ ಕೌಶಲ್ಯವನ್ನು ನೀಡಲಾಗುವುದು. ಅಲ್ಲದೆ ಈ ಯೋಜನೆಯಡಿ ಐಸಿಡಿಎಸ್ ಕಾರ್ಯಕ್ರಮದ ಬಗ್ಗೆ ತರಬೇತಿ ನೀಡುವುದಲ್ಲದೆ ಇತರೆ ತರಬೇತಿ ಕಾರ್ಯಕ್ರಮಗಳನ್ನೂ ಸಹ ನಡೆಸಲಾಗುವುದು. ಮಡಿಕೇರಿಯಲ್ಲಿರುವ ಅಂಗನವಾಡಿ ತರಬೇತಿ ಕೇಂದ್ರದಲ್ಲಿ ಹೊಸದಾಗಿ ನೇಮಕವಾಗುವ ಅಂಗನವಾಡಿ ಕಾರ್ಯಕರ್ತೆಯರಿಗೆ 30 ದಿನಗಳ ವೃತ್ತಿ ತರಬೇತಿಯನ್ನು ಮತ್ತು 2 ವರ್ಷಕ್ಕೊಮ್ಮೆ ಪುನಶ್ಚೇತನ ತರಬೇತಿಯನ್ನು ನೀಡಲಾಗುತ್ತದೆ. ಅಲ್ಲದೆ ಅಂಗನವಾಡಿ ಸಹಾಯಕಿಯರಿಗೂ ಓರಿಯೆಂಟೇಶನ್ ಮತ್ತು ಪುನಶ್ಚೇತನ ತರಬೇತಿಯನ್ನು ಇಲ್ಲಿ ಕೊಡಲಾಗುವುದು.

ಅಂಗನವಾಡಿ ಕಾರ್ಯಕರ್ತೆಯರಿಗೆ/ಸಹಾಯಕಿಯರಿಗೆ NPS ಯೋಜನೆ:

ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ 2011ನೇ ಸಾಲಿನಿಂದ ಹೊಸದಾಗಿ NPS ಯೋಜನೆ ಜಾರಿಗೆ ಬಂದಿದ್ದು ಈ ಯೋಜನೆಯಡಿ ನೋಂದಾಯಿಸಲಾದ ಅಂಗನವಾಡಿ ಕಾರ್ಯಕರ್ತೆಯರಿಗೆ ಅವರ ಗೌರವಧನದಿಂದ ರೂ.150 ಹಾಗೂ ಸಹಾಯಕಿಯರಿಗೆ ಗೌರವಧನದಿಂದ ರೂ.75 ವಂತಿಕೆಯನ್ನು ಕಟಾಯಿಸಿ ಪ್ರಧಾನ ಕಛೇರಿ ನಿದೇಶಕರ ಖಾತೆಗೆ ಜಮೆ ಮಾಡಲಾಗುತ್ತದೆ. NPS ಯೋಜನೆ ಯಡಿ ನೋಂದಾಯಿಸಲಾದ ಕಾರ್ಯಕರ್ತೆಯರಿಗೆ/ ಸಹಾಯಕಿಯರಿಗೆ ಎನ್ ಎಸ್ ಡಿ ಎಲ್ ಸಂಸ್ಥೆಯಿಂದ ಫ್ರಾನ್ ಕಾರ್ಡ್ ವಿತರಿಸಲಾಗಿದ್ದು, ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆ/ಸಹಾಯಕಿಯರಿಗೆ ಅವರ ಸೇವೆಯ ಆಧಾರದ ಮೇಲೆ ಕಟಾಯಿಸಲಾದ ಮೊತ್ತ ಹಾಗೂ ಸರ್ಕಾರದಿಂದ ಸೇರಿಸಿದ ಒಟ್ಟು ಮೊತ್ತವನ್ನು ಪಾವತಿಸಲಾಗುತ್ತಿದೆ. ಹಾಗೂ ಸೇವೆಯಲ್ಲಿದ್ದಾಗ ಮರಣ ಹೊಂದಿದಲ್ಲಿ ಮರಣ ಪರಿಹಾರ ಮೊತ್ತವನ್ನು ಪಾವತಿಸಲಾಗುವುದು. 18 ರಿಂದ 60 ವರ್ಷದೊಳಗಿನ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ವಿಮಾ ವ್ಯಾಪ್ತಿಗೆ ಒಳಪಟ್ಟಿರುತ್ತಾರೆ.

ಪ್ರಾಯಪೂರ್ವ ಬಾಲಕಿಯರ ಯೋಜನೆ

ಪ್ರಾಯಪೂರ್ವ ಬಾಲಕಿಯರ ಯೋಜನೆಯಡಿ 11-14 ವರ್ಷದ ಶಾಲೆಯಿಂದ ಹೊರಗುಳಿದ ಮಕ್ಕಳು ಫಲಾನುಭವಿಗಳಾಗಿರುತ್ತಾರೆ. ಸದರಿ ಯೋಜನೆಯಡಿ ಪೂರಕ ಪೌಷ್ಠಿಕ ಆಹಾರ ಕಾರ್ಯಕ್ರಮದಡಿ ಪ್ರತಿದಿನ ರೂ. 9.50 ರ ವೆಚ್ಚದಲ್ಲಿ ಪೂರಕ ಪೌಷ್ಠಿಕ ಆಹಾರವನ್ನು ಮನೆಗೆ ನೀಡಲಾಗುತ್ತಿದೆ.

ಯೋಜನೆಯ ಮುಖ್ಯ ಉದ್ಧೇಶಗಳು:
 • ಪ್ರಾಯಪೂರ್ವ ಬಾಲಕಿಯರನ್ನು ಸ್ವಯಂ ಸಬಲೀಕರಣಗೊಳಿಸುವುದು.
 • ಅವರ ಆರೋಗ್ಯ ಮತ್ತು ಪೌಷ್ಠಿಕ ಮಟ್ಟವನ್ನು ಹೆಚ್ಚಿಸುವುದು.
 • ಆರೋಗ್ಯ, ಶುಚಿತ್ವ ಮತ್ತು ಪೌಷ್ಠಿಕತೆ ಕುರಿತು ಅರಿವು ಮೂಡಿಸುವುದು. ಮರಳಿ ಶಾಲೆಗೆ ಸೇರಲು ಪ್ರೇರೇಪಿಸುವುದು.
 • ವೃತ್ತಿ ನೈಪುಣ್ಯತೆಗಳಲ್ಲಿ ತರಬೇತಿ ನೀಡುವುದು.
 • ಸಾರ್ವಜನಿಕ ಸೇವೆಗಳಾದ ಪಿ.ಹೆಚ್.ಸಿ., / ಸಿ.ಹೆಚ್.ಸಿ., / ತಾಲ್ಲೂಕು ಆಸ್ಪತ್ರೆಗಳು / ಅಂಚೆ ಕಚೇರಿ / ಬ್ಯಾಂಕ್ / ಪೊಲೀಸ್ ಠಾಣೆ ಇತ್ಯಾದಿಗಳ ಬಗ್ಗೆ ಪ್ರಾತ್ಯಕ್ಷಿಕ ಮಾಹಿತಿ / ಮಾರ್ಗದರ್ಶನ ಒದಗಿಸುವುದು.

ಸರ್ಕಾರದ ಆದೇಶ ಸಂಖ್ಯೆ: 11012/3/2017-O/O ADSABLA dated 02-04-2018 02-04-2018 ರ ಪ್ರಕಾರ ಪ್ರಾಯಪೂರ್ವ ಬಾಲಕಿಯರ ಯೋಜನೆಯಡಿ ಈ ಕೆಳಕಾಣಿಸಿದಂತೆ ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಲಾಗಿರುತ್ತದೆ.

 • ಜಿಲ್ಲಾಧಿಕಾರಿಗಳು:ಅಧ್ಯಕ್ಷರು
 • ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯತ್ಸ :ದಸ್ಯರು
 • ಜಿಲ್ಲಾ ಶಸ್ತ್ರ ಚಿಕಿತ್ಸಕರು :ಸದಸ್ಯರು
 • ಜಿಲ್ಲಾ ಕಾರ್ಮಿಕ ಅಧಿಕಾರಿ :ಸದಸ್ಯರು
 • ಸ್ವಯಂ ಸೇವಾ ಸಂಸ್ಥೆಗಳು (2):ಸದಸ್ಯರು
 • ಜಿಲ್ಲೆಯ ಎಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸದಸ್ಯರು
 • ಜಿಲ್ಲಾ ನಿರೂಪಣಾಧಿಕಾರಿ ಸದಸ್ಯರು ಕಾರ್ಯದರ್ಶಿ

ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ರಾಷ್ಟ್ರ ಪ್ರಶಸ್ತಿ

ಶಿಕ್ಷಣ, ಕಲೆ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ಕ್ರೀಡಾ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವಂಹ 4 ರಿಂದ 15 ವರ್ಷದೊಳಗಿನ ಮಕ್ಕಳಿಗೆ ರಾಷ್ಟ್ರಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗುವುದು. ಪ್ರಶಸ್ತಿಯು ಒಂದು ಚಿನ್ನದ ಪದಕದೊಂದಿಗೆ ರೂ. 20,000-00 ನಗದನ್ನು ಒಳಗೊಂಡಿರುತ್ತದೆ. ಅಲ್ಲದೆ ಪ್ರತೀ ರಾಜ್ಯಕ್ಕೆ ಒಂದು ಬೆಳ್ಳಿ ಪದಕದಂತೆ 35 ಬೆಳ್ಳಿ ಪದಕಗಳನ್ನು ಹಾಗೂ ಪ್ರತಿ ಬೆಳ್ಳಿ ಪದಕದೊಂದಿಗೆ ರೂ. 10000 ಗಳ ನಗದು ಹಾಗೂ ಪ್ರಶಸ್ತಿ ಪತ್ರವನ್ನು ನೀಡಲಾಗುವುದು.

ಪೋಷಣಾ ಅಭಿಯಾನ ಯೋಜನೆ:

ಪೋಷಣ್ ಅಭಿಯಾನವು ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹತ್ವಾಕಾಂಕ್ಷಿಯ ಯೋಜನೆಯಾಗಿದ್ದು ಅಪೌಷ್ಟಿಕತೆ ಸಮಸ್ಯೆಯನ್ನು ಹೋಗಲಾಡಿಸುವ ಘನ ಉದ್ದೇಶದಿಂದ ಅನುಷ್ಠಾನಗೊಳ್ಳುತ್ತಿದೆ. ವಿವಿಧ ಇಲಾಖೆಗಳ ಕಾರ್ಯಕ್ರಮಗಳನ್ನು ಒಗ್ಗೂಡಿಸುವ ಮೂಲಕ ಮುಂದಿನ 3 ವರ್ಷಗಳಲ್ಲಿ ಗರಿಷ್ಠ ಬದಲಾವಣೆಯ ನಿರೀಕ್ಷೆ ಹೊಂದಲಾಗಿದೆ. ಮುಖ್ಯವಾಗಿ ಈ ಯೋಜನೆಯು ಅಂಗನವಾಡಿ ಕೇಂದ್ರಗಳ ಮೂಲಕ ಕೇಂದ್ರೀಕೃತವಾಗಿದ್ದು ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಫಲಾನುಭವಿಗಳಾದ 0-6 ವರ್ಷದ ಮಕ್ಕಳು, ಗರ್ಭಿಣಿಯರು, ಬಾಣಂತಿಯರು ಹಾಗೂ ಕಿಶೋರಿಯರರೋಗ್ಯ ಹಾಗೂ ಪೌಷ್ಠಿಕತೆಗೆ ಹೆಚ್ಚಿನ ಗಮನವನ್ನು ನೀಡಲಾಗುತ್ತಿದೆ. .

ರಾಷ್ಟ್ರಾದ್ಯಂತ ಅನುಷ್ಠಾನಗೊಂಡಿರುವ ಈ ಯೋಜನೆಯು ಕೇವಲ ಫಲಾನುಭವಿಗಳಿಗೆ ಮಾತ್ರ ಸೀಮಿತಗೊಳ್ಳದೆ, ಮಾಹಿತಿ, ಶಿಕ್ಷಣ, ಸಂವಹನ ಮೂಲಕ ಜನಾಂದೋಲನ ಹಾಗೂ ಸಮುದಾಯ ಆಧಾರಿತ ಚಟುವಟಿಕೆಗಳನ್ನು ವಿವಿಧ ವೇದಿಕೆಗಳಲ್ಲಿ ವಿಭಿನ್ನ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಸಮುದಾಯದ ಪ್ರತಿಯೊಬ್ಬರಿಗೂ ಆರೋಗ್ಯ ಹಾಗೂ ಪೌಷ್ಠಿಕತೆಯ ಮಹತ್ವದ ಅರಿವು ನೀಡಲಾಗುವುದು. ಒಟ್ಟಾರೆ ದಿನನಿತ್ಯದ ಆರೋಗ್ಯ ಹಾಗೂ ಪೌಷ್ಠಿಕತೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಧನಾತ್ಮಕ ಬದಲಾವಣೆಗಳೊಂದಿಗೆ ಜೀವನ ಮಟ್ಟ ಸುಧಾರಣೆಯ ಉದಾತ್ತ ಆಕಾಂಕ್ಷೆಯೊAದಿಗೆ ಮಕ್ಕಳಲ್ಲಿನ ಅಪೌಷ್ಠಿಕತೆ, ಕುಂಠಿತ ಬೆಳವಣಿಗೆ, ರಕ್ತಹೀನತೆ, ಮಹಿಳೆಯರು ಮತ್ತು ಹದಿಹರೆಯದ ಹೆಣ್ಣು ಮಕ್ಕಳಲ್ಲಿ ರಕ್ತಹೀನತೆಯನ್ನು ಮತ್ತು ಕಡಿಮೆ ತೂಕದ ಮಕ್ಕಳ ಜನನ ಪ್ರಮಾಣವನ್ನು ಕಡಿಮೆಗೊಳಿಸುವ ಉದ್ದೇಶ ಹೊಂದಲಾಗಿದೆ.

ಪೋಷಣಾ ಅಭಿಯಾನ ಯೋಜನೆಯಡಿ ಸಮಗ್ರ ಶಿಶು ಅಭಿವೃದ್ದಿ ಸೇವೆಗಳನ್ನು ಆನ್ ಲೈನ್ ಮೂಖಾಂತರ ಅಂಗವಾಡಿ ಕಾರ್ಯ ಕಾರ್ತೆಯ ಹಂತದಲ್ಲಿ ಸರ್ಕಾರದ ವತಿಯಿಂದ ನೀಡಲಾಗಿರುವ ಮೊಬೈಲ್ ಮೂಲಕ ಈ ಪೋಷಣ್ ಟ್ರ್ಯಾಕರ್ ಆಪ್ಲಿಕೇಶನ್ ನಲ್ಲಿ ಆನ್ ಲೈನ್ ಮೂಲಕ ತಕ್ಷಣ ಮಾಹಿತಿಯನ್ನು ಸಂಗ್ರಹಿಸಿ ಸಾರ್ವಾಜನಿಕರಿಗೆ/ಫಲಾನುಭವಿಗಳಿಗೆ ಸಮಗ್ರ ಶಿಶು ಅಭಿವೃದ್ದಿ ಸೇವೆಗಳನ್ನು ನೀಡುವ ಉದ್ದೇಶವಾಗಿರುತ್ತದೆ.

ಪೋಷಣಾ ಅಭಿಯಾನ ಯೋಜನೆಯಡಿ ಸಮಗ್ರ ಶಿಶು ಅಭಿವೃದ್ದಿ ಸೇವೆಗಳು

 • 0 ತಿಂಗಳಿAದ- 6 ವರ್ಷದ ಮಕ್ಕಳು, ಗರ್ಭಿಣಿ/ಬಾಣಂತಿಯರು, 11-14 ವರ್ಷದ ಶಾಲೆ ಬಿಟ್ಟ ಕಿಶೋರಿಯರು, ಇವರುಗಳನ್ನು ಸರ್ಕಾರದ ತಂತ್ರಾAಷ : ಪೋಷನ್ ಟ್ರಾಕರ್-ರಲ್ಲಿ ನೋಂದಾಯಿಸಿಕೊAಡು ಸರ್ಕಾರದ ವತಿಯಿಂದ ನೀಡಲಾಗುವ ಸೌಲಭ್ಯವನ್ನು ತಲುಪಿಸುವುದು.
 • ನೋಂದಣಿ ಮಾಡಿಕೊಂಡ ಫಲಾನುಭವಿಗಳಿಗೆ ಪೂರಕ ಪೌಷ್ಟಿಕ ಆಹಾರ ಸೌಲಭ್ಯ ನೀಡುವುದು .
 • ನೋಂದಣಿ ಮಾಡಿಕೊಂಡ ಫಲಾನುಭವಿಗಳ ಆರೋಗ್ಯ ತಪಾಸಣೆ, ಅಪೌಷಿಕತೆ ಮತ್ತು ರಕ್ತ ಹೀನತೆಯಿಂದ ಬಳಲುತ್ತಿರುವ ಫಲಾನುಭವಿಗೆ ಆರೈಕೆ ನೀಡುವುದು.
 • ಅಂಗನವಾಡಿ ಕೇಂದ್ರವು ಸಮಗ್ರ ಶಿಶು ಅಭಿವೃದ್ದಿ ಸೇವೆಗಳನ್ನು ನೀಡುವ ಕೇಂದ್ರ ಸ್ಥಾನವಾಗಿರುವುದರಿಂದ ಫಲಾನುಭವಿಗಳ ಹಿತದೃಷ್ಟಿಯಿಂದ ಅಂಗನವಾಡಿ ಕೇಂದ್ರಕ್ಕೆ ಬರುವ ಫಲಾನುಭವಿಗಳಿಗೆ ಎಲ್ಲಾ ಸೌಲಭ್ಯವನ್ನು ಕಲ್ಪಿಸಲು ಒಂದು ಒಳ್ಳೆಯ ಕಟ್ಟಡದ ಸೌಲಭ್ಯ, ನೀರಿನ ಸಂಪರ್ಕ, ವಿದ್ಯೂಚ್ಛಕ್ತಿ ಸೌಲಭ್ಯ, ಶೌಚಾಲಯ ಸೌಲಭ್ಯ, ನೂಟ್ರೀಷನ್ ಗಾರ್ಡನ್ ಇತ್ಯಾದಿ.

ಪೋಷಣ್ ಟ್ರ್ಯಾಕರ್ ಆಪ್ಲಿಕೇಶನ್

ಈ ಪೋಷಣ್ ಟ್ರ್ಯಾಕರ್ ಆಪ್ಲಿಕೇಶನ್ ಅಂಗನವಾಡಿ ಕೇಂದ್ರ ಅಂಗನವಾಡಿ ಕಾರ್ಯಕರ್ತೆಯರ ಚಟುವಟಿಕೆಗಳ 360 ಡಿಗ್ರಿ ನೋಟವನ್ನು ನೀಡಲಾಗುತ್ತದೆ ಮತ್ತು ಗರ್ಭಿಣಿಯರು, ಹಾಲುಣಿಸುವ ತಾಯಂದಿರು, 0- 6 ವರ್ಷದ ಮಕ್ಕಳು ಮತ್ತು ಹದಿಹರೆಯದ ಹುಡುಗಿಯರ ಸಂರ್ಪೂಣ ಫಲಾನುಭವಿ ನಿರ್ವಹಣೆಯ ಮಾಹಿತಿಯನ್ನು ಮೊಬೈಲ್ ಆಪ್ಲಿಕೇಶನ್ ಮತ್ತು ವೆಬ್ ಮೂಲಕ ತಿಳಿಯಬಹುದಾಗಿದೆ

ಪೋಷಣ್ ಟ್ರ್ಯಾಕರ್ ಆಪ್ಲಿಕೇಶನ್ ನಲ್ಲಿ ಅಳವಡಿಸಲಾಗಿರುವ ಮಾಹಿತಿ ವಿವರ:-

 • ಅಂಗನವಾಡಿ ಕೇಂದ್ರÀ ಕಟ್ಟಡ ಮಾಹಿತಿ( ಅಂಗನವಾಡಿ ಕೇಂದ್ರ ಕಟ್ಟಡದ ಮಾಹಿತಿ ಸ್ವಂತ ಅಥವಾ ಬಾಡಿಗೆಯ ವಿವರ, ವಿದ್ಯುತ್ ಚಕ್ತಿ, ಅಂಗನವಾಡಿ ಕಾರ್ಯಕರ್ತೆಯರ ಪೂರ್ಣ ಮಾಹಿತಿಯನ್ನು) ಇತ್ಯಾದಿ ವಿವರವನ್ನು ಪಡೆಯಬಹುದು
 • ದೈನಂದಿನ ಚಟುವಟಿಕೆಗಳ ಮಾಹಿತಿ ಪಡೆಯಬಹುದು(ಅಂಗನವಾಡಿ ಕಾರ್ಯಕರ್ತೆಯರ ಮತ್ತು 3 ವರ್ಷದಿಂದ 6 ವರ್ಷದ ಮಕ್ಕಳ ಹಾಜರಾತಿ ಅಂಗನವಾಡಿ ಕಾರ್ಯಕರ್ತೆಯರ ಮನೆ ಬೇಟಿ ವಿವರ.)
 • ಅಂಗನವಾಡಿ ಕೇಂದ್ರÀ ನಡೆಯುವ ಸಮುದಾಯ ಆಧಾರಿತ ಚಟುವಟಿಕೆ, ವಿ ಹೆಚ್ ಎಸ್ ಎನ್ ಡಿ ಮತ್ತು ಯೋಗಕ್ಷೇಮ ಕಾರ್ಯಕ್ರಮದ ಕುರಿತು ಮಾಹಿತಿ ತಿಳಿಯಬಹುದು.
 • ಗರ್ಭಿಣಿ ಮಹಿಳೆಯರ ಆರೋಗ್ಯ ಸ್ಥಿತಿಯನ್ನು (ಗರ್ಭಿಣಿ ಮಹಿಳೆಯ ರಕ್ತ ಹೀನತೆ, ಎತ್ತರ, ತೂಕ, ಪೌಷ್ಠಿಕ ಆಹಾರ ವಿತರಣೆ, ಲಸಿಕೆ, ಮದ್ಯಾಹ್ನದ ಬಿಸಿ ಊಟ) ಇತ್ಯಾದಿ ವಿವರವನ್ನು ಪಡೆಯಬಹುದು.
 • ಹಾಲುಣಿಸುವ ತಾಯಂದಿರ (ಭಾಣಂತಿ) ಆರೋಗ್ಯ ಸ್ಥಿತಿಯನ್ನು ತಿಳಿಯಬಹುದು (ರಕ್ತ ಹೀನತೆ, ಪೌಷ್ಠಿಕ ಆಹಾರ ವಿತರಣೆ, )ಇತ್ಯಾದಿ ವಿವರವನ್ನು ಪಡೆಯಬಹುದು
 • • 0 ತಿಂಗಳಿAದ- 6 ವರ್ಷದ ಮಕ್ಕಳ ಆರೋಗ್ಯ ಮತ್ತು ಬೆಳವಣಿಗೆಯ ಕುರಿತು ಮಾಹಿತಿ ಪಡೆಯಬಹುದು
  1. 0 ತಿಂಗಳಿAದ- 6 ವರ್ಷದ ಮಕ್ಕಳ ಎತ್ತರ, ತೂಕ ರಕ್ತ ಹೀನತೆ, ಲಸಿಕೆ, ಅಪೌಷ್ಠಿಕ ಮಕ್ಕಳ ವಿವರ ಪಡೆಯಬಹುದು.
  2. 6 ತಿಂಗಳಿAದ- 6 ವರ್ಷದ ಮಕ್ಕಳ ಪೌಷ್ಠಿಕ ಆಹಾರ ವಿತರಣೆ, ಮದ್ಯಾಹ್ನದ ಬಿಸಿ ಊಟ ಇತ್ಯಾದಿ ವಿವರವನ್ನು ಪಡೆಯಬಹುದು
 • • ಹದಿಹರೆಯದ ಶಾಲೆ ಬಿಟ್ಟ ಹುಡುಗಿಯರ ಆರೋಗ್ಯ ಸ್ಥಿತಿಯನ್ನು ತಿಳಿಯಬಹುದು (ಹದಿಹರೆಯದ ಹುಡುಗಿಯರ ರಕ್ತ ಹೀನತೆ, ಎತ್ತರ ತೂಕ, ಪೌಷ್ಠಿಕ ಆಹಾರ ವಿತರಣೆ,) ಇತ್ಯಾದಿ ವಿವರವನ್ನು ಪಡೆಯಬಹುದು

ಪೋಷಣ್ ಅಭಿಯಾನ ಯೋಜನೆಯಡಿ ನಿದೀಷ್ಟ ಗುರಿಗಳ ಅನ್ವಯವಾಗಿ ಅಗತ್ಯವಿರುವ ಪರಿಣಾಮಕಾರಿ ಅಂಶಗಳನ್ನು ಅಳವಡಿಸಲು, ಅನುಷ್ಠಾನದಲ್ಲಿನ ಕೊರತೆಗಳನ್ನು ತುಂಬಲು ಈ ಕೆಳಕಂಡ ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲು ಆದೇಶಿಸಿದ್ದು . ಸರ್ಕಾರದ ಆದೇಶ ಸಂಖ್ಯೆ : ಮಮಇ 43 ಐಸಿಡಿ 2019, ದಿನಾಂಕ:19-07-2019 ರಂತೆ ರಾಷ್ಟಿಯ ಪೋಷಣ್ ಅಭಿಯಾನ ಯೋಜನೆಯ ಜಿಲ್ಲಾ ಸಮನ್ವಯ ಸಮಿತಿ (District Convergence Commitee ) ಸದ್ಯಸರು ವಿವರ:

1 Hon. ಮಾನ್ಯ ಜಿಲ್ಲಾಧಿಕಾರಿಗಳು, ಕೊಡಗು ಜಿಲ್ಲೆ ಅಧ್ಯಕ್ಷರು
2 ಮುಖ್ಯ ಕಾರ್ಯನಿರ್ವಹಾಕ ಅಧಿಕಾರಿಗಳು ಜಿಲ್ಲಾ ಪಂಚಾಯತ್, ಕೊಡಗು ಜಿಲ್ಲೆ.. ಉಪಾಧ್ಯಕ್ಷರು
3 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, (ಡಿ.ಎಚ್.ಓ) ಕೊಡಗು ಜಿಲ್ಲೆ. ಸದಸ್ಯರು
4 ಆರ್.ಸಿ.ಎಚ್.ಓ ಅಧಿಕಾರಿಗಳು ಕೊಡಗು ಜಿಲ್ಲೆ. ಸದಸ್ಯರು
5 ಉಪ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ, ಕೊಡಗು ಜಿಲ್ಲೆ. ಸದಸ್ಯರು
6 ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಕೊಡಗು ಜಿಲ್ಲೆ. ಸದಸ್ಯರು
7 ಮುಖ್ಯ ಯೋಜನಾಧಿಕಾರಿಗಳು, ಜಿಲ್ಲಾ ಪಂಚಾಯತ್ , ಕೊಡಗು ಜಿಲ್ಲೆ. ಸದಸ್ಯರು
8 ಉಪನಿರ್ದೇಶಕರು, ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ಇಲಾಖೆ, ಕೊಡಗು ಜಿಲ್ಲೆ. ಸದಸ್ಯರು
9 ಯೋಜನಾ ನಿರ್ದೇಶಕರು, ಎನ್.ಆರ್.ಎಲ್.ಎಮ್ ಜಿಲ್ಲಾ ಪಂಚಾಯತ್, ಕೊಡಗು ಜಿಲ್ಲೆ. ಸದಸ್ಯರು
10 ಕಾರ್ಯಪಾಲಕ ಅಭಿಯಂತರರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಕೊಡಗು ಜಿಲ್ಲೆ. ಸದಸ್ಯರು
11 ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೊಡಗು ಜಿಲ್ಲೆ. ಸದಸ್ಯ ಕಾರ್ಯದರ್ಶಿ

ಮಾತೃವಂದನಾ ಯೋಜನೆ:

ಗರ್ಭಿಣಿ ಮತ್ತು ಬಾಣಂತಿಯರಿಗೆ ಉಂಟಾಗುವ ತೊಂದರೆಗಳಾದ ಅಪೌಷ್ಠಿಕತೆ ರಕ್ತಹೀನತೆ, ಶೀಶು ಮರಣ, ಬಾಣಂತಿ ಮರಣಗಳನ್ನೂ ನಿವಾರಿಸುವ ಸಲುವಾಗಿ ಭಾರತ ಸರ್ಕಾರವು ಎಲ್ಲಾ ರಾಜ್ಯಗಳಲ್ಲಿಯೂ ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯನ್ನು ಜಾರಿಗೆ ತರಲಾಗಿದೆ. ಹಾಗು ನಮ್ಮ ರಾಜ್ಯದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ಅನುಷ್ಟಾನಗೊಳಿಸಲಾಗುತ್ತದೆ.
ಈ ಯೋಜನೆಯಡಿ ಸೌಲಭ್ಯ ಪಡೆಯಲು ತಮ್ಮ ಹತ್ತಿರದ ಅಂಗನವಾಡಿ ಕೇಂದ್ರಗಳಲ್ಲಿ ಉಚಿತವಾಗಿ ಅರ್ಜಿಗಳನ್ನು ಪಡೆದು ಭರ್ತಿಮಾಡಿ ಅಂಗನವಾಡಿ ಕಾರ್ಯಕರ್ತೆಯಗೆ ತಲುಪಿಸಬೇಕು.

ಸೌಲಭ್ಯ ಪಡೆಯಲು ಅರ್ಹತೆಯ ಮಾನದಂಡಗಳು :-

 • ಈ ಯೋಜನೆಯಡಿ ಸೌಲಭ್ಯ ಪಡೆಯಲು ಎಲ್ಲಾ ವರ್ಗದ ಮೊದಲನೇ ಹೆರಿಗೆಯ ಗರ್ಭಿಣಿ ಹಾಗೂ ಬಾಣಂತಿ ( ಕುಟುಂಬದಲ್ಲಿ ಒಂದು ಜೀವಿತ ಮಗುವಿಗೆ ಮಾತ್ರ) ಅರ್ಹರಾಗಿರುತ್ತಾರೆ.
 • ಎಲ್ಲಾ ವರ್ಗದ ಬಿ.ಪಿ.ಎಲ್. ಹಾಗೂ ಎ.ಪಿ.ಎಲ್. ಪಡಿತರ ಚೀಟಿದಾರರು (ಮಹಿಳಾ ಸಕಾರಿ ನೌಕರರನ್ನು ಹೊರತುಪಡಿಸಿ) ಅರ್ಹರಾಗಿತ್ತಾರೆ
 • ಕೊನೆಯ ಮುಟ್ಟಿನ ದಿನಾಂಕವು 01-04-2016 ಹಾಗೂ ನಂತರ ದಿನಾಂಕವಾಗಿದ್ದಲ್ಲಿ ಈ ಯೋಜನೆಯಡಿ ನೋಂದಾಯಿಸಲು ಅರ್ಹರಾಗಿರುತ್ತಾರೆ.
 • ಗರ್ಭಿಣಿಯರು ಹತ್ತಿರದ ಅಂಗನವಾಡಿ ಕೇಂದ್ರಗಳಲ್ಲಿ 150 ದಿನದೊಳಗೆ ನೋಂದಾಯಿಸತಕ್ಕದ್ದು.

ಪ್ರಧಾನ ಮಂತ್ರಿ ಮಾತೃವಂದನಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಜಿಲ್ಲಾ ಮಟ್ಟದಲ್ಲಿ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲು ಆದೇಶಿಸಿದ ಆದೇಶ ಸಂಖ್ಯೆ: ಮಮಇ 406 ಐಸಿಡಿ 2017, ದಿನಾಂಕ:02-02-2018

1 ಜಿಲ್ಲಾಧಿಕಾರಿಗಳು ಅಧ್ಯಕ್ಷರು
2 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸದಸ್ಯರು
3 ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸದಸ್ಯರುr
4 ವ್ಯವಸ್ಥಾಪಕರು ಲೀಡ್ ಬ್ಯಾಂಕ್/ ಅಂಚೆ ಇಲಾಖಾಧಿಕಾರಿಗಳು ಸದಸ್ಯರು
5 ಜಿಲ್ಲೆಯ ಎಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸದಸ್ಯರು
6 ಜಿಲ್ಲಾ ನಿರೂಪಣಾಧಿಕಾರಿಗಳು ಸದಸ್ಯರು ಕಾರ್ಯದರ್ಶಿ

ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ
ವತಿಯಿಂದ ಅನುಷ್ಠಾನಗೊಳಿಸುತ್ತಿರುವ ಯೋಜನೆಗಳ ವಿವರ

ಉದ್ಯೋಗಿನಿ ಯೋಜನೆ:-

 • ಮಹಿಳೆಯರು ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಬ್ಯಾಂಕ್ಗಳ ಸಾಲ ಮತ್ತು ನಿಗಮದ ಮೂಲಕ ಸಹಾಯಧನ ನೀಡಲಾಗುತ್ತಿದೆ.
 • ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಯೋಜನಾ ವೆಚ್ಚದ ಗರಿಷ್ಠ ಶೇ. ೫೦ ರಷ್ಟು ಅಥವಾ ಗರಿಷ್ಟ ರೂ.೫೦,೦೦೦/- ನೀಡಲಾಗುತ್ತಿದೆ. ವಿಧವೆ ಹಾಗೂ ವಿಕಲಚೇತನ ಮಹಿಳೆಯರಿಗೆ ಸಾಮಾನ್ಯ ವರ್ಗದ ಮಹಿಳೆಯರಿಗೆ ರೂ.೩೦,೦೦೦/- ಗಳ ಸಹಾಯಧನ ನೀಡಲಾಗುವುದು. ಸಹಾಯಧನವನ್ನು ಸಂಬAಧಿಸಿದ ಬ್ಯಾಂಕುಗಳಿಗೆ ನೀಡಲಾಗುತ್ತದೆ
 • ಇತರೆ ವರ್ಗದ ಕುಟುಂಬದ ವಾರ್ಷಿಕ ಆದಾಯ ರೂ. ೧,೫೦,೦೦೦/- ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡ ಮಹಿಳೆಯರ ವಾರ್ಷಿಕ ಆದಾಯ ರೂ.೨,೦೦,೦೦೦/- ಮೀರದ ೧೮ ರಿಂದ ೫೫ ವರ್ಷದೊಳಗಿನ ಮಹಿಳೆಯರು ಈ ಯೋಜನೆಯ ಸೌಲಭ್ಯಕ್ಕೆ ಅರ್ಹರು.

ತಾಲ್ಲೂಕು ಮಟ್ಟದ ಆಯ್ಕೆ ಸಮಿತಿ ಸದ್ಯಸರು ವಿವರ:

 • ಶಾಸಕರು, ವಿರಾಜಪೇಟೆ, ಮತ್ತು ಮಡಿಕೇರಿ ವಿಧಾನಸಭಾ ಕ್ಷೇತ್ರ :ಸಮಿತಿ ಅಧ್ಯಕ್ಷರು
 • ಕಾರ್ಯನಿರ್ವಾಹಕ ಅಧಿಕಾರಿಯವರು ತಾಲೂಕು ಪಂಚಾಯತ್ :ಸದಸ್ಯರು
 • ವ್ಯವಸ್ಥಾಪಕರು ಲೀಡ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮಡಿಕೇರಿ:ಸದಸ್ಯರು
 • ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ :ಸದಸ್ಯ ಕಾರ್ಯದರ್ಶಿ
 • ಜಿಲ್ಲಾ ನಿರೂಪಣಾಧಿಕಾರಿಗಳು :ಸದಸ್ಯರು
 • ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರು, ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ :ಸದಸ್ಯರು
 • ಅಭಿವೃದ್ಧಿ ನಿರೀಕ್ಷಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ :ಸದಸ್ಯರು
 • ಜಿಲ್ಲಾ ಮಟ್ಟದ ಸ್ತಿçÃಶಕ್ತಿ ಒಕ್ಕೂಟ್ಟದಅಧ್ಯಕ್ಷರು/ಪ್ರತಿನಿಧಿ :ಸದಸ್ಯರು

ಕಿರುಸಾಲ (ಮೈಕ್ರೋ ಕ್ರೆಡಿಟ್) ಯೋಜನೆ

ಸ್ತಿçà ಶಕ್ತಿ ಸ್ವ-ಸಹಾಯ ಗುಂಪಿನ ಸದಸ್ಯರುಗಳು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರತಿ ಗುಂಪಿಗೆ ಬಡ್ಡಿರಹಿತವಾಗಿ ರೂ.೨.೦೦ ಲಕ್ಷಗಳ ಸಾಲವನ್ನು ಆರ್.ಟಿ.ಜಿ.ಎಸ್ ಮೂಲಕ ನೇರವಾಗಿ ಸಂಘದ ಖಾತೆಗೆ ಜಮೆ ಮಾಡಲಾಗುವುದು. ಹಣ ಜಮೆಯಾದ ೬ ತಿಂಗಳ ನಂತರ ಅಂದರೆ ೭ ತಿಂಗಳಿನಿAದ ಮಾಸಿಕ ರೂ.೧೦,೦೦೦/- ಗಳನ್ನು ಮರುಪಾವತಿ ಮಾಡಬೇಕಾಗಿರುತ್ತದೆ. ಗುಂಪಿನಲ್ಲಿ ಹಸು ಸಾಕಾಣಿಕೆ, ಹಂದಿ ಸಾಕಾಣಿಕೆ, ನರ್ಸರಿ, ಬಾಳೆ ಕೃಷಿ, ಶುಂಠಿ ಕೃಷಿ, ಪಿನಾಯಿಲ್ ಮಾಡುವುದು ಇತ್ಯಾದಿ ಚಟುವಟಿಕೆಗಳನ್ನು ಮಾಡಬಹುದಾಗಿದೆ.

ತಾಲ್ಲೂಕು ಮಟ್ಟದ ಆಯ್ಕೆ ಸಮಿತಿ ಸದ್ಯಸರು ವಿವರ:

 • ಶಾಸಕರು, ವಿರಾಜಪೇಟೆ, ಮತ್ತು ಮಡಿಕೇರಿ ವಿಧಾನಸಭಾ ಕ್ಷೇತ್ರ :ಸಮಿತಿ ಅಧ್ಯಕ್ಷರು
 • ಕಾರ್ಯನಿರ್ವಾಹಕ ಅಧಿಕಾರಿಯವರು ತಾಲೂಕು ಪಂಚಾಯತ್ :ಸದಸ್ಯರು
 • ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ :ಸದಸ್ಯ ಕಾರ್ಯದರ್ಶಿ
 • ಜಿಲ್ಲಾ ನಿರೂಪಣಾಧಿಕಾರಿಗಳು :ಸದಸ್ಯರು
 • ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರು, ಮಡಿಕೇರಿ, ಸೋಮವಾರಪೇಟೆ, ವಿರಾಜಪೇಟೆ:ಸದಸ್ಯರು
 • ಅಭಿವೃದ್ಧಿ ನಿರೀಕ್ಷಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ :ಸದಸ್ಯರು
 • ಜಿಲ್ಲಾ ಮಟ್ಟದ ಸ್ತಿçÃಶಕ್ತಿ ಒಕ್ಕೂಟ್ಟದಅಧ್ಯಕ್ಷರು/ಪ್ರತಿನಿಧಿ :ಸದಸ್ಯರು

ಸಮೃದ್ಧಿ

ನಿಗಮದಿಂದ ೨೦೧೬-೧೭ನೇ ಸಾಲಿನಿಂದ ಬೀದಿಬದಿಯಲ್ಲಿ ಸಣ್ಣ ವ್ಯಾಪಾರ ನಡೆಸುತ್ತಿರುವ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ “ಸಮೃದ್ಧಿ” ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶದ ಬೀದಿಬದಿ ಮಹಿಳಾ ವ್ಯಾಪಾರಿಗಳು ಹೆಚ್ಚಿನ ಬಡ್ಡಿ ನೀಡಿ ಸಾಲ ಪಡೆಯುವುದನ್ನು ತಡೆಗಟ್ಟಿ ಶೋಷಣೆಯಿಂದ ಮುಕ್ತಗೊಳಿಸುವುದು, ಮಹಿಳೆಯರ ನಿರುದ್ಯೋಗ ಸಮಸ್ಯೆಯನ್ನು ನಿವಾರಣೆ ಮಾಡುವುದು ಯೋಜನೆಯ ಮುಖ್ಯ ಉದ್ದೇಶವಾಗಿರುತ್ತದೆ. ಈ ಯೋಜನೆಯಡಿ ಬೀದಿಬದಿ ಮಹಿಳಾ ವ್ಯಾಪಾರಿಗಳಿಗೆ ತಲಾ ರೂ. ೧೦,೦೦೦/- ಗಳಂತೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ೨೦೨೦-೨೧ ನೇ ಸಾಲಿನಿಂದ ಈ ಯೋಜನೆಯು ಸ್ಥಗಿತಗೊಂಡಿರುತ್ತದೆ.

ಧನಶ್ರೀ ಯೋಜನೆ:-

೨೦೧೬-೧೭ನೇ ಸಾಲಿನಿಂದ “ಧನಶ್ರೀ” ಯೋಜನೆ ಜಾರಿಗೆ ಬಂದಿರುತ್ತದೆ. ಈ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿರುವ ೧೮-೬೦ ವಯೋಮಿತಿಯ ಹೆಚ್.ಐ.ವಿ. ಸೋಂಕಿತ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಂಡು ಅಭಿವೃದ್ಧಿ ಹೊಂದಲು ಪ್ರೇರೇಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಈ ಯೋಜನೆಯಡಿ ಪ್ರತಿ ಫಲಾನುಭವಿಗೆ ಘಟಕ ವೆಚ್ಚ ರೂ. ೫೦,೦೦೦/-ಗಳಲ್ಲಿ ರೂ.೨೫,೦೦೦/- ಗಳ ನೇರ ಸಾಲ ಹಾಗೂ ರೂ.೨೫,೦೦೦/-ಗಳನ್ನು ಸಹಾಯಧನವನ್ನಾಗಿ ನೀಡಲಾಗುವುದು. ಸಾಲದ ಮೊತ್ತ ರೂ. ೨೫,೦೦೦/-ಗಳನ್ನು ಫಲಾನುಭವಿಗಳ ಖಾತೆಗೆ ಹಣ ಜಮೆಯಾದ ೬ ತಿಂಗಳ ನಂತರ ಅಂದರೆ ೭ ನೇ ತಿಂಗಳಿನಿAದ ೨೫ ಕಂತುಗಳಲ್ಲಿ ಮಾಸಿಕ ರೂ.೧೦೦೦/- ದಂತೆ ನಿಗಮಕ್ಕೆ ಮರುಪಾವತಿಸಬೇಕಾಗುತ್ತದೆ. ೨೦೨೧-೨೨ ಸಾಲಿನಿಂದ ರೂ.೩೦,೦೦೦/-ಗಳ ಪ್ರೋತ್ಸಾಹಧನ ನೀಡಲಾಗುತ್ತಿದೆ.

 • ಜಿಲ್ಲಾಧಿಕಾರಿಯವರು, ಕೊಡಗು ಜಿಲ್ಲೆ :ಸಮಿತಿ ಅಧ್ಯಕ್ಷರು
 • ಜಿಲಾ ಏಡ್ಸ್ ನಿಯಂತ್ರಣಾಧಿಕಾರಿಗಳು :ಸದಸ್ಯರು
 • ವ್ಯವಸ್ಥಾಪಕರು, ಲೀಡ್ ಬ್ಯಾಂಕ್ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಮಡಿಕೇರಿ ಸದಸ್ಯರು :ಸದಸ್ಯರು
 • ಜಂಟಿ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ :ಸದಸ್ಯರು
 • ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ :ಸದಸ್ಯ ಕಾರ್ಯದರ್ಶಿ
 • ಜಿಲ್ಲಾ ನಿರೂಪಣಾಧಿಕಾರಿಗಳು :ಸದಸ್ಯರು
 • ಸಂಯೋಜಕರು, ರ್ಯೆ ಕೆ ಮತ್ತು ಬೆಂಬಲ ಕೇಂದ್ರ, ಜಿಲ್ಲಾ ಆಸ್ಪತ್ರೆ ಮಡಿಕೇರಿ :ಸದಸ್ಯರು
 • ಅಭಿವೃದ್ಧಿ ನಿರೀಕ್ಷಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ :ಸದಸ್ಯರು

ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ:-

ಈ ಯೋಜನೆಯಡಿಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರ ಸ್ವಯಂ ಉದ್ಯೊಗಕ್ಕಾಗಿ ಸಾಲ, ಸೌಲಭ್ಯ ಹಾಗೂ ಕೌಶಲ್ಯ ತರಬೇತಿ ಕೊಡಿಸಿ ಇವರು ಗೌರವಾನ್ವಿತ ಜೀವನವನ್ನು ನಡೆಸಿ ಸಮಾಜದ ಮುಖ್ಯವಾಹಿನಿಗೆ ಬರುವ ಉದ್ದೇಶದಿಂದ ಪ್ರತಿ ಫಲಾನುಭವಿಗೆ ಘಟಕ ವೆಚ್ಚ ರೂ. ೫೦,೦೦೦/-ಗಳಲ್ಲಿ ರೂ.೨೫,೦೦೦/- ಗಳ ನೇರ ಸಾಲ ಹಾಗೂ ರೂ.೨೫,೦೦೦/-ಗಳನ್ನು ಸಹಾಯಧನವನ್ನಾಗಿ ನೀಡಲಾಗುವುದು. ಸಾಲದ ಮೊತ್ತ ರೂ. ೨೫,೦೦೦/-ಗಳನ್ನು ಫಲಾನುಭವಿಗಳ ಖಾತೆಗೆ ಹಣ ಜಮೆಯಾದ ೬ ತಿಂಗಳ ನಂತರ ಅಂದರೆ ೭ ನೇ ತಿಂಗಳಿನಿAದ ೨೫ ಕಂತುಗಳಲ್ಲಿ ಮಾಸಿಕ ರೂ.೧೦೦೦/- ದಂತೆ ನಿಗಮಕ್ಕೆ ಮರುಪಾವತಿಸಬೇಕಾಗುತ್ತದೆ. ೨೦೨೧-೨೨ ಸಾಲಿನಿಂದ ರೂ.೩೦,೦೦೦/-ಗಳ ಪ್ರೋತ್ಸಾಹಧನ ನೀಡಲಾಗುತ್ತಿದೆ./p>

 • ಜಿಲ್ಲಾಧಿಕಾರಿಯವರು, ಕೊಡಗು ಜಿಲ್ಲೆ :ಸಮಿತಿ ಅಧ್ಯಕ್ಷರು
 • ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ :ಸದಸ್ಯರು
 • ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು, ಕೊಡಗು ಜಿಲ್ಲೆ :ಸದಸ್ಯರು
 • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ :ಸದಸ್ಯರು
 • ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ :ಸದಸ್ಯರು
 • ಜಿಲಾ ಏಡ್ಸ್ ನಿಯಂತ್ರಣಾಧಿಕಾರಿಗಳು :ಸದಸ್ಯರು
 • ಜಂಟಿ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ :ಸದಸ್ಯರು
 • ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ :ಸದಸ್ಯ ಕಾರ್ಯದರ್ಶಿ
 • ಸಂಗಮ ಅಥವಾ ಲೈಂಗಿಕ ಕಾರ್ಯಕರ್ತೆಯರಿಂದ ಒಬ್ಬ ಪ್ರತಿನಿಧಿ :ಸದಸ್ಯರು
 • ಅಭಿವೃದ್ಧಿ ನಿರೀಕ್ಷಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ;ಸದಸ್ಯರು

ಚೇತನಾ ಯೋಜನೆ:-

ಈ ಯೋಜನೆಯಡಿ ಲೈಂಗಿಕ ಕಾರ್ಯಕರ್ತೆಯರಿಗೆ ಸ್ವಯಂ ಉದ್ಯೋಗಕ್ಕಾಗಿ ಹಾಗೂ ಸಮಾಜದಲ್ಲಿ ಗೌರವಾನ್ವಿತ ಜೀವನ ನಡೆಸಲು ಅನುಕೂಲವಾಗುವಂತೆ ಪ.ಜಾತಿ ಮತ್ತು ಪ.ಪಂಗಡದ ಫಲಾನುಭವಿಗೆ ಘಟಕ ವೆಚ್ಚ ರೂ. ೧,೦೦,೦೦೦/-ಗಳಲ್ಲಿ ರೂ.೫೦,೦೦೦/- ಗಳ ನೇರ ಸಾಲ ಹಾಗೂ ರೂ.೫೦,೦೦೦/-ಗಳನ್ನು ಸಹಾಯಧನವನ್ನಾಗಿ ನೀಡಲಾಗುವುದು. ಹಾಗೂ ಇತರೆ ವರ್ಗದ ಫಲಾನುಭವಿಗಳಿಗೆ ಘಟಕ ವೆಚ್ಚ ರೂ. ೫೦,೦೦೦/-ಗಳಲ್ಲಿ ರೂ.೨೫,೦೦೦/- ಗಳ ನೇರ ಸಾಲ ಹಾಗೂ ರೂ.೨೫,೦೦೦/-ಗಳನ್ನು ಸಹಾಯಧನವನ್ನಾಗಿ ನೀಡಲಾಗುವುದು. ಸಾಲದ ಮೊತ್ತವನ್ನು ಹಣ ಜಮೆಯಾದ ೬ ತಿಂಗಳ ನಂತರ ೭ ನೇ ತಿಂಗಳಿAದ ನಿಗಮಕ್ಕೆ ರೂ.೧,೦೦೦/- ದಂತೆ ಮರುಪಾವತಿ ಮಾಡಬೇಕಾಗಿರುತ್ತದೆ. ೨೦೨೧-೨೨ ಸಾಲಿನಿಂದ ರೂ.೩೦,೦೦೦/-ಗಳ ಪ್ರೋತ್ಸಾಹಧನ ನೀಡಲಾಗುತ್ತಿದೆ.

 • ಜಿಲ್ಲಾಧಿಕಾರಿಯವರು, ಕೊಡಗು ಜಿಲ್ಲೆ :ಸಮಿತಿ ಅಧ್ಯಕ್ಷರು
 • ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ್ :ಸದಸ್ಯರು
 • ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು, ಕೊಡಗು ಜಿಲ್ಲೆ :ಸದಸ್ಯರು
 • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ :ಸದಸ್ಯರು
 • ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ :ಸದಸ್ಯರು
 • ಜಿಲಾ ಏಡ್ಸ್ ನಿಯಂತ್ರಣಾಧಿಕಾರಿಗಳು :ಸದಸ್ಯರು
 • ಜಂಟಿ ನಿರ್ದೇಶಕರು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ :ಸದಸ್ಯರು
 • ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ :ಸದಸ್ಯಕಾರ್ಯದರ್ಶಿ
 • ಸಂಚಾಲಕರು, ಮಹಿಳೋದಯ ಮಹಿಳಾ ಒಕ್ಕೂಟ ಮಡಿಕೇರಿ :ಸದಸ್ಯರು
 • ಸಂಚಾಲಕರು, ಆಶೋದಯ ಸಂಸ್ಥೆ, ಮಡಿಕೇರಿ ಸದಸ್ಯರು
 • ಅಭಿವೃದ್ಧಿ ನಿರೀಕ್ಷಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ :ಸದಸ್ಯರು
 • ಲೈಂಗಿಕ ಕಾರ್ಯಕರ್ತೆಯರಿಂದ ಒಬ್ಬ ಪ್ರತಿನಿಧಿ :ಸದಸ್ಯರು

ಕಚೇರಿಯ ಅಧಿಕಾರಿಗಳ ಮತ್ತು ನೌಕರರ ಅಧಿಕಾರಗಳು ಮತ್ತು ಕರ್ತವ್ಯಗಳು
ಆಡಳಿತ ವಿಭಾಗ

ಉಪ ನಿರ್ದೇಶಕರು

ಇವರು ಜಿಲ್ಲಾ ಮಟ್ಟದಲ್ಲಿ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ. ಇಲಾಖೆಯ ಎಲ್ಲಾ ಕಾರ್ಯಕ್ರಮಗಳ ಮೇಲ್ವಿಚಾರಣೆ ಮತ್ತು ಮಾರ್ಗದರ್ಶನ ಮಾಡುತ್ತಾರೆ. ಇಲಾಖೆಯ ಎಲ್ಲಾ ಕಾರ್ಯಕ್ರಮಗಳ ಪ್ರಗತಿ ವರದಿಗಳನ್ನು ಜಿಲ್ಲಾ ಪಂಚಾಯತ್ / ನಿರ್ದೇಶಕರು / ಸರ್ಕಾರಕ್ಕೆ ಕಾಲಕಾಲಕ್ಕೆ ಸಲ್ಲಿಸುವರು. ಸರ್ಕಾರದ ಡೆಲಿಗೇಶನ್ ಆಫ್ ಫೈನಾನ್ಷಿಯಲ್ ಪವರ್ಸ್ನ ಆದೇಶದಲ್ಲಿ ನಿಗದಿಪಡಿಸಿರುವಂತೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ದತ್ತವಾಗಿರುವ ಆರ್ಥಿಕ ಅಧಿಕಾರಗಳನ್ನು ಚಲಾಯಿಸಲು ಅಧಿಕಾರ ಹೊಂದಿರುತ್ತಾರೆ ಮತ್ತು ಕಚೇರಿಯ ಮುಖ್ಯಸ್ಥರಾಗಿ ವಿವಿಧ ಆಡಳಿತಾತ್ಮಕ ಅಧಿಕಾರಗಳನ್ನು ಹೊಂದಿರುತ್ತಾರೆ.

ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ

ಇವರು ಕಚೇರಿಯ ಹಣ ಸೆಳೆಯುವ ಮತ್ತು ಬಟವಾಡೆ ಮಾಡುವ ಅಧಿಕಾರಿಯಾಗಿರುತ್ತಾರಲ್ಲದೆ ಕಚೇರಿ ಆಡಳಿತ ಮತ್ತು ಲೆಕ್ಕಪತ್ರಗಳನ್ನು ನಿರ್ವಹಿಸುವರು. ಉಪ ನಿರ್ದೇಶಕರಿಗೆ ಅವರ ಕೆಲಸಗಳ ನಿರ್ವಹಣೆಯಲ್ಲಿ ಸಹಾಯ ಮಾಡುವರು. ಸುಧಾರಣಾ ಸಂಸ್ಥೆಗಳ ಮತ್ತು ಇಲಾಖೆಯ ಅನುದಾನಿತ ಸಂಸ್ಥೆಗಳ ತಪಾಸಣೆ ಹಾಗೂ ಉಸ್ತುವಾರಿ ಮಾಡುವರು. ರಾಜ್ಯ ವಲಯ ಯೋಜನೆಗಳ ಅನುಷ್ಠಾನದಲ್ಲಿ ಉಪನಿರ್ದೇಶಕರಿಗೆ ಸಹಕರಿಸುವರು. ಇವರು ಉಪನಿರ್ದೇಶಕರ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿರುತ್ತಾರೆ.

ಅಧೀಕ್ಷಕರು

ಕಚೇರಿಯ ಆಡಳಿತ ವಿಭಾಗಕ್ಕೆ ಸಂಬAಧಪಟ್ಟ ಎಲ್ಲಾ ಕೆಲಸಗಳ ಉಸ್ತುವಾರಿ, ಕಚೇರಿಯ ಲೆಕ್ಕಪತ್ರಗಳು ಮತ್ತು ನಗದು ವ್ಯವಹಾರದ ನಿರ್ವಹಣೆ, ಸುಧಾರಣಾ ಸಂಸ್ಥೆಗಳ ಕಡತಗಳ ಪರಿಶೀಲನೆ, ಇಲಾಖೆಯ ವಾರ್ಷಿಕ ಬಜೆಟ್ ತಯಾರಿಕೆ, ಅವರ ವಿಭಾಗದ ಸಿಬ್ಬಂದಿಗಳ ಕೆಲಸ ಕಾರ್ಯಗಳ ಮೇಲ್ವಿಚಾರಣೆ ಮತ್ತು ಕಾಲ ಕಾಲಕ್ಕೆ ಮೇಲಧಿಕಾರಿಗಳು ನಿಗದಿಪಡಿಸುವ ಇತರ ವಿಷಯಗಳ ಕಡತಗಳ ನಿರ್ವಹಣೆ ಮಾಡುವರು. ಇವರು ಉಪನಿರ್ದೇಶಕರ ಕಚೇರಿಯ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿರುತ್ತಾರೆ.

ಪ್ರಥಮ ದರ್ಜೆ ಸಹಾಯಕರು :

ಕಚೇರಿ ಆಡಳಿತ ಮತ್ತು ಸಿಬ್ಬಂದಿ ವಿಷಯಗಳು, ಸೇವಾ ಪುಸ್ತಕಗಳ ನಿರ್ವಹಣೆ, ಸ್ತಿçÃಶಕ್ತಿ ಯೋಜನೆ, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಬಾಲಭವನ, ಸಾಮಾಜಿಕ ಪಿಡುಗುಗಳ ನಿವಾರಣೆ, ಕಾನೂನು ಶಿಬಿರಗಳು, ಪ್ರತಿಭಾವಂತ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ ಮತ್ತು ಕಾಲ ಕಾಲಕ್ಕೆ ಮೇಲಧಿಕಾರಿಗಳು ನಿಗದಿಪಡಿಸುವ ಇತರ ವಿಷಯಗಳ ಕಡತಗಳ ನಿರ್ವಹಣೆ. ಇದರ ಜತೆಗೆ ಇವರು ಮಹಿಳಾ ಅಭಿವೃದ್ಧಿ ನಿಗಮದ ಜಿಲ್ಲಾ ಘಟಕದಲ್ಲಿ ಅಭಿವೃದ್ಧಿ ನಿರೀಕ್ಷಕರ ಕೆಲಸವನ್ನೂ ಹೆಚ್ಚುವರಿಯಾಗಿ ನಿರ್ವಹಿಸುತ್ತಿರುವರು

ದ್ವಿ.ದ.ಸ. :

ಭಾಗ್ಯಲಕ್ಷಿö್ಮ ಯೋಜನೆಯ ಸಂಪೂರ್ಣ ಕೆಲಸಗಳು, ಗಣಕಯಂತ್ರಗಳಲ್ಲಿ ದತ್ತಾಂಶಗಳ ನಿರ್ವಹಣೆ ಮತ್ತು ಕಾಲ ಕಾಲಕ್ಕೆ ಮೇಲಧಿಕಾರಿಗಳು ನಿಗದಿಪಡಿಸುವ ಇತರ ವಿಷಯಗಳ ಕಡತಗಳ ನಿರ್ವಹಣೆ ಹಾಗೂ ಐ.ಸಿ.ಡಿ.ಎಸ್. ವಿಭಾಗಕ್ಕೆ ಸಂಬಂಧಪಟ್ಟ ಕಡತಗಳನ್ನು ನಿರ್ವಹಿಸಿ ಅಧೀಕ್ಷಕರಿಗೆ ಸಲ್ಲಿಸುತ್ತಾರೆ ಮತ್ತು ಮೇಲಧಿಕಾರಿಗಳು ಕಾಲ ಕಾಲಕ್ಕೆ ಸೂಚಿಸುವ ಇತರ ಕಚೇರಿ ಕೆಲಸಗಳನ್ನು ನಿರ್ವಹಿಸುವರು.

ವಾಹನ ಚಾಲಕರು :

ಮೇಲಧಿಕಾರಿಗಳ ಸೂಚನೆಯಂತೆ ಕಚೇರಿಯ ವಾಹನ ಸಂಖ್ಯೆ ಸಿಎಜಿ 4456ರ ಚಾಲನೆ ಮತ್ತು ನಿರ್ವಹಣೆ ಮಾಡುವುದು. ವಾಹನವು ಸದಾ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದು. ಸದರಿ ವಾಹನಕ್ಕೆ ಸಂಬAಧಪಟ್ಟ ಆರ್.ಸಿ. ಪುಸ್ತಕ, ವಿಮಾ ದಾಖಲೆಗಳು, ತೆರಿಗೆ ಕಾರ್ಡ್, ಲಾಗ್ ಪುಸ್ತಕ ಇತ್ಯಾದಿಗಳನ್ನು ನಿರ್ವಹಿಸುವುದು.

ಗ್ರೂಪ್ ಡಿ ಸಿಬ್ಬಂದಿ:

ಇವರು ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳು ಕಾಲ ಕಾಲಕ್ಕೆ ವಹಿಸುವ ಎಲ್ಲಾ ಬಗೆಯ ಲಿಪಿಕೇತರ ಕಚೇರಿ ಕೆಲಸಗಳನ್ನು ನಿರ್ವಹಿಸುವರು. ಖಜಾನೆ ಮತ್ತು ಬ್ಯಾಂಕುಗಳಿಗೆ ಹೋಗಿ ಬರುವುದು, ಇತರ ಕಚೇರಿಗಳಿಗೆ ಟಪಾಲು ಮತ್ತಿತರ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಸಹಿ ಪಡೆದು ಬರುವುದು ಹಾಗೂ ಕಚೇರಿಯಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಹಾಗೂ ಕಚೇರಿಯ ಕಾಗದ ಪತ್ರಗಳು ಮತ್ತು ದಾಖಲಾತಿಗಳನ್ನು ಸರಿಯಾಗಿ ಜೋಡಿಸಿಡುವುದು ಮತ್ತು ಮೇಲಧಿಕಾರಿಗಳು ಕಾಲ ಕಾಲಕ್ಕೆ ಸೂಚಿಸುವ ಇತರ ಕಚೇರಿ ಕೆಲಸಗಳನ್ನು ನಿರ್ವಹಿಸುವರು.


ಜಿಲ್ಲಾ ಐ.ಸಿ.ಡಿ.ಎಸ್. ಉಸ್ತುವಾರಿ ಕೋಶ

ನಿರೂಪಣಾಧಿಕಾರಿ :

ಇವರು ಜಿಲ್ಲೆಯಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಕಾರ್ಯಕ್ರಮದ ಸಂಪೂರ್ಣ ಉಸ್ತುವಾರಿ ಮಾಡುವರು. ಐ.ಸಿ.ಡಿ.ಎಸ್. ಹಾಗೂ ಸ್ತ್ರೀಶಕ್ತಿ ಯೋಜನೆಗಳಿಗೆ ಸಂಬಂಧಪಟ್ಟ ಎಲ್ಲಾ ಪ್ರಗತಿ ವರದಿಗಳನ್ನು ಪರಿಶೀಲಿಸುವರು. ಅಲ್ಲದೆ ಜಿಲ್ಲಾ ಮಟ್ಟದಲ್ಲಿ ಸ್ತ್ರೀಶಕ್ತಿ ಯೋಜನೆಯ ನೋಡಲ್ ಅಧಿಕಾರಿಯಾಗಿರುತ್ತಾರೆ.

ಅಧೀಕ್ಷಕರು :

ಕಚೇರಿಯ ಐಸಿಡಿಎಸ್ ವಿಭಾಗಕ್ಕೆ ಸಂಬAಧಪಟ್ಟ ಎಲ್ಲಾ ಕೆಲಸಗಳ ಉಸ್ತುವಾರಿ, ಐಸಿಡಿಎಸ್ ಕೋಶದ ಸಿಬ್ಬಂದಿಗಳ ಕೆಲಸಗಳ ಮೇಲ್ವಿಚಾರಣೆ, ಎಂ.ಎಂ.ಆರ್., ಕರಡು ವಾರ್ಷಿಕ ಯೋಜನೆ ಮತ್ತಿತರ ವರದಿಗಳ ತಯಾರಿಕೆ, ಅಂಗನವಾಡಿ ತರಬೇತಿ ಕೇಂದ್ರಕ್ಕೆ ಸಂಬಂಧಪಟ್ಟ ಕೆಲಸಗಳು ಮತ್ತು ಕಾಲ ಕಾಲಕ್ಕೆ ಮೇಲಧಿಕಾರಿಗಳು ನಿಗದಿಪಡಿಸುವ ಇತರ ವಿಷಯಗಳ ನಿರ್ವಹಣೆ ಇತ್ಯಾದಿ ಕೆಲಸಗಳನ್ನು ನಿರ್ವಹಿಸುವರು.

ಪ್ರಥಮ ದರ್ಜೆ ಸಹಾಯಕರು

ಐ.ಸಿ.ಡಿ.ಎಸ್. ವಿಭಾಗಕ್ಕೆ ಸಂಬಂಧಪಟ್ಟ ಕಡತಗಳನ್ನು ನಿರ್ವಹಿಸಿ ಅಧೀಕ್ಷಕರಿಗೆ ಸಲ್ಲಿಸುತ್ತಾರೆ ಮತ್ತು ಮೇಲಧಿಕಾರಿಗಳು ಕಾಲ ಕಾಲಕ್ಕೆ ಸೂಚಿಸುವ ಇತರ ಕಚೇರಿ ಕೆಲಸಗಳನ್ನು ನಿರ್ವಹಿಸುವರು.

ದ್ವಿತೀಯ ದರ್ಜೆ ಸಹಾಯಕರು

ಅಧಿಕಾರಿಗಳು ಮತ್ತು ಅಧೀಕ್ಷಕರ ಸೂಚನೆಯಂತೆ ಎಲ್ಲಾ ವಿಭಾಗದ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಸಹಕಾರ ನೀಡುವುದು ಮತ್ತು ಮೇಲಧಿಕಾರಿಗಳು ಕಾಲ ಕಾಲಕ್ಕೆ ಸೂಚಿಸುವ ಇತರ ಕಚೇರಿ ಕೆಲಸಗಳನ್ನು ನಿರ್ವಹಿಸುವರು.

ವಾಹನ ಚಾಲಕರು :

ಮೇಲಧಿಕಾರಿಗಳ ಸೂಚನೆಯಂತೆ ಕಚೇರಿಯ ವಾಹನ ಸಂಖ್ಯೆ ಸಿಎಜಿ 4456ರ ಚಾಲನೆ ಮತ್ತು ನಿರ್ವಹಣೆ ಮಾಡುವುದು. ವಾಹನವು ಸದಾ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳುವುದು. ಸದರಿ ವಾಹನಕ್ಕೆ ಸಂಬAಧಪಟ್ಟ ಆರ್.ಸಿ. ಪುಸ್ತಕ, ವಿಮಾ ದಾಖಲೆಗಳು, ತೆರಿಗೆ ಕಾರ್ಡ್, ಲಾಗ್ ಪುಸ್ತಕ ಇತ್ಯಾದಿಗಳನ್ನು ನಿರ್ವಹಿಸುವುದು

ಗ್ರೂಪ್ ಡಿ ಸಿಬ್ಬಂದಿ :

ಇವರು ಕಚೇರಿಯಲ್ಲಿ ಅಧಿಕಾರಿಗಳು ಮತ್ತು ಇತರ ಸಿಬ್ಬಂದಿಗಳು ಕಾಲ ಕಾಲಕ್ಕೆ ವಹಿಸುವ ಎಲ್ಲಾ ಬಗೆಯ ಲಿಪಿಕೇತರ ಕಚೇರಿ ಕೆಲಸಗಳನ್ನು ನಿರ್ವಹಿಸುವರು. ಖಜಾನೆ ಮತ್ತು ಬ್ಯಾಂಕುಗಳಿಗೆ ಹೋಗಿ ಬರುವುದು, ಇತರ ಕಚೇರಿಗಳಿಗೆ ಟಪಾಲು ಮತ್ತಿತರ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಸಹಿ ಪಡೆದು ಬರುವುದು ಹಾಗೂ ಕಚೇರಿಯಲ್ಲಿ ಸ್ವಚ್ಛತೆಯನ್ನು ಕಾಪಾಡುವುದು ಹಾಗೂ ಕಚೇರಿಯ ಕಾಗದ ಪತ್ರಗಳು ಮತ್ತು ದಾಖಲಾತಿಗಳನ್ನು ಸರಿಯಾಗಿ ಜೋಡಿಸಿಡುವುದು ಮತ್ತು ಮೇಲಧಿಕಾರಿಗಳು ಕಾಲ ಕಾಲಕ್ಕೆ ಸೂಚಿಸುವ ಇತರ ಕಚೇರಿ ಕೆಲಸಗಳನ್ನು ನಿರ್ವಹಿಸುವರು.


ತೀರ್ಮಾನ ಕೈಗೊಳ್ಳುವಿಕೆಯಲ್ಲಿ ಅನುಸರಿಸುವ ಕ್ರಮ ಹಾಗೂ ಮೇಲ್ವಿಚಾರಣೆ
ಮತ್ತು ಉತ್ತರದಾಯಿತ್ವದ ಮಾಧ್ಯಮಗಳು

ಕಚೇರಿಯಲ್ಲಿ ಕಡತಗಳ ನಿರ್ವಹಣೆಯಲ್ಲಿ ‘ಕಚೇರಿ ಕಾರ್ಯವಿಧಾನ ಕೈಪಿಡಿ’ಯಲ್ಲಿ ನೀಡಿರುವ ಸೂಚನೆಗಳನ್ನು ಪಾಲಿಸಲಾಗುತ್ತಿದೆ. ಸದರಿ ಕೈಪಿಡಿಯಲ್ಲಿ ಸೂಚಿಸಿರುವಂತೆ ಎಲ್ಲಾ ಬಗೆಯ ವಹಿಗಳನ್ನು ಕಚೇರಿಯಲ್ಲಿ ನಿರ್ವಹಿಸಲಾಗಿದೆ. ಪ್ರತಿಯೊಂದು ಕಡತಕ್ಕೆ ಕ್ರಮಾಂಕವನ್ನು ನೀಡಲಾಗಿದೆ. ವಿಷಯ ನಿರ್ವಾಹಕರ ಬಳಿ ಅವರವರ ವಿಷಯಗಳಿಗೆ ಸಂಬAಧಪಟ್ಟ ಕಡತಗಳು ಮತ್ತು ಅವರು ನಿರ್ವಹಿಸುವ ವಿಷಯಗಳಿಗೆ ಸಂಬಂಧಪಟ್ಟ ಸುತ್ತೋಲೆಗಳು ಮತ್ತು ಸರ್ಕಾರಿ ಆದೇಶಗಳು ಲಭ್ಯವಿರುತ್ತದೆ. ವಿಷಯ ನಿರ್ವಾಹಕರು ಮಂಡಿಸುವ ಕಡತಗಳನ್ನು ಸಂಬಂಧಪಟ್ಟ ಶಾಖೆಗಳ ಅಧೀಕ್ಷಕರುಗಳು ಪರಿಶೀಲಿಸಿ ಆಯಾ ವಿಭಾಗದ ಶಾಖಾಧಿಕಾರಿಗಳಿಗೆ ಮಂಡಿಸುತ್ತಾರೆ. ಶಾಖಾಧಿಕಾರಿಗಳು ಇವುಗಳನ್ನು ಪರಿಶೀಲಿಸಿ ತಮ್ಮ ಅಭಿಪ್ರಾಯದೊಂದಿಗೆ ಉಪನಿರ್ದೇಶಕರಿಗೆ ಮಂಡಿಸುತ್ತಾರೆ. ಉಪ ನಿರ್ದೇಶಕರು ಪ್ರತಿಯೊಂದು ವಿಷಯದ ಬಗ್ಗೆ ಅಂತಿಮ ತೀರ್ಮಾನವನ್ನು ಕೈಗೊಂಡು ಕಡತದಲ್ಲಿನ ವಿಷಯವನ್ನು ಇತ್ಯರ್ಥ ಮಾಡುತ್ತಾರೆ.


ಕಾರ್ಯನಿರ್ವಹಣೆಯಲ್ಲಿ ರೂಢಿಸಿಕೊಂಡಿರುವ ವಿಧಿ ವಿಧಾನಗಳು

ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರು ಇವರು ಕಾಲ ಕಾಲಕ್ಕೆ ನೀಡುವ ಸೂಚನೆಗಳನ್ವಯ ಮತ್ತು ಅವರು ನಿಗದಿಪಡಿಸುವ ಆರ್ಥಿಕ ಮತ್ತು ಭೌತಿಕ ಗುರಿಯನ್ವಯ ರಾಜ್ಯ ವಲಯ ಯೋಜನೆಗಳನ್ನು ಈ ಕಚೇರಿಯ ಮೂಲಕ ನೇರವಾಗಿ ಅನುಷ್ಠಾನ ಮಾಡಲಾಗುವುದು. ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳನ್ನು ಅನುಮೋದಿತ ಕ್ರಿಯಾ ಯೋಜನೆಯಂತೆ ಜಿಲ್ಲಾ ಪಂಚಾಯತ್ ಮಾರ್ಗದರ್ಶನದಡಿ ಅನುಷ್ಠಾನ ಮಾಡಲಾಗುವುದು. ತಾಲ್ಲೂಕು ಪಂಚಾಯತ್ ಕಾರ್ಯಕ್ರಮಗಳನ್ನು ಸಂಬಂಧಪಟ್ಟ ತಾಲ್ಲೂಕು ಪಂಚಾಯಿತಿಗಳು ಅನುಷ್ಠಾನ ಮಾಡುತ್ತಿದ್ದು ಕೇವಲ ಮೇಲುಸ್ತುವಾರಿ, ಅಂಕಿ ಅಂಶಗಳ ಕ್ರೋಢೀಕರಣದ ಕೆಲಸವನ್ನು ಮಾತ್ರ ಈ ಕಚೇರಿಯಲ್ಲಿ ನಿರ್ವಹಿಸಲಾಗುತ್ತದೆ.


ಕಾರ್ಯನಿರ್ವಹಣೆಯಲ್ಲಿ ಸಿಬ್ಬಂದಿಗಳು ಉಪಯೋಗಿಸುತ್ತಿರುವ ನಿಯಮ / ಕೈಪಿಡಿ / ದಾಖಲೆ / ಆದೇಶ ಇತ್ಯಾದಿಗಳ ವಿವರ

ಸಿಬ್ಬಂದಿ ಸೇವಾ ವಿಷಯಗಳ ನಿರ್ವಹಣೆಗೆ ಸಂಬAಧಪಟ್ಟAತೆ ಕರ್ನಾಟಕ ನಾಗರಿಕ ಸೇವಾ ನಿಯಮಾವಳಿ (ಕೆ.ಸಿ.ಎಸ್.ಆರ್), ಲೆಕ್ಕ ಪತ್ರಗಳ ನಿರ್ವಹಣೆಗೆ ಸಂಬAಧಿಸಿದAತೆ ಕರ್ನಾಟಕ ಆರ್ಥಿಕ ಸಂಹಿತೆ, ಸಾದಿಲ್ವಾರು ವೆಚ್ಚದ ಕೈಪಿಡಿ, ಖರೀದಿ ವಿಷಯಕ್ಕೆ ಸಂಬAಧಿಸಿದAತೆ ಪಾರದರ್ಶಕ ಅಧಿನಿಯಮ, ಅಲ್ಲದೆ ಸರ್ಕಾರದಿಂದ, ಜಿಲ್ಲಾ ಪಂಚಾಯಿತಿಯಿAದ ಮತ್ತು ನಿರ್ದೇಶಕರ ಕಚೇರಿಯಿಂದ ಕಾಲ ಕಾಲಕ್ಕೆ ಹೊರಡಿಸಲ್ಪಡುವ ವಿವಿಧ ಆದೇಶಗಳು, ಸೂಚನೆಗಳು ಮತ್ತು ಸುತ್ತೋಲೆಗಳನ್ನು ಅನುಸರಿಸಿ ಕಾರ್ಯ ನಿರ್ವಹಿಸಲಾಗುವುದು. ರಾಜ್ಯ ವಲಯ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡುವಾಗ ಆಯಾ ಯೋಜನೆಗಳಿಗೆ ಸಂಬಂಧಪಟ್ಟ ಸರ್ಕಾರದ ಆದೇಶ ಮತ್ತು ನಿಯಮಗಳನ್ನು ಪಾಲಿಸಲಾಗುವುದು. ಐ.ಸಿ.ಡಿ.ಎಸ್. ಕಾರ್ಯಕ್ರಮದ ಅನುಷ್ಠಾನದಲ್ಲಿ ಐ.ಸಿ.ಡಿ.ಎಸ್. ಮ್ಯಾನುಯಲ್ ಮತ್ತು ಸಂಬಂಧಪಟ್ಟ ಸುತ್ತೋಲೆಗಳ ಸೂಚನೆಗಳನ್ನು ಪಾಲಿಸಲಾಗುವುದು. ಇಲಾಖೆಯ ಎಲ್ಲಾ ಯೋಜನೆಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ಕಚೇರಿಯಲ್ಲಿ ಸಂರಕ್ಷಿಸಿಡಲಾಗಿದ್ದು ಸಾರ್ವಜನಿಕರು ಪರಿಶೀಲಿಸಿಕೊಳ್ಳಬಹುದಾಗಿದೆ.


ಕಾರ್ಯನೀತಿ ರೂಪಿಸುವಲ್ಲಿ ಸಾರ್ವಜನಿಕರೊಂದಿಗೆ ಚರ್ಚಿಸಿ ಅಥವಾ ಅವರ ಅಭಿಪ್ರಾಯಗಳನ್ನು ಅನುಷ್ಠಾನಗಳಿಸಲು ಅವಕಾಶ ಇರುವ ಬಗ್ಗೆ

ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಕಾರ್ಯನೀತಿಯನ್ನು ರೂಪಿಸುವಲ್ಲಿ ಸಾರ್ವಜನಿಕರೊಂದಿಗೆ ಚರ್ಚಿಸಿ ಅಥವಾ ಅವರ ಅಭಿಪ್ರಾಯಗಳನ್ನು ಪಡೆಯುವ ಅವಕಾಶ ಈ ಪ್ರಾಧಿಕಾರಕ್ಕೆ ಇರುವುದಿಲ್ಲ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಈ ಕಚೇರಿಯು ರಾಜ್ಯ ವಲಯದ ಕಾರ್ಯಕ್ರಮಗಳನ್ನು ಮತ್ತು ಜಿಲ್ಲಾ ಪಂಚಾಯತ್ ಕಾರ್ಯಕ್ರಮಗಳನ್ನು ಮಾರ್ಗಸೂಚಿಯಂತೆ ಅನುಷ್ಠಾನ ಮಾಡುವ ಮತ್ತು ಕೆಲವು ತಾಲೂಕು ಪಂಚಾಯತ್ ಕಾರ್ಯಕ್ರಮಗಳನ್ನು ಉಸ್ತುವಾರಿ ಮಾಡುವ ಕಚೇರಿಯಾಗಿರುತ್ತದೆ. ಆದರೆ ಪಂಚಾಯತ್ ರಾಜ್ ವ್ಯವಸ್ಥೆಯಡಿ ಜಿಲ್ಲಾ ಪಂಚಾಯತ್ ಸಭೆಗಳು, ವಿವಿಧ ಸ್ಥಾಯಿ ಸಮಿತಿ ಸಭೆಗಳು, ತಾಲ್ಲೂಕು ಮತ್ತು ಗ್ರಾಮ ಸಭೆಗಳಲ್ಲಿ ಸಾರ್ವಜನಿಕರಿಂದ ಮತ್ತು ಜನಪ್ರತಿನಿಧಿಗಳಿಂದ ವ್ಯಕ್ತವಾಗುವ ಅಭಿಪ್ರಾಯಗಳಿಗೆ ಮನ್ನಣೆ ನೀಡಿ ನಿಯಮಾವಳಿಗಳ ಚೌಕಟ್ಟಿನಲ್ಲಿ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಲಾಗುವುದು ಹಾಗೂ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು.


7. ಈ ಕಚೇರಿಯ ಮತ್ತು ಈ ಕಚೇರಿಯ ವ್ಯಾಪ್ತಿಗೆ ಒಳಪಡುವ ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಮತ್ತು ಅಪೀಲು ಪ್ರಾಧಿಕಾರಿಗಳು

ಸಾರ್ವಜನಿಕ ಪ್ರಾಧಿಕಾರ ಮತ್ತು ವಿಳಾಸ (ಸೆಕ್ಷನ್ 2(4) ರಂತೆ ಸಾರ್ವಜನಿಕ ಮಾಹಿತಿ ಅಧಿಕಾರಿ (ಸೆಕ್ಷನ್ 5(1)ರಂತೆ ಸಹಾಯಕ ಸಾರ್ವಜನಿಕ ಮಾಹಿತಿ ಅಧಿಕಾರಿ (ಸೆಕ್ಷನ್ 5(2)ರಂತೆ) ಪ್ರಥಮ ಮೇಲ್ಮನವಿ ಪ್ರಾಧಿಕಾರ (ಸೆಕ್ಷನ್ 19(1)ರಂತೆ)
ಉಪನಿರ್ದೇಶಕರ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ. ಚೈನ್ ಗೇಟ್ ಹತ್ತಿರ, ಮೈಸೂರು ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ-571201 ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ (ದೂರವಾಣಿ 298379) ಅಧೀಕ್ಷಕ (ಆಡಳಿತ ಶಾಖೆ (ದೂರವಾಣಿ 298379) ಉಪನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (ದೂರವಾಣಿ 298379)
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಹೊಸ ಬಡಾವಣೆ, ಮಡಿಕೇರಿ, ಕೊಡಗು ಜಿಲ್ಲೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಮಡಿಕೇರಿ (ದೂರವಾಣಿ 228197) ಕಸಬಾ ವೃತ್ತದ ಮಹಿಳಾ ಮೇಲ್ವಿಚಾರಕಿ, ಶಿಶು ಅಭಿವೃದ್ಧಿ ಯೋಜನೆ, ಮಡಿಕೇರಿ (ದೂರವಾಣಿ 228197) ಉಪನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (ದೂರವಾಣಿ 298379)
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ಸ್ತ್ರೀಶಕ್ತಿ ಭವನ ಕಟ್ಟಡ, ಪೊನ್ನಂಪೇಟೆ, ವಿರಾಜಪೇಟೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಪೊನ್ನಂಪೇಟೆ (ದೂರವಾಣಿ 249010) ಕಸಬಾ ವೃತ್ತದ ಮಹಿಳಾ ಮೇಲ್ವಿಚಾರಕಿ, ಶಿಶು ಅಭಿವೃದ್ಧಿ ಯೋಜನೆ, ಪೊನ್ನಂಪೇಟೆ (ದೂರವಾಣಿ 249010) ಉಪನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (ದೂರವಾಣಿ 298379)
ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ, ರಾಜಮಹಲ್ ಬಿಲ್ಡಿಂಗ್, ಮಡಿಕೇರಿ ರಸ್ತೆ, ಸೋಮವಾರಪೇಟೆ, ಕೊಡಗು ಜಿಲ್ಲೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಸೋಮವಾರಪೇಟೆ (ದೂರವಾಣಿ 282281) ಕಸಬಾ ವೃತ್ತದ ಮಹಿಳಾ ಮೇಲ್ವಿಚಾರಕಿ, ಶಿಶು ಅಭಿವೃದ್ಧಿ ಯೋಜನೆ, ಸೋಮವಾರಪೇಟೆ (ದೂರವಾಣಿ 282281) ಉಪನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (ದೂರವಾಣಿ 298379)
Superintendent office, Boys Home new extension Madikeri kodagu Superintendent Boys Home Madikeri (Telephone 228220) House Father/mother Boys Home (Telephone 228220) Deputy Director, Department of Women and Child Development (Telephone 228010)
ಅಧೀಕ್ಷಕರ ಕಚೇರಿ, ಬಾಲಕರ ಬಾಲಮಂದಿರ, ಹೊಸ ಬಡಾವಣೆ, ಮಡಿಕೇರಿ, ಕೊಡಗು ಜಿಲ್ಲೆ ಅಧೀಕ್ಷಕರು, ಬಾಲಕರ ಬಾಲಮಂದಿರ, ಮಡಿಕೇರಿ (ದೂರವಾಣಿ 228220) ಗೃಹಪಾಲಕ/ಗೃಹಪಾಲಕಿ ಬಾಲಕರ ಬಾಲಮಂದಿರ, ಮಡಿಕೇರಿ (ದೂ.ವಾಣಿ 228220) ಉಪನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (ದೂರವಾಣಿ 298379)
ಅಧೀಕ್ಷಕರ ಕಚೇರಿ, ಬಾಲಕಿಯರ ಬಾಲಮಂದಿರ, ದೇಚೂರು, ಮಡಿಕೇರಿ, ಕೊಡಗು ಜಿಲ್ಲೆ ಅಧೀಕ್ಷಕರು, ಬಾಲಕಿಯರ ಬಾಲಮಂದಿರ, ಮಡಿಕೇರಿ (ದೂರವಾಣಿ 220126 ಗೃಹಪಾಲಕಿ ಬಾಲಕರ ಬಾಲಮಂದಿರ, ಮಡಿಕೇರಿ (ದೂ.ವಾಣಿ 228220) ಉಪನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (ದೂರವಾಣಿ 298379)
ಪರಿವೀಕ್ಷಣಾಧಿಕಾರಿಗಳ ಕಚೇರಿ, ಅಪರಾಧಿಗಳ ಪರಿವೀಕ್ಷಣೆಯ ಅಧಿನಿಯಮ, ಹೊಸ ಬಡಾವಣೆ, ಮಡಿಕೇರಿ ಪರಿವೀಕ್ಷಣಾಧಿಕಾರಿ, ಅಪರಾಧಿಗಳ ಪರಿವೀಕ್ಷಣೆಯ ಅಧಿನಿಯಮ, ಮಡಿಕೇರಿ 9880578848 ಉಪನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (ದೂರವಾಣಿ 298379)
ಕಾವೇರಿ ನಿರ್ಗತಿಕ ಮಕ್ಕಳ ಕುಟೀರ, ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ, ಸರ್ಕಾರಿ ಬಸ್ ನಿಲ್ದಾಣದ ಬಳಿ, ಮಡಿಕೇರಿ (ಅನುದಾನಿತ ಸಂಸ್ಥೆ) ಪ್ರಧಾನ ಕಾರ್ಯದರ್ಶಿ, ಕೊಡಗು ಜಿಲ್ಲಾ ಶಿಶು ಕಲ್ಯಾಣ ಸಂಸ್ಥೆ, ಮಡಿಕೇರಿ ಗೃಹಪಾಲಕಿ 08272-229004 ಉಪನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (ದೂರವಾಣಿ 298379)
ಕ್ಯಾಥರಿನ್ ಸಿತ್ತಿದಿನಿ ನಿರ್ಗತಿಕ ಮಕ್ಕಳ ಕುಟೀರ, ಕೆದಮಳ್ಳೂರು ಗ್ರಾಮ, ವಿರಾಜಪೇಟೆ ತಾಲ್ಲೂಕು (ಅನುದಾನಿತ ಸಂಸ್ಥೆ) ಸಂಸ್ಥೆಯ ಮುಖ್ಯಸ್ಥರು
ಕ್ಯಾಥರಿನ್ ಸಿತ್ತದಿನಿ ಕಾನ್ವೆಂಟ್, ಕೆದಮಳ್ಳೂರು ದೂರವಾಣಿ:
ಗೃಹಪಾಲಕಿ
08274-220402
ಉಪನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (ದೂರವಾಣಿ 298379)
ಅಂಗನವಾಡಿ ತರಬೇತಿ ಕೇಂದ್ರ, ಸಿದ್ದಾಪುರ ರಸ್ತೆ, ಮಡಿಕೇರಿ (ಅನುದಾನಿತ ಸಂಸ್ಥೆ) ಮುಖ್ಯ ಬೋಧಕರು, ಅಂಗನವಾಡಿ ತರಬೇತಿ ಕೇಂದ್ರ, ಮಡಿಕೇರಿ ಅಕೌಂಟೆಂಟ್ ಉಪನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ (ದೂರವಾಣಿ 298379)

ಮೇಲ್ಕಂಡ ಎಲ್ಲಾ ಪ್ರಾಧಿಕಾರಗಳಿಗೆ ಕರ್ನಾಟಕ ಮಾಹಿತಿ ಆಯೋಗ, ಗೇಟ್ ನಂಬರ್ 1, 3ನೇ ಹಂತ, 3ನೇ ಮಹಡಿ, ಬಹುಮಹಡಿಗಳ ಕಟ್ಟಡ, ಬೆಂಗಳೂರು-560001 ಇವರು ಎರಡನೇ ಮೇಲ್ಮನವಿ ಪ್ರಾಧಿಕಾರವಾಗಿರುತ್ತಾರೆ.


ಇಲಾಖೆಯ ಕಾರ್ಯಕ್ರಮಗಳಿಗೆ ಸಂಬAಧಪಟ್ಟAತೆ ವಿವಿಧ ಜಿಲ್ಲಾ ಮಟ್ಟದ ಸಮಿತಿಗಳು
ವರದಕ್ಷಿಣೆ ನಿಷೇಧ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಿಲ್ಲಾ ಸಲಹಾ ಸಮಿತಿ


 • ಜಿಲ್ಲಾಧಿಕಾರಿಗಳು : ಅಧ್ಯಕ್ಷರು
 • ಜಿಲ್ಲಾ ಪೋಲಿಸ್ ಅಧೀಕ್ಷಕರು :ಸದಸ್ಯರು
 • ಜಿಲ್ಲಾ ಸರ್ಕಾರಿ ವಕೀಲರು :ಸದಸ್ಯರು
 • ಜಿಲ್ಲಾ ವಾರ್ತಾ ಮತ್ತು ಪ್ರಚಾರಾಧಿಕಾರಿಗಳು :ಸದಸ್ಯರು
 • ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖಾ ಜಿಲ್ಲಾ ಉಪನಿರ್ದೇಶಕರು :ಸದಸ್ಯ ಕಾರ್ಯದರ್ಶಿ
 • ಇಬ್ಬರು ಮಹಿಳಾ ಸಮಾಜ ಕಾರ್ಯಕರ್ತರು :ಅಧಿಕಾರೇತರ ಸದಸ್ಯರು

ಸ್ತ್ರೀಶಕ್ತಿ ಯೋಜನೆಯ ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ
 • ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಜಿಲ್ಲಾ ಪಂಚಾಯತ್ : ಅಧ್ಯಕ್ಷರು
 • ಉಪಅರಣ್ಯ ಸಂರಕ್ಷಣಾಧಿಕಾರಿ : ಸದಸ್ಯರು
 • ಉಪಕಾರ್ಯದರ್ಶಿ (ಅಭಿವೃದ್ಧಿ) ಜಿಲ್ಲಾ ಪಂಚಾಯತ್ :ಸದಸ್ಯರು
 • ಜಂಟಿ ನಿರ್ದೇಶಕರು, ಕೃಷಿ ಇಲಾಖೆ :ಸದಸ್ಯರು
 • ಜಿಲ್ಲಾ ತೋಟಗಾರಿಕಾ ಅಧಿಕಾರಿ :ಸದಸ್ಯರು
 • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ : ಸದಸ್ಯರು
 • ಕಾರ್ಯಪಾಲಕ ಅಭಿಯಂತರರು, ಪಿಹೆಚ್ಇ : ಸದಸ್ಯರು
 • ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ :ಸದಸ್ಯರು
 • ಉಪನಿರ್ದೇಶಕರು, ರೇಷ್ಮೆ ಇಲಾಖೆ :ಸದಸ್ಯರು
 • ಉಪನಿರ್ದೇಶಕರು, ಮೀನುಗಾರಿಕೆ ಇಲಾಖೆ :ಸದಸ್ಯರು
 • ಪ್ರಧಾನ ವ್ಯವಸ್ಥಾಪಕರು, ಜಿಲ್ಲಾ ಕೈಗಾರಿಕಾ ಕೇಂದ್ರ :ಸದಸ್ಯರು
 • ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ :ಸದಸ್ಯರು
 • ಲೀಡ್ ಬ್ಯಾಂಕ್ ಮ್ಯಾನೇಜರ್ :ಸದಸ್ಯರು
 • ನಬಾರ್ಡ್ ಪ್ರತಿನಿಧಿ :ಸದಸ್ಯರು
 • ಉಪನಿರ್ದೇಶಕರು, ಪಶು ಸಂಗೋಪನೆ ಇಲಾಖೆ :ಸದಸ್ಯರು
 • ಸಹಾಯಕ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸದಸ್ಯ ಕಾರ್ಯದರ್ಶಿ

ಸ್ತ್ರೀಶಕ್ತಿ ಗುಂಪುಗಳು ಉತ್ಪಾದನೆ ಮಾಡಿರುವ ವಸ್ತುಗಳಿಗೆ ಮಾರುಕಟ್ಟೆ ಸೌಲಭ್ಯ ಒದಗಿಸುವ ಬಗ್ಗೆ ಪರಿಶೀಲಿಸಲು ಜಿಲ್ಲಾ ಮಟ್ಟದ ಸಮಿತಿ
 • ಮುಖ್ಯ ಕಾರ್ಯನಿರ್ವಾಹಣಾಧಿಕಾರಿ, ಜಿಲ್ಲಾ ಪಂಚಾಯತ್ : ಅಧ್ಯಕ್ಷರು
 • ಉಪ/ಸಹಾಯಕ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ: ಸದಸ್ಯ ಕಾರ್ಯದರ್ಶಿಗಳು
 • ಜಂಟಿ ನಿರ್ದೇಶಕರು ಕೈಗಾರಿಕಾ ಹಾಗೂ ವಾಣೀಜ್ಯ ಇಲಾಖೆ :ಸದಸ್ಯರು
 • ಉಪನಿರ್ದೇಶಕರು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ :ಸದಸ್ಯರು
 • ಉಪನಿರ್ದೇಶಕರು ತೋಟಗಾರಿಕಾ ಇಲಾಖೆ :ಸದಸ್ಯರು
 • ಉಪನಿರ್ದೇಶಕರು ಸಹಕಾರ ಇಲಾಖೆ : ಸದಸ್ಯರು
 • ಕಾರ್ಯದರ್ಶಿಗಳು ಜನತಾ ಬಜಾರ್ :ನಾಮನಿರ್ದೇಶಿತ :ಸದಸ್ಯರು
 • 8 ಕಾರ್ಯದರ್ಶಿಗಳು ಸ್ಥಳೀಯ ಟಿಎಪಿಸಿಎಂಎಸ್ :ಸದಸ್ಯ ಕಾರ್ಯದರ್ಶಿಗಳು

ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಅಧಿನಿಯಮ 2005ರ ಪ್ರಕರಣ 11(ಸಿ) ಅನ್ವಯ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ
 • ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು : ಅಧ್ಯಕ್ಷರು
 • ಕಾರ್ಯದರ್ಶಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ : ಸಹ ಅಧ್ಯಕ್ಷರು
 • ಜಿಲ್ಲಾ ಪೊಲೀಸ್ ಅಧೀಕ್ಷಕರು :ಸದಸ್ಯರು
 • ಜಿಲ್ಲಾ ಪಬ್ಲಿಕ್ ಪ್ರಾಸಿಕ್ಯೂಟರ್ :ಸದಸ್ಯರು
 • ಜಿಲ್ಲಾ ವಾರ್ತಾ ಮತ್ತು ಪ್ರಚಾರ ಅಧಿಕಾರಿ : ಸದಸ್ಯರು
 • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ :ಸದಸ್ಯರು
 • ಎರಡು ಸರ್ವಿಸ್ ಪ್ರೊವೈಡರ್ ಸಂಸ್ಥಗಳ ಪ್ರತಿನಿಧಿಗಳು :ನಾಮನಿರ್ದೇಶಿತ ಸದಸ್ಯರು
 • ಉಪ ನಿರ್ದೇಶಕರು, ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ :ಸದಸ್ಯ ಕಾರ್ಯದರ್ಶಿಗಳು
 • ಇಬ್ಬರು ಸಂರಕ್ಷಣಾಧಿಕಾರಿಗಳು (ಸಿ.ಡಿ.ಪಿ.ಒ.ಗಳು) ನಾಮನಿರ್ದೇಶಿತ ಸದಸ್ಯರು

ಬಾಲ್ಯವಿವಾಹ ತಡೆ ನಿಷೇಧ ಕಾಯ್ದೆ ಬಗ್ಗೆ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ
(ಸರ್ಕಾರದ ಆದೇಶ ಸಂಖ್ಯೆ ಮಮಇ 34 ಮಭಾಬ 2007 (ಪಿ) ದಿನಾಂಕ 28-6-2007
 • ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು : ಅಧ್ಯಕ್ಷರು
 • ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಕೊಡಗು ಜಿ.ಪಂ. :ಸದಸ್ಯರು
 • ಜಿಲ್ಲಾ ಪೊಲೀಸ್ ಅಧೀಕ್ಷಕರು :ಸದಸ್ಯರು
 • ಜಿಲ್ಲಾ ಕಾರ್ಮಿಕ ಕಲ್ಯಾಣ ಅಧಿಕಾರಿ :ಸದಸ್ಯರು
 • ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ :ಸದಸ್ಯರು
 • ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ : ಸದಸ್ಯರು
 • ಉಪ ನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ: ಸದಸ್ಯರು
 • ಉಪ ನಿರ್ದೇಶಕರು, ಮಹಿಳಾ & ಮಕ್ಕಳ ಅಭಿವೃದ್ಧಿ ಇಲಾಖೆ:ಸದಸ್ಯ ಕಾರ್ಯದರ್ಶಿಗಳು