ಮುಚ್ಚಿ

ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಕೊಡಗು ಜಿಲ್ಲೆ

ಜಿಲ್ಲೆಯಲ್ಲಿ ಇರುವ ಕಛೆರಿಗಳ ವಿವರ

ಭೂಮಾಪನ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರು ಕೊಡಗು ಜಿಲ್ಲೆ, ಮಡಿಕೇರಿ ಭೂದಾಖಲೆಗಳ ಸಹಾಯಕ ನಿರ್ದೇಶಕರು ಮಡಿಕೇರಿ ತಾಲ್ಲೂಕು ಅಧೀಕ್ಷಕರು (ತಾಂತ್ರಿಕ)
ಪರ್ಯಾವೇಕ್ಷಕರು
ಭೂಮಾಪಕರು ಹಾಗೂ ಆಡಳಿತ ಸಿಬ್ಬಂದಿ ವರ್ಗ
ಭೂದಾಖಲೆಗಳ ಸಹಾಯಕ ನಿರ್ದೇಶಕರು ಸೋಮವಾರಪೇಟೆ ತಾಲ್ಲೂಕು ಭೂದಾಖಲೆಗಳ ಸಹಾಯಕ ನಿರ್ದೇಶಕರು ನಗರಮಾಪನ ಕಛೇರಿ ಶನಿವಾರಸಂತೆ ಅಧೀಕ್ಷಕರು (ತಾಂತ್ರಿಕ)
ಪರ್ಯಾವೇಕ್ಷಕರು
ಭೂಮಾಪಕರು ಹಾಗೂ ಆಡಳಿತ ಸಿಬ್ಬಂದಿ ವರ್ಗ
ಭೂದಾಖಲೆಗಳ ಸಹಾಯಕ ನಿರ್ದೇಶಕರು ವಿರಾಜಪೇಟೆ ತಾಲ್ಲೂಕು ಅಧೀಕ್ಷಕರು (ತಾಂತ್ರಿಕ)
ಪರ್ಯಾವೇಕ್ಷಕರು
ಭೂಮಾಪಕರು ಹಾಗೂ ಆಡಳಿತ ಸಿಬ್ಬಂದಿ ವರ್ಗ

ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಭೂಮಾಪನಾ ಸಿಬ್ಬಂದಿಗಳ ವಿವರ

 1. ಭೂದಾಖಲೆಗಳ ಉಪನಿರ್ದೇಶಕರು – 01 ಹುದ್ದೆ(ಭೂ.ಉ.ನಿ ಕಛೇರಿ)
 2. ಭೂದಾಖಲೆಗಳ ಸಹಾಯಕ ನಿರ್ದೇಶಕರು – 03 ಹುದ್ದೆ (ಭೂ.ಸ.ನಿ ಕಛೇರಿ)
 3. ಅಧೀಕ್ಷಕರು (ಆಡಳಿತ) -01 ಹುದ್ದೆ (ಭೂ.ಉ.ನಿ ಕಛೇರಿ)
 4. ಅದೀಕ್ಷಕರು (ತಾಂತ್ರಿಕ) -03 ಹುದ್ದೆ (ಭೂ.ಸ.ನಿ ಕಛೇರಿ)
 5. ಪರ್ಯಾವೇಕ್ಷಕರು – 04 ಹುದ್ದೆ (ಭೂ.ಉ.ನಿ ಮತ್ತು ಭೂ.ಸ.ನಿ ಕಛೇರಿ)
 6. ದ್ವಿ.ದ.ಸ – 03 ಹುದ್ದೆ (ಭೂ.ಸ.ನಿ ಕಛೇರಿ)
 7. ಭೂಮಾಪಕರು – 22 ಹುದ್ದೆ(ಭೂ.ಉ.ನಿ ಮತ್ತು ಭೂ.ಸ.ನಿ ಕಛೇರಿ)
 8. ಬಾಂದು ಜವಾನರು – 04 ಹುದ್ದೆ (ಭೂ.ಉ.ನಿ ಮತ್ತು ಭೂ.ಸ.ನಿ ಕಛೇರಿ)
 9. ಪರವಾನಗಿ ಭೂಮಾಪಕರುಗಳು -18ಜನ ( ತಾಲ್ಲೂಕು ವ್ಯಾಪ್ತಿ)

ಪಡೆಯುವ ವಿಧಾನ

 1. ನೋಂದಣಿ ಪೂರ್ವ/ ಮ್ಯುಟೇಷನ್ ಪೂರ್ವ(ಕ್ರಯ, ದಾನ, ವಿಭಾಗ ಪೌತಿವಾರಿಸ್ಸು ಇತ್ಯಾದಿ) ವಹಿವಾಟುಗಳಿಗೆ ಅಗತ್ಯವಿರುವ 11ಇ ನಕ್ಷೆ ವಿತರಣೆ.
 2. ಭೂಪರಿವರ್ತನೆ ಪ್ರಸ್ತಾವನೆಗಳಿಗೆ ಸಂಬಂದಿಸಿದಂತೆ ಕೋರಿ ಬರುವ ಭೂಪರಿವರ್ತನೆ ನಕ್ಷೆಗಳ ವಿತರಣೆ.
 3. ತತ್ಕಾಲ್ ಪೋಡಿ ಯೋಜನೆಯಡಿ , / ಮ್ಯುಟೇಷನ್ ಪೋಡಿ ದುರಸ್ತಿ ಕೋರಿ ಬರುವ ಅರ್ಜಿಗಳ ಅಳತೆ ಕೆಲಸ.
 4. ಸರ್ವೆ ನಂಬರುಗಳ ಗಡಿ ಗುರ್ತಿಸಲು (ಹದ್ದುಬಸ್ತುಪ್ರಕರಣಗಳು)ಕೋರಿ ಬರುವ ಹದ್ದುಬಸ್ತು ಅಳತೆ ಕೆಲಸ
 5. ಭೂಮಂಜೂರಾತಿಗೆ ಸಂಬಂಸಿದ ದರಖಾಸ್ತು ಪ್ರಕರಣಗಳ ಅಳತೆ ಮತ್ತು ದುರಸ್ತಿಕೆಲಸ ನಿರ್ವಹಣೆ.
 6. ಕಂದಾಯ ನಿಗದಿ ಪ್ರಕರಣಗಳ(ಕೊಡಗು ಜಿಲ್ಲೆಯ ವಿಶೇಷ) ಸಂಬಂದ ಅಳತೆ ಮತ್ತು ಪೋಡಿ ದುರಸ್ತು ನಿರ್ವಹಣೆ.
 7. ಮಾನ್ಯ ಸಿವಿಲ್ ನ್ಯಾಯಾಲಯಗಳಿಂದ ತೀರ್ಪಾಗಿರುವ ಡಿಕ್ರಿ ಪ್ರಕರಣಗಳು ಮತ್ತು ವಿಚಾರಣೆಗೆ ವೇಳೆ ನ್ಯಾಯಾಲಯಗಳಿಂದ ಸ್ವೀಕೃತವಾಗುವ CCW ಅಳತೆ ಪ್ರಕರಣಗಳ ಕ್ರಮ.
 8. ಸರ್ಕಾರಿ ಜಮೀನುಗಳಲ್ಲಿ ಭೂಮಂಜೂರಾತಿ ಹಾಗೂ ಸಾರ್ವಜನಿಕ ಉದ್ದೇಶಕ್ಕೆ ಜಮೀನು ಕಾಯ್ದಿರಿಸುವಿಕೆ ಪ್ರಸ್ತಾವನೆಗಳ ಸಂಬಂಧ ಅಳತೆ ಕೆಲಸ.
 9. ಸರ್ಕಾರಿ ಕೆರೆ /ಸರ್ಕಾರಿ ಜಮೀನುಗಳ ವತ್ತುವರಿ ಸಂಬಂಧ ಅಳತೆ ಕೆಲಸ.
 10. ಮರ ಕಡಿತಲೆಗೆ(TIMBER CASES REGARDING BOUNDARY FIXATION) ಸಂಬಂದಿಸಿದ ಅಳತೆ.

ಭೂದಾಖಲೆಗಳಿಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲಾತಿಗಳ ವಿವರ

 1. ದರಖಾಸ್ತು, ಅಲಿನೇಷನ್, ಭೂಸ್ವಾಧೀನ ಮತ್ತು ಪೋಡಿ ದಾಖಲಾತಿಗಳನ್ನು ಭೂಮಾಪಕರುಗಳು/ ಪರವಾನಗಿ ಭೂಮಾಪಕರುಗಳೂ ಅಳತೆ ಮಾಡಿದ ನಂತರ ತಯಾರಿಸಿ ಭೂ.ಉ.ನಿ ಮತ್ತು ಭೂ.ಸ.ನಿ ರುಗಳು ಧೃಡೀಕರಿಸಿದ ನಕ್ಷೆಗಳು.
 2. ಹದ್ದುಬಸ್ತು ಪ್ರಕರಣಗಳಲ್ಲಿ ಭೂಮಾಪಕರುಗಳು ತಯಾರಿಸಿರುವ ನಕ್ಷೆಗಳ ಪ್ರತಿಗಳು.
 3. ಮೂಲ, ಮರುಭೂಮಾಪನ ಮತ್ತು ಮೊದಲನೇ / ಎರಡನೇ ಮರುವರ್ಗೀಕರಣದ ದಾಖಲಾತಿಗಳ ಪ್ರತಿಗಳು.
 4. ಸರ್ವೆ ನಂಬರುಗಳಿಗೆ ಸಂಬಂಧಿಸಿದಂತೆ ಖರಾಬು ಉತಾರ್ ಪ್ರತಿಗಳು.
 5. ಸಾರ್ವಜನಿಕರು ಇಲಾಖೆಗೆ ಸಲ್ಲಿಸಿದ ಅರ್ಜಿಗಳು ಮತ್ತು ಇಲಾಖಾ ಅಧಿಕಾರಿಗಳು ಸಾರ್ವಜನಿಕರಿಗೆ ನೀಡಿದ ತಿಳುವಳಿಕೆ ಪತ್ರಗಳ ಪ್ರತಿಗಳು.
 6. ದರಖಾಸ್ತು, ಅಲಿನೇಷನ್, ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದ ಟಿಪ್ಪಣಿ, ಪಕ್ಕಾ ಮತ್ತು ಅಟ್ಲಾಸ್ ಗಳ ಪ್ರತಿಗಳು.
 7. ಭೂಮಾಪಕರು ಹೊರಡಿಸಲಾಗಿರುವ ಹದ್ದುಬಸ್ತು ಪ್ರಕರಣಗಳ ನಿರ್ಣಯಗಳು ಹಾಗೂ ಭೂ.ಉ.ನಿ ಮತ್ತು ಭೂ.ಸ.ನಿ ರಗಳು ಹೊರಡಿಸಿದ ಹದ್ದುಬಸ್ತು ಪ್ರಕರಣಗಳ ಮೇಲ್ಮನವಿ ನಿರ್ಣಯಗಳು.
 8. ಕರ್ನಾಟಕ ಭೂಕಂದಾಯ ಅಧಿನಿಯಮ ಮತ್ತು ನಿಯಮಾವಳಿಗಳನ್ವಯ (ನಗರಮಾಪನ ಅಧಿಕಾರಿಗಳು / ನಗರಮಾಪನ ವಿಚಾರಣಾಧಿಕಾರಿಗಳು) ಕೈಗೊಂಡ ಮೇಲ್ಮನವಿ ತೀರ್ಪುಗಳು.
 9. ಮೂಲ / ಪೋಡಿ ದುರಸ್ತಿ ನಂತರ ನಿರ್ವಹಿಸಿರುವ ಆಕಾರಬಂದು ದಾಖಲೆಯ ಪ್ರತಿಗಳು.
 10. ಮೂಲ ಮತ್ತುಪೋಡಿ ನಿರ್ವಹಣೆ ಸಂದರ್ಭ ತಯಾರಿಸಿದ ಆಕಾರಬಂದು ದಾಖಲೆಯ ಪ್ರತಿ.
 11. ನಗರಮಾಪನ ದಾಖಲಾತಿಗಳು :
  • ಪಿ.ಆರ್ ಕಾರ್ಡಗಳು.
  • ಪಿ ಟಿ ಶೀಟು ನಕಲುಗಳು
  • ನಗರಮಾಪನ ವಿಚಾರಣಾಧಿಕಾರಿಗಳು ವಿಚಾರಣೆ ನಂತರ ನೀಡಿದ ಹಿಂಬರಹ.
  • ವಿಚಾರಣಾ ವಹಿಯ ನಕಲು.
  • ಸ್ಥಳೀಯ ಕ್ಷೇತ್ರದ ನಕಾಶೆ.
  • ಕ್ಷೇತ್ರ ಅಳತೆ ಪುಸ್ತಕ
  • ಭೂಮಾಪನ / ವಿಚಾರಣೆ ಸಮಯದಲ್ಲಿ ಪಡೆದ ಹೇಳಿಕೆಗಳು.
  • ನಗರಮಾಪನದ ವಿಚಾರಣಾಧಿಕಾರಿಗಳ ಆದೇಶದ ನಕಲು
  • ನಗರಮಾಪನದ ವಿಚಾರಣಾಧಿಕಾರಿಗಳ ತೀರ್ಪುಗಳು.

ಇಲಾಖೆಯಿಂದ ಒದಗಿಸಲಾಗುವ ಸೇವೆಗಳಿಗೆ ಸರ್ಕಾರದಿಂದ ನಿಗದಿಪಡಿಸಲಾಗಿರುವ ಶುಲ್ಕದ ವಿವರ

 1. ನೋಂದಣಿ ಪೂರ್ವ(11E sketch), ಅಲಿನೇಷನ್ ಪೂರ್ವ ನಕ್ಷೆ ಮತ್ತು ತತ್ಕಾಲ್ ಪೋಡಿ ಕೋರಿ ಬರುವ ಅರ್ಜಿಗಳ ಸಂಬಂದ
  ವಹಿವಾಟಿನ ತರಹೆ ಜಮೀನು ಇರುವ ಪ್ರದೇಶ 2 ಎಕರೆವರೆಗೆ ನಿಗದಿಪಡಿಸಿದ ಶುಲ್ಕ 2 ಎಕರೆಗಿಂತ ಹೆಚ್ಚಿದ್ದಲ್ಲಿ ಪ್ರತಿ ಭಾಗಶಃ ಎಕರೆಗೆ
  ಕ್ರಯ ನಗರೀಕೃತ ರೂ.2000/- ರೂ.200/-
  ಗ್ರಾಮೀಣ ರೂ.1200/- ರೂ.100/-

  ವಹಿವಾಟಿನ ತರಹೆ ಜಮೀನು ಇರುವ ಪ್ರದೇಶ ಒಂದು ಸ.ನಂ.ಗೆ (ವಿಸ್ತೀರ್ಣ ಅನ್ವಯಿಸುವುದಿಲ್ಲ) ಒಂದಕ್ಕಿಂತ ಹೆಚ್ಚು ಸ. ನಂ ಇದ್ದಲ್ಲಿ ಹೆಚ್ಚುವರಿ ಸ. ನಂಬರಿಗೆ ಗರಿಷ್ಟ ಮೊತ್ತ
  ವಿಭಾಗ ನಗರೀಕೃತ ರೂ.1200/- ರೂ.200/- ರೂ.2500/-
  ಗ್ರಾಮೀಣ ರೂ1000/- ರೂ.100/-
 2. ಸ. ನಂಬರಿನ ಹದ್ದುಬಸ್ತು(ಗಡಿ ಗುರುತಿಸುವಿಕೆ) ಅಳತೆ ಕೋರಿ ಬರುವ ಅರ್ಜಿಗಳಲ್ಲಿ ರೂ.35/- ಮತ್ತು ನೋಟೀಸು ಜ್ಯಾರಿ ಶುಲ್ಕ(ಪ್ರತಿ ಬಾಜೂದಾರರಿಗೆ ರೂ. 25/-ರಂತೆ).
 3. ಸರ್ವೆ ದಾಖಲೆಗಳ ದೃಡೀಕೃತ ಪ್ರತಿಗಳು-
  ಕ್ರ. ಸಂ. ದಾಖಲೆಯ ವಿಧ ನಿಗದಿ ಪಡಿಸಿದ ಶುಲ್ಕ
  1 ಆಕಾರಬಂದು ದಾಖಲೆ ಪ್ರತಿ ರೂ. 15/-
  2 ಟಿಪ್ಪಣಿ ಪ್ರತಿ ರೂ. 7/-
  3 ಪಕ್ಕಾ ಪುಸ್ತಕದ ನಕಲು (ಪ್ರತಿ ಹಿಸ್ಸಾ ನಂಬರುಗಳಿಗೆ) ರೂ. 28/-
  4 ಪಿ.ಟಿ.ಶೀಟ್ ನಕಲು (ನಕ್ಷೆ ಮತ್ತು ಪ್ರತಿ ಸಾಲಿನ ಮಾಹಿತಿ) ರೂ. 15/-
  5 ಸ.ನಂಬರಿನ ನಕ್ಷೆ ರೂ. 7/-
  6 ಖರಾಬು ವಿವರದ ಪ್ರತಿ ರೂ. 19/-
  7 ಗ್ರಾಮ ನಕಾಶೆ (ನಕಾಶೆಯ ಗಾತ್ರಕ್ಕೆ (size)ಅನುಸಾರವಾಗಿ)
 4. ಭೂಮಾಪಕರು ನಿರ್ವಹಿಸಿದ ಹದ್ದುಬಸ್ತು ಅಳತೆ ಪ್ರಕರಣಗಳಲ್ಲಿ ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸಲ್ಲಿಸುವ 1ನೇ ಮೇಲ್ಮನವಿ ಅರ್ಜಿಗಳಲ್ಲಿ ರೂ.50/- ಮತ್ತು ನೋಟೀಸು ಜ್ಯಾರಿ ಶುಲ್ಕ(ಪ್ರತಿ ಬಾಜೂದಾರರಿಗೆ ರೂ25/-ರಂತೆ).
 5. ಹದ್ದುಬಸ್ತು ಪ್ರಕರಣಗಳಲ್ಲಿ ಭೂದಾಖಲೆಗಳ ಸಹಾಯಕರು ನಿರ್ವಹಿಸಿದ 1 ಮೇಲ್ಮನವಿ ಅಳತೆ. ವಿರುದ್ದ ಭೂದಾಖಲೆಗಳ ಉಪ ನಿರ್ದೇಶಕರಿಗೆ 2ನೇ ಮೇಲ್ಮನವಿ ಅಳತೆ ಕೋರಿ ಸಲ್ಲಿಸುವ ಅರ್ಜಿಗಳಲ್ಲಿ ರೂ.100/- ಮತ್ತು ನೋಟೀಸು ಜ್ಯಾರಿ ಶುಲ್ಕ(ಪ್ರತಿ ಬಾಜೂದಾರರಿಗೆ ರೂ. 25/-ರಂತೆ).

ಇಲಾಖೆಯ ಅಧಿಕಾರಿಗಳಿಗೆ ಇರುವ ಶಾಸನಬದ್ದ ಅಧಿಕಾರ ವಿವರ

 1. ಹದ್ದುಬಸ್ತು ಅಳತೆ ಪ್ರಕರಣಗಳಲ್ಲಿ (ಭೂಕಂದಾಯ ನಿಯಮವಳಿಗಳು 1966 ನಿಯಮ 139)
  ddlrw
 2. ಪೋಡಿ ಅಳತೆ ಮತ್ತು ದುರಸ್ತಿ ಪ್ರಕರಣಗಳಲ್ಲಿ
  ಭೂದಾಖಲೆಗಳ ಸಹಾಯಕ ನಿರ್ದೇಶಕರು ಭೂದಾಖಲೆಗಳ ಉಪ ನಿರ್ದೇಶಕರು ಪ್ರಾದೇಶಿಕ ಭೂದಾಖಲೆಗಳ ಜಂಟೀ ನಿರ್ದೇಶಕರು
  ಭೂದಾಖಲೆಗಳ ಪರಿಶೀಲನೆ ಹಾಗೂ ದೃಡೀಕರಣ ಭೂ.ಕಂ. ನಿಯಮಾವಳಿಗಳು ನಿಯಮ 36(2) ಭೂ.ಸ.ನಿ ರುಗಳು ಮಾಡಿದ ಅದೇಶದ ವಿರುದ್ದ ಮೇಲ್ಮನವಿ ಭೂ.ಕಂ. ಅಧಿನಿಯಮ 1964ರ ಸೆಕ್ಷನ್49(a) ಭೂ.ಉ.ನಿ ರುಗಳು ಮಾಡಿದ ಅದೇಶದ ವಿರುದ್ದ ಮೇಲ್ಮನವಿ/ಪರಿಶೀಲನಾ ಅರ್ಜಿ ಭೂ.ಕಂ. ಅಧಿನಿಯಮ 1964ರ ಸೆಕ್ಷನ್56
  1ನೇ ಮೇಲ್ಮನವಿ ಹದ್ದುಬಸ್ತು ಅಳತೆ ನಿಯಮ 139(1) 2ನೇ ಮೇಲ್ಮನವಿ ಹದ್ದುಬಸ್ತು ಅಳತೆ ನಿಯಮ 139(2) ನಗರ ಮಾಪನಕ್ಕೆ ಸಂಬಂದಿಸಿದಂತೆ ಸೆಕ್ಷನ್ 127&129ರ ಆದೇಶಗಳಲ್ಲಿ ಪರಿಶೀಲನಾ /ಸ್ವಯಂ ಪ್ರೇರಿತ ವಿಚಾರಣೆ ಸೆಕ್ಷನ್136(3)
    ಭೂದಾಖಲೆಗಳಲ್ಲಿ ಇರುವ ಲೋಪಗಳ ತಿದ್ದುಪಡಿ ನಿಯಮ 36(1) ನಗರಮಾಪನಕ್ಕೆ ಸಂಬಂದಿಸಿ ಸ.ನಂ. /ಹಿ ನಂ ಗಳ ಗಡಿ ತಕರಾರು ಇತ್ಯರ್ಥ ಸೆಕ್ಷನ್140(2)
  ನಗರಮಾಪನ ವ್ಯಾಪ್ತಿಯಲ್ಲಿ ಹಕ್ಕು ದಾಖಲೆಗಳ ಮರುತಯಾರಿಕೆಗೆ ನಿರ್ದೇಶನ ನಿಯಮ91 (1) ಗ್ರಾಮ, ಪಟ್ಟಣ ಮತ್ತು ನಗರ ಪ್ರದೇಶದ ವ್ಯಾಪ್ತಿ ಗಡಿ ನಿರ್ದಾರ ಸೆಕ್ಷನ್148
  ನಗರಮಾಪನ ವ್ಯಾಪ್ತಿಯಲ್ಲಿ/ ತಹಶೀಲ್ದಾರ್/ ಭೂ.ಸ.ನಿ ರುಗಳ ಆದೇಶಗಳ ಮೇಲಿನ ಮೇಲ್ಮನವಿ ನಿಯಮ 69(i) ನಗರಮಾಪನ ವ್ಯಾಪ್ತಿಯಲ್ಲಿ ಕಂದಾಯ ಶುಲ್ಕ ನಿಗದಿಯ ಅಧಿಕಾರ ಸೆಕ್ಷನ್153(1)(b)&Rule85(1)
    ಗ್ರಾಮ ಮತ್ತು ಸ.ನಂ ಗಡಿಗಳ ಬದಲಾವಣೆ ಹಾಗೂ ರಚನೆ ಸೆಕ್ಷನ್ 143
  ಗ್ರಾಮ ನಕಾಶೆ ಬದಲಾವಣೆ ನಿಯಮ 73
  ನಗರಮಾಪನ ವ್ಯಾಪ್ತಿಯಲ್ಲಿ ಭೂ.ಉ.ನಿರು ಮಾಡಿದ ಆದೇಶಗಳ ಮೇಲಿನ ಮೆಲ್ಮನವಿ ನಿಯಮ69(2)

ಮಾಹಿತಿ ಹಕ್ಕುಅಧಿನಿಯಮ 2005ರ ಸೆಕ್ಷನ್19(1)ರಂತೆ ಮೇಲ್ಮನವಿ ಪ್ರಾದಿಕಾರಿ ಹಾಗೂ ಸೆಕ್ಷನ್ 5(1)ರ ಪ್ರಕಾರ ಸಾರ್ವಜನಿಕ ಮಾಹಿತಿ ಅಧಿಕಾರಿಗಳ ವಿವರ

ಭೂದಾಖಲೆಗಳ ಉಪನಿರ್ಧೇಶಕರ ಕಛೇರಿ-
ಸಾರ್ವಜನಿಕ ಮಾಹಿತಿ ಆಧಿಕಾರಿ ಸಹಾಯಕ ನಿರ್ದೇಶಕರು (ಆಡಳಿತ)
ಮೇಲ್ಮನವಿ ಪ್ರಾಧಿಕಾರಿ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರು. ಕೊಡಗು ಜಿಲ್ಲೆ
ಭೂದಾಖಲೆಗಳ ಸಹಾಯಕ ನಿರ್ಧೇಶಕರುಗಳ ಕಛೇರಿ
ಮಡಿಕೇರಿ ತಾಲ್ಲೂಕು ಸಾರ್ವಜನಿಕ ಮಾಹಿತಿ ಆಧಿಕಾರಿ ಭೂದಾಖಲೆಗಳ ಸಹಾಯಕ ನಿರ್ದೇಶಕರು ಮಡಿಕೇರಿ ತಾಲ್ಲೂಕು
ಮೇಲ್ಮನವಿ ಪ್ರಾಧಿಕಾರಿ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರು ಕೊಡಗು ಜಿಲ್ಲೆ
ಸೋಮವಾರಪೇಟೆ ತಾಲ್ಲೂಕು ಸಾರ್ವಜನಿಕ ಮಾಹಿತಿ ಆಧಿಕಾರಿ ಭೂದಾಖಲೆಗಳ ಸಹಾಯಕ ನಿರ್ದೇಶಕರು ಸೋಮವಾರಪೇಟೆ ತಾಲ್ಲೂಕು
ಮೇಲ್ಮನವಿ ಪ್ರಾಧಿಕಾರಿ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರು ಕೊಡಗು ಜಿಲ್ಲೆ
ವಿರಾಜಪೇಟೆ ತಾಲ್ಲೂಕು ಸಾರ್ವಜನಿಕ ಮಾಹಿತಿ ಆಧಿಕಾರಿ ಭೂದಾಖಲೆಗಳ ಸಹಾಯಕ ನಿರ್ದೇಶಕರು, ವಿರಾಜಪೇಟೆ ತಾಲ್ಲೂಕು
ಮೇಲ್ಮನವಿ ಪ್ರಾಧಿಕಾರಿ ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕರು ಕೊಡಗು ಜಿಲ್ಲೆ