ಮುಚ್ಚಿ

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ

FSSAT

ಎಫ್‌ಎಸ್‌ಎಸ್‌ ಎಐ- ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ

fssai

ಕಾಯ್ದೆಯ ಉದ್ದೇಶ

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ರ ಉದ್ದೇಶವು ಆಹಾರ ಪದಾರ್ಥಗಳ ಉದ್ದಿಮೆದಾರರನ್ನು ಒಂದೇ ಸೂರಿನಡಿಯಲ್ಲಿ ನಿಬಂಧನೆ ಮತ್ತು ಪರಿವೀಕ್ಷಣೆಗೆ ಒಳಪಡಿಸುವುದಾಗಿದೆ. ಆಹಾರ ಮತ್ತು ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ಬಳಕೆ ಮಾಡುವ ವಿವಿಧ ಪದಾರ್ಥಗಳ ಸುರಕ್ಷತೆ ಮತ್ತು ಗುಣಮಟ್ಟವನ್ನು ಕಾಯ್ದುಕೊಂಡು, ಮಾನವನ ಸೇವನೆಗೆ ಯೋಗ್ಯವಾದ ಆಹಾರವನ್ನು ಪೂರೈಸುವುದು ಈ ಕಾಯ್ದೆಯ ಮೂಲ ಉದ್ದೇಶವಾಗಿರುತ್ತದೆ. ಈ ಕಾಯ್ದೆಯು ಜನಪರವಾಗಿದ್ದು, ಜನರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಒಂದು ದಿಟ್ಟ ಹೆಜ್ಜೆಯಾಗಿರುತ್ತದೆ. ಎಲ್ಲಾ ರೀತಿಯ ಆಹಾರ ಪದಾರ್ಥಗಳ ಆಹಾರ ವಸ್ತುಗಳ ಉತ್ಪಾದಕರು, ಪ್ಯಾಕರ್ಗಳು, ಸಾಗಣೆದಾರರು, ಸಂಸ್ಕರಣೆ ಮಾಡುವವರು, ಆಮದುದಾರರು (Import) ಸಗಟು/ಚಿಲ್ಲರೆ ಮಾರಾಟಗಾರರು, ವಿತರಕರು, ಹೋಟೆಲ್, ರೆಸಾರ್ಟ್, ಕ್ಯಾಂಟೀನ್, ಸಂಚಾರಿ ಸಿದ್ಧಪಡಿಸಿದ ಆಹಾರ ಮಾರಾಟಗಾರರು, ವೈನ್ ಸ್ಟೋರ್, ಕ್ಲಬ್ಗಳು, ಬಾರ್ ಅಂಡ್ ರೆಸ್ಟೋರೆಂಟ್ಗಳು, ಹೋಮ್ ಸ್ಟೇ ಗಳು, ಬೇಕರಿ, ಸಿಹಿತಿಂಡಿ, ಹಾಲು, ಹಾಲಿನ ಉತ್ಪನ್ನ, ಪ್ಯಾಕೇಜ್ಡ್ ಕುಡಿಯುವ ನೀರುಘಟಕ/ ಮಾರಾಟಗಾರರು, ಹಣ್ಣು, ತರಕಾರಿಗಳು, ಕೋಳಿ, ಮೀನು, ಮಾಂಸ ಮಾರಾಟ, ರಸ್ತೆ ಬದಿ ಆಹಾರ ಪದಾರ್ಥ ಮಾರಾಟ, ಉಗ್ರಾಣಗಳು, ಸಂಸ್ಕರಣ ಘಟಕಗಳು, ಧಾರ್ಮಿಕಸ್ಥಳ, ಸಮುದಾಯಭವನ, ಕಲ್ಯಾಣಮಂಟಪಗಳಲ್ಲಿ ಪ್ರಸಾದ/ಊಟೋಪಚಾರ ಸಂಯೋಜಕರು, ಕ್ಯಾಟರಿಂಗ್ ನಡೆಸುವವರು, ನ್ಯಾಯಬೆಲೆ ಅಂಗಡಿ, ಕಛೇರಿಗಳ ಕ್ಯಾಂಟೀನ್, ಸರ್ಕಾರಿ/ ಸರ್ಕಾರೇತರ ವಸತಿ ನಿಲಯಗಳು, ಅಕ್ಷರದಾಸೋಹದ ಶಾಲೆಗಳು, ಅಂಗನವಾಡಿಗಳು ಹಾಗೂ ಎಲ್ಲಾ ರೀತಿಯ ಆಹಾರ ಪದಾರ್ಥ ವಹಿವಾಟುದಾರರು ಈ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತಾರೆ. ತಮ್ಮ ಆಹಾರ ಪದಾರ್ಥಗಳ ವಾರ್ಷಿಕ ವಹಿವಾಟಿನ ಆಧಾರದ ಮೇಲೆ ಮೇಲೆ ತಿಳಿಸಲಾದ ವ್ಯಾಪಾರಸ್ಥರು ಆಹಾರ ಸುರಕ್ಷತೆ ಮತ್ತ್ತು ಗುಣಮಟ್ಟ ಕಾಯ್ದೆಯ ಅಡಿಯಲ್ಲಿ ಆಹಾರ ನೋಂದಣಿ / ಆಹಾರ ಪರವಾನಗೆಯನ್ನು ಪಡೆದುಕೊಳ್ಳಬೇಕು.

fssai2
fssai3

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ಕೊಡಗು ಜಿಲ್ಲೆ ಕಛೇರಿ ವಿಳಾಸ

ಅಂಕಿತಾಧಿಕಾರಿಗಳ ಕಛೇರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಜಿಲ್ಲಾ ಸರ್ವೇಕ್ಷಣಾ ಘಟಕದ ಕಟ್ಟಡ, (ಓಂಕಾರೇಶ್ವರ ದೇವಸ್ಥಾನ ರಸ್ತೆ) ಮಡಿಕೇರಿಇಲ್ಲಿ ಕಾರ್ಯನಿರ್ವಹಿಸುತ್ತಿದೆ..

ಅಧಿಕಾರಿ ಸಿಬ್ಬಂದಿಯವರ ವಿವರ :

Sl.No Name of the Officer Designation Contact Number Email Place Photo
1 Dr. Anil Dhavan E Designated Officer (FSSA) 9448720344 anildhavan18[at]gmail[dot]com Kodagu Ditrict. F1
2 Mr. Srinivasamurthy K.T Food Safety Officer 9449289203 srinivasamurthys930[at]gmail[dot]com Virajpet Taluk F2
3 Mr. Naveen Kumar K R Food Safety Officer 6363058259 naveendenna514[at]gmail[dot]com Somwarpet Taluk &
Madikeri Taluk
F3

ಪರವಾನಗಿ/ನೋಂದಣಿ/ ನವೀಕರಣ ಬಗ್ಗೆ:

ವಾರ್ಷಿಕ ರೂ. ೧೨ ಲಕ್ಷದ ಒಳಗೆ ಆಹಾರ ಪದಾರ್ಥ ಉದ್ದಿಮೆ ನಡೆಸುವವರು ಎಫ್.ಎಸ್.ಎಸ್.ಎ ನೋಂದಣಿ (Registration) ಹಾಗೂ ರೂ. 12 ಲಕ್ಷಕ್ಕಿಂತ ಮೇಲ್ಪಟ್ಟು ಆಹಾರ ಪದಾರ್ಥ ಉದ್ದಿಮೆ ನಡೆಸುವವರು ಎಫ್.ಎಸ್.ಎಸ್.ಎ ಪರವಾನಗೆ(License) ಪಡೆಯಬೇಕಾಗಿರುತ್ತದೆ. ತಪ್ಪಿದಲ್ಲಿ, ಆಹಾರ ಸುರಕ್ಷತೆ ವiತ್ತು ಗುಣಮಟ್ಟ ಕಾಯ್ದೆ 2006 ರ ಸೆಕ್ಷನ್ 31(1) ಮತ್ತು 2.1.1 ಹಾಗೂ 2.1.2 ರ ಉಲ್ಲಂಘನೆಯಾಗಿರುತ್ತದೆ. ಆದ್ದರಿಂದ ಶಿಕ್ಷಾರ್ಹ ಮತ್ತು ರೂ. 5 ಲಕ್ಷ ವರೆಗಿನ ದಂಡಾರ್ಹ ಅಪರಾಧವಾಗಿರುತ್ತದೆ. ಎಫ್.ಎಸ್.ಎಸ್.ಎ ನೋಂದಣಿ ಹಾಗೂ ಪರವಾನಗೆಯನ್ನು ಕನಿಷ್ಠ 1 ವರ್ಷದಿಂದ ಗರಿಷ್ಠ 5 ವರ್ಷದವೆರೆಗೆ ಪಡೆದುಕೊಳ್ಳಬಹುದಾಗಿದ್ದು, ಅಂರ್ತಜಾಲ ತಾಣದಲ್ಲಿ (Website ID: foscos.fssai.gov.in) ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ. ಆಹಾರ ನೋಂದಣಿಗೆ (License) ವಾರ್ಪಿಕ ರೂ. 100-00 ಮತ್ತು ಆಹಾರ ಪರವಾನಗೆ (License) ರೂ. 2000, 3೦೦೦ ಮತ್ತು 5೦೦೦ ನಿಗಧಿಪಡಿಸಲಾಗಿದೆ. ನೋಂದಣಿ ನವೀಕರಣ ಸಂದರ್ಭದಲ್ಲಿ ಇಲಾಖೆಯಿಂದ ನೀಡಲಾದ ನೋಂದಣಿ ಪತ್ರದಲ್ಲಿ ನಮೂದಾಗಿರುವ ಕೊನೆಯ ದಿನಾಂಕದವರೆಗೂ ನವೀಕರಣಕ್ಕೆ ಅರ್ಜಿಸಲ್ಲಿಸಲು ಅವಕಾಶವಿರುತ್ತದೆ. ಪರವಾನಗೆ (License) ನವೀಕರಣ ಸಂದರ್ಭದಲ್ಲಿ ಅವಧಿ ಮುಕ್ತಾಯ ದಿನಾಂಕದ ಕನಿಷ್ಠ 3೦ ದಿನಗಳ ಮುಂಚಿತವಾಗಿ ಅರ್ಜಿಸಲ್ಲಿಸಬೇಕಾಗಿರುತ್ತದೆ. ತಪ್ಪಿದಲ್ಲಿ 3೦ ದಿನಗಳ ಮುಂಚಿತವಾಗಿಯೇ ದಿನಕ್ಕೆ ರೂ. 1೦೦-೦೦ ರಂತೆ ದಂಡವನ್ನು ಪರವಾನಗಿಯ ಕೊನೆಯ ದಿನಾಂಕದವರೆಗೂ ಪಾವತಿಸಬೇಕಾಗಿರುತ್ತದೆ. ನವೀಕರಿಸಲ್ಪಡದ ನೋಂದಣಿ ಅವಧಿ ಮುಗಿದ ನಂತರ ಸ್ಥಗಿತಗೊಳ್ಳುತ್ತದೆ. ಆದರೆ ನವೀಕರಿಸಲ್ಪಡದ ಪರವಾನಗೆ ಅವಧಿ ದಿನಾಂಕ ಮುಗಿದರೂ ವಾರ್ಪಿಕ ಶುಲ್ಕ ಹಾಗೂ ಮೂರರಷ್ಟು ದಂಡವನ್ನು ಪಾವತಿಸಿ ನವೀಕರಿಸಬಹುದಾಗಿರುತ್ತದೆ.

ನೋಂದಣಿ ಮತ್ತು ಪರವಾನಗಿ ಅರ್ಜಿಸಲ್ಲಿಸಲು ಬೇಕಾದ ದಾಖಾಲಾತಿಗಳು

  1. ಅರ್ಜಿದಾರರ ಭಾವಚಿತ್ರ (Passport Size)
  2. ಅರ್ಜಿದಾರರ ಗುರುತಿನಚೀಟಿ (ಆದಾರ್, ರೇಷನ್ಕಾರ್ಡ್, ಪಾನ್ ಕಾರ್ಡ್ ಇತ್ಯಾದಿ..)

ಪರವಾನಗೆ

    1. ಅರ್ಜಿದಾರರ ಗುರುತಿನಚೀಟಿ
    2. ಮಾಲಿಕತ್ವ / ಸಹಮಾಲಿಕತ್ವದ ವಿವರ
    3. ವ್ಯಾಪಾರ ಸ್ಥಳದ ವಿವರ (ಉದಾ. Rent Agreement, Sale Deed, Electric Bill ಇತ್ಯಾದಿ) ಆಹಾರ ವಸ್ತುಗಳ ಉತ್ಪಾದಕರು, ಪ್ಯಾಕರ್ಗಳು, ಡೈರಿ, ಖಸಾಯಿಖಾನೆ ಇತ್ಯಾದಿ ನಡೆಸುವವರು ಈ ಮೇಲೆ ತಿಳಿಸಲಾದ ದಾಖಲಾತಿಗಳೊಂದಿಗೆ
    4. ತಮ್ಮ ವ್ಯಾಪಾರ ಸ್ಥಳದ ನೀಲಿ ನಕ್ಷೆ
    5. ವ್ಯಾಪಾರದ ಸ್ಥಳದ ಚಿತ್ರ .
    6. ಯಂತ್ರೋಪಕರಣಗಳು ಮತ್ತು ಬಳಕೆಯಾಗುವ ವಿದ್ಯುತ್ಚ್ಛಕ್ತಿ ವಿವರ
    7. ಆಹಾರ ಪದಾರ್ಥ ಬಳಕೆಗೆ ನೀರನ್ನು ಉಪಯೋಗಿಸುತ್ತಿದ್ದಲ್ಲಿ ನೀರಿನ ಪರೀಕ್ಷಾ ವರದಿ ಇತ್ಯಾದಿ ದಾಖಲಾತಿಗಳನ್ನು ಸಲ್ಲಿಸಬೇಕಾಗಿರುತ್ತದೆ.

ಪರಿಶೀಲನೆ (Sampling)

ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯಡಿ ಆಹಾರ ತಯಾರಿಕಾ ಘಟಕಗಳು/ಅಂಗಡಿಗಳು/ಉಗ್ರಾಣಗಳು/ ಮಾರಾಟಗಾರರನ್ನು High Risk, Medium Risk, Low Risk ಎಂದು ವಿಂಗಡಿಸಲಾಗಿ, ವರ್ಷದಲ್ಲಿ ಕೆಳಕಂಡತೆ ಪರಿಶೀಲಿಸಬೇಕಾಗಿರುತ್ತದೆ.

High Risk : 100%

Medium Risk : 20%

Low Risk : 10%

High Risk Category’s: ಹಾಲು, ಹಾಲಿನ ಉತ್ಪನ್ನಗಳು, ಮಾಂಸ, ಮೀನು, ಮೊಟ್ಟೆ, ಸಿದ್ಧಪಡಿಸಿದ ಆಹಾರ, ಇತ್ಯಾದಿ

Medium Risk Category’s: ಜೇನು ಹಾಗೂ ಸಿಹಿಪದಾರ್ಥಗಳು, ಮಸಾಲ ಪದಾರ್ಥ, ನ್ಯೂಟ್ರೀಷನ್ ಪದಾರ್ಥಗಳು, ಪಾನೀಯಗಳು ಇತ್ಯಾದಿ.

ಎಣ್ಣೆ, ಹಣ್ಣು–ತರಕಾರಿಗಳು, ಬೇಕರಿಉತ್ಪನ್ನ, ದಿನಸಿ ಪದಾರ್ಥಗಳು ಇತ್ಯಾದಿ

fssai4

ಅಂಕಿತಾಧಿಕಾರಿಗಳು ಮತ್ತು ಆಹಾರ ಸುರಕ್ಷತಾಧಿಕಾರಿಗಳು ತಮ್ಮ ವ್ಯಾಪ್ತಿಯ ಆಹಾರ ಪದಾರ್ಥ ವ್ಯಾಪಾರ ಸ್ಥಳಗಳಿಗೆ ಭೇಟಿನೀಡಿ ಪರಿಶೀಲನೆ ನಡೆಸಬಹುದಾಗಿರುತ್ತದೆ. ಆಹಾರ ಸುರಕ್ಷತಾಧಿಕಾರಿಗಳು ಸಂಶಯಾಸ್ಪದ ಆಹಾರ ಮಾದರಿಗಳನ್ನು ವಿಶ್ಲೇಷಣೆಗಾಗಿ ಸಂಗ್ರಹಿಸಬಹುದಾಗಿದೆ.

ಮಾದರಿ ಸಂಗ್ರಹಣೆ (Sampling):

ಆಹಾರ ಸುರಕ್ಷತಾಧಿಕಾರಿಗಳು ಸಂಶಯಾಸ್ಪದ ಆಹಾರ ಮಾದರಿಗಳನ್ನು ಕಾನೂನಾತ್ಮಕ (Legal Sampless) ಆಹಾರ ಮಾದರಿಗಳು ಹಾಗೂ ಸರ್ವೇಕ್ಷಣಾ ಆಹಾರ ಮಾದರಿಗಳನ್ನು (Survey Samples) ತೆಗೆದು ಆಹಾರ ಪ್ರಯೋಗ ಶಾಲೆಗಳಿಗೆ ವಿಶ್ಲೇಷ಼ಣೆಗಾಗಿ, ವಿಭಾಗೀಯ ಪ್ರಯೋಗಾಲಯ ಮತ್ತು ರೆಫರಲ್ ಲ್ಯಾಬ್ಗಳಿಗೆ ಕಳುಹಿಸಲಾಗುತ್ತದೆ. ವಿಶ್ಲೇಷಣಾ ವರದಿಯಲ್ಲಿ ತಪ್ಪು ಮಾಹಿತಿ (Misbranded), ಕಡಿಮೆಗುಣಮಟ್ಟ (Substandard), ಅಸುರಕ್ಷಿತ (Unsafe) ಎಂದು ವರದಿಯಾದಲ್ಲಿ ಸಂಬAಧಿಸಿದ ಆಹಾರ ಪದಾರ್ಥ ವ್ಯಾಪಾರಸ್ಥರ ವಿರುದ್ಧ ಆಹಾರ ಸುರಕ್ಷತೆ ಮತ್ತು ಗುಣಮಟ್ಟಕಾಯ್ದೆಯಡಿ ಕಾನೂನು ರೀತಿಯ ಕ್ರಮ ಜರುಗಿಸಲಾಗುತ್ತದೆ.

fssai6

ವಿಧಿಸಲಾಗುವ ದಂಡ ಮತ್ತು ಶಿಕ್ಷೆಯ ವಿವರಗಳು

ಸೆಕ್ಷನ್ : 50

ಎಫ್.ಎಸ್.ಎಸ್.ಎ ಕಾಯ್ದೆ, 2006 ನಿಯಮ ಮತ್ತು ನಿಬಂಧನೆ 2011 ರ ಪ್ರಕಾರ ಗುಣಮಟ್ಟಕ್ಕೆ ಅನುಗುಣವಾಗಿಲ್ಲದ ಯಾವುದೇ ಆಹಾರವನ್ನು ಮಾರುವ ವ್ಯಕ್ತಿಯು ರೂ. ೦5ಲಕ್ಷ ರೂಪಾಯಿಗಳನ್ನು ಮೀರದದಂಡಕ್ಕೆ ಹೊಣಿಗಾರರಾಗಿರುತ್ತಾರೆ.

ಸೆಕ್ಷನ್ : 51

ಯಾವುದೇ ವ್ಯಕ್ತಿ ಸ್ವತಃ ಅಥವಾ ಅವನ ಪರವಾಗಿ ಯಾವುದೇ ವ್ಯಕ್ತಿಯಿಂದ ಮಾರಾಟಕ್ಕಾಗಿ ಅಥವಾ ಸಂಗ್ರಹಿಸಲು ಅಥವಾ ವಿತರಿಸಲು, ಆಮದು ಮಾಡಿಕೊಳ್ಳಲು ಕಡಿಮೆ ಗುಣಮಟ್ಟದ ಮಾನವ ಬಳಕೆಗಾಗಿ ಯಾವುದೇ ಉತ್ಪನ್ನವನ್ನು ತಯಾರಿಸಿದರೆ ರೂ. ಐದು ಲಕ್ಷದವೆರೆಗೆ ವಿಸ್ತರಿಸಬಹುದಾದ ದಂಡಕ್ಕೆ ಹೊಣೆಗಾರನಾಗುತ್ತಾನೆ.

ಸೆಕ್ಷನ್ : 52

ಯಾವುದೇ ವ್ಯಕ್ತಿ ಸ್ವತಃ ಅಥವಾ ಅವನ ಪರವಾಗಿ ಯಾವುದೇ ವ್ಯಕ್ತಿಯಿಂದ ಮಾರಾಟಕ್ಕಾಗಿ ಅಥವಾ ಸಂಗ್ರಹಿಸಲು, ವಿತರಿಸಲು, ಆಮದು ಮಾಡಿಕೊಳ್ಳುವ ಮಾನವ ಬಳಕೆಗಾಗಿ ತಪ್ಪಾದ ಮಾಹಿತಿಯಿಂದ/ ತಪ್ಪಾಗಿ ಬ್ರಾಂಡ್ ಮಾಡಲಾದ ಯಾವುದೇ ಉತ್ಪನ್ನವನ್ನು ತಯಾರಿಸಿದರೆ ರೂ. ಮೂರು ಲಕ್ಷದವೆರೆಗೆ ವಿಸ್ತರಿಸಬಹುದಾದ ದಂಡಕ್ಕೆ ಗುರಿಯಾಗುತ್ತಾರೆ.

ಸೆಕ್ಷನ್ : 53

ಯಾವುದೇ ಆಹಾರವನ್ನು ತಪ್ಪಾಗಿ ವಿವರಿಸುವ ಹಾಗೂ ಆಹಾರದ ಸ್ವರೂಪ ಅಥವಾ ಗುಣಮಟ್ಟದ ಬಗ್ಗೆ ತಪ್ಪುದಾರಿಗೆಳೆಯುವ, ಸುಳ್ಳು ಖಾತರಿಯನ್ನು ನೀಡುವ ಜಾಹೀರಾತುಗಳಿಗೆ ರೂ.ಹತ್ತು ಲಕ್ಷದವರೆಗೆ ವಿಸ್ತರಿಸಬಹುದಾದ ದಂಡವನ್ನು ವಿಧಿಸಲಾಗುತ್ತದೆ.

ಸೆಕ್ಷನ್ : 54

ಯಾವುದೇ ವ್ಯಕ್ತಿ ಸ್ವತಃ ಅಥವಾ ಅವನ ಪರವಾಗಿ ಯಾವುದೇ ವ್ಯಕ್ತಿಯಿಂದ ಮಾರಾಟಕ್ಕಾಗಿ ಅಥವಾ ಸಂಗ್ರಹಿಸಲು, ವಿತರಿಸಲು, ಆಮದು ಮಾಡಿಕೊಳ್ಳಲು ಹೊರಗಿನ ವಸ್ತುಗಳನ್ನು ಮಾನವ ಬಳಕೆಗಾಗಿ ಉಪಯೋಗಿಸುವ ಆಹಾರ ಪದಾರ್ಥಗಳಲ್ಲಿ ಹೊಂದಿರುವುದಕ್ಕಾಗಿ ರೂ.ಒಂದು ಲಕ್ಷದವೆರೆಗೆ ವಿಸ್ತರಿಸಬಹುದಾದ ದಂಡಕ್ಕೆ ಗುರಿಯಾಗುತ್ತಾರೆ.

ಸೆಕ್ಷನ್ : 55

ಆಹಾರ ವ್ಯಾಪಾರ ನಿರ್ವಾಹಕರು, ಆಮದುದಾರರು, ಸಮಂಜಸವಾದ ಆಧಾರವಿಲ್ಲದೆ, ಈ ಕಾಯ್ದೆಯ ಅವಶ್ಯಕತೆಗಳನ್ನು ಅಥವಾ ಕಾಯ್ದೆಯಡಿಯಲ್ಲಿ ಹೊರಡಿಸಲಾದ ನಿಯಮಗಳು, ಆದೇಶಗಳನ್ನು ಅನುಸರಿಸಲು ವಿಫಲವಾದರೆ ಆಹಾರ ಸುರಕ್ಷತಾಧಿಕಾರಿಯ ನಿರ್ದೇಶನದಂತೆ ರೂ ಎರಡು ಲಕ್ಷದ ವರೆಗೆ ವಿಸ್ತರಿಸಬಹುದಾದದಂಡನೆಗೆ ಹೊಣೆಗಾರರಾಗಿರುತ್ತಾರೆ.

ಸೆಕ್ಷನ್ : 56

ಯಾವುದೇ ವ್ಯಕ್ತಿ ಸ್ವತಃ ಅಥವಾ ಅವನ ಪರವಾಗಿ ಯಾವುದೇ ವ್ಯಕ್ತಿಯಿಂದ ಅನೈರ್ಮಲ್ಯ ಅಥವಾ ಅನೈರ್ಮಲ್ಯ ಪರಿಸ್ಥಿತಿಗಳಲ್ಲಿ ಮಾನವ ಬಳಕೆಗಾಗಿ ಆಹಾರ ಪರಾರ್ಥವನ್ನು ತಯಾರಿಸುವ, ಸಂಸ್ಕರಿಸುವ, ಮಾರಾಟಮಾಡುವವರೂ. ರೂ.ಒಂದು ಲಕ್ಷದವರೆಗೆ ವಿಸ್ತರಿಸಬಹುದಾದದಂಡನೆಗೆ ಗುರಿಯಗುತ್ತಾರೆ.

ಸೆಕ್ಷನ್ : 57

  • ಆಹಾರ ಕಲಬೆರಕೆ ಆರೋಗ್ಯಕ್ಕೆ ಹಾನಿಯಾಗದಿದ್ದಲ್ಲಿ, ರೂ.ಎರಡು ಲಕ್ಷ ರೂಪಾಯಿಗಳನ್ನು ಮೀರದದಂಡಕ್ಕೆ ಗುರಿಯಾಗುತ್ತಾರೆ.
  • ಆಹಾರ ಕಲಬೆರಕೆ ಆರೋಗ್ಯಕ್ಕೆ ಹಾನಿಯುಂಟುಮಾಡಿದರೆ, ರೂ.ಹತ್ತು ಲಕ್ಷ ಮೀರದದಂಡಕ್ಕೆ ಗುರಿಯಾಗುತ್ತಾರೆ.

ಸೆಕ್ಷನ್ : 58

ಈ ಕಾಯ್ದೆಯ ನಿಯಮ, ನಿಬಂಧನೆಗಳನ್ನು ಉಲ್ಲಂಘಿಸುವವರು ರೂ.ಎರಡು ಲಕ್ಷ ರೂಪಾಯಿಗಳವರೆಗೆ ವಿಸ್ತರಿಸಬಹುದಾದ ದಂಡಕ್ಕೆ ಗುರಿಯಾಗುತ್ತಾರೆ.

ಸೆಕ್ಷನ್ : 59

ಯಾವುದೇ ವ್ಯಕ್ತಿ ಸ್ವತಃ ಅಥವಾ ಅವನ ಪರವಾಗಿಯಾವುದೇ ವ್ಯಕ್ತಿಯಿಂದ ಅಸುರಕ್ಷಿತ ಆಹಾರ ಪದಾರ್ಥಆಮದು, ಮಾರಾಟ, ಸಂಗ್ರಹ, ವಿತರಣೆಮಾಡಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.

      • ಅಂತಹ ವೈಫಲ್ಯ ಅಥವಾ ಉಲ್ಲಂಘನೆಯು ಗಂಭೀರವಲ್ಲದ ಆರೋಗ್ಯ ಸಮಸ್ಯೆಗೆ ಕಾರಣವಾದಲ್ಲಿ ರೂ. ಒಂದು ಲಕ್ಷದವರೆಗೆ ವಿಸ್ತರಿಸಬಹುದಾದ ದಂಡ ಮತ್ತು ಒಂದು ವರ್ಷದ ಜೈಲುವಾಸಕ್ಕೆ ಒಳಗಾಗುತ್ತಾರೆ
      • ಅಂತಹ ವೈಫಲ್ಯ ಅಥವಾ ಉಲ್ಲಂಘನೆಯು ಗಂಭೀರವಾದ ಆರೋಗ್ಯ ಸಮಸ್ಯೆಗೆ ಕಾರಣವಾದಲ್ಲಿ ರೂ. ಐದು ಲಕ್ಷದವರೆಗೆ ವಿಸ್ತರಿಸಬಹುದಾದ ದಂಡ ಮತ್ತು ಆರು ವರ್ಷಗಳ ಜೈಲುವಾಸಕ್ಕೆ ಒಳಗಾಗುತ್ತಾರೆ
      • ಅಂತಹ ವೈಫಲ್ಯ ಅಥವಾ ಉಲ್ಲಂಘನೆಯು ಮರಣಕ್ಕೆ ಕಾರಣವಾದಲ್ಲಿ ರೂ. ಹತ್ತು ಲಕ್ಷದಂಡ ಮತ್ತು ಏಳು ವರ್ಷದಿಂದ ಜೀವಾವಧಿಯವರೆಗೆ ವಿಸ್ತರಿಸಬಹುದಾದ ಜೈಲುವಾಸಕ್ಕೆ ಒಳಗಾಗುತ್ತಾರೆ.

ಸೆಕ್ಷನ್ : 63

ಎಫ್.ಎಸ್.ಎಸ್.ಎ. ಪರವಾನಗೆ ಇಲ್ಲದೆ ಆಹಾರ ವಸ್ತುಗಳನ್ನು ವಿತರಿಸುವುದು ಅಥವಾ ಆಮದು ಮಾಡಿಕೊಳ್ಳುವುದು ಅಥವಾ ಮಾರಾಟ ಮಾಡುವವರಿಗೆ ಆರು ತಿಂಗಳವರೆಗಿನ ಜೈಲುವಾಸ ಮತ್ತು ರೂ. ಐದು ಲಕ್ಷದವರೆಗೆ ದಂಡವಿಧಿಸಬಹುದಾಗಿದೆ.

“ಸುರಕ್ಷಿತ ಆಹಾರ ಉತ್ತಮ ಜೀವನಕ್ಕೆ ಆಧಾರ”