ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿ
ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿ
ಜಿಲ್ಲಾ ನೋಂದಣಾಧಿಕಾರಿಗಳು: ಶ್ರೀ ಸಿದ್ದೇಶ್ ಎಸ್.
ಕಚೇರಿ ವಿಳಾಸ: ಜಿಲ್ಲಾ ನೋಂದಣಾಧಿಕಾರಿ ಹಾಗೂ ಮುದ್ರಾಂಕಗಳ ಉಪ ಆಯುಕ್ತರ ಕಚೇರಿ, ಜಿಲ್ಲಾ ಸಂಕೀಣð ಕಟ್ಟಡ, ಕೊಠಡಿ ನಂ.09, ಮಡಿಕೇರಿ, ಕೊಡಗು ಜಿಲ್ಲೆ. -571201.
ಮೊಬೈಲ್ ಸಂಖ್ಯೆ: 9480476533
ಕಚೇರಿ ದೂರವಾಣಿ ಸಂಖ್ಯೆ: 08272-229158
ಇ-ಮೇಲ್ ಐ.ಡಿ: dr.kodagu@karnataka.gov.in
ನಮ್ಮ ಬಗ್ಗೆ
ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಸರ್ಕಾರಕ್ಕೆ ಮೂರನೇ ಹೆಚ್ಚು ರಾಜಸ್ವ ಸಂಗ್ರಹ ಮಾಡುವ ಇಲಾಖೆಯಾಗಿದ್ದು, 2019-20ನೇ ಸಾಲಿನಲ್ಲಿ ರೂ.11451.05 ಕೋಟಿಗಳ ರಾಜಸ್ವವು ಸಂಗ್ರಹವಾಗಿದ್ದು, ಒಟ್ಟು 19.57 ಲಕ್ಷ ದಸ್ತಾವೇಜುಗಳು ನೋಂದಣಿಯಾಗಿರುತ್ತದೆ..
ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ನೋಂದಾಯಿತ ಸಾರ್ವಜನಿಕ ದಾಖಲೆಗಳನ್ನು, ವಿವಾಹಗಳ ನೋಂದಣಿ, ಪಾಲುದಾರಿಕೆ ಸಂಸ್ಥೆಗಳ ನೋಂದಣಿ, ಸ್ಥಿರಾಸ್ತಿಗಳಿಗೆ ಸಂಬಂಧಿಸಿದ ಕ್ರಯ, ವರ್ಗಾವಣೆ , ದಾನ ಪತ್ರಗಳು, ಅಡಮಾನ ಪತ್ರ, ಅಧಿಕಾರ ಪತ್ರ , ಇಚ್ಛಾಪತ್ರ ಹಾಗೂ ಇತರೆ ದಾಖಲೆಗಳನ್ನು ಸಂರಕ್ಷಿಸುವ ಜವಬ್ದಾರಿಯನ್ನು ಹೊಂದಿರುತ್ತದೆ. ಕೆಲವು ಹಳೆಯ ದಾಖಲೆಗಳು 1865 ರಿಂದಲೂ ನಮ್ಮ ಇಲಾಖೆಯಲ್ಲಿ ಇರುತ್ತದೆ. ಈ ಎಲ್ಲಾ ಪ್ರಮುಖ ಸಾರ್ವಜನಿಕ ದಾಖಲೆಗಳ ನಿರ್ವಹಣೆ ಮತ್ತು ಸಂರಕ್ಷಣೆ ಇಲಾಖೆಯ ಜವಬ್ದಾರಿಯಾಗಿರುತ್ತದೆ. ನೋಂದಾಯಿತ ದಾಖಲೆಗಳಿಗೆ ಸಂಬಂಧಿಸಿದ ದಾಖಲೆ ಹಾಗೂ ಮಾಹಿತಿಯನ್ನು ಸಾರ್ವಜನಿಕರು ಕೋರಿದಾಗ ನೀಡಬೇಕಾಗಿರುತ್ತದೆ. ನಿರ್ದಿಷ್ಟ ವ್ಯವಹಾರಗಳಿಗೆ ಸರ್ಕಾರದ ಪರವಾಗಿ ಮುದ್ರಾಂಕ ಶುಲ್ಕವನ್ನು ಇಲಾಖೆಯು ಸಂಗ್ರಹಿಸುತ್ತದೆ. ಇಲಾಖೆಯು ಜಿಲ್ಲೆಯಲ್ಲಿ 1 ಜಿಲ್ಲಾ ನೋಂದಣಿ ಕಛೇರಿ ಹಾಗೂ 5 ಉಪನೋಂದಣಿ ಕಛೇರಿಗಳ ಮುಖಾಂತರ ಸಾರ್ವಜನಿಕರಿಗೆ ಸೇವೆಗಳನ್ನು ನೀಡುತ್ತಿದೆ.
ಇಲಾಖೆಯ ಸೇವೆಗಳನ್ನು “ಕಾವೇರಿ” ತಂತ್ರಾಂಶದ ಮುಖಾಂತರ ಗಣಕೀಕರಣಗೊಳಿಸಲಾಗಿರುತ್ತದೆ. ಕಾವೇರಿ ತಂತ್ರಾಂಶವನ್ನು 2004 ರಲ್ಲಿ ಎಲ್ಲಾ ಉಪನೋಂದಣಿ ಕಛೇರಿಗಳಲ್ಲಿ ‘ಬೂಟ್’ ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗಿರುತ್ತದೆ. ಹಾಗೂ ಅಂದಿನಿಂದಲೇ ಕಾರ್ಯ ನಿರ್ವಹಿಸುತ್ತಿರುತ್ತದೆ. ಕಾವೇರಿ ತಂತ್ರಾಂಶವು ವಿಕೇಂದ್ರೀತ ವ್ಯವಸ್ಥೆಯಾಗಿದ್ದು, ಪ್ರತಿ ಕಛೇರಿಯಲ್ಲಿ ತಂತ್ರಾಂಶ ಹಾಗೂ ಸೃಜಿತ ಮಾಹಿತಿಯ ನಿರ್ವಹಣೆಗೆ ಪ್ರತ್ಯೇಕವಾದ ಸರ್ವರ್ ಅಳವಡಿಸಲಾಗಿರುತ್ತದೆ.
ಆದ್ಯಾಗ್ಯೂ ಇತ್ತೀಚೀನ ದಿನಗಳಲ್ಲಿ ಇಲಾಖೆಯ ಮಾಹಿತಿಯನ್ನು ಕೇಂದ್ರೀಕೃತ ದತ್ತಾಂಶ ವ್ಯವಸ್ಥೆಗೆ ವರ್ಗಾಯಿಸಲಾಗುತ್ತಿದೆ. ಕಾವೇರಿ ತಂತ್ರಾಂಶದ ನೋಂದಣಿ ಪ್ರಕ್ರಿಯೆಯು, ದಾಖಲೆಗಳು ಹಾಗೂ ಮಾಹಿತಿಯ ಡಿಜಿಟಲೀಕರಣದ ವೇಗವನ್ನು ಹೆಚ್ಚಿಸಲು ಸಹಕಾರಿಯಾಗಿರುತ್ತದೆ.
ನಮ್ಮ ಅಧೀನ ಕಚೇರಿಗಳ ವಿವರ:-
ಕ್ರ.ಸಂ | ಕಚೇರಿಯ ಹೆಸರು ಮತ್ತು ವಿಳಾಸ | ಹೆಸರು | Designation | ಕಚೇರಿ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ | ಇ-ಮೇಲ್ ಐ.ಡಿ |
---|---|---|---|---|---|
1 | ಹಿರಿಯ ಉಪನೋಂದಣಾಧಿಕಾರಿಗಳ ಕಚೇರಿ, ಬ್ಲಾಕ್ ನಂ.11, ಕೊಹಿನೂರ್ ರೋಡ್, ಮಡಿಕೇರಿ.-571201 | ಶ್ರೀಮತಿ ಸೌಮ್ಯಲತ | ಉಪನೋಂದಣಾಧಿಕಾರಿಗಳು ಮಡಿಕೇರಿ | 08272-221927 9686504445 |
sr.madikeri@karnataka.gov.in |
2 | ಉಪನೋಂದಣಾಧಿಕಾರಿಗಳ ಕಚೇರಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಂಘದ ಕಟ್ಟಡ, ಸೋಮವಾರಪೇಟೆ-571236,6 | ಶ್ರೀಮತಿ ಅನಿತಾ ಮೋಸೆಸ್, | ಉಪನೋಂದಣಾಧಿಕಾರಿಗಳು ಸೋಮವಾರಪೇಟೆ | 08276-284656 9480110867 |
sr.somvarapete@karnataka.gov.in |
3 | ಉಪನೋಂದಣಾಧಿಕಾರಿಗಳ ಕಚೇರಿ,, ಬೋರೇಗೌಡ ಕಾಂಪ್ಲೆಕ್ಸ್, ಎಫ್.ಎಂ.ಸಿ. ಕಾಲೇಜ್ ರೋಡ್, ವಿರಾಜಪೇಟೆ-571218 | ಶ್ರೀ.ಕೆ.ಎಂ. ಮೊಹಮ್ಮದ್ ಆಲಿ | ಉಪನೋಂದಣಾಧಿಕಾರಿಗಳು ವಿರಾಜಪೇಟೆ | 08274-260216 9740797024 |
sr.veerajpete@karnataka.gov.in |
4 | ಉಪನೋಂದಣಾಧಿಕಾರಿಗಳ ಕಚೇರಿ,, ವಿನಾಯಕ ಆಕೇðಡ್, ಪೊನ್ನಂಪೇಟೆ ಮೈನ್ ರೋಡ್, ಫಾರೆಸ್ಟ್ ಆಫೀಸ್ ಎದುರು, ಪೊನ್ನಂಪೇಟೆ-571216 | ಶ್ರೀ ಚೇತನ ಎನ್.ಎನ್, | ಉಪನೋಂದಣಾಧಿಕಾರಿಗಳು ಪೊನ್ನಂಪೇಟೆ | 08274-261352 9901553639 |
sr.ponnampet@karnataka.gov.in |
5 | ಉಪನೋಂದಣಾಧಿಕಾರಿಗಳ ಕಚೇರಿ, 4ನೇಬ್ಲಾಕ್, ಮುಳ್ಳುಸೋಗೆ ಗ್ರಾಮ, ವೆಂಕಟೇಶ್ವರ ಬಡಾವಣೆ, ಗೌಡ ಸಮಾಜ ರಸ್ತೆ, ಕುಶಾಲನಗರ ಟೌನ್. -571234 | ಶ್ರೀ. ವೈ.ಎಸ್. ಪ್ರಮೋದ್ | ಉಪನೋಂದಣಾಧಿಕಾರಿಗಳು ಕುಶಾಲನಗರ | 08276-271300 8660761521 |
sr.kushalnagar@karnataka.gov.in |