ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿ, ಕೊಡಗು ಜಿಲ್ಲೆ, ಮಡಿಕೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ಮತ್ತು ಸಿಬ್ಬಂದಿಗಳ ವಿವರ
| ಕಚೇರಿ ಹೆಸರು | ಅಧಿಕಾರಿಯ ಹೆಸರು | ಪದನಾಮ | ಕಚೇರಿ ವಿಳಾಸ | ವೈಯಕ್ತಿಕ ಸಂಪರ್ಕ ಸಂಖ್ಯೆ | ಕಚೇರಿ ಸಂಪರ್ಕ ಸಂಖ್ಯೆ | ಇಮೇಲ್ -ಐಡಿ |
|---|---|---|---|---|---|---|
| ಜಿಲ್ಲಾ ಕೌಶಲ್ಯಾಭಿವೃದ್ದಿ ಕಛೇರಿ | ರೇಖಾ ಗಣಪತಿ(ಪ್ರಭಾರ ) | ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ | ಕೊಠಡಿ ಸಂಖ್ಯೆ.22, 2ನೇ ಮಹಡಿ, ಜಿಲ್ಲಾಧಿಕಾರಿ ಕಚೇರಿ, ಮಡಿಕೇರಿ 571201 | – | 08272-225851 | dsdokodagu2020[at]gmail[dot]com |
| ಜಿಲ್ಲಾ ಕೌಶಲ್ಯಾಭಿವೃದ್ದಿ ಕಛೇರಿ | ರೇಖಾ ಗಣಪತಿ | ಸಹಾಯಕ ನಿರ್ದೇಶಕರು | ಕೊಠಡಿ ಸಂಖ್ಯೆ.22, 2ನೇ ಮಹಡಿ, ಜಿಲ್ಲಾಧಿಕಾರಿ ಕಚೇರಿ, ಮಡಿಕೇರಿ 571201 | – | 08272-225851 | dsdokodagu2020[at]gmail[dot]com |
| ಜಿಲ್ಲಾ ಕೌಶಲ್ಯಾಭಿವೃದ್ದಿ ಕಛೇರಿ | ಡಾ. ರೂಪ ಹೆಚ್.ಜೆ | ಸಹಾಯಕ ಸಾಂಖ್ಯಿಕ ಅಧಿಕಾರಿ | ಕೊಠಡಿ ಸಂಖ್ಯೆ.22, 2ನೇ ಮಹಡಿ, ಜಿಲ್ಲಾಧಿಕಾರಿ ಕಚೇರಿ, ಮಡಿಕೇರಿ 571201 | 8147573281 | 08272-225851 | dsdokodagu2020[at]gmail[dot]com |
ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ಆಯೋಜಿಸುತ್ತಿರುವ ಯೋಜನೆ/ಕಾರ್ಯಕ್ರಮಗಳ ಮಾಹಿತಿ
| ಕಾರ್ಯಕ್ರಮ (ಯೋಜನೆಗಳು) | ವೆಬ್ ಸೈಟ್ | ಯೋಜನೆ/ಕಾರ್ಯಕ್ರಮಗಳು |
|---|---|---|
| ಮುಖ್ಯಮಂತ್ರಿಗಳ ಕರ್ನಾಟಕ ಯೋಜನೆ (ಸಿ.ಎಂ.ಕೆ.ಕೆ.ವೈ) | ವೆಬ್ ಸೈಟ್ | ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯಾದ ‘ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆ’ ಯನ್ನು 2017 ರ ಮೇ 5 ರಂದು ಪ್ರಾರಂಭಿಸಲಾಗಿರುತ್ತದೆ. ಯುವಕರಿಗೆ ಬೇಡಿಕೆ ಚಾಲಿತ ಮತ್ತು ಉದ್ಯಮಕ್ಕೆ ಸಂಬಧಿಸಿದ ಕೌಶಲ್ಯ ತರಬೇತಿಯನ್ನು ನೀಡುವುದು, ಸ್ವ-ಉದ್ಯೋಗವನ್ನು ಉತ್ತೇಜಿಸಲು ತರಬೇತಿ ನೀಡುವುದು ಮತ್ತು ಕರ್ನಾಟಕದ ಸಾಪ್ರಾದಾಯಿಕ ಕಲೆಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಸಿ.ಎಂ.ಕೆ.ಕೆ.ವೈ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ. 2021-22ರ ಸಾಲಿನಲ್ಲಿ 88 ಪ್ರಶಿಕ್ಷಣಾರ್ಥಿಗಳು ಸದರಿ ಯೋಜನೆಯಡಿ ತರಬೇತಿ ಪೂರ್ಣಗೊಳಿಸಿರುತ್ತಾರೆ. |
| ಪ್ರಧಾನಮಂತ್ರಿ ಕೌಶಲ್ಯ ವಿಕಾಸ್ ಯೋಜನೆ (ಪಿ.ಎಂ.ಕೆ.ವಿ.ವೈ) | ವೆಬ್ ಸೈಟ್ | ಪಿ.ಎಂ.ಕೆ.ಕೆ.ವೈ ಯೋಜನೆ ಭಾರತ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಜಿಲ್ಲೆಯ ಯುವಜನತೆ ಕೈಗಾರಿಕೆಗಳಿಗೆ ಸಂಬ0ಧಿಸಿದ ಕೌಶಲ್ಯ ತರಬೇತಿ ಪಡೆಯಲು ಅನುಕೂಲ ಕಲ್ಪಿಸುವ ನಿಟ್ಟಿನಲಿ ವಿರಾಜಪೇಟೆಯಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಕೇಂದ್ರದ ಮೂಲಕ ಪಿ.ಎಂ.ಕೆ.ವಿ.ವೈ ಯೋಜನೆಯಡಿ Assistant Electrician, Retail sales Associates ತರಬೇತಿ ಸಂಯೋಜನೆಗಳಲ್ಲಿ ಉಚಿತ ಅಲ್ಪಾವಧಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. |
| ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (ಎನ್.ಆರ್.ಎಲ್.ಎಂ) | ವೆಬ್ ಸೈಟ್ | ಎನ್.ಆರ್.ಎಲ್.ಎಂ ಯೋಜನೆಯು ಬಡತನವನ್ನು ನಿವಾರಿಸಲು ಮತ್ತು ಗ್ರಾಮೀಣ ಬಡವರಿಗೆ ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ. ಈ ಉದ್ದೇಶಕ್ಕಾಗಿ, ಎನ್.ಆರ್.ಎಲ್.ಎಂ ಸುಸ್ಥಿರ ಸಮುದಾಯ ಆಧಾರಿತ ಸಂಸ್ಥೆಗಳನ್ನು ಉತ್ತೇಜಿಸಲು ಪ್ರಯತ್ನಿಸುತ್ತದೆ, ಇದು ಗ್ರಾಮೀಣ ಬಡವರಿಗೆ ಹಣಕಾಸು ಸೇವೆಗಳು, ಆರ್ಥಿಕ ಸೇವೆಗಳು ಮತ್ತು ಇತರ ಅರ್ಹತೆಗಳನ್ನು ಒದಗಿಸಲು ಅನುಕೂಲವಾಗುತ್ತದೆ. |
| ರಾಷ್ಟ್ರೀಯ ನಗರ ಜೀವನೋಪಾಯ ಮಿಷನ್ (ಡೇ-ನಲ್ಮ್) | ವೆಬ್ ಸೈಟ್ | “ನಗರ ಪ್ರದೇಶದ ಬಡ ಕುಟುಂಬಗಳ ಬಡತನ ಮತ್ತು ದುರ್ಬಲತೆಯನ್ನು ಕಡಿಮೆ ಮಾಡಲು ಅವರಿಗೆ ಲಾಭದಾಯಕ ಸ್ವಯಂ ಉದ್ಯೋಗ ಮತ್ತು ಕೌಶಲ್ಯಪೂರ್ಣ ವೇತನ ಉದ್ಯೋಗಾವಕಾಶಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುವುದು,ಸ್ವ-ಸಹಾಯ ಗುಂಪುಗಳನ್ನು ರಚಿಸುವುದು. ಬಡವರ ಬಲವಾದ ತಳಮಟ್ಟದ ಸಂಸ್ಥೆಗಳನ್ನು ನಿರ್ಮಿಸುವ ಮೂಲಕ ಸುಸ್ಥಿರ ಆಧಾರದ ಮೇಲೆ ಅವರ ಜೀವನೋಪಾಯದಲ್ಲಿ ಗಮನಾರ್ಹ ಸುಧಾರಣೆಗೆ ಕಾರಣವಾಗುತ್ತದೆ. ನಗರ ಪ್ರದೇಶದ ನಿರಾಶ್ರಿತರಿಗೆ ಹಂತ ಹಂತವಾಗಿ ಅಗತ್ಯ ಸೇವೆಗಳೊಂದಿಗೆ ಆಶ್ರಯವನ್ನು ಒದಗಿಸುವ ಗುರಿಯನ್ನು ಎನ್.ಯು.ಎಲ್.ಎಂ. ಹೊಂದಿದೆ. ಹೆಚ್ಚುವರಿಯಾಗಿ ಉದಯೋನ್ಮುಖ ಮಾರುಕಟ್ಟೆ ಅವಕಾಶಗಳನ್ನು ಪ್ರವೇಶಿಸಲು ನಗರ ಬೀದಿ ವ್ಯಾಪಾರಿಗಳಿಗೆ ಸೂಕ್ತವಾದ ಸ್ಥಳಗಳಿಗೆ ಪ್ರವೇಶ, ಸಾಂಸ್ಥಿಕ ಸಾಲ, ಸಾಮಾಜಿಕ ಭದ್ರತೆ ಮತ್ತು ಕೌಶಲ್ಯಗಳನ್ನು ಒದಗಿಸುವ ಮೂಲಕ ನಗರ ಬೀದಿ ವ್ಯಾಪಾರಿಗಳ ಜೀವನೋಪಾಯದ ಕಾಳಜಿಯನ್ನು ಮಿಷನ್ ಪರಿಹರಿಸುತ್ತದೆ.” |
| ಪಿ.ಎಂ.ಸ್ವಾ-ನಿಧಿ ಯೋಜನೆ | ವೆಬ್ ಸೈಟ್ | ಬೀದಿಬದಿ ವ್ಯಾಪಾರಿಗಳ ಆತ್ಮ ನಿರ್ಭರ್ ಯೋಜನೆಯಲ್ಲಿ PM SVANIdhi ಯೋಜನೆಯನ್ನು ಜೂನ್ 2020 ರಲ್ಲಿ ಮೈಕ್ರೋ-ಕ್ರೆಡಿಟ್ ಸೌಲಭ್ಯವಾಗಿ ಪ್ರಾರಂಭಿಸಲಾಯಿತು, ಇದು COVID-19 ಸಾಂಕ್ರಾಮಿಕದ ಪರಿಣಾಮವಾಗಿ ಉಂಟಾದ ನಷ್ಟವನ್ನು ಮರುಪಡೆಯಲು ಬೀದಿಬದಿ ವ್ಯಾಪಾರಿಗಳಿಗೆ ಉತ್ತೇಜನ ನೀಡುವ ಗುರಿಯನ್ನು ಹೊಂದಿದೆ. |
| ಕರ್ನಾಟಕ ಉದ್ಯಮ ಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್) | ವೆಬ್ ಸೈಟ್ | ಸಿಡಾಕ್ ಕೇಂದ್ರವು ಸ್ವಯಂ ಉದ್ಯೋಗವನ್ನು ಒದಗಿಸುವುದಕ್ಕಾಗಿ ಎಲ್ಲಾ ಜಿಲ್ಲೆಗಳಲ್ಲಿ ಉದ್ಯಮಶೀಲತಾ ಅಭಿವೃದ್ದಿ ತರಬೇತಿಗಳನ್ನು ನೀಡುತ್ತಿದೆ. ಉದ್ಯಮವನ್ನು ಪ್ರಾರಂಭಿಸಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಉದ್ಯಮ, ವ್ಯಾಪಾರ ಮತ್ತು ಸರ್ಕಾರಿ ಸಂಸ್ಥೆಗಳೊಂದಿಗೆ ನಿಯಮಿತವಾಗಿ ಸಮಾಲೋಚಿಸಿ, ಉದ್ಯಮಶೀಲತಾ ಪ್ರೇರಣೆ, ಯೋಜನಾ ಅವಕಾಶ ನಿರ್ವಹಣೆ, ಸೂಕ್ಮ ಉದ್ಯಮ ರಚನೆ, ಗುಂಪು ಉದ್ಯಶೀಲತೆ, ಯೋಜನಾ ಮೌಲ್ಯಮಾಪನ ಮತ್ತು ಹಣಕಾಸು ಹೊಂದಿಸುವಿಕೆ ಮುಂತಾದ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತಿದೆ. |
| ಅಂತರಾಷ್ಟ್ರೀಯ ವಲಸೆ ಕೇಂದ್ರ – ಕರ್ನಾಟಕ (IMC – K) | ವೆಬ್ ಸೈಟ್ | ಕರ್ನಾಟಕದ ಜನತೆಗೆ ಸುಸ್ಥಿರ ವಿದೇಶಿ ಉದ್ಯೋಗಾವಕಾಶ ಮಾರ್ಗಗಳನ್ನು ಸ್ಥಾಪಿಸಿ, ಅಂತರಾಷ್ಟಿçÃಯ ವಲಸೆಯನ್ನು ಸುರಕ್ಷಿತ, ಕ್ರಮಬದ್ಧ, ಮಾನವೀಯ ಮತ್ತು ಸಮರ್ಥಗೊಳಿಸುವ ನಿಟ್ಟಿನಲ್ಲಿ “ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ” ಯು ಅಂತರಾಷ್ಟಿçÃಯ ವಲಸೆ ಕೇಂದ್ರ – ಕರ್ನಾಟಕ (ಐ.ಎಂ.ಸಿ.ಕೆ) ಯೋಜನೆಯನ್ನು ಅನುಷ್ಠಾನಗೊಳಿಸಿದೆ. ವಿದೇಶಿ ಉದ್ಯೋಗಾವಕಾಶ ಪಡೆಯಲು ಆಸಕ್ತಿಯಿರುವ ಜಿಲ್ಲೆಯ ಯುವಜನತೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಛೇರಿಯಲ್ಲಿ ಕಾರ್ಯನಿರ್ವಹಿಸಲಿರುವ ಐ.ಎಂ.ಸಿ.ಕೆ.ಕೇಂದ್ರದ ಮೂಲಕ ಸಲಹೆ ಪಡೆಯಬಹುದು. ಈ ಕೇಂದ್ರವು ಸಂಭಾವ್ಯ ವಲಸಿಗರಿಗೆ ವಿದೇಶದಲ್ಲಿನ ಉದ್ಯೋಗಾವಕಾಶಗಳ ಕುರಿತಾದ ಪ್ರಾರಂಭಿಕ ಹಂತದ ಮಾಹಿತಿ, ಪಾಸ್ಪೋರ್ಟ್, ವೀಸಾದಂತಹ ಅಗತ್ಯ ದಾಖಲೆಗಳನ್ನೂ ಪಡೆಯಲು ಬೇಕಾದ ಮಾಹಿತಿಯನ್ನು ಒದಗಿಸುತ್ತದೆ.IMC-K ಅಂತರ್ಜಾಲದ ವಿಳಾಸ: www.kvtsdc.com ನಲ್ಲಿ ಈ ಕುರಿತು ಹೆಚ್ಚಿನ ಮಾಹಿತಿ ಪಡೆಯಬಹುದು. |
| ಶಿಶಿಕ್ಷÄ (ಅಪ್ರೆಂಟಿಸ್ಶಿಪ್) | ವೆಬ್ ಸೈಟ್ | ತರಬೇತಿ ಮೂಲಸೌಕರ್ಯವನ್ನು ಸ್ಥಾಪಿಸಲು ಬೊಕ್ಕಸಕ್ಕೆ ಯಾವುದೇ ಹೆಚ್ಚುವರಿ ಹೊರೆಯನ್ನು ಹಾಕದೆ ಸಂಸ್ಥೆಗಳಲ್ಲಿ ಲಭ್ಯವಿರುವ ತರಬೇತಿ ಸೌಲಭ್ಯಗಳನ್ನು ಬಳಸಿಕೊಂಡು ಉದ್ಯಮಕ್ಕೆ ಕೌಶಲ್ಯಪೂರ್ಣ ಮಾನವಶಕ್ತಿಯನ್ನು ಅಭಿವೃದ್ಧಿಪಡಿಸಲು ಅಪ್ರೆಂಟಿಸ್ಶಿಪ್ ತರಬೇತಿಯು ಅತ್ಯಂತ ಪರಿಣಾಮಕಾರಿ ಮಾರ್ಗಗಳಲ್ಲಿ ಒಂದಾಗಿದೆ. ಅಪ್ರೆಂಟಿಸ್ಶಿಪ್ ತರಬೇತಿ ಪಡೆದ ನಂತರ ವ್ಯಕ್ತಿಗಳು ನಿಯಮಿತ ಉದ್ಯೋಗದ ಸಮಯದಲ್ಲಿ ಕೈಗಾರಿಕಾ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಳ್ಳಬಹುದು. ಸೂಚನೆ: ಕನಿಷ್ಠ ವಿದ್ಯಾರ್ಹತೆ ಎಸ್.ಎಸ್.ಎಲ್.ಸಿ ಪೂರ್ಣಗೊಂಡಿರಬೇಕು. |
ಕೊಡಗು ಜಿಲ್ಲೆಗೆ ಸಂಬಂಧಿಸಿದ ಇತರೆ ಕೌಶಲ್ಯ ತರಬೇತಿ ಕಾರ್ಯಕ್ರಮಗಳು
| ಕಾರ್ಯಕ್ರಮ (ಯೋಜನೆಗಳು) | ವೆಬ್ ಸೈಟ್ | ಯೋಜನೆ/ಕಾರ್ಯಕ್ರಮಗಳು |
|---|---|---|
| ಕೋವಿಡ್ ಕ್ರಾಸ್ ಕೋರ್ಸ್ (ಹೆಲ್ತ್ ಕೇರ್ ಸೆಕ್ಟರ್ ) | ವೆಬ್ ಸೈಟ್ | ಕೋವಿಡ್ -19ರ ನಿರ್ವಹಣೆಯ ಹಿನ್ನಲೆಯಲ್ಲಿ ಅಲ್ಪಾವಧಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಜಿಲ್ಲಾ ತರಬೇತಿ ಕೇಂದ್ರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ಜಿಲ್ಲೆ, ಮಡಿಕೇರಿ ಇವರ ಸಹಯೋಗದಲ್ಲಿ ಕೈಗೊಳ್ಳಲಾಗಿದೆ. Emergency care support ಜಾಬ್ ರೋಲ್ ಗೆ ಉಚಿತವಾಗಿ ತರಬೇತಿಯನ್ನು ಆಯೋಜಿಸಲಾಗಿದ್ದು, 09 ಮಂದಿ ಅಭ್ಯರ್ಥಿಗಳು OJT-On Job Training ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುತ್ತಾರೆ. |
| ನಾಂದಿ ಫೌಂಡೇಶನ್ ಕೌಶಲ್ಯ ತರಬೇತಿ (CSR ಯೋಜನೆ) | ವೆಬ್ ಸೈಟ್ | >ರಾಜ್ಯದ 31 ಜಿಲ್ಲೆಯ ಗ್ರಾಮೀಣ ವಿದ್ಯಾರ್ಥಿನಿಯರಿಗೆ ಉದ್ಯೋಗ ಕೌಶಲ್ಯ ತರಬೇತಿ ನೀಡುವ ಉದ್ದೇಶದಿಂದ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಮಹೀಂದ್ರ ಮತ್ತು ಮಹೀಂದ್ರ ಗ್ರೂಪ್ ಹಾಗೂ ನಾಂದಿ ಫೌಂಡೇಶನ್ ಸಹಯೋಗದೊಂದಿಗೆ ರಾಜ್ಯದ 31,000 ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯರಿಗೆ ಉಚಿತವಾಗಿ ತರಬೇತಿ ನೀಡಲಾಗುವುದು. ಸದರಿ ಕಾರ್ಯಕ್ರಮದ ಮೂಲಕ ಈ ಕೆಳಕಂಡ ತರಬೇತಿ ಕೋರ್ಸ್ ಗಳನ್ನು ನೀಡಲಾಗುವುದು. 1.ಸಾಫ್ಟ್ ಸ್ಕಿಲ್ – ಬಿ.ಕಾಂ, ಬಿ.ಎ, ಐ.ಟಿ.ಐ, ಬಿಎಸ್ಸಿ ವಿದ್ಯಾರ್ಥಿನಿಯರಿಗೆ. 2.ಪೈಥಾನ್ – ಬಿ.ಟೆಕ್ ಕಂಪ್ಯೂಟರ್ ಸೈನ್ಸ್, ಡಿಪ್ಲೋಮಾ ಇನ್ ಕಂಪ್ಯೂಟರ್ ಸೈನ್ಸ್, ಬಿ.ಸಿ.ಎ, ಬಿ.ಎಸ್ಸಿ ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿಯರಿಗೆ. 3.ಡಿಜಿಟಲ್ ಮಾರ್ಕೆಟಿಂಗ್- ಬಿ.ಬಿ.ಎ, ಬಿ.ಎ,ಬಿ.ಕಾಂ, ಎಂ.ಬಿ.ಎ, ಬಿ.ಸಿ.ಎ, ಬಿ.ಎಸ್ಸಿ, ಕಂಪ್ಯೂಟರ್ ಸೈನ್ಸ್ ವಿದ್ಯಾರ್ಥಿನಿಯರಿಗೆ 4.ಕೃಷಿ – ಬಿ.ಎಸ್ಸಿ ಕೃಷಿ/ ಕೃಷಿ ಸಂಬಂಧಿತ ಯಾವುದೇ ಕೋರ್ಸ್ ಗಳ ವಿದ್ಯಾರ್ಥಿನಿಯರಿಗೆ ಉಚಿತವಾಗಿ ತರಬೇತಿ ನೀಡಲಾಗುವುದು. |
| ಸ್ಕಿಲ್ ಹಬ್ ಉಪಕ್ರಮ | ವೆಬ್ ಸೈಟ್ | ರಾಷ್ಟಿçÃಯ ಕೌಶಲ್ಯ ಅಭಿವೃದ್ಧಿ ನಿಗಮ ಮತ್ತು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದಿಂದ 2021-22ನೇ ಸಾಲಿನಲ್ಲಿ ಕೋವಿಡ್ -19ರ ಸಂದರ್ಭದಲ್ಲಿ ಶಾಲಾ ಕಾಲೇಜಿಗೆ ದಾಖಲಾಗದೆ ಇರುವ ಅಭ್ಯರ್ಥಿಗಳು, ಶಾಲಾ ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ಬಿಟ್ಟಿರುವ ಹಾಗೂ ಶಾಲೆಯಿಂದ ಹೊರಗುಳಿದಿರುವ 15ರಿಂದ 45ರ ವಯೋಮಾನದ ವಿದ್ಯಾರ್ಥಿಗಳಿಗೆ ಉಚಿತ ವೃತ್ತಿ ಕೌಶಲ್ಯ ತರಬೇತಿ ನೀಡಲಾಗುವುದು. ಕೊಡಗು ಜಿಲ್ಲೆಗೆ ಸಂಬಂಧಿಸಿದಂತೆ 1.ಕುಶಾಲನಗರ ಪಟ್ಟಣದ ಜಿ.ಪಿ.ಯು.ಸಿ. ಪ್ರೌಢಶಾಲೆಯಲ್ಲಿ ಬಯೋಮೆಟ್ರಿಕ್ ಡಾಟಾ ಎಂಟ್ರಿ ಅಪರೇಟರ್ ಹಾಗೂ ಅಸಿಸ್ಟೆಂಟ್ ಬ್ಯೂಟಿ ಥೆರಪಿಸ್ಟ್. 2.ಸರ್ಕಾರಿ ಜೂನಿಯರ್ ಪೊನ್ನಂಪೇಟೆ ಪಟ್ಟಣದಲ್ಲಿ ಆಟೋಮೋಟಿವ್ ಸರ್ವಿಸ್ ಟೆಕ್ನಿನಿಷಿಯನ್ ಹಾಗೂ ಬಯೋಮೆಟ್ರಿಕ್ ಡಾಟಾ ಎಂಟ್ರಿ ಅಪರೇಟರ್ ಜಾಬ್ ರೋಲ್ಗಳಿಗೆ ಪ್ರಯೋಗಾಲಯ ಮತ್ತು ಉಪಕರಣಗಳನ್ನು ಬಳಸಿಕೊಂಡು ಉಚಿತ ಕೌಶಲ್ಯ ತರಬೇತಿ ನೀಡಲಾಗುವುದು. |