ಮುಚ್ಚಿ

ಜಿಲ್ಲೆಯ ಬಗ್ಗೆ

ಕೊಡಗು, ಇದು ಪಶ್ಚಿಮ ಘಟ್ಟದ ​​ ತಪ್ಪಲಿನ ದಟ್ಟವಾದ ಕಾಡುಗಳಿಂದ ವೈಭವೀಕರಿಸಿದ ಕರ್ನಾಟಕದ ಅತ್ಯಂತ ಸುಂದರ ಗಿರಿಧಾಮವಾಗಿದೆ. ಇದು ನೈಋತ್ಯ ಕರ್ನಾಟಕದ ಪಶ್ಚಿಮ ಘಟ್ಟಗಳಲ್ಲಿ 4,102 ಚದರ ಕಿಲೋಮೀಟರ್ (1,584 ಚದರ ಮೈಲಿ) ಪ್ರದೇಶವನ್ನು ಆವರಿಸಿದೆ. 2011 ರ ಜನಗಣತಿಯಂತೆ ಜಿಲ್ಲೆಯ ಜನಸಂಖ್ಯೆಯು 554,519 ರಷ್ಟಿದೆ, 13.74% ರಷ್ಟು ಜಿಲ್ಲೆಯ ನಗರ ಕೇಂದ್ರಗಳಲ್ಲಿ ಕೇಂದ್ರೀಕೃತಗೊಂಡಿದೆ, ಇದು ಕರ್ನಾಟಕದ 30 ಜಿಲ್ಲೆಗಳಲ್ಲಿಯೇ ಅತಿ ಕಡಿಮೆ ಜನಸಂಖ್ಯೆಯನ್ನು ಹೊಂದಿದೆ. ಕೊಡಗಿನ ಕಾಫಿ ಮತ್ತು ಕೊಡಗಿನ “ಕೆಚ್ಚೆದೆಯ ಯೋಧರರು” ಪ್ರಪಂಚದಲ್ಲಿ ಪ್ರಸಿದ್ದಿ ಪಡೆದಿದೆ. ಮಡಿಕೇರಿಯು ಕೊಡಗಿನ ಕೇಂದ್ರಸ್ಥಾನವಾಗಿದೆ. ಕೊಡಗು ಕೊಡವ ಭಾಷೆಯನ್ನು ಮಾತನಾಡುವ ಸ್ಥಳೀಯರಿಗೆ ನೆಲೆಯಾಗಿದೆ.

ಕೊಡಗಿನ ಅಧಿಕ ಭೂ ಭಾಗವು ಕೃಷಿಗಾಗಿ ಬಳಸಲಾಗುತ್ತಿದೆ. ಐತಿಹಾಸಿಕವಾಗಿ ಮತ್ತು ವಿಶಿಷ್ಟವಾಗಿ ಭತ್ತದ ಗದ್ದೆಗಳು ಕಣಿವೆ ಪ್ರದೇಶದಲ್ಲಿ ಕಂಡುಬರುತ್ತದೆ. ಕಾಫಿ ಮತ್ತು ಮೆಣಸಿನಗಿಡಗಳು ಸುತ್ತಮುತ್ತಲಿನ ಬೆಟ್ಟಗಳಲ್ಲಿ ಮುಖ್ಯವಾಗಿ ಮಡಿಕೇರಿ ಬಳಿ ಕಂಡುಬರುತ್ತದೆ. ಸಾಮಾನ್ಯವಾಗಿ ಕಂಡುಬರುವಂತಹಾ ಬೆಳೆ ಕಾಫಿ, ಅದರಲ್ಲೂ ವಿಶೇಷವಾಗಿ ಕಾಫೀ ರೋಬಸ್ಟಾ ಹೇರಳವಾಗಿ ಬೆಳೆಯುತ್ತಾರೆ. ಇದು ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುದ್ದಗಿರಿಯ ನಂತರ ಭಾರತದ ಎರಡನೇ ಕಾಫಿ ಉತ್ಪಾದನಾ ಪ್ರದೇಶವಾಗಿದೆ. ಇದರಿಂದ ಕೊಡಗು ಭಾರತದ ಶ್ರೀಮಂತಜಿಲ್ಲೆಗಳಲ್ಲಿ ಒಂದಾಗಿ ಬೆಳೆದಿದೆ.

ಕೊಡಗು ವನ್ಯಜೀವಿ ಸಂಪನ್ಮೂಲಗಳಿಂದ ಸಮೃದ್ಧವೆಂದು ಪರಿಗಣಿಸಲಾಗಿದೆ . ಮೂರು ವನ್ಯಜೀವಿ ಅಭಯಾರಣ್ಯಗಳು ಮತ್ತು ಒಂದು ರಾಷ್ಟ್ರೀಯ ಉದ್ಯಾನವನವನ್ನು ಹೊಂದಿದೆ: ಬ್ರಹ್ಮಗಿರಿ, ತಲಕಾವೇರಿ ಮತ್ತು ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯಗಳು ಮತ್ತು ನಾಗರಹೊಳೆ ರಾಷ್ಟ್ರೀಯ ಉದ್ಯಾನ ಅಥವಾ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನವೆಂದೂ ಕರೆಯಲಾಗುತ್ತದೆ.

ಮತಷ್ಟು ಓದಿ

ಇತ್ತೀಚಿನ ನವೀಕರಣಗಳು/ ವಾರ್ತೆಗಳು/ ಎಚ್ಚರಿಕೆಗಳು

ಇನ್ನಷ್ಟು ವಿವರ...

ಜಿಲ್ಲೆಯ ಸಾರಾ೦ಶ

  • ಲೋಕಸಭೆ ಸದಸ್ಯರು: 1
  • ವಿಧಾನ ಸಭಾ ಸದಸ್ಯರು: 2
  • ವಿಧಾನ ಪರಿಷತ್ ಸದಸ್ಯರು: 4
  • ಜಿಲ್ಲಾ ಪಂಚಾಯತ್ ಸದಸ್ಯರು: 29
  • ತಾಲ್ಲೂಕು ಪಂಚಾಯತ್ ಸದಸ್ಯರು: 50
  • ಗ್ರಾಮ ಪಂಚಾಯತ್ ಸದಸ್ಯರು: 1260